ಭಾವನೆಗಳ ಹೊರಗೆಳೆದ ನಿಜ ಸಂಭ್ರಮದ ಪೋಟೋದ ಒಳಗಿನ ಕತೆ

By Web DeskFirst Published Feb 5, 2019, 9:43 PM IST
Highlights

ತಂತ್ರಜ್ಞಾನ ಎಷ್ಟೇ ಮುಂದುವರಿದಿರಬಹುದು. ಸ್ಮಾರ್ಟ್ ಪೋನ್‌ಗಳು ಜಗತ್ತನ್ನು ಆವರಿಸಿಕೊಂಡಿರಬಹುದು. ಆದರೆ ನಿಜವಾದ ಗೆಳೆತನ, ನಿಜವಾದ ಸಂಭ್ರಮ ಇದೆಲ್ಲದಕ್ಕಿಂತ ಹೊರತಾಗಿದೆ. ಅದಕ್ಕೊಂದು ಉದಾಹರಣೆ ಇಲ್ಲಿದೆ.

ಸೆಲ್ಫಿ ಕ್ರೇಜ್  ಯಾರನ್ನು ಬಿಟ್ಟಿಲ್ಲ. ಆದರೆ ಸ್ಮಾರ್ಟ್ ಫೋನ್ ತೆಗೆದುಕೊಳ್ಳುವ ಶಕ್ತಿ ಇಲ್ಲದವರು ಏನು ಮಾಡಬೇಕು? ಅದಕ್ಕೆ ಈ ಮಕ್ಕಳು ಮಾರ್ಮಿಕವಾದ ಉತ್ತರವೊಂದನ್ನು ನೀಡಿದ್ದಾರೆ. ಅದೇ ಕಾರಣಕ್ಕೆ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

5 ಜನ ಮಕ್ಕಳು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತಮ್ಮನ್ನು ತಾವು ಮರೆತಿದ್ದಾರೆ. ಈ ಪೋಟೋ ಹೇಳುತ್ತಿರುವ ಅಗಾಧ ಮಾಹಿತಿಗೆ, ಸಂದೇಶಕ್ಕೆ ಅಕ್ಷರಗಳಲ್ಲಿ ರೂಪ ಕೊಡಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಸೆಲೆಬ್ರಿಟಿಗಳ ಆದಿಯಾಗಿ ಸಾವಿರಾರು ಜನ ಈ ಫೋಟೋ ಹಂಚಿಕೊಂಡಿದ್ದಾರೆ.

ಮೋದಿ ಜೊತೆ ಬಾಲಿವುಡ್ ಸೆಲಬ್ರಿಟಿಗಳ ಸೆಲ್ಫಿ ಪೋಸ್!

ಫೋಟೋ ಹಂಚಿಕೊಂಡಿರುವುದು ಮಾತ್ರ ಅಲ್ಲ. ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಯಾವ ಊರಿನದು ಗೊತ್ತಿಲ್ಲ. ಆದರೆ ಬಡ ಮಕ್ಕಳ ಬಾಲ್ಯವನ್ನು ಸ್ಫುಟವಾಗಿ ತೆರೆದಿಡುವ ಫೋಟೋ ನೋಡಿದರೆ ಲೈಕ್ ಮಾಡದೇ ಮುಂದೆ ಹೋಗಲು ಸಾಧ್ಯವೇ ಇಲ್ಲ.

 

This pics gone viral on the net. Cannot get the smile off my face, or the lump out of my throat pic.twitter.com/fzMO9JwCo5

— Siddhartha Basu (@babubasu)

I’m sharing this image that came in on text cause d unbridled innocence n joy of these lovely kids moved me n made me smile in equal measure

Super image that asks questions

If anyone can reliably locate these munchkins n d photog I’d love to personally send them something each pic.twitter.com/5JWBmixzSH

— atul kasbekar (@atulkasbekar)
click me!