ನು ಅವರ ಕಾರು ಹತ್ತಲ್ಲ, ಇವರ ಕಾರು ಹತ್ತಲ್ಲ ಎಂದು ಹೇಳಿಲ್ಲ. ಚಲುವರಾಯಸ್ವಾಮಿಗೆ ಈ ವಿಷಯ ಹೇಗೆ ಹೋಗಿದೆಯೋ ಗೊತ್ತಿಲ್ಲ. ಸುಮಲತಾ ಅವರು ಬಳಸಿದ ಕಾರು ತಗೊಳಲ್ಲ ಎಂದು ನಾನು ಪತ್ರ ಬರೆದಿದ್ದೇನಾ ಎಂದು ಪ್ರಶ್ನಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಮದ್ದೂರು(ಜ.11): ಮಾಜಿ ಸಂಸದೆ ಸುಮಲತಾ ಅವರ ಕಾರು ಹತ್ತಲ್ಲ ಎಂದು ನಾನು ಹೇಳಿಲ್ಲ. ಈ ವಿಚಾರದಲ್ಲಿ ಚಿಲ್ಲರೆ ರೀತಿ ರಾಜಕೀಯ ಬೆರೆಸುವ ಅವಶ್ಯಕತೆ ನನಗಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅವರ ಕಾರು ಹತ್ತಲ್ಲ, ಇವರ ಕಾರು ಹತ್ತಲ್ಲ ಎಂದು ಹೇಳಿಲ್ಲ. ಚಲುವರಾಯಸ್ವಾಮಿಗೆ ಈ ವಿಷಯ ಹೇಗೆ ಹೋಗಿದೆಯೋ ಗೊತ್ತಿಲ್ಲ. ಸುಮಲತಾ ಅವರು ಬಳಸಿದ ಕಾರು ತಗೊಳಲ್ಲ ಎಂದು ನಾನು ಪತ್ರ ಬರೆದಿದ್ದೇನಾ ಎಂದು ಪ್ರಶ್ನಿಸಿದರು. ಸರ್ಕಾರಿ ಕಾರು ಅದೇನು ನಮ್ಮಪ್ಪನ ಆಸ್ತಿನಾ. ನಾನು ಸಿಎಂ ಆಗಿದ್ದಾಗ ಸರ್ಕಾರಿ ಕಾರು, ಡ್ರೈವರ್, ಸಂಬಳ ತಗೊಂಡಿಲ್ಲ. ನಾನು ಅಧಿಕಾರದಲ್ಲಿ ಇರುವವರೆಗೆ ಒಂದು ಶಾಶ್ವತ ಕಾರು ಕೊಡಿ ಎಂದು ಕೇಳಿರುವೆ. ಅವರು ಯಾರೋ ಬಳಸಿದ್ದಾರೆ. ನನಗೆ ಬೇಡವೆಂದು ನಾನು ಹೇಳಿಲ್ಲ. ಇಂತಹ ಸಣ್ಣ ವಿಚಾರವನ್ನು ಚರ್ಚೆ ಮಾಡುವ ಸಂಸ್ಕೃತಿಯನ್ನು ಚಲುವರಾಯಸ್ವಾಮಿ ಬಿಡುವುದು ಒಳ್ಳೆಯದು ಎಂದು ಟೀಕಿಸಿದರು.
ರಾಜ್ಯದಲ್ಲೀಗ ಸರ್ಕಾರದ ಸಹಿ ಮಾರಾಟಕ್ಕಿದೆ, ಇಲ್ಲಿರೋದು 60 ಪರ್ಸೆಂಟ್ ಕಮಿಷನ್: ಕುಮಾರಸ್ವಾಮಿ
ಈ ಬಗ್ಗೆ ಏನೋ ಮಾತಾಡಿಕೊಂಡಿದ್ದಾರೆ ಮಾತಾಡಲಿ. ಇದಕ್ಕೆಲ್ಲಾ ನಾನು ಉತ್ತರ ಯಾಕೆ ಕೊಡಬೇಕು. ನನ್ನ ಆತ್ಮ ತೃಪ್ತಿಗೆ ಕೆಲಸ ಮಾಡಿದರೆ ಅಷ್ಟೇ ಸಾಕು. ಯಾರನ್ನೋ ಮೆಚ್ಚಿಸಲು ಕೆಲಸ ಮಾಡುವುದಕ್ಕೆ ಆಗಲ್ಲ ಎಂದು ತಿರುಗೇಟು ನೀಡಿದರು.
ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ ಎಂಬ ಮಾಜಿ ಸಚಿವ ನಾರಾಯಣಗೌಡ ಹೇಳಿಕೆಗೆ ಉತ್ತರಿಸಿದ ಎಚ್ಚಿಕೆ, ಈ ಕುರಿತು ಸಾರ್ವ ಜನಿಕವಾಗಿ ಮಾತನಾಡಿದ್ದಕ್ಕೆ ಉತ್ತರ ಕೊಡುವುದಕ್ಕೆ ಆಗುತ್ತಾ? ಬಂದು ಕೂತರೆ ಎದುರುಗಡೆ ನಾಲ್ಕು ಗೋಡೆ ಮಧ್ಯ ಮಾತನಾಡಬಹುದು. ಇವೆಲ್ಲಾ ಹೊರಗಡೆ ಚರ್ಚೆ ಮಾಡುವುದಕ್ಕೆ ಆಗಲ್ಲ. ನನ್ನ ಬಳಿ ಏನು ಸಮಸ್ಯೆ ಎಂದು ಹೇಳಿದರೆ ಸರಿಪಡಿಸಬಹುದು ಎಂದರು.
ಎಚ್‌ಡಿಕೆಗೆ ಅದ್ದೂರಿ ಸ್ವಾಗತ ಕೋರಿದ ಮದ್ದೂರು ಜನತೆ
ಮದ್ದೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗಿ ಪ್ರಥಮ ಬಾರಿಗೆ ತಾಲೂಕಿನ ಕೆಸ್ತೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಶುಕ್ರವಾರ ಆಗಮಿಸಿದ್ದ ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿ ಸ್ವಾಗತ. ಕೋರಿದರು.
100 ಕ್ಷೇತ್ರ ಹೊಣೆಗೆ ಬಿಜೆಪಿ ಭಿನ್ನರ ಬೇಡಿಕೆ: ವಿಜಯೇಂದ್ರ ಬಲಹೀನಕ್ಕೆ ಭಾರೀ ಪ್ಲ್ಯಾನ್!
ತಾಲೂಕಿನ ಸೋಮನಹಳ್ಳಿ ಸಮೀಪದ ಕೆಸ್ತೂರು ಕ್ರಾಸ್ ಗೆ ಬೆಳಗ್ಗೆ 11.40ರ ಸುಮಾರಿಗೆ ಆಗಮಿಸಿದ ಸಚಿವ ಕುಮಾರಸ್ವಾಮಿ ಅವರನ್ನು ಬಿಜೆಪಿ ಮುಖಂಡ, ಮನ್ಮುಲ್ ನಿರ್ದೇಶಕ ಎಸ್ .ಪಿ.ಸ್ವಾಮಿ, ಮಾಜಿ ನಿರ್ದೇಶಕ ಅಜ್ಜಹಳ್ಳಿ ಪಿ.ರಾಮೇಗೌಡ, ಯುವ ಮುಖಂಡರಾದ ಕೋಣಸಾಲೆ ಮಧು, ನಗರಕೆರೆ ಸಂದೀಪ, ಎಂ.ಐ.ಪ್ರವೀಣ್, ಗುರುದೇವರಹಳ್ಳಿ ಅರವಿಂದ, ಮುಖಂಡರಾದ ಕೆಂಗಲ್ ಗೌಡ, ತೊಪ್ಪನಹಳ್ಳಿ ಮಹೇಂದ್ರ, ತೈಲೂರು ನಾಗೇಶ, ಚನ್ನಸಂದ್ರ ಲಿಂಗೇಗೌಡ ಸೇರಿ ಅನೇಕ ಮುಖಂಡರು ಮಾಲಾರ್ಪಣೆ ಮಾಡಿ ಸಾಂಪ್ರದಾಯಕವಾಗಿ ಸ್ವಾಗತ ಕೋರಿದರು.
ನಂತರ ಮಾರ್ಗ ಮಧ್ಯ ಹೆಮ್ಮನಹಳ್ಳಿ, ತೊರೆಶೆಟ್ಟಿಹಳ್ಳಿ, ಕೆಸ್ತೂರು, ದುಡ್ಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರಸ್ತೆ ಇಕ್ಕಲಗಳಲ್ಲಿ ನೆರೆದಿದ್ದ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಕುಮಾರಸ್ವಾಮಿ ಅವರಿಗೆ ಹೂ ಮಳೆಗರೆದು ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಅಭಿನಂದಿಸಿದರು. ತಾಲೂಕಿನ ಮಲ್ಲನಕುಪ್ಪೆ ಗೇಟ್ ಬಳಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು ಕುಮಾರಸ್ವಾಮಿ ಅವರಿಗೆ ಪೂರ್ಣ ಕುಂಭದ ಸ್ವಾಗತ ನೀಡಿ ಆರತಿ ಬೆಳಗಿ ಸಾಂಪ್ರದಾಯಕ ಸ್ವಾಗತ ಕೋರಿದರು.