ಬಿಎಸ್ಎನ್ಎಲ್ 300 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್ ಅನ್‌ಲಿಮಿಟೆಡ್ ಕರೆಗಳು, 2GB ದೈನಂದಿನ ಡೇಟಾ ಮತ್ತು 100 SMS ಗಳನ್ನು ಒಳಗೊಂಡಿದೆ.
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ದೀರ್ಘಾವಧಿಯ ಹಲವು ರೀಚಾರ್ಜ್ ಪ್ಲಾನ್‌ಗಳನ್ನು ಹೊರ ತಂದಿದೆ. ಬಿಎಸ್‌ಎನ್‌ಎಲ್ ರೀಚಾರ್ಜ್ ಪ್ಲಾನ್‌ಗಳು 26 ರಿಂದ 395 ದಿನ ವ್ಯಾಲಿಡಿಟಿಯನ್ನು ಒಳಗೊಂಡಿವೆ. ಖಾಸಗಿ ಟೆಲಿಕಾಂ ಕಂಪನಿಗಳ ಮಾದರಿಯಲ್ಲಿಯೇ ಬಿಎಸ್‌ಎನ್‌ಎಲ್ ಸಹ ತನ್ನ ರೀಚಾರ್ಜ್ ಆಫರ್‌ಗಳಲ್ಲಿ ಅನ್‌ಲಿಮಿಟೆಡ್ ಕಾಲ್, ನಿಯಮಿತ ಎಸ್‌ಎಂಎಸ್ ಮತ್ತು ಡೇಟಾ ಸಹ ನೀಡುತ್ತಿದೆ. ಕಳೆದ ಐದಾರು ತಿಂಗಳಲ್ಲಿ ಬಿಎಸ್‌ಎನ್‌ಎಲ್‌ಗೆ 55 ಲಕ್ಷ ಹೊಸ ಬಳಕೆದಾರರ ಆಗಮನವಾಗಿದೆ. ಇಂದು ನಾವು ನಿಮಗೆ 3 ರೂ.ಗಿಂತಲೂ ಕಡಿಮೆ ದರದಲ್ಲಿ 300 ದಿನ ಸಿಮ್ ಆಕ್ಟಿವ್ ಆಗಿರುವ ದೀರ್ಘಾವಧಿಯ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಹೇಳುತ್ತಿದ್ದೇವೆ.
ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ 300 ದಿನಗಳ ವ್ಯಾಲಿಡಿಟಿಯ ಪ್ಲಾನ್‌ನ್ನು ಬಿಎಸ್‌ಎನ್ಎಲ್ ನೀಡುತ್ತಿದೆ. ಇದೇ ಆಫರ್ ನಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲಿಂಗ್, ಡೇಟಾ ಮತ್ತು ಉಚಿತ ಎಸ್‌ಎಂಎಸ್ ಆಫರ್ ಸಿಗುತ್ತದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಲು ಗ್ರಾಹಕರು 797 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಈ ಪ್ಲಾನ್ ಆಕ್ಟಿವ್ ಆದ ಮೊದಲ 60 ದಿನ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಮಾಡಬಹುದು.
undefined
797 ರೂಪಾಯಿ ರೀಚಾರ್ಜ್ ಪ್ರಿಪೇಯ್ಡ್ ಪ್ಲಾನ್ ಆಗಿದ್ದು, ಮೊದಲ 60 ದಿನ ಬಳಕೆದಾರರಿಗೆ ಹೈಸ್ಪೀಡ್‌ನಲ್ಲಿ 2GB ಡೇಟಾ ಲಭ್ಯವಾಗುತ್ತದೆ. ದಿನದ ಲಿಮಿಟ್ ಮುಗಿಯುತ್ತಿದ್ದಂತೆ ಇಂಟರ್‌ನೆಟ್ ಸ್ಪೀಡ್ 40kbps ಆಗುತ್ತದೆ. ಇದರ ಜೊತೆಗೆ 60 ದಿನಗಳವರೆಗೆ ಪ್ರತಿದಿನ 100 ಎಸ್‌ಎಂಎಸ್ ಕಳುಹಿಸಬಹುದು. ಸೆಕೆಂಡರಿ ಸಿಮ್ ಆಗಿ ಬಿಎಸ್‌ಎನ್ಎಲ್ ಬಳಕೆ ಮಾಡುತ್ತಿದ್ರೆ, ಈ ಆಫರ್ ನಿಮಗೆ ಲಾಭದಾಯಕವಾಗುತ್ತದೆ.
ಇದನ್ನೂ ಓದಿ: BSNLನಿಂದ ಬಿಗ್ ಆಫರ್, 187ರೂಗೆ 28 ದಿನ, 1.5ಜಿಬಿ ಡೇಟಾ, ಕಾಲ್ ಸೇರಿ ಹಲವು ಸೌಲಭ್ಯ!
ಬಿಎಸ್‌ಎನ್ಎಲ್ 4G ನೆಟ್‌ವರ್ಕ್
ಬಿಎಸ್‌ಎನ್ಎಲ್ 4G ನೆಟ್‌ವರ್ಕ್ ಅಳವಡಿಕೆ ಕಾರ್ಯದ ವೇಗವನ್ನು ಹೆಚ್ಚಿಸಿದೆ. ಇದುವರೆಗೂ 50,000 ಹೊಸ 4G ಮೊಬೈಲ್ ಟವರ್ ಸ್ಥಾಪಿಸಲಾಗಿದೆ ಎಂದು ಬಿಎಸ್‌ಎನ್‌ಎಲ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ 41,000 ಟವರ್‌ಗಳು ಕೆಲಸವನ್ನು ಆರಂಭಿಸಿವೆ. ಟೆಲಿಕಾಂ ಆಪರೇಟರ್ ಇಲ್ಲದ ಸ್ಥಳದಲ್ಲಿ ಬಿಎಸ್ಎನ್‌ಎಲ್ 5,000 ಮೊಬೈಲ್ ಟವರ್ ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ವರ್ಷ ಜೂನ್ ಅಂತ್ಯದ ವೇಳೆ ದೇಶದ ಎಲ್ಲಾ ಭಾಗದಲ್ಲಿ ಬಿಎಸ್ಎನ್‌ಎಲ್ 4G ಸೇವೆ ಆರಂಭಿಸಲಿದೆ. ಇದರ ಜೊತೆ 5G ಸೇವೆಯ ಕೆಲಸಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಇದನ್ನೂ ಓದಿ: BSNLನಿಂದ ಕೈಗೆಟುಕುವ ದರದ ವಾರ್ಷಿಕ ಪ್ಲಾನ್,ತಿಂಗಳಿಗೆ ಕೇವಲ 126 ರೂಪಾಯಿ!
has brought to the challenging terrains of Ladakh and border areas. As part of the solar powered project, the deployment giving uninterrupted connectivity for soldiers and residents alike, connecting the uncovered villages.… pic.twitter.com/jxuBQUiCd6
— BSNL India (@BSNLCorporate)We are proud to announce that 5,000 4G sites are now operational under 's 4G Saturation Projects! This initiative aims to connect the unconnected, ensuring that no village, no matter how remote, is left behind in India’s digital revolution. … pic.twitter.com/i5E90niMs5
— BSNL India (@BSNLCorporate)Another milestone achieved with 41,000 4G sites on air!
The journey to bridge the digital divide reaches new heights as expands 4G coverage across India, offering secure, reliable, and affordable connectivity. pic.twitter.com/fQsTAqKVhX