ಗೌತಮ್‌ದೇ ತಪ್ಪು ಎಂದುಕೊಂಡು ಭೂಮಿಕಾ ಜಗಳ ಶುರು ಮಾಡಿದ್ದಾಳೆ. ಅವಳು ಯಾಕೆ ಹೀಗೆ ಮಾಡ್ತಿದ್ದಾಳೆಂದು ಅರಿಯದ ಗೌತಮ್ ಬೇಸರ ಪಟ್ಟುಕೊಂಡಿದ್ದಾನೆ. ಆಗಿದ್ದೇನು?
ಸ್ವಾಭಿಮಾನಿ ಭೂಮಿಕಾ, ತವರಿನ ಮನೆಗೆ ಸಹಾಯ ಮಾಡಲು ಕೆಲಸಕ್ಕೆ ಹೋಗಲು ನೋಡಿದ್ದಾಳೆ. ಆದರೆ ಕುತಂತ್ರಿ ಶಕುಂತಲಾ ಈಕೆಯನ್ನು ಬೋರ್ಡ್ ಆಫ್ ಡೈರೆಕ್ಟರ್ ಮುಖ್ಯಸ್ಥೆಯಾಗಿ ಮಾಡಿದ್ದಾಳೆ. ಹೀಗೆ ಮಾಡಿದರೆ ಅದು ಭೂಮಿಕಾಗೆ ಇಷ್ಟವಾಗಲ್ಲ ಎನ್ನುವುದು ತಿಳಿದಿದೆ. ಇದನ್ನು ಮಾಡಿರುವುದು ಗೌತಮ್ ಎಂದು ತಿಳಿದುಕೊಂಡು ಭೂಮಿಕಾ ಗೌತಮ್ ವಿರುದ್ಧ ಕೆಂಡಾಮಂಡಲವಾಗುತ್ತಾಳೆ. ಅವರಿಬ್ಬರ ನಡುವೆ ಬಿರುಕು ಹೆಚ್ಚು ಮೂಡುತ್ತದೆ. ಇದರಿಂದ ಸಮಸ್ಯೆಯಾಗಿ ದಂಪತಿ ದೂರವಾಗುತ್ತಾರೆ ಎಂದುಕೊಂಡು ಈ ತಂತ್ರ ರೂಪಿಸಿದ್ದಳು. ಇದು ಯಶಸ್ವಿಯೂ ಆಗಿಬಿಟ್ಟಿದೆ.
ಸ್ವಾಭಿಮಾನಿಯಾಗಿರುವ ಭೂಮಿಕಾ, ಈ ದೊಡ್ಡ ಹುದ್ದೆಯನ್ನು ತನ್ನ ಗಂಡನೇ ಕೊಟ್ಟಿದ್ದು ಎಂದು ತಿಳಿದುಕೊಂಡು ಸಿಟ್ಟಿಗೆದ್ದಿದ್ದಾಳೆ. ನನಗೆ ನನ್ನದೇ ಆದ ಐಡೆಂಟಿಟಿ ಇದೆ. ಈ ರೀತಿಯ ಇನ್‌ಫ್ಲುಯೆನ್ಸ್‌ಗಳು ನನಗೆ ಬೇಡ ಎಂದೆಲ್ಲಾ ಕೂಗಾಡಿದ್ದಾಳೆ. ಆದರೆ ಅಸಲಿಯತ್ತು ಏನೆಂದು ಇಬ್ಬರಿಗೂ ಗೊತ್ತಿಲ್ಲ. ಭೂಮಿಕಾ ಏಕೆ ಹೀಗೆ ಆಡುತ್ತಿದ್ದಾಳೆ ಎಂದು ಗೌತಮ್‌ಗೂ ಅರಿವಿಲ್ಲ, ಇತ್ತ ಭೂಮಿಕಾನೂ ಬಾಯಿ ಬಿಟ್ಟು ಹೇಳಲಿಲ್ಲ. ಆದರೆ ಭೂಮಿಕಾ ಮಾತು ಗೌತಮ್‌ಗೆ ಹರ್ಟ್ ಆಗಿದೆ. ತುಂಬಾ ನೋವಿನಿಂದ ಸಾರಿ ಎಂದು ಹೋಗಿದ್ದಾನೆ.
ಅರೆರೆ... ಇಷ್ಟು ಬೇಗ ಶ್ರೀರಸ್ತು ಶುಭಮಸ್ತು ಮುಗಿದು ಬಿಡುತ್ತಾ? ಸೀರಿಯಲ್‌ನಲ್ಲಿ ಇದೇನಿದು ಹೊಸ ಟ್ವಿಸ್ಟ್?
ಇದನ್ನು ನೋಡಿದ ಆನಂದ್ ಭೂಮಿಕಾಗೆ ಬುದ್ಧಿಮಾತು ಹೇಳಿದ್ದಾನೆ. ಅವನ ಮನಸ್ಸು ಮಗುವಿನಂತೆ. ಏನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡಿ. ಆತನಿಗೆ ನಿಜವಾದ ಪ್ರೀತಿ ಸಿಕ್ಕಿದೆ ಎಂದರೆ ಅದು ನಿಮ್ಮಿಂದ ಮಾತ್ರ ಎಂದಿದ್ದಾನೆ. ಇದನ್ನು ಕೇಳಿ ಭೂಮಿಕಾಗೆ ಸ್ವಲ್ಪ ಬೇಸರವೂ ಆಗಿದೆ. ಮುಂದೇನಾಗುತ್ತದೆಯೋ ನೋಡಬೇಕಿದೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ನೆಟ್ಟಿಗರು, ಅದಕ್ಕೇ ಹೇಳೋದು ಜಗಳ ಆಡೋ ಮೊದ್ಲು ಯಾವ ಕಾರಣಕ್ಕೆ ಎಂದು ಹೇಳಿಬಿಡಬೇಕು. ಸುಖಾಸುಮ್ಮನೆ ಕೂಗಾಡುವುದಲ್ಲ ಎಂದು. ಎಷ್ಟೋ ದಂಪತಿ ನಡುವೆ ಇದೇ ರೀತಿ ವಿನಾ ಕಾರಣ ಜಗಳವಾಗುವುದು ಇದೆ. ಅಲ್ಲಿ ವಿಷಯವೇ ಇರುವುದಿಲ್ಲ. ತಪ್ಪು ಇಬ್ಬರದ್ದೂ ಆಗಿರುವುದಿಲ್ಲ. ಏನೋ ಅಪಾರ್ಥ ಆಗಿ ಹೀಗೆ ಮಾಡುವುದು ಉಂಟು. ಆದ್ದರಿಂದ ಪತಿ ಪತ್ನಿ ಇಬ್ಬರೂ ಸರಿಯಾಗಿ ಕೂತು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೇ ವಿನಾ ಒಂದೇ ಸಮನೆ ರೇಗಾಡುವುದಲ್ಲ ಎನ್ನುತ್ತಿದ್ದಾರೆ.
ಅಷ್ಟಕ್ಕೂ ಈಗ ಭೂಮಿಕಾಗೆ ಹಣದ ಅಗತ್ಯವಿದೆ. ಅಣ್ಣ ಜೀವ ಕೆಲಸ ಕಳೆದುಕೊಂಡಿದ್ದನ್ನು ತಿಳಿದ ಭೂಮಿಕಾ, ಆತನಿಗಾಗಿ ತನ್ನೆಲ್ಲಾ ಒಡವೆಗಳನ್ನು ಒತ್ತೆಯಿಟ್ಟು ಐದು ಲಕ್ಷ ರೂಪಾಯಿ ಕೊಟ್ಟು ನೆರವಾಗಿದ್ದಾಳೆ. ನೂರಾರು ಕೋಟಿ ರೂಪಾಯಿಗಳ ಒಡೆಯನಾಗಿರುವ ಗಂಡನಿಗೆ ಐದು ಲಕ್ಷ ಎಂದರೆ ಹತ್ತಾರು ರೂಪಾಯಿಗಳ ಸಮಾನ. ಆದರೆ ಈ ಸ್ವಾಭಿಮಾನಿ ಪತ್ನಿ ತನ್ನ ಒಡವೆಯನ್ನೇ ಅಡುವು ಇಟ್ಟಿದ್ದಾಳೆ. ಅದನ್ನು ಬಿಡಿಸಿಕೊಂಡು ಬರಲು ಈಗ ಕೆಲಸಕ್ಕೆ ಹೋಗಲು ತಯಾರಾಗಿದ್ದಾಳೆ. ತವರು ಮನೆಗೆ ನೆರವಾಗುವ ಉದ್ದೇಶದಿಂದ ಆಕೆ ಹೀಗೆ ಮಾಡುತ್ತಿದ್ದಾಳೆ. ಏಕೆಂದರೆ ದುಡಿಯುವ ಮಗ ಕೆಲಸ ಕಳೆದುಕೊಂಡಿರುವ ವಿಷಯ ಯಾರಿಗೂ ತಿಳಿದಿಲ್ಲ. ಅಚಾನಕ್ ಆಗಿ ಈ ವಿಷಯ ಭೂಮಿಕಾಗೆ ಗೊತ್ತಾಗಿ ದುಡ್ಡನ್ನು ಹೊಂದಿಸಿ ಕೊಟ್ಟಿದ್ದಾಳೆ. ಇದೀಗ ಒಂದೆಡೆ ಅಡವಿಟ್ಟ ಬಂಗಾರವನ್ನು ಬಿಡಿಸಿಕೊಂಡು ಬರುವುದು ಒಂದೆಡೆಯಾದರೆ, ತವರಿಗೆ ಹಣದ ನೆರವು ನೀಡುವುದು ಇನ್ನೊಂದೆಡೆ. ಪತಿಯಿಂದ ಹಣದ ನೆರವು ಕೇಳಲು ಆಕೆಗೆ ಸ್ವಾಭಿಮಾನ ಅಡ್ಡಿ ಬರುತ್ತದೆ. ಅದಕ್ಕೇ ಕೆಲಸಕ್ಕೆ ಹೋಗುತ್ತಿದ್ದಾಳೆ.
ಯಶ್ ಟಾಕ್ಸಿಕ್ ಚಿತ್ರದಿಂದ ನಟಿ ಕರೀನಾ ಕಪೂರ್ ಔಟ್! ಬಾಲಿವುಡ್ ಬೆಡಗಿಗೆ ಆಗಿದ್ದೇನು?