ಕನಸಿನ ಕುದುರೆಯೇರಿ ಗುರಿ ಸೇರಿದ ಸಾಧಕಿಯರು!

By Web DeskFirst Published Jul 4, 2019, 4:05 PM IST
Highlights

ಏಕತಾನತೆಯ ಉದ್ಯೋಗ ತೊರೆದು, ಪ್ಯಾಶನ್ ಹುಡುಕಿಕೊಂಡು ಹೋಗಿ ಗೆದ್ದು ತೋರಿಸಿರುವ ಮಹಿಳೆಯರಿವರು... ವಿಶೇಷ ಕರಿಯರ್‌ ಆಯ್ದುಕೊಂಡು ವಿಶೇಷವೆನಿಸಿಕೊಂಡವರು..

ನಿಮ್ಮ ಹೃದಯ, ಮನಸ್ಸು, ಆತ್ಮ ಎಲ್ಲವನ್ನೂ ಮಿಳಿತಗೊಳಿಸಿ ಕೆಲಸ ಮಾಡಿದರೆ ಈ ಜಗತ್ತಿನಲ್ಲಿ ಕೈಗೆಟುಕದ ಕನಸೇ ಇಲ್ಲ ಎಂದು ಸಾಧಿಸಿ ತೋರಿಸಿದ್ದಾರೆ ಈ ದಿಟ್ಟೆಯರು. ವಿಶೇಷ ಕರಿಯರ್‌ ಆಯ್ದುಕೊಂಡು ಕನಸಿನ ಕುದುರೆಯೇರಿ ಹೊರಟ ಮೇಲೆ, ತಡೆಗಳೆಲ್ಲ ಸವಾಲಾಗಿ ಬದಲಾದ ಮೇಲೆ ಗೆಲುವು ನಿಶ್ಚಿತ ಎಂಬುದನ್ನು ಇವರು ನಿರೂಪಿಸಿದ್ದಾರೆ. ಯಾರಿವರು?

ಅನಿತಾ ದೇಶಪಾಂಡೆ, ಟೆಂಪಲ್ ಪೈಲಟ್ಸ್ ಸಹಸಂಸ್ಥಾಪಕಿ

ಪ್ರತಿದಿನದ ಏಕತಾನತೆಯ ಉದ್ಯೋಗದ ಮಧ್ಯೆ ಆಕಾಶದಲ್ಲಿ ಹಾರಿಕೊಂಡಿರುವುದು ವಿಶೇಷವೆನಿಸಿದೆ ಇರದು. ಆರನೇ ವಯಸ್ಸಿನಿಂದಲೇ ಹಾರುವ ಕನಸು ಕಂಡ ಅನಿತಾ ದೇಶಪಾಂಡೆ ಇದಕ್ಕಾಗಿ ಕಂಡುಕೊಂಡ ಮಾರ್ಗ ಪ್ಯಾರಾಗ್ಲೈಡಿಂಗ್. ಈಗ ಆಕೆ ಪತಿಯೊಂದಿಗೆ ಸೇರಿ ಟೆಂಪಲ್ ಪೈಲಟ್ಸ್ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಆರಂಭದಲ್ಲಿ ವಾಯುಸೇನೆ ಪೈಲಟ್ ಆಗಬೇಕೆಂಬ ಆಸೆ ಇದ್ದರೂ ಆಗ ಅದಕ್ಕೆ ಅವಕಾಶವಿಲ್ಲದ ಕಾರಣ ಪ್ಯಾರಾಗ್ಲೈಡಿಂಗ್ ಆರಂಭಿಸಿದ್ದಾಗಿ ಹೇಳುತ್ತಾರೆ ಅವರು. ಈ ಸಾಹಸಿ ಕ್ರೀಡಾ ಸಂಸ್ಥೆ ಆರಂಭಿಸುವಲ್ಲಿ ಕಳೆದ 20 ವರ್ಷಗಳಿಂದ ಅವರು ಹಲವಾರು ಏರಿಳಿತಗಳನ್ನು ಕಂಡಿದ್ದಾರೆ. ಆದರೆ, ಕನಸಿನ ಶೋಧ ಮುಂದುವರಿದೇ ಇದೆ. ಇದರೊಂದಿಗೆ ವೈಲ್ಡ್‌ಲೈಫ್ ಎಸ್ಒಎಸ್ ಎಂಬ ಎನ್‌ಜಿಒ ಜೊತೆ ಕೆಲಸ ಮಾಡುತ್ತಿದ್ದಾರೆ. ಇದು ದೇಶದ ಮೊದಲ ಆನೆ ಆಸ್ಪತ್ರೆ ನಡೆಸುತ್ತಿದ್ದು, ದೇಶಾದ್ಯಂತ ಆನೆ, ಕರಡಿ, ಚಿರತೆಗಳನ್ನು ರಕ್ಷಿಸಲು ಕೇಂದ್ರಗಳನ್ನು ತೆರೆದಿದೆ. 

ಮನೆಯಲ್ಲೇ 'ಗನ್' ತಯಾರಿಸೋದು ಹೇಳಿಕೊಟ್ಟ ಮಹಿಳಾ IPS

ಎರಡನೇ ಯೋಚನೆಯಿಲ್ಲದೆ ನಿಮ್ಮ ಆಸಕ್ತಿಯ ಬೆನ್ನತ್ತಿ. ನಿಮಗಿಷ್ಟವಿಲ್ಲದ್ದನ್ನು ಮಾಡುತ್ತಾ ಕೂರುವಷ್ಟು ಬದುಕು ಪುಕ್ಕಟೆಯಲ್ಲ. ನಿಮ್ಮ ಗುರಿಯೇನಿದ್ದರೂ ನಿಮ್ಮ ಕನಸನ್ನು ನನಸು ಮಾಡುವುದು, ಆ ಮೂಲಕ ನಿಮ್ಮ ಸಾಮರ್ಥ್ಯ ಹಿಗ್ಗಿಸಿಕೊಳ್ಳುವುದಾಗಿರಲಿ ಎನ್ನುತ್ತಾರೆ ಅನಿತಾ. 

ಮಂಜಿರಿ ಲೇತಿ, ಪ್ರಾಣಿ ಹಾಗೂ ಪರಿಸರ ಸಂವಾಹಕಿ

ಪ್ರಾಣಿಗಳೊಂದಿಗೆ ಟೆಲಿಪತಿ ಮೂಲಕ ಮಾತನಾಡಬಲ್ಲ ಲೇತಿ, ಈ ಸಂಬಂಧ  ಟೆಲಿಪತಿಕ್ ಅನಿಮಲ್ ಕಮ್ಯೂನಿಕೇಟರ್ ಕೋರ್ಸ್ ಮಾಡಿದ್ದಾರೆ. ತಮ್ಮ ಮನೆಯ ನಾಯಿ ಸತ್ತ ಬಳಿಕ ಅದು ಒದ್ದಾಡಿತ್ತೇ, ಅದರ ಮನಸ್ಸಲ್ಲಿ ಏನಾಗಿತ್ತು ಎಂಬ ಪ್ರಶ್ನೆಗಳು ಲೇತಿಯನ್ನು ಕಾಡಿದವಂತೆ. ಇದೇ ಅನಿಮಲ್ ಟೆಲಿಪತಿ ಓದಲು ಅವರನ್ನು ಪ್ರೇರೇಪಿಸಿದ್ದು. ಈಗವರು ಪ್ರಾಣಿಗಳೊಂದಿಗೆ ಸುಲಲಿತವಾಗಿ ಸಂವಹನ ನಡೆಸಬಲ್ಲರು. ಪ್ರಾಣಿಗಳ ಮನಸ್ಸನ್ನು ಅರಿಯಬಲ್ಲರು. ಸಧ್ಯ ಈ ವಿದ್ಯೆಯನ್ನೇ ಹೇಳಿಕೊಡುವ ಕಾಯಕ ಮಾಡುತ್ತಿದ್ದಾರೆ. ಮಾತನಾಡದೆಯೇ ಎಲ್ಲೋ ಇರುವವರೊಂದಿಗೆ  ಸಂವಹನ ನಡೆಸಬಹುದಾದ ವಿದ್ಯೆಯೇ ಟೆಲಿಪತಿ. ನೀವು ಯಾರಿಗೆ ಏನನ್ನಾದರೂ ಹೇಳಬೇಕೆಂದಿದ್ದೀರೋ ಆ ವಿಷಯವನ್ನು ಎನರ್ಜಿಯಾಗಿ ಪಾಸ್ ಮಾಡಿದರೆ ಅವರ ಬ್ರೇನ್ ವೇವ್ಸ್ ವಿಷಯ ಗ್ರಹಿಸುತ್ತವೆ ಎಂಬುದು ಟೆಲಿಪತಿ ಹಿಂದಿನ ವ್ಯಾಖ್ಯಾನ. ಪ್ರಾಣಿಗಳ ವಿಷಯದಲ್ಲೂ ಇದು ಹೀಗೆಯೇ. ಅವು ಕಳಿಸುವ ವೈಬ್ರೇಶನ್ ಗ್ರಹಿಸುವುದು ಮುಖ್ಯ ಎನ್ನುತ್ತಾರೆ ಮಂಜಿರಿ. 

ಪ್ರಾಣಿಗಳು ನಮಗೆ ಅಹಂಕಾರ ಮರೆತು, ಸುಲಭವಾಗಿ ಕ್ಷಮಿಸುತ್ತಾ, ಅನ್‌ಕಂಡೀಶನಲ್ ಪ್ರೀತಿ ಹಾಗೂ ಕಾಳಜಿ ತೋರಿಸುವುದು ಹೇಗೆಂದು ಕಲಿಸಿಕೊಡುತ್ತವೆ ಎಂಬುದು ಲೇತಿ ಮಾತು. 

ಸುಧಾ ಮೆನನ್, ಲೇಖಕಿ

ಐದು ಬೆಸ್ಟ್ ಸೆಲ್ಲಿಂಗ್ ಕಾದಂಬರಿಗಳ ಬರಹಗಾರ್ತಿಯಾಗಿರುವ ಸುಧಾ, ಹಿಂದೆ ಪತ್ರಕರ್ತೆಯಾಗಿ, ಕಾಲಮಿಸ್ಟ್ ಆಗಿ, ರೈಟಿಂಗ್ ಕೋಚ್ ಹಾಗೂ ಸ್ಪೀಕರ್ ಆಗಿದ್ದವರು. ಆಕೆಯ ಪುಸ್ತಕ ಪ್ರೀತಿಗೆ ಮಿತಿಯೇ ಇಲ್ಲ. ಅವರ ಪ್ರತಿಭೆ, ಹಾರ್ಡ್ ವರ್ಕ್ ಇಂದು ಆಕೆಯನ್ನು ಹೆಸರಾಂತ ಕಾದಂಬರಿಕಾರ್ತಿಯಾಗಿಸಿದೆ.  ಬಾಲ್ಯದಿಂದಲೇ ಪುಸ್ತಕ ಓದುತ್ತಾ ಬೆಳೆದ ಸುಧಾ ಸದಾ ಲೇಖಕಿಯಾಗುವ ಕನಸು ಕಂಡವರು. ಲೀಡಿಂಗ್ ಲೇಡೀಸ್- ವಿಮೆನ್ ಹೂ ಇನ್ಪೈರ್ ಇಂಡಿಯಾ ಎಂಬ ಪುಸ್ತಕ ಬರೆದು, ಸಧ್ಯ ಅವರೇ ಮಹಿಳಾ ಬರಹಗಾರ್ತಿಯರಿಗೆ ಇನ್ಪಿರೇಶನ್ ಆಗಿರುವುದು ಸಾಧಾರಣದ ಮಾತಲ್ಲ. ಜಾಸ್ತಿ ಕೇಳುವುದು, ಕೇಳಿದ್ದನ್ನು ಆಳವಾಗಿ ಅನುಭವಿಸುವುದರಿಂದ ಚೆನ್ನಾಗಿ ಬರೆಯಲು ಸಾಧ್ಯ ಎಂದು ಟಿಪ್ಸ್ ಕೊಡುತ್ತಾರೆ ಸುಧಾ. ಮಹಿಳೆಯರು ನಾಚಿಕೆ ಬಿಟ್ಟು ಧ್ವನಿ ಕೇಳಿಸುವಂತೆ ಮಾತನಾಡಬೇಕು. ತಮ್ಮ ಬೆಲೆಯನ್ನು ಅರಿಯಬೇಕು. ಬರೆಯಬೇಕೆಂಬ ಆಸಕ್ತಿ ಇರುವವರು ತಮ್ಮ ಬೇರೆ ಉದ್ಯೋಗವನ್ನು ಬಿಡಬಾರದು. ನಿಜವಾಗಿಯೂ ಅದು ಹುಚ್ಚೆಂಬಷ್ಟು ಅತಿಯಾಗಿದ್ದಾಗ ಮಾತ್ರ ಉದ್ಯೋಗ ತೊೊರೆದು ಬರವಣಿಗೆಯನ್ನೇ ಅವಲಂಬಿಸುವ ಧೈರ್ಯ ಮಾಡಿ ಎನ್ನುತ್ತಾರೆ ಅವರು. 

ಉದ್ಯೋಗಸ್ಥ ಮಹಿಳೆಯ ಅಡುಗೆಕೋಣೆಯಲ್ಲಿರಲೇಬೇಕಾದ ಸಾಧನಗಳಿವು

ಸಯಾಲೀ ಮರಾಟೆ, ಆದ್ಯಾ ಸಂಸ್ಥಾಪಕಿ

ಸ್ಯಾಪ್ ಕನ್ಸಲ್ಟೆಂಟ್ ಆಗಿ ದೇಶವಿದೇಶಗಳನ್ನು ಅಲೆದುಕೊಂಡು ಹ್ಯಾಪಿಯಾಗಿದ್ದ ಸಯಾಲಿ, ಸುಮ್ಮನೆ ಹವ್ಯಾಸವಾಗಿ ಆಭರಣ ತಯಾರಿಕೆಯಲ್ಲಿ ತೊಡಗಿಸಿಕೊಂಡವರು. ಹ್ಯಾಂಡ್‌ಮೇಡ್ ಜುವೆಲ್ಲರಿ ತನಗೆ ಇಷ್ಟವಾಗಿದ್ದರಿಂದ ಜುವೆಲ್ಲರಿ ವಿನ್ಯಾಸಗೊಳಿಸುವುದು ಅತಿ ಖುಷಿ ನೀಡತೊಡಗಿತು. ಆದರೆ, ಉದ್ಯೋಗದ ಬಗ್ಗೆಯೂ ಪ್ರೀತಿ ಇದ್ದುದರಿಂದ ಎರಡು ವರ್ಷಗಳ ಕಾಲ ಉದ್ಯೋಗ ಹಾಗೂ ಜುವೆಲ್ಲರಿ ಡಿಸೈನಿಂಗ್ ಎರಡನ್ನೂ ಬ್ಯಾಲೆನ್ಸ್ ಮಾಡಿದರು ಸಯಾಲಿ. ನಿಧಾನವಾಗಿ ಎರಡೂ ತೂಗಿಸಿಕೊಂಡು ಹೋಗುವುದು ಕಷ್ಟ ಎನಿಸುತ್ತಲೇ ದೊಡ್ಡ ಸಂಬಳದ ಉದ್ಯೋಗಕ್ಕೆ ತಿಲಾಂಜಲಿ ಹಾಡಿ ಹವ್ಯಾಸವನ್ನೇ ಉದ್ಯಮವಾಗಿಸಿಕೊಂಡವರು. ಅತಿಯಾದ ತೊಡಗಿಸಿಕೊಳ್ಳುವಿಕೆ ಹಾಗೂ ಹಾರ್ಡ್‌ವರ್ಕ್‌ನಿಂದ ಇಂದು ಅವರು ಹುಟ್ಟು ಹಾಕಿರುವ ಆದ್ಯಾ ಸಂಸ್ಥೆಯ ಆಭರಣಗಳು ಬಾಲಿವುಡ್‌ನಲ್ಲಿ ಕೂಡಾ ಮೆರೆಯುತ್ತಿವೆ. 

ಮದ್ವೆಯಾದ ಕೂಡಲೇ ಲೈಫೇ ಮುಗೀತು ಅಂತಿರೋ ಹೆಣ್ಮಕ್ಕಳಿಗೆ ಮಾತ್ರ!

ಉದ್ಯಮದ ಆರಂಭಿಕ ವರ್ಷಗಳು ಬಹಳ ಮುಖ್ಯ, ಅವೇ ಇಡೀ ಉದ್ಯಮಕ್ಕೆ ಆಕಾರ ನೀಡುವುದು. ಹೀಗಾಗಿ, ಉದ್ಯಮವನ್ನು ಮಗುವಂತೆ ಪ್ರೀತಿಸಿ, ಸಮಯ ಕೊಟ್ಟು ಬೆಳೆಸಿ. ಆರ್ಥಿಕ ನಷ್ಟ ಆರಂಭದಲ್ಲಿ ಸಾಮಾನ್ಯ. ಆದರೆ ಬೆದರದೆ ನಿಂತಿರಾದರೆ ಗೆಲುವು ಖಚಿತ ಎನ್ನುತ್ತಾರೆ ಸಯಾಲಿ. 
 

click me!