WEB SPECIAL

ಸ್ವಾವಲಂಬಿಗಳಾಗಿರಿ, ಛಲ ಬಿಡಬೇಡಿ: ಯುವಜನತೆಗೆ ಏರ್ ಕಮೋಡರ್ ಎಂ.ಕೆ. ಚಂದ್ರಶೇಖರ್ ಕಿವಿಮಾತು

Oct 12, 2018, 8:07 PM IST

"ದೇಶದ ಸಾರ್ವಭೌಮತೆ, ಜನರ ರಕ್ಷಣೆಗಾಗಿ ತನ್ನ ಜೀವವನ್ನೇ ಯೋಧರು ಮುಡುಪಾಗಿಡುತ್ತಾರೆ, ಹುತಾತ್ಮರಾಗುತ್ತಾರೆ. ಯೋಧರು ಬಹಳ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾರೆ. ದೇಶದ ಮುಂದಿನ ಪೀಳೆಗೆಯ ಉಜ್ವಲ ಭವಿಷ್ಯಕ್ಕಾಗಿ, ಅವರ ರಕ್ಷಣೆಗಾಗಿ ಪ್ರಾಣವನ್ನೇ ತ್ಯಜಿಸುತ್ತಾರೆ. ದೇಶದ ಸಾರ್ವಭೌಮತೆ ಹಾಗೂ ಅಭಿವೃದ್ಧಿಯ ಶತ್ರುಗಳ ವಿರುದ್ಧ ಯೋಧರು ಹೋರಾಡುತ್ತಾರೆ. ಅವರೇನು ಸುಮ್ಮನೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುವುದಿಲ್ಲ. ಯೋಧರಿಗೂ ಸ್ಪಷ್ಟವಾದ ಗುರಿಯಿದೆ, ಅವರಿಗೆ ಸರಿಯಾದ ಮಾರ್ಗದರ್ಶನ, ತರಬೇತಿ, ಹಾಗೂ ಸ್ಫೂರ್ತಿ ಇದೆ. ದೇಶಪ್ರೇಮದ ಪರಾಕಾಷ್ಠೆ ಅವರಲ್ಲಿರುತ್ತದೆ. ಇಂದಿನ ಯುವಜನರ ಮುಂದೆ ದೊಡ್ಡ ದೊಡ್ಡ ಸವಾಲುಗಳಿವೆ. ಜಗತ್ತಿನ ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಕೌಶಲ್ಯ ಯುವಜನತೆಗೆ ಬೇಕು" ಇದು ಯುವಜನತೆಗೆ ಏರ್ ಕಮೋಡರ್ ಎಂ.ಕೆ. ಚಂದ್ರಶೇಖರ್ ಅವರ ಕಿವಿ ಮಾತು.