ನಾವು ದಿನನಿತ್ಯ ಒಂದಲ್ಲ ಒಂದು ಹಣ್ಣುಗಳನ್ನು ತಿನ್ನುತ್ತೇವೆ. ಕೆಲವರಂತೂ ಫ್ರುಟ್ ಡಯಟ್ (fruits diet) ಕೂಡ ಮಾಡುತ್ತಾರೆ. ಇದರಲ್ಲಿ ವಿವಿಧ ಬಗೆಯ ಹಣ್ಣುಗಳನ್ನು ಸಹ ಜೊತೆಯಾಗಿ ಸೇವನೆ ಮಾಡ್ತಾರೆ. ಆದರೆ ಕೆಲವೊಂದು ಹಣ್ಣುಗಳನ್ನು ಜೊತೆಯಾಗಿ ಸೇವನೆ ಮಾಡೋದು ಆರೋಗ್ಯಕ್ಕೆ ಮಾರಕವಾಗಬಹುದು ಅನ್ನೋದು ನಿಮಗೆ ಗೊತ್ತೆ?
ಪಪ್ಪಾಯಿ ಮತ್ತು ಬಾಳೆಹಣ್ಣು ಎರಡೂ ಕೂಡ ಆರೋಗ್ಯಕ್ಕೆ ತುಂಬಾನೆ ಉತ್ತಮವಾಗಿರುವ ಹಣ್ಣುಗಳಾಗಿವೆ. ಒಂದು ಕಡೆ ಬಾಳೆಹಣ್ಣು ಹೃದಯದ ಆರೋಗ್ಯಕ್ಕೆ (heart health) ತುಂಬಾ ಒಳ್ಳೆಯದಾದರೆ, ಮತ್ತೊಂದೆಡೆ ಪಪ್ಪಾಯಿ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದರೂ ಈ ಎರಡು ಹಣ್ಣುಗಳನ್ನು ಒಟ್ಟಿಗೆ ತಿನ್ನೋದು ಮಾತ್ರ ಆರೋಗ್ಯಕ್ಕೆ ಮಾರಕ.
ಬಾಳೆಹಣ್ಣು ನಮ್ಮ ದೇಹಕ್ಕೆ ಅಗತ್ಯವಿರುವ ಹಲವಾರು ರೀತಿಯ ಪೋಷಕಾಂಶಗಳನ್ನು ನೀಡುತ್ತದೆ. ಅಷ್ಟೇ ಯಾಕೆ ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಆರೋಗ್ಯಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಅಂಶಗಳಾಗಿವೆ. ಇವುಗಳನ್ನು ಸೇವಿಸೋದರಿಂದ ನಮ್ಮ ದೇಹದ ಸ್ನಾಯುಗಳು ಮತ್ತಷ್ಟು ಸ್ಟ್ರಾಂಗ್ ಆಗುತ್ತೆ.
ಪಪ್ಪಾಯಿ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡೋದ್ರಿಂದ ದೇಹದ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುತ್ತೆ (control cholesterol level). ಇದು ಜೀರ್ಣಕ್ರಿಯೆಗೂ ಅತ್ಯುತ್ತಮವಾದ ಹಣ್ಣು. ಅಷ್ಟೇ ಅಲ್ಲ ಇದರಲ್ಲಿ ವಿಟಮಿನ್ ಸಿ ಇದ್ದು, ಇದನ್ನು ಸೇವಿಸೋದರಿಂದ ನಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತೆ. ಹಾಗೆಯೇ ಎರಡು ಹಣ್ಣುಗಳು ತಮ್ಮದೆ ಆದ ರೀತಿಯಲ್ಲಿ ಆರೋಗ್ಯ ರಕ್ಷಣೆಗೆ ಸಹಾಯಕವಾಗಿವೆ.
ಆದರೆ ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಯಾಕೆ ಜೊತೆಯಾಗಿ ಸೇವಿಸಬಾರದು ಅನ್ನೋದು ಗೊತ್ತಾ? ಅದರ ಮಾಹಿತಿ ಇಲ್ಲಿದೆ. ಬಾಳೆಹಣ್ಣು ಮತ್ತು ಪಪ್ಪಾಯಿ ವಿಭಿನ್ನ ಸ್ವಭಾವದ ಎರಡು ಹಣ್ಣುಗಳು. ಹಾಗಾಗಿಯೇ ಅವುಗಳನ್ನು ಜೊತೆಯಾಗಿ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ.
ಪಪ್ಪಾಯಿ ಮತ್ತು ಬಾಳೆಹಣ್ಣನ್ನು ಜೊತೆಯಾಗಿ ಸೇವಿಸೋದರಿಂದ ವಾಂತಿ, ಅಲರ್ಜಿ, ಅಜೀರ್ಣದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಉಸಿರಾಟದ ತೊಂದರೆ ಇರುವವರು ಕೂಡ ಪಪ್ಪಾಯಿ ತಿನ್ನಬಾರದು ಎನ್ನುತ್ತಾರೆ ತಜ್ಞರು.
ಇದು ಮಾತ್ರವಲ್ಲದೇ ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಒಟ್ಟಿಗೆ ಸೇವಿಸೋದರಿಂದ ಅಸ್ತಮಾ ಮತ್ತು ಇತರ ಉಸಿರಾಟದ ತೊಂದರೆಗಳು (breathing problem) ಕಾಣಿಸಿಕೊಳ್ಳುವ ಚಾನ್ಸಸ್ ಕೂಡ ಇರುತ್ತೆ. ಈ ಎರಡು ಹಣ್ಣುಗಳನ್ನು ಕಾಂಬಿನೇಶನ್ ನಿಂದ ಹಲವಾರು ಅಪಾಯಕಾರಿ ರೋಗಗಳು ಉಂಟಾಗುವ ಸಾಧ್ಯತೆ ಇದೆ.
ಈ ಎಲ್ಲಾ ರೀತಿಯ ಮಸ್ಯೆಗಳನ್ನು ತಡೆಯಲು ಪಪ್ಪಾಯಿ ಮತ್ತು ಬಾಳೆಹಣ್ಣನ್ನು ಜೊತೆಯಾಗಿ ಸೇವಿಸಬಾರದು ಎನ್ನುತ್ತಾರೆ ತಜ್ಞರು. ಇನ್ನು ಆಯುರ್ವೇದದ ಪ್ರಕಾರ, ಬಾಳೆಹಣ್ಣು ದೇಹವನ್ನು ತಂಪಾಗಿಸುತ್ತದೆ. ಪಪ್ಪಾಯಿ ದೇಹವನ್ನು ಬಿಸಿಯಾಗಿಸುತ್ತೆ. ಇವೆರಡನ್ನು ಒಟ್ಟಿಗೆ ಸೇವಿಸಿದರೆ, ಜೀರ್ಣಾಂಗ ವ್ಯವಸ್ಥೆ (digestion system)ಮೇಲೆ ಪರಿಣಾಮ ಬೀರಬಹುದು, ಜೊತೆಗೆ ತಲೆನೋವು, ವಾಂತಿ, ತಲೆತಿರುಗುವಿಕೆ, ಅಲರ್ಜಿ, ಅಜೀರ್ಣ ಕೂಡ ಉಂಟಾಗಬಹುದು. ಹಾಗಾಗಿ ಇವೆರಡನ್ನು ಜೊತೆಯಾಗಿ ತಿನ್ನೋದನ್ನು ಅವಾಯ್ಡ್ ಮಾಡಿ.