ದುಬೈನಲ್ಲಿ ಸಾನಿಯಾ ಮಿರ್ಜಾ ಕಾಫಿ ಡೇಟ್, ಜೊತೆಗಿರೋರು ಯಾರು?

By Roopa Hegde  |  First Published Jan 11, 2025, 11:39 AM IST

ಟೆನಿಸ್ ತಾರೆ ಸಾನಿಯಾ ಮಿರ್ಜಾ, ಡಿವೋರ್ಸ್ ನಂತ್ರ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ದುಬೈಗೆ ಶಿಫ್ಟ್ ಆಗಿರುವ ಸಾನಿಯಾ ಮಿರ್ಜಾ, ಹೊಸ ಕೆಲಸ ಶುರು ಮಾಡಿದ್ದಾರೆ. ಜೊತೆಗೆ ಡೇಟಿಂಗ್ ಸುದ್ದಿಯೊಂದು ಹರಿದಾಡ್ತಿದೆ. 
 


ಭಾರತದ ಟೆನಿಸ್ ತಾರೆ (Indian tennis star), ಪಾಕಿಸ್ತಾನದ ಸೊಸೆಯಾಗಿದ್ದ ಸಾನಿಯಾ ಮಿರ್ಜಾ (Sania Mirza) ಈಗ ಭಾರತ ಹಾಗೂ ಪಾಕಿಸ್ತಾನದ ಬದಲು ದುಬೈನಲ್ಲಿ ಸೆಟಲ್ ಆಗಿದ್ದಾರೆ. ದುಬೈ (Dubai)ನಲ್ಲಿ ಐಷಾರಾಮಿ ಜೀವನವನ್ನು ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ದಿನ ದಿನಕ್ಕೂ ವೈರಲ್ ಆಗ್ತಾನೆ ಇದೆ. ಸಾನಿಯಾ ಮಿರ್ಜಾ ನಾಲ್ಕು ದಿನಗಳ ಹಿಂದೆ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಡೇಟಿಂಗ್ (dating) ಫೋಟೋ ಸುದ್ದಿಗೆ ಬಂದಿದೆ. ಸಾನಿಯಾ ಮಿರ್ಜಾ, ದುಬೈನಲ್ಲಿ ಯಾರ್ ಜೊತೆ ಡೇಟ್ ಮಾಡ್ತಿದ್ದಾರೆ ಎಂಬ ಪ್ರಶ್ನೆ ಫ್ಯಾನ್ಸ್ ಗೆ ಕಾಡ್ತಿದೆ.

ಸಾನಿಯಾ ಮಿರ್ಜಾ ತಮ್ಮ ಇನ್ಸ್ಟಾ ಸ್ಟೋರಿಯಲಿ ಕಾಫಿ ಡೇಟ್ ಫೋಟೋ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಹಾರ್ಟ್ ಸಿಂಬಲ್ ಕಾಣ್ಬಹುದು. ಸಾನಿಯಾ ಬರೀ ಕಾಫಿ ಫೋಟೋ ಮಾತ್ರ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ತಲೆಗೆ ಹುಳು ಬಿಟ್ಕೊಂಡಿದ್ದಾರೆ. ಸಾನಿಯಾ ಜೊತೆ ಡೇಟ್ ಗೆ ಬಂದವರು ಯಾರು ಎಂಬ ಪ್ರಶ್ನೆ ಅವರನ್ನು ಕಾಡ್ತಿದೆ. ಸಾನಿಯಾ ಮಿರ್ಜಾ, ಕಾಫಿ ಫೋಟೋ ಹಾಕಿ ತಮ್ಮ ಹೊಸ ಸಂಬಂಧದ ಬಗ್ಗೆ ಸುಳಿವು ನೀಡ್ತಿದ್ದಾರೆಂದು ಫ್ಯಾನ್ಸ್ ಭಾವಿಸಿದ್ದಾರೆ. ಆದ್ರೆ ಸಾನಿಯಾ ಮಿರ್ಜಾ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. 

Tap to resize

Latest Videos

ನಿವೃತ್ತಿ ವದಂತಿ ಬೆನ್ನಲ್ಲೇ ಪ್ರೇಮಾನಂದ್ ಮಹಾರಾಜ್ ಭೇಟಿ ಮಾಡಿದ ಕೊಹ್ಲಿ! ಈ ಪ್ರಶ್ನೆ

2010 ರಲ್ಲಿ ಸಾನಿಯಾ ಮಿರ್ಜಾ, ಶೋಯೆಬ್ ಮಲಿಕ್  ಮದುವೆಯಾಗಿದ್ದರು. ಶೋಯೆಬ್ ಮಲಿಕ್ ಗೆ ಇದು ಎರಡನೇ ಮದುವೆಯಾಗಿತ್ತು. 14 ವರ್ಷಗಳ ನಂತರ ಅವರ ಸಂಬಂಧ ಕೊನೆಗೊಂಡಿದೆ. ಕಳೆದ ವರ್ಷ 2024 ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಿದ ನಂತ್ರ ಶೋಯೆಬ್ ಮಲ್ಲಿಕ್ ಮೂರನೇ ಮದುವೆ ಆಗಿದ್ದಾರೆ. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲ್ಲಿಕ್ ದಂಪತಿಗೆ ಒಂದು ಮಗುವಿದೆ. ಡಿವೋರ್ಸ್ ನಂತ್ರ ಸಾನಿಯಾ ಮಿರ್ಜಾ ದುಬೈನಲ್ಲಿ ವಾಸವಾಗಿದ್ದಾರೆ. ಮದುವೆ, ವಿಚ್ಛೇದನ ಸೇರಿದಂತೆ ವೈಯಕ್ತಿಕ ವಿಷ್ಯಕ್ಕೆ ಸಾಕಷ್ಟು ಚರ್ಚೆಯಲ್ಲಿದ್ದ ಸಾನಿಯಾ ಮಿರ್ಜಾ ಕೆಲ ದಿನಗಳ ಹಿಂದಷ್ಟೆ ತಮ್ಮ ವೃತ್ತಿ ಜೀವನದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಸಾನಿಯಾ ಮಿರ್ಜಾ ಪಿಕಲ್‌ಟರ್ಫ್ ತಂಡದೊಂದಿಗೆ ಕೈಜೋಡಿಸಿದ್ದಾರೆ.

ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಸಾನಿಯಾ ಮಿರ್ಜಾ, ನಾನು ಅಧಿಕೃತವಾಗಿ ಪಿಕಲ್‌ಟರ್ಫ್‌ನ ಅದ್ಭುತ ತಂಡವನ್ನು ಸೇರುತ್ತಿದ್ದೇನೆ ಎಂಬುದನ್ನು ಘೋಷಿಸಲು ಖುಷಿಯಾಗ್ತಿದೆ. ನಾವು ಕೋರ್ಟ್‌ಗೆ ಹೊಸ ಶಕ್ತಿಯನ್ನು ತರಲು ಸಿದ್ಧನಿದ್ದೇನೆ. ಪಿಕಲ್‌ಟರ್ಫ್ ಕೇವಲ ಆಟವಾಡಲು ಒಂದು ಸ್ಥಳವಲ್ಲ.  ಇದು ಒಂದು ಗುಂಪು. ನೀವು ಆಟಕ್ಕೆ ಹೊಸಬರಾಗಿರಲಿ ಅಥವಾ ಅನುಭವಿ ವೃತ್ತಿಪರರಾಗಿರಲಿ, ನಮ್ಮಲ್ಲಿ ಎಲ್ಲರಿಗೂ ಅವಕಾಶವಿದೆ. ನಿಮ್ಮನ್ನು ಕೋರ್ಟ್‌ನಲ್ಲಿ ನೋಡಲು ನಾನು ಉತ್ಸುಕನಾಗಿದ್ದೇನೆ. ಈ ರೋಮಾಂಚಕಾರಿ ಪ್ರಯಾಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಸಾನಿಯಾ ಪೋಸ್ಟ್ ಮಾಡಿದ್ದರು. 

ಚಹಲ್ ಹಾದಿ ಹಿಡಿದ್ರಾ ಕನ್ನಡಿಗ; ಟೀಂ ಇಂಡಿಯಾ ಕ್ರಿಕೆಟಿಗನ ದಾಂಪತ್ಯ ಜೀವನದಲ್ಲಿ ಬಿರುಗಾಳಿ?

ಇದಲ್ಲದೆ ವರ್ಷದ ಆರಂಭದಲ್ಲಿಯೇ ಸಾನಿಯಾ ಹೊಸ ಕುಟುಂಬವೊಂದನ್ನು ಸೇರಿದ್ದಾರೆ. 2025 ರ ಆರಂಭದೊಂದಿಗೆ, ಸಾನಿಯಾ ಮಿರ್ಜಾ ಮಕ್ಕಳ ಫಿಟ್ನೆಸ್ ಮತ್ತು ಶಿಕ್ಷಣವನ್ನು ಉತ್ತೇಜಿಸುವ CESA ಸ್ಪೇಸ್‌ಗಳ ಹೆಸರಿನ ಸಂಸ್ಥೆಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಈ ಸಂಸ್ಥೆ  ಮಕ್ಕಳ ದೈಹಿಕ ಚಟುವಟಿಕೆ, ಕ್ರೀಡೆಗಳು ಮತ್ತು ಫಿಟ್‌ನೆಸ್ ಜೊತೆಗೆ  ಅವರ ಅಧ್ಯಯನ ಮತ್ತು ಮಾನಸಿಕ ಬೆಳವಣಿಗೆಗೆ ಆದ್ಯತೆ ನೀಡುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಸಾನಿಯಾ ಮಿರ್ಜಾ ಅವರ ವಾರ್ಷಿಕ ಆದಾಯ ಸುಮಾರು 25 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ವಿಶ್ವದ ನಂ. 1 ಟೆನಿಸ್ ತಾರೆಯಾಗಿದ್ದ ಸಾನಿಯಾ, ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಆರು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023 ರಲ್ಲಿ ಟೆನಿಸ್ ಗೆ ವಿದಾಯ ಹೇಳಿದ್ದರು ಸಾನಿಯಾ. 

click me!