ಎಂಟು ವರ್ಷ ಕಿರಿಯ ಹಿಂದೂ ಯುವಕನ ಮದ್ವೆಯಾದ ನಟಿ ಕಿಶ್ವೆರ್: ಹೇಗಿದೆ ಲೈಫ್? ಮದುವೆ ಮತ್ತು ನಂತರದ ಜೀವನದ ಬಗ್ಗೆ ನಟಿ ಹೇಳಿದ್ದೇನು?
ಹಿಂದಿ ಟೀವಿ ವೀಕ್ಷಕರಿಗೆ ನಟಿ ಕಿಶ್ವೆರ್ ಮರ್ಚೆಂಟ್ ಚಿರಪರಿಚಿತರು. 'ಶಕ್ತಿಮಾನ್', 'ಕುಟುಂಬ್', 'ಕಸೌಟಿ ಜಿಂದಗಿ ಕೇ', 'ಧಡ್‌ಕನ್', 'ಪಿಯಾ ಕಾ ಘರ್', 'ಖಯಾಮತ್', 'ಕಾವ್ಯಾಂಜಲಿ', 'ಗಂಗಾ' ಮುಂತಾದ ಹಲವು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ ನಟಿ. ಮುಂಬೈನ ಮುಸ್ಲಿಂ ಕುಟುಂಬದಲ್ಲಿ ಸಿರಾಜ್ ಮರ್ಚೆಂಟ್ ಮತ್ತು ರಿಜ್ವಾನಾ ಮರ್ಚೆಂಟ್ ದಂಪತಿಗೆ ಜನಿಸಿದ ನಟಿ, ಸಾಕಷ್ಟು ಸದ್ದು ಮಾಡಿದ್ದು, ನಟ ಸುಯ್ಯಶ್ ರೈ ಅವರ ಜೊತೆ ಮದುವೆಯಾದಾಗ. ಇದು ಎರಡು ಕಾರಣಕ್ಕೆ ಸಕತ್ ಸುದ್ದಿ ಮಾಡಿತ್ತು. ಮೊದಲನೆಯದ್ದು ನಟಿ ಮುಸ್ಲಿಮ್ ಹಾಗೂ ಸುಯ್ಯಶ್ ಹಿಂದೂ ಎನ್ನುವ ಕಾರಣಕ್ಕೆ, ಮಾತ್ರವಲ್ಲದೇ ಸುಯ್ಯಶ್, ಕಿಶ್ವೆರ್‍ಗಿಂತಲೂ ಎಂಟು ವರ್ಷ ಚಿಕ್ಕವರು! 2010 ರಲ್ಲಿ, ಕಿಶ್ವರ್ ಮರ್ಚೆಂಟ್ ನಟ ಸುಯ್ಯಶ್ ರೈ ಅವರೊಂದಿಗೆ ಡೇಟಿಂಗ್ ಪ್ರಾರಂಭಿಸಿದ್ದರು. 2016 ರಂದು ವಿವಾಹವಾಗಿದ್ದು ದಂಪತಿಗೆ ನಿರ್ವೈರ್ ಎಂಬ ಮಗ ಇದ್ದಾನೆ.
ಇದೀಗ ನಟಿ, ಹಿಂದೂ ಯುವಕನ ಜೊತೆ ಮದುವೆಯಾದ ಕಾರಣ ಲೈಫ್ ಹೇಗಿದೆ ಎನ್ನುವ ಬಗ್ಗೆ ಡೆಬಿನ್ನಾ ಬ್ಯಾನೆರ್ಜಿ ಶೋನಲ್ಲಿ ನಟಿ ಮಾತನಾಡಿದ್ದಾರೆ. ಮದುವೆಯಾಗುವ ಸಂದರ್ಭದಲ್ಲಿ ಇದು ಸುಲಭವಾಗಿರಲಿಲ್ಲ. ಏಕೆಂದರೆ ನಮ್ಮಿಬ್ಬರ ನಡುವೆ ಧರ್ಮ ಅಡ್ಡಿ ಬಂದಿತ್ತು. ಸುಯ್ಯಶ್ ಮನೆಯಲ್ಲಿ ಆರಂಭದಲ್ಲಿ ಒಪ್ಪಿರಲಿಲ್ಲ. ಇದಕ್ಕೆ ಮತ್ತೊಂದು ಮುಖ್ಯ ಕಾರಣ, ನನಗಿಂತ ಆತ ಎಂಟು ವರ್ಷ ಚಿಕ್ಕವ ಎನ್ನುವುದಕ್ಕೆ. ಆ ಬಳಿಕ ಅವರ ಮನೆಯವರೂ ಒಪ್ಪಿದರು. ಅಲ್ಲಿ ಮದುವೆಯಾಗಿ ಹೋದ ಮೇಲೂ ಆರಂಭದಲ್ಲಿ ಸ್ವಲ್ಪ ಕಷ್ಟವೇ ಆಯಿತು. ಆದರೆ ನಂತರ ಲೈಫ್ ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದಾರೆ.
ನನ್ನ ಜಾತಕದಲ್ಲಿ ಕಟನಿ ಯೋಗ, ಮದ್ವೆಯಾದ್ರೆ ತೊಂದ್ರೆ ಎನ್ನುತ್ತಲೇ ನೋವು ಬಿಚ್ಚಿಟ್ಟ ಊರ್ವಶಿ ರೌಟೇಲಾ !
ಇದೇ ವೇಳೆ ಇನ್ನೊಂದು ಕುತೂಹಲದ ವಿಷಯವನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ. ಅದೇನೆಂದರೆ ಸುಯ್ಯಶ್ ಅವರ ಸಹೋದರಿ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದು. ಸುಯ್ಯಶ್ ಸಹೋದರಿಯೂ ಅನ್ಯ ಧರ್ಮದವರೊಂದಿಗೆ ಮದ್ವೆಯಾಗಿದ್ದರಿಂದ ಮನೆಯಲ್ಲಿ ಎಲ್ಲರೂ ಒಪ್ಪಿದರು ಎಂದಿದ್ದಾರೆ. ಈ ಬಗ್ಗೆ ಆಗ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು ಎಂದ ಪ್ರಶ್ನೆಗೆ ಉತ್ತರಿಸಿದ ನಟಿ, ಸಮಾಜ ಏನೂ ನಮ್ಮ ಸಂಸಾರ ಮಾಡಲು ಬರುವುದಿಲ್ಲ. ಅವರು ಹೇಳಿದ್ದನ್ನೆಲ್ಲಾ ತಲೆಯಲ್ಲಿ ಹಾಕಿಕೊಂಡರೆ ಅಷ್ಟೇ ಕಥೆ. ಆದ್ದರಿಂದ ಅವರು ಏನು ಬೇಕಾದರೂ ಹೇಳಿಕೊಳ್ಳಲಿ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಲೈಫ್ ಚೆನ್ನಾಗಿ ನಡೆಯುತ್ತಿದೆ ಎಂದು ನಟಿ ಹೇಳಿದ್ದಾರೆ.
ಕೆಲವು ಸಿನಿಮಾಗಳಲ್ಲಿಯೂ ನಟಿಸಿರುವ ನಟಿ, ತಮ್ಮ ವೃತ್ತಿ ಜೀವನದಲ್ಲಾದ ಕಾಸ್ಟಿಂಗ್ ಕೌಚ್‌ನ ಕೆಟ್ಟ ಅನುಭವದ ಬಗ್ಗೆ ಕೆಲ ತಿಂಗಳ ಹಿಂದೆ ತಿಳಿಸಿದ್ದರು. ಚಿತ್ರವೊಂದರ ಕುರಿತು ಮೀಟಿಂಗ್‌ಗೆ ತೆರಳಿದ್ದಾಗ ಅವಕಾಶ ಬೇಕು ಅಂದ್ರೆ ಹೀರೋ ಜೊತೆ ಮಂಚ ಏರಬೇಕು ಅಂತ ನಿರ್ಮಾಪಕರು ಹೇಳಿದ್ದರು. ಅದ್ದರಿಂದ ನಾನು ಅವಕಾಶವೇ ಬೇಡ ಎಂದು ತಿರಸ್ಕರಿಸಿ ಬಂದಿದ್ದೆ ಎಂದಿದ್ದರು ನಟಿ. ETimesಗೆ ನೀಡಿದ್ದ ಸಂದರ್ಶನದಲ್ಲಿ ಅವರು ಈ ವಿಷಯ ಬಹಿರಂಗಪಡಿಸಿದ್ದರು. ಅವರು ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕ ಎಂದಿದ್ದ ನಟಿ ಹೆಸರು ಹೇಳಿರಲಿಲ್ಲ. ಅಂದಹಾಗೆ ನಟಿ, ಬಾಲಿವುಡ್‌ನ ಎರಡು ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದಾರೆ. 'ಬೇಜಾ ಫ್ರೈ 2' ಹಾಗೂ 'ಹಮ್ ತುಮ್ ಔರ್ ಶಬಾನಾ'. ಬಳಿಕ, ಕಿರುತೆರೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಹಿಂದಿಯ 'ಬಿಗ್ ಬಾಸ್ 9' ಗೂ ಸ್ಪರ್ಧಿಯಾಗಿ ಹೋಗಿದ್ದರು.
ಆತನಿಗೆ ಶೇಕ್‌ಹ್ಯಾಂಡ್ ಮಾಡ್ದೆ: ನನ್ನ ಕೈಯಿಂದ ಬಳ ಬಳ ಎಂದು ರಕ್ತ ಸೋರಲು ಶುರುವಾಯ್ತು! ಆ ಘಟನೆ ನೆನೆದ ಅಕ್ಷಯ್