Interesting Facts: ಡ್ರೆಸ್ ಗೆ ಅನಿವಾರ್ಯವಾಗಿರುವ ಬಟನ್ ಕಂಡು ಹಿಡಿದಿದ್ದು ಯಾರು ಗೊತ್ತಾ?

By Suvarna News  |  First Published Mar 24, 2023, 4:33 PM IST

ನಮ್ಮ ಹಿರಿಯರು ನಮಗೆ ಅಗತ್ಯವಿರುವ ಅನೇಕ ವಸ್ತುಗಳನ್ನು ಆವಿಷ್ಕರಿಸಿದ್ದಾರೆ. ಆದ್ರೆ ಈ ಆವಿಷ್ಕಾರದ ಹಿಂದೆ ದೊಡ್ಡ ಇತಿಹಾಸವಿದೆ. ಆರಂಭದಲ್ಲಿಯೇ ನಮಗೆ ಬೇಕಾದ ವಸ್ತು ಸಿಗಲಿಲ್ಲ. ಬೇರೆ ಬೇರೆ ವಸ್ತುಗಳನ್ನು ಬಳಸಿ, ಪ್ರಯೋಗ ಮಾಡಿ ನಂತ್ರ ಅಗತ್ಯವಿರುವ ವಸ್ತು ನಮ್ಮ ಕೈ ಸೇರಿದೆ. ಇದ್ರಲ್ಲಿ ಬಟನ್ ಕೂಡ ಒಂದು.
 


ಶರ್ಟ್ ಬಟನ್ ಒಂದು ತಪ್ಪು ಹಾಕಿದ್ರೆ ಉಳಿದಿದ್ದೆಲ್ಲ ತಪ್ಪಾಗುತ್ತದೆ. ಇದು ಸತ್ಯ. ಹಾಗೇ ಈ ಮಾತನ್ನು ಜೀವನದ ಪಾಠ ಕಲಿಸುವ ವೇಳೆ ಬಳಸಲಾಗುತ್ತದೆ. ಬಟನ್ ನಮ್ಮ ಶರ್ಟ್ ಗೆ ಬಹಳ ಮುಖ್ಯ. ಈಗ ಮಾರುಕಟ್ಟೆಯಲ್ಲಿ ವೆರೈಟಿ ಬಟನ್ ಗಳನ್ನು ನೀವು ನೋಡ್ಬಹುದು. ಕೆಲವೊಂದು ಬಟ್ಟೆಗೆ ಬಟನ್ ಅನಿವಾರ್ಯವಾದ್ರೆ ಕೆಲ ಬಟ್ಟೆಗಳಿಗೆ ಅದನ್ನು ಫ್ಯಾಷನ್ ರೂಪದಲ್ಲಿ ಬಳಕೆ ಮಾಡಲಾಗುತ್ತದೆ.

ಭಾರತ (India) ದಲ್ಲಿ ಬರೀ ಶರ್ಟ್ (Shirt) ಗೆ ಮಾತ್ರವಲ್ಲ ಬ್ಯಾಗ್ ಸೇರಿ ಅನೇಕ ವಸ್ತುಗಳಿಗೆ ಬಟನ್ (Button) ಬಳಕೆ ಮಾಡಲಾಗುತ್ತದೆ. ಈ ಬಟನ್ ಶುರುವಾಗಿದ್ದು ಎಲ್ಲಿಂದ? ಯಾರು ಈ ಬಟನ್ ಆವಿಷ್ಕಾರ ಮಾಡಿದ್ರು ಎನ್ನುವ ಹುಳು ತಲೆಯಲ್ಲಿ ಓಡೋದು ಸಾಮಾನ್ಯ. ಬಟನ್ ಆವಿಷ್ಕಾರವಾಗಿದ್ದು ಭಾರತದಲ್ಲಿ ಎನ್ನಲಾಗುತ್ತದೆ. ಆದ್ರೆ ಅದಕ್ಕೆ ಸರಿಯಾದ ಸಾಕ್ಷ್ಯವಿಲ್ಲ. ಹರಪ್ಪಾ ಉತ್ಖಲನದ ವೇಳೆ ಬಟನ್ ನಂತಹ ವಸ್ತು ಸಿಕ್ಕಿತ್ತು ಎನ್ನಲಾಗುತ್ತದೆ. ಹಾಗಾಗಿಯೇ ಭಾರತದಲ್ಲಿ ಬಟನ್ ಆವಿಷ್ಕಾರವಾಯ್ತು ಎನ್ನಲಾಗುತ್ತದೆ. ನಾವಿಂದು ಬಟನ್ ಇತಿಹಾಸದ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

Latest Videos

undefined

Health Tips : 30 ನಿಮಿಷದ ಕಡಿಮೆ ನಿದ್ರೆ ಮಾಡಿದ್ರೂ ಮಕ್ಕಳ ಆರೋಗ್ಯಕ್ಕೆ ಕುತ್ತು!

ಬಟನ್ ಬಗ್ಗೆ ಇಲ್ಲಿದೆ ಆಸಕ್ತಿದಾಯಕ ವಿಷಯ :

ಸಿಂಧೂ ಕಣಿವೆಯಲ್ಲಿ ಬಟನ್ ಆವಿಷ್ಕಾರ : ಮೊದಲೇ ಹೇಳಿದಂತೆ ಬಟನ್ ಆವಿಷ್ಕಾರ ಸಿಂಧೂ ಕಣಿವೆಯಲ್ಲಾಯ್ತು. ಸುಮಾರು ಕ್ರಿಸ್ತಪೂರ್ವ 2000ನೇ ಇಸವಿಯಲ್ಲಿ ಇದನ್ನು ಕಂಡು ಹಿಡಿಯಲಾಗಿದೆ ಎಂದು ನಂಬಲಾಗುತ್ತದೆ. ಮೊದಲಿಗೆ ಗುಂಡಿಗಳನ್ನು ಅಲಂಕಾರಿಕ ವಸ್ತುವಾಗಿ ಬಳಕೆ ಮಾಡಲಾಗ್ತಿತ್ತು. ಬಟ್ಟೆಯನ್ನು ಹಿಡಿದಿಡಲು ಬಳಸುವ ಬದಲು ಬಟ್ಟೆಯ ಮೇಲೆ ಡಿಸೈನ್ ಮಾಡಲು ಇದನ್ನು ಬಳಸಲಾಗ್ತಿತ್ತು. ಬಟನ್ ನಲ್ಲಿ ಸಣ್ಣ ಸಣ್ಣ ರಂಧ್ರಗಳಿದ್ದವು. ಈ ರಂಧ್ರಗಳೊಳಗೆ ದಾರವನ್ನು ಹಾಕಿ ಅದನ್ನು ಬಟ್ಟೆಗೆ ಹೆಣೆಯಲಾಗುತ್ತಿತ್ತು. ಇದನ್ನು ಹೊಲಿಗೆಯ ವಿಭಿನ್ನ ವಿಧಾನವೆಂದು ಪರಿಗಣಿಸಲಾಗಿತ್ತು. ಹಾಗೆಯೇ ಜ್ಯಾಮಿತಿಯ ಆಕಾರದಲ್ಲಿ ಇದನ್ನು ಬಳಕೆ ಮಾಡಲಾಗುತ್ತಿತ್ತು. ಸೆಲ್ಖಾಡಿ ಎಂಬ ಬಂಡೆಯ ಸಹಾಯದಿಂದ ಇದನ್ನು ಮಾಡುತ್ತಿದ್ದರು. ಆಗ ಮಾರುಕಟ್ಟೆಯಲ್ಲಿ ಗುಂಡಿಗಳು ಸಿಗುತ್ತಿರಲಿಲ್ಲ. ಬೇಕಾದವರು ಗುಂಡಿಗಳನ್ನು ತಾವೇ ತಯಾರಿಸಬೇಕಾಗಿತ್ತು.  

ರೋಮನ್ ಸಾಮ್ರಾಜ್ಯದಲ್ಲೂ ಇದರ ಬಳಕೆ : ಈ ಸಮಯದಲ್ಲಿ ಗುಂಡಿಯನ್ನು ರೋಮನ್ ಸಾಮ್ರಾಜ್ಯದಲ್ಲೂ ಬಳಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ರೋಮನ್ ಜನರು, ಪಿನ್ ಸಹಾಯದಿಂದ ಬಟನ್ ಗಳನ್ನು ಬಟ್ಟೆಗೆ ಜೋಡಿಸುತ್ತಿದ್ದರು. ಅಲಂಕಾರಿಕ ವಸ್ತುವಾಗಿ ಬಳಸಿದ್ದ ಈ ವಸ್ತುವಿನಲ್ಲಿ ಹೆಚ್ಚು ಆವಿಷ್ಕಾರವಾಗಲು ದೀರ್ಘ ಸಮಯಬೇಕಾಯಿತು. ಆರಂಭಿಕ ದಿನಗಳಲ್ಲಿ ಗುಂಡಿಗಳನ್ನು ಮರ, ಪ್ರಾಣಿಗಳ ಕೊಂಬು ಮತ್ತು ಲೋಹದಿಂದ ತಯಾರಿಸಲಾಗುತ್ತಿತ್ತು. ಬಟ್ಟೆಗಳನ್ನು ಜೋಡಿಸಲು ಇವು ಮೂಲವಾಗಿದ್ದ ಕಾರಣ ಇದನ್ನು ಬಳಸುವುದು ಅನಿವಾರ್ಯವಾಗಿತ್ತು. 

ಸ್ನೇಹಿತೆಯ ಪತಿಗೇ ಹೃದಯ ಕೊಟ್ಟ ನಟಿ, ಸಚಿವೆ ಸ್ಮೃತಿ ಇರಾನಿ

ಜರ್ಮನಿಯಲ್ಲಿ ತಯಾರಾಯ್ತು ಆಧುನಿಕ ಬಟನ್ : 13ನೇ ಶತಮಾನದಲ್ಲಿ ಜರ್ಮನಿಯಲ್ಲಿ ಆಧುನಿಕ ಬಟನ್ ಆವಿಷ್ಕಾರವಾಯಿತು. ಜರ್ಮನಿಯಲ್ಲಿ ತಯಾರಿಸಿದ ಈ ಬಟನ್ ಥ್ರೆಡ್ಡಿಂಗ್ ರಂಧ್ರವನ್ನು ಹೊಂದಿದ್ದವು. ಇವುಗಳ ಮೂಲಕ ದಾರವನ್ನು ಆರಾಮವಾಗಿ ಒಳಗೆ ಹಾಕಬಹುದಾಗಿತ್ತು. 13ನೇ ಶತಮಾನದ ಕೊನೆ ಹಾಗೂ 14ನೇ ಶತಮಾನದ ಆರಂಭದಲ್ಲಿ ಯುರೋಪ್ ನಲ್ಲಿ ಬಟನ್ ಹೆಚ್ಚು ಜನಪ್ರಿಯತೆಯನ್ನು ಗಳಿಸಿತು. ಯುರೋಪ್ ನ ರಾಜರುಗಳನ್ನು ಈ ಬಟನ್ ಆಕರ್ಷಿಸಿತು. ಈ ಬಟನ್ ಜೋಡಣೆಗೆ ಹಾಗೂ ಅಲಂಕಾರಕ್ಕೆ ಎರಡಕ್ಕೂ ಬಳಕೆಯಾಗಲು ಶುರುವಾಯ್ತು. ಮಹಿಳೆಯರ ಡ್ರೆಸ್ ನಲ್ಲಿ ಹಾಗೂ ಪುರುಷರ ಡ್ರೆಸ್ ತೊಳಿನಲ್ಲಿ ಇದು ಜಾಗ ಪಡೆಯಿತು.16ನೇ ಶತಮಾನದ ಸಮಯದಲ್ಲಿ ಇದು ಫ್ರಾನ್ಸ್ ನಲ್ಲಿ ಪ್ರಸಿದ್ಧಿ ಪಡೆಯಿತು. ಫ್ರಾನ್ಸ್ ನಲ್ಲಿ ಇದಕ್ಕೆ ಮತ್ತಷ್ಟು ವಿನ್ಯಾಸ ಸಿಕ್ತು. ಶ್ರೀಮಂತರು ತಮ್ಮ ಬಟ್ಟೆಗಳಿಗೆ ಹೆಚ್ಚಿನ ಬಟನ್ ಬಳಸಲು ಆಸಕ್ತಿ ತೋರಿದರು. ಬಡವರ ಬಟ್ಟೆಯಲ್ಲಿ ಕೇವಲ ಎರಡು ಗುಂಡಿಗಳಿರುತ್ತಿದ್ದವು. 20ನೇ ಶತಮಾನದಲ್ಲಿ ಪ್ಲಾಸ್ಟಿಕ್ ಈ ಜಾಗ ಪಡೆದಿದ್ದರಿಂದ ಗುಂಡಿ ಬೆಲೆ ಕುಸಿಯಿತು. 

click me!