Viral Video: ಮಕ್ಕಳ ಆಟದ ಈ ವಿಡಿಯೋ ನೋಡಿದ್ರೆ ನಿಮ್ಮ ಬಾಲ್ಯವೂ ಮನಸ್ಸಿನಲ್ಲಿ ಹಾದುಹೋಗುತ್ತೆ!

By Suvarna NewsFirst Published Apr 7, 2023, 3:11 PM IST
Highlights

ಚಿನ್ನಿದಾಂಡು, ಗೋಲಿ, ಕಳ್ಳ – ಪೊಲೀಸ್, ಕಣ್ಣಮುಚ್ಚಾಲೆ ಹೀಗೆ ಬಾಲ್ಯದಲ್ಲಿ ಆಡ್ತಿದ್ದ ಆಟಗಳನ್ನು ಪಟ್ಟಿ ಮಾಡಿದ್ರೆ ಸಾಕಷ್ಟು ಸಿಗುತ್ತೆ. ಅನೇಕ ಆಟಕ್ಕೆ ಯಾವುದೇ ವಿಶೇಷ ವಸ್ತುವಿನ ಅಗತ್ಯವಿರಲಿಲ್ಲ. ಹಗ್ಗವೊಂದಿದ್ರೆ ಇಡೀ ದಿನ ಜೋಕಾಲಿಯಾಡ್ತಾ ಕಾಲ ಕಳೆಯೋರು ನೀವಾಗಿದ್ರೆ ಈ ವಿಡಿಯೋ ನೋಡಿದ್ಮೇಲೆ ಅಸೂಯೆಪಡಬೇಡಿ, ಇಲ್ಲ ಮತ್ತೆ ಬಾಲ್ಯ ಬಂದಿದ್ರೆ ಅಂತಾ ಗೊಣಗಬೇಡಿ.
 

ಮಕ್ಕಳ ಜೀವನ ಬಹಳ ಸುಂದರ. ಬಾಲ್ಯ ಮರಳಿ ಬರಲು ಸಾಧ್ಯವಿಲ್ಲ. ಮಕ್ಕಳಿದ್ದಾಗ್ಲೇ ಸಿಕ್ಕ ಅವಕಾಶವನ್ನು ಬಳಸಿಕೊಂಡು ಎಂಜಾಯ್ ಮಾಡ್ಬೇಕು.  ನಮ್ಮ ಬಾಲ್ಯ ಈಗಿನ ಮಕ್ಕಳಿಗೆ ಸಿಗ್ತಿಲ್ಲ. ಗುಡ್ಡ ಬೆಟ್ಟವನ್ನು ಏರುತ್ತಾ, ರಸ್ತೆ ಮಧ್ಯೆ ಆಟವಾಡ್ತಾ ಇಡೀ ದಿನ ಆಟದಲ್ಲಿಯೇ ಕಳೆಯುತ್ತಿದ್ದರು ಆಗಿನ ಮಕ್ಕಳು. ಮರವನ್ನು ಫಟಾ ಫಟ್ ಏರುತ್ತಿದ್ದ ಮಕ್ಕಳು, ಕೆರೆಗಳಲ್ಲಿ ಮಿಂದೇಳುತ್ತ, ಜೋಕಾಲಿ ಆಡ್ತಾ ಕಾಲ ಕಳೆಯುತ್ತಿದ್ದರು. ಆಗಿನ ಮಕ್ಕಳಿಗೆ ಆಟವಾಡಲು ದುಬಾರಿ ಬೆಲೆಯ ಆಟಿಕೆ ಸಾಮಗ್ರಿಗಳು ಬೇಕಾಗಿರಲಿಲ್ಲ. ಅಲ್ಲಿ ಇಲ್ಲಿ ಸಿಗ್ತಿದ್ದ ಕಡ್ಡಿ, ಕಲ್ಲು, ಎಲೆಯಲ್ಲಿಯೇ ಆಟವಾಗ್ತಿತ್ತು. ಮರದ ಕೊಂಬೆಗೆ ಹಗ್ಗ ಕಟ್ಟಿ ಜೋಕಾಲಿಯಾಡ್ತಿದ್ದರು. ಮರದ ಸುತ್ತ, ಮನೆಯ ಮುಂಭಾಗದಲ್ಲಿ ಹಗ್ಗದ ಜೋಕಾಲಿಗಳು ಕಾಣಸಿಗ್ತಿದ್ದವು. ಈಗ ಜೋಕಾಲಿಯನ್ನು ಸೆಲ್ಫ್ ಫೋನ್ ನಲ್ಲಿ ನೋಡುವಂತಾಗಿದೆ. ಮಕ್ಕಳು ಸ್ಮಾರ್ಟ್ಫೋನ್ ನಲ್ಲಿ ಗೇಮ್ ಆಡೋದ್ರಲ್ಲಿ ಬ್ಯುಸಿಯಿರ್ತಾರೆ. 

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ವಿಡಿಯೋ ಒಂದು ಮತ್ತೆ ನಮ್ಮ ಬಾಲ್ಯವನ್ನು ನೆನಪಿಸಿದೆ. ಮಕ್ಕಳು ಆಡ್ತಿರುವ ಜೋಕಾಲಿ ನೋಡಿ ಎಲ್ಲರ ಮುಖದಲ್ಲೊಂದು ನಗು ಮೂಡಿದೆ. ತಮ್ಮ ಹಿಂದಿನ ದಿನಗಳನ್ನು ನೆನೆದು ಜನರು ಅದನ್ನು ಮೆಲುಕು ಹಾಕ್ತಿದ್ದಾರೆ. ನೀವೂ ಈ ವಿಡಿಯೋವನ್ನು ನೋಡಿ ನಿಮ್ಮ ಬಾಲ್ಯವನ್ನು ನೆನಪುಮಾಡಿಕೊಳ್ಳಿ. 

Latest Videos

Bengaluru: ಒಂದೇ ಆಟೋ ಮೂರು ನೋಂದಣಿ ನಂಬರ್…! ವೈರಲ್ ಆಗಿದೆ ಪೋಸ್ಟ್

ವೈರಲ್ (Viral) ವಿಡಿಯೋದಲ್ಲಿ ಏನಿದೆ ಗೊತ್ತಾ? : ಮಕ್ಕಳಿಗೆ ಈಗ ರಜೆ ಶುರುವಾಗಿದೆ. ಪರೀಕ್ಷೆ (Test) ಮುಗಿಸಿ ಮಕ್ಕಳು ರಜೆಯನ್ನು ಎಂಜಾಯ್ ಮಾಡ್ತಿದ್ದಾರೆ. ನಗರ ಪ್ರದೇಶದಲ್ಲಿ ಮಾತ್ರವಲ್ಲ ಈಗಿನ ದಿನಗಳಲ್ಲಿ ಹಳ್ಳಿಗಳ ಮಕ್ಕಳು ಕೂಡ ಮನೆಯಿಂದ ಹೊರಗೆ ಬರೋದು ಅಪರೂಪವಾಗಿದೆ. ಆದ್ರೆ ಈ ವಿಡಿಯೋದಲ್ಲಿರುವ ಮಕ್ಕಳು, ರಜೆಯನ್ನು ತುಂಬಾ ಎಂಜಾಯ್ ಮಾಡ್ತಿದ್ದಂತೆ ಕಾಣ್ತಿದೆ. ರವಿ ಸಿಂಗ್ (ravi_singh_r_b) ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಬಾಲ್ಯ ಎಂದು ಅವರು ಶೀರ್ಷಿಕೆ ಹಾಕಿದ್ದಾರೆ. ವಿಡಿಯೋದಲ್ಲಿ ಒಂದು ದೊಡ್ಡ ಮರವಿದೆ. ಮರದ ಕೊಂಬೆಗೆ ದೊಡ್ಡ ಹಗ್ಗವನ್ನು ಕಟ್ಟಿದ್ದಾರೆ. ಆ ಹಗ್ಗದ ತುದಿಗೆ ಮಕ್ಕಳು ಜೋತು ಬಿದ್ದಿದ್ದಾರೆ. ಕೊಂಬೆ ಕೆಳಗೆ ಸಣ್ಣ ಚರಂಡಿಯಿದೆ. ಚರಂಡಿ ಮೇಲ್ಬಾಗದಲ್ಲಿ ಮಕ್ಕಳು ಜೋಕಾಲಿ ಆಡ್ತಿದ್ದಾರೆ. ಏಳು ಮಕ್ಕಳು ಹಗ್ಗಕ್ಕೆ ಜೋತು ಬಿದ್ದು, ಸುತ್ತು ಹಾಕ್ತಿದ್ದಾರೆ. ಈ ವಿಡಿಯೋ ಜೊತೆ ಬಾರ್ಡರ್ ಚಿತ್ರದ  ಸಂದೇಸೆ ಆತೇ ಹೇ  ಹಾಡು ಪ್ಲೇ ಆಗುತ್ತಿದ್ದು, ವಿಡಿಯೋ ಮಜವನ್ನು ಮತ್ತಷ್ಟು ಹೆಚ್ಚಿಸಿದೆ. ಈ ವಿಡಿಯೋ  ನೋಡಲು ತುಂಬಾ ಸುಂದರವಾಗಿದೆ. 

ವಿಡಿಯೋ (Video) ಕ್ಕೆ ಸಿಕ್ಕಿದೆ ಇಷ್ಟೊಂದು ಕಮೆಂಟ್ : ಇನ್ಸ್ಟಾಗ್ರಾಮ್ (Instagram) ನಲ್ಲಿ ಪೋಸ್ಟ್ ಆದ ಈ ವಿಡಿಯೋವನ್ನು 10 ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. 1.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಇದಕ್ಕೆ ಸಿಕ್ಕಿದೆ. ಸಾವಿರಾರು ಕಮೆಂಟ್ ಗಳನ್ನು ನೀವು ನೋಡ್ಬಹುದು.  

ಸ್ಯಾನಿಟರಿ ಪ್ಯಾಡ್ ತಯಾರಾಗಿದ್ದು ಮಹಿಳೆಯರಿಗಲ್ಲ… ಯೋಧರಿಗೆ!

ಇದು ನನ್ನ ಬಾಲ್ಯವನ್ನು ನನಗೆ ನೆನಪಿಸಿದೆ, ನಾನು ಈಗ ಇದನ್ನು ಮಾಡಲು ಬಯಸುತ್ತೇನೆ ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾರೆ. ಹಾಡು ಮತ್ತು ಮಕ್ಕಳು ಎರಡೂ ಹೃದಯಗಳನ್ನು ಗೆದ್ದಿದ್ದಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಮೂರನೆಯವನು ಯಾವ ಹಳ್ಳಿ ಅಂತ ಹೇಳಿ, ನನಗೂ ಆಟವಾಡಲು ಬರಬೇಕು ಎಂದು ಕಮೆಂಟ್ ಮಾಡಿದ್ದಾರೆ. 

ಈ ಕ್ಲಿಪ್ (Clip) ನೋಡಿದ ನಂತರ ಬಳಕೆದಾರರು ಮಕ್ಕಳು ನಿರ್ಮಿತ ಈ ಜೋಕಾಲಿಯನ್ನು ಆನಂದಿಸಲು ಇಷ್ಟಪಟ್ಟಿದ್ದಾರೆ.  ಮಕ್ಕಳು ಕೈ ತಪ್ಪಿದ್ರೂ ಚರಂಡಿಯೊಳಗೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ರೂ ಯಾವುದೇ ಭಯವಿಲ್ಲದೆ ಮಕ್ಕಳು ಇದನ್ನು ಎಂಜಾಯ್ ಮಾಡ್ತಿದ್ದಾರೆ. 
 

click me!