50MP ಕ್ಯಾಮೆರಾ, 4700 mAh ಬ್ಯಾಟರಿಯುಳ್ಳ AI ವೈಶಿಷ್ಟ್ಯದ 5G ಸ್ಮಾರ್ಟ್‌ಫೋನ್ ಮೇಲೆ 17 ಸಾವಿರ ರೂಪಾಯಿ ಡಿಸ್ಕೌಂಟ್

By Mahmad Rafik  |  First Published Nov 13, 2024, 8:58 PM IST

Samsung Galaxy S25 ಬಿಡುಗಡೆಯ ನಿರೀಕ್ಷೆಯಲ್ಲಿ Galaxy S24 ಬೆಲೆಯಲ್ಲಿ ₹17,000 ರಿಯಾಯಿತಿ. ಅಮೆಜಾನ್‌ನಲ್ಲಿ Galaxy S24 ಫೋನ್‌ ಖರೀದಿಸಿ ಹೆಚ್ಚಿನ ರಿಯಾಯಿತಿ ಪಡೆಯಿರಿ.


ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ದಿಗ್ಗಜ ಕಂಪನಿಗಳಲ್ಲಿ ಒಂದಾಗಿದೆ. ಶೀಘ್ರದಲ್ಲಿಯೇ ಸ್ಯಾಮ್‌ಸಂಗ್ ತನ್ನ Galaxy S ಸರಣಿಯ ಹೊಸ ಫೋನ್ Samsung Galaxy S25 ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಸಂದರ್ಭದಲ್ಲಿ ಈ ಮೊದಲು ಬಂದಿರುವ Samsung Galaxy S24 ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಆನ್‌ಲೈನ್ ಶಾಪಿಂಗ್ ಮಾರುಕಟ್ಟೆಯ ವೇದಿಕೆಯಾಗಿರುವ ಇ-ಕಾಮರ್ಸ್ ಸೈಟ್ ಅಮೆಜಾನ್ Samsung Galaxy S24 ಸ್ಮಾರ್ಟ್‌ಫೋನ್ ಮೇಲೆ ಭಾರೀ ರಿಯಾಯ್ತಿ ಘೋಷಣೆ ಮಾಡಿದೆ. ಮನೆಯಲ್ಲಿಯೇ ಕುಳಿತು ಈ ಸ್ಮಾರ್ಟ್‌ಫೋನ್ ಬುಕ್ ಮಾಡಬಹುದು. 

ಸ್ಯಾಮ್‌ಸಂಗ್ Galaxy S24 ಮೂಲ ಬೆಲೆ ಮೇಲೆ ಅಮೆಜಾನ್ ಬರೋಬ್ಬರಿ 17,000 ರೂಪಾಯಿ ನೀಡುತ್ತಿದೆ  ಎಂದ್ರೆ ನೀವು ನಂಬಲೇಬೇಕು. ಈ ಸ್ಮಾರ್ಟ್‌ಫೋನ್ Galaxy AI ವೈಶಿಷ್ಟ್ಯತೆಯನ್ನು ಸಹ ಒಳಗೊಂಡಿದೆ. ಸ್ಯಾಮ್‌ಸಂಗ್ Galaxy S24 ಫೋನ್‌ ಮೇಲಿರುವ ಇನ್ನಿತರ ಆಫರ್‌ಗಳು ಮತ್ತು ಇನ್ನಿತರ ಫೀಚರ್ಸ್‌ಗಳು ಏನು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Tap to resize

Latest Videos

undefined

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ 57,999 ರೂಪಾಯಿಗೆ ಲಭ್ಯವಿದೆ. 128 GB ಸ್ಟೋರೇಜ್ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 ಸ್ಮಾರ್ಟ್‌ಫೋನ್ ಆರಂಭದಲ್ಲಿ 74,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಇದೀಗ ಈ ಫೋನ್ ಮೇಲೆ ಅಮೆಜಾನ್ ಶೇ.23ರಷ್ಟು ರಿಯಾಯ್ತಿ ನೀಡಲಾಗಿದ್ದು, 57,999 ರೂ.ಗೆ ಗ್ರಾಹಕರಿಗೆ ಲಭ್ಯವಿದೆ. ಇದರ ಜೊತೆಯಲ್ಲಿ ಗ್ರಾಹಕರು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದ್ರೆ ಹೆಚ್ಚುವರಿಯಾಗಿ 1,000 ರೂ.ಯ ಡಿಸ್ಕೌಂಟ್ ಲಭ್ಯವಾಗಲಿದೆ. ಇದಲ್ಲದೇ  ಖರೀದಿದಾರರು ಬೇರೆ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಮೇಲೆಯೂ ವಿವಿಧ ರಿಯಾಯ್ತಿಗಳನ್ನು ನೀಡಲಾಗಿದೆ. 

ಹಳೆಯ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್ ಮಾಡಿಕೊಂಡರೆ 40,000 ರೂ.ವರೆಗೂ ವಿನಾಯಿತಿ ಪಡೆದುಕೊಳ್ಳಬಹುದು. ಈ ಡಿಸ್ಕೌಂಟ್‌ ನಿಮ್ಮ ಸ್ಮಾರ್ಟ್‌ಫೋನ್ ಯಾವ ಕಂಡಿಷನ್‌ನಲ್ಲಿದೆ ಎಂಬುದರ ಮೇಲೆ ಡಿಸೈಡ್ ಆಗುತ್ತದೆ.

Samsung Galaxy S24 ವೈಶಿಷ್ಟ್ಯಗಳು
Samsung Galaxy S24 ಇದು 5G ಸ್ಮಾರ್ಟ್‌ಫೋನ್ ಆಗಿದ್ದು, 6.2 ಇಂಚಿನ LTPO AMOLED ಡಿಸ್‌ಪ್ಲೇಯನ್ನು (Large 6.7" FHD+ Dynamic AMOLED 2X) ಒಳಗೊಂಡಿರುವ ಸ್ಮಾರ್ಟ್‌ಫೋನ್, 120Hz ರಿಫ್ರೆಶ್ ರೇಟ್, HDR10+ ಸಪೋರ್ಟ್ ಮತ್ತು 2600 nits ಗರಿಷ್ಠ ಹೊಳಪಿನ ಜೊತೆ ಸ್ಕ್ರೀನ್ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಒದಗಿಸಲಾಗಿದೆ. ಗ್ಯಾಲಕ್ಸಿ ಎಸ್24 ಕಾರ್ಯಕ್ಷಮತೆಗಾಗಿ Snapdragon 8 Gen 3 ಪ್ರೊಸೆಸರ್ ಹೊಂದಿದೆ.

ಇದನ್ನೂ ಓದಿ: 9999 ರೂಪಾಯಿಗೆ ಸಿಗ್ತಿವೆ 4 ಸ್ಮಾರ್ಟ್‌ಫೋನ್; ಸೇಲ್‌ ಮುಗಿಯುವ ಮುನ್ನವೇ ಖರೀದಿಸಿ

8 GB RAM Memory ಇನ್‌ಸ್ಟಾಲ್ ಆಗಿದ್ದು, 256 GB ಮೆಮೊರಿ ಸ್ಟೋರೇಜ್ ಕ್ಯಾಪ್ಯಾಸಿಟಿಯನನ್ನು ಒಳಗೊಂಡಿದೆ. ಡ್ಯೂಯಲ್ ಸಿಮ್ ಸ್ಲಾಟ್, ಪ್ರೊಸೆಸರ್ ಸ್ಪೀಡ್ 3.1 GHz, ಕನೆಕ್ಟರ್ USB Type C ಟೈಪ್, ವಾಟರ್‌ ರೆಸಿಸ್ಟಂಟ್ ಸೇರಿದಂತೆ ಹಲವು ಫೀಚರ್‌ಗಳನ್ನು Samsung Galaxy S24 ಒಳಗೊಂಡಿದೆ.

ಇನನ್ನು ಕ್ಯಾಮೆರಾ ವಿಷಯಕ್ಕೆ ಬರೋದಾದ್ರೆ 50MP ಆಪ್ಟಿಕಲ್ ಸೆನ್ಸಾರ್ ರೆಸ್ಯೂಲೇಷನ್, 8MP ರಿಯರ್ ಫೇಸಿಂಗ್ ಕ್ಯಾಮೆರಾ ಫೋಟೋ ಸೆನ್ಸಾರ್, ಫ್ರಂಟ್ ಕ್ಯಾಮೆರಾ 10MP ಆಗಿದೆ. ಎಲ್ಇಡಿ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್ ಟೈಪ್, 10 x  ಡಿಜಿಟಲ್ ಝೂಮ್ ಸಾಮಾರ್ಥ್ಯವನ್ನು ಒಳಗೊಂಡಿದೆ. 25 ವ್ಯಾಟ್ ವೇಗದ ಚಾರ್ಜಿಗ್‌ನೊಂದಿಗೆ 4700 mAh ಸಾಮಾರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. 

ಇದನ್ನೂ ಓದಿ: 300MP ಫ್ಲೈಯಿಂಗ್ ಕ್ಯಾಮೆರಾ ಜೊತೆ 7200mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್ ಮೇಲೆ ₹5000ಕ್ಕಿಂತಲೂ ಹೆಚ್ಚು ಡಿಸ್ಕೌಂಟ್ 

click me!