ಬಾಂಗ್ಲಾದೇಶದಿಂದ ಮತ್ತೊಂದು ಕೃತ್ಯ! ಭಾರತದ ಆಹ್ವಾನ ತಿರಸ್ಕರಿಸಿದ ಯೂನಸ್ ಸರ್ಕಾರ!

By Ravi Janekal  |  First Published Jan 11, 2025, 11:38 AM IST

ಭಾರತೀಯ ಹವಾಮಾನ ಇಲಾಖೆಯ 150ನೇ ವಾರ್ಷಿಕೋತ್ಸವದ ಸೆಮಿನಾರ್‌ಗೆ ಬಾಂಗ್ಲಾದೇಶ ಹಾಜರಾಗಲು ನಿರಾಕರಿಸಿದೆ. ಒಂದು ತಿಂಗಳ ಹಿಂದೆ ಆಹ್ವಾನವನ್ನು ಸ್ವೀಕರಿಸಿದ್ದರೂ, 'ಅನಿವಾರ್ಯವಲ್ಲದ ವಿದೇಶ ಪ್ರಯಾಣ ನಿಷೇಧ'ವನ್ನು ಉಲ್ಲೇಖಿಸಿ ಬಾಂಗ್ಲಾದೇಶ ಸರ್ಕಾರ ಈಗ ಭಾಗವಹಿಸುವುದಿಲ್ಲ ಎಂದು ತಿಳಿಸಿದೆ.


ದೆಹಲಿ (ಜ.11) ಹವಾಮಾನ ಇಲಾಖೆಯ 150 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕಳಿಸಿದ್ದ ಆಹ್ವಾನ ತಿರಸ್ಕರಿಸಿ ಬಾಂಗ್ಲಾದೇಶದ ಯೂನಸ್ ಸರ್ಕಾರ ಭಾರತದ ವಿರುದ್ಧ ತಮ್ಮ ದ್ವೇಷ ಭಾವನೆ ಮತ್ತೊಮ್ಮೆ ಹೊರಹಾಕಿದೆ.

ಪಿಟಿಐ ಸುದ್ದಿ ಸಂಸ್ಥೆ ಪ್ರಕಾರ, ಐಎಂಡಿ 150 ವರ್ಷಗಳನ್ನು ಪೂರೈಸಿದ ಕುರಿತು ದೆಹಲಿಯಲ್ಲಿ ಸೆಮಿನಾರ್ ಆಯೋಜಿಸಲಾಗಿದೆ. ಜನವರಿ 14 ರಂದು ದೆಹಲಿಯ ಮಂಟಪದಲ್ಲಿ ನಡೆಯಲಿರುವ ಈ ವಿಚಾರ ಸಂಕಿರಣಕ್ಕಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಅವಿಭಜಿತ ಭಾರತದ ಭಾಗವಾಗಿದ್ದ ನೆರೆಯ ರಾಷ್ಟ್ರಗಳಿಗೂ ಆಹ್ವಾನಗಳನ್ನು ಕಳುಹಿಸಲಾಗಿದೆ. ಪಾಕಿಸ್ತಾನ ಕೂಡ ತನ್ನ ಭಾಗವಹಿಸುವಿಕೆಯನ್ನು ಖಚಿತಪಡಿಸಿದೆ. ಆದಾಗ್ಯೂ, ಬಾಂಗ್ಲಾದೇಶ ಆಹ್ವಾನ ತಿರಸ್ಕರಿಸಿದೆ. ಯೂನಸ್ ಸರ್ಕಾರದ ಬಾಂಗ್ಲಾದೇಶದ ಅಧಿಕಾರಿಗಳು ಸರ್ಕಾರಿ ವೆಚ್ಚದಲ್ಲಿ ಅನಿವಾರ್ಯವಲ್ಲದ ವಿದೇಶಿ ಪ್ರಯಾಣದ ಮೇಲಿನ ನಿಷೇಧವನ್ನು ಉಲ್ಲೇಖಿಸಿ ಭಾರತ ಸರ್ಕಾರದ ಆಹ್ವಾನವನ್ನು ತಿರಸ್ಕರಿಸಲಾಗಿದೆ.

Tap to resize

Latest Videos

ಬಾಂಗ್ಲಾ ರಾಜಕೀಯ ಅರಾಜಕತೆ: ಬಳ್ಳಾರಿ ಜೀನ್ಸ್‌ಗೆ ಬಂತು ಭಾರೀ ಬೇಡಿಕೆ!

ತಿಂಗಳ ಹಿಂದೆ ಆಹ್ವಾನ ಸ್ವೀಕರಿಸಿತ್ತು:

ಬಾಂಗ್ಲಾದೇಶದ ಹವಾಮಾನ ಇಲಾಖೆ (BMD) ಕಾರ್ಯನಿರ್ವಾಹಕ ನಿರ್ದೇಶಕ ಮೊಮಿನುಲ್ ಇಸ್ಲಾಂ ಒಂದು ತಿಂಗಳ ಹಿಂದೆ IMD ಯಿಂದ ಆಹ್ವಾನವನ್ನು ಸ್ವೀಕರಿಸಿರುವುದನ್ನು ದೃಢಪಡಿಸಿದ್ದರು. ಭಾರತೀಯ ಹವಾಮಾನ ಇಲಾಖೆಯು ತನ್ನ 150 ನೇ ವಾರ್ಷಿಕೋತ್ಸವದ ಆಚರಣೆಗೆ ನಮ್ಮನ್ನು ಆಹ್ವಾನಿಸಿದೆ ಎಂದು ಅವರು ಹೇಳಿದ್ದರಲ್ಲದೆ, ನಾವು ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುತ್ತೇವೆ ಮತ್ತು ಅವರೊಂದಿಗೆ ಸಹಕಾರವನ್ನು ಮುಂದುವರಿಸುತ್ತೇವೆ ಎಂದಿದ್ದರು.

ಶೇಖ್ ಹಸೀನಾ ವಿಚಾರಣೆಗೆ ಭಾರತಕ್ಕೆ ಬರಲು ತುದಿಗಾಲಲ್ಲಿ ನಿಂತಿದೆ ಬಾಂಗ್ಲಾ ತನಿಖಾ ತಂಡ

IMD ಸ್ಥಾಪನೆ, ಇತಿಹಾಸ:

ಬ್ರಿಟಿಷರ ಕಾಲದಲ್ಲಿ 1875ರಲ್ಲಿ ಸ್ಥಾಪನೆಯಾದ IMD ಜನವರಿ 15ಕ್ಕೆ 150 ವರ್ಷಗಳನ್ನು ಪೂರೈಸಲಿದೆ. 1864 ರಲ್ಲಿ ಕಲ್ಕತ್ತಾಕ್ಕೆ ಅಪ್ಪಳಿಸಿದ ಚಂಡಮಾರುತ ಮತ್ತು 1866 ಮತ್ತು 1871 ರಲ್ಲಿ ಮಾನ್ಸೂನ್ ಪುನರಾವರ್ತಿತ ವೈಫಲ್ಯದ ನಂತರ ಇದನ್ನು ಸ್ಥಾಪಿಸಲಾಯಿತು. ಒಂದು ಕಾಲದಲ್ಲಿ ಸರಳವಾಗಿ ಪ್ರಾರಂಭವಾದ ಈ ಸಂಸ್ಥೆ ಇಂದು ಹವಾಮಾನ ಮುನ್ಸೂಚನೆ, ಸಂವಹನ ಮತ್ತು ವೈಜ್ಞಾನಿಕ ಆವಿಷ್ಕಾರದ ಕೇಂದ್ರವಾಗಿದೆ. ಹವಾಮಾನ ಇಲಾಖೆ 150 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿರುವ ವಿಚಾರ ಸಂಕಿರಣಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಅವಿಭಜಿತ ಭಾರತದ ಭಾಗವಾಗಿದ್ದ ನೆರೆಯ ರಾಷ್ಟ್ರಗಳಿಗೂ ಆಹ್ವಾನ ಕಳುಹಿಸಲಾಗಿದೆ. ಈ ವಿಚಾರ ಸಂಕಿರಣಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ, ಮ್ಯಾನ್ಮಾರ್, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ನೇಪಾಳದ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ.

click me!