ಬರದ ನಾಡು ವಿಜಯಪುರದ ಜಿಲ್ಲೆಯಲ್ಲಿ ಪ್ರೀಯಾಗಿ ಟೀ ಕೊಡಿ ಅಂದ್ರೆ ಕೊಡಬಹುದು. ಆದರೆ ಕುಡಿಯೋ ನೀರು ಕೊಡಲ್ಲ. ಬೇಸಿಗೆ ಬಂದ್ರೆ ಸಾಕು ಅಷ್ಟರ ಮಟ್ಟಿಗೆ ಕುಡಿಯೋ ನೀರಿನ ಸಮಸ್ಯೆ ಉಂಟಾಗುತ್ತದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್.
ವಿಜಯಪುರ (ಏ.27): ಬರದ ನಾಡು ವಿಜಯಪುರದ (Vijayapura) ಜಿಲ್ಲೆಯಲ್ಲಿ ಪ್ರೀಯಾಗಿ ಟೀ ಕೊಡಿ ಅಂದ್ರೆ ಕೊಡಬಹುದು. ಆದರೆ ಕುಡಿಯೋ ನೀರು (Drinking Water) ಕೊಡಲ್ಲ. ಬೇಸಿಗೆ (Summer) ಬಂದ್ರೆ ಸಾಕು ಅಷ್ಟರ ಮಟ್ಟಿಗೆ ಕುಡಿಯೋ ನೀರಿನ ಸಮಸ್ಯೆ ಉಂಟಾಗುತ್ತದೆ. ಅದರಲ್ಲೂ ತಾಲೂಕು, ಗ್ರಾಮೀಣ ಪ್ರದೇಶಳಿಂದ ವ್ಯಾಪಾರ, ವಹಿವಾಟುಗಳಿಗಾಗಿ ವಿಜಯಪುರ ನಗರಕ್ಕೆ ಬರುವವರಿಗೆ ಸರಿಯಾಗಿ ಕುಡಿಯೋ ನೀರು ಸಿಗೋದಿಲ್ಲ. ಈ ಸಮಸ್ಯೆಯನ್ನ ಅರಿತ ವಿಜಯಪುರ ನಗರದ ಜೈನ ಸಮುದಾಯದ (Jain Community) ಸಂಸ್ಥೆಯೊಂದು ಬೇಸಿಗೆಯ 4 ತಿಂಗಳು ಉಚಿತ ಶೀತಲ ನೀರಿನ ಸೇವೆಯನ್ನ ಮಾಡುತ್ತಿದೆ.
undefined
ನಗರದ ನಾನಾ ಕಡೆಗಳಲ್ಲಿ ಶುದ್ಧ ತಂಪು ನೀರಿನ ಸೇವೆ: ವಿಜಯಪುರ ನಗರದಲ್ಲಿ ಕುಡಿಯೋ ನೀರಿಗಾಗಿ ವ್ಯಾಪಾರಸ್ಥರು, ವಹಿವಾಟುಗಳಿಗಾಗಿ ಬಂದ ಗ್ರಾಮೀಣ ಪ್ರದೇಶದ ಜನರು ಪರದಾಡಬಾರದು ಅಂತಾ ಜೈನ ಸಮುದಾಯದ ಸ್ವಾಮಿತ್ವ ಅನ್ನೋ ಸಂಸ್ಥೆಯೊಂದು ಬೇಸಿಗೆ ಕಾಲದಲ್ಲಿ ಜಲ ಸೇವೆ ಮಾಡ್ತಿದೆ. ಉಚಿತವಾಗಿ ಮೂರು ತಿಂಗಳ ಕಾಲ ವಿಜಯಪುರ ನಗರದ ವಿವಿಧ ವೃತ್ತ, ಆಸ್ಪತ್ರೆ, ದೇವಸ್ಥಾನ ಬಳಿ ಶೀತಲ ಜಲ ಸೇವೆ ಮಾಡ್ತಿದ್ದಾರೆ. ನಗರದಲ್ಲಿ ಜನಸಂದಣಿ ಸೇರುವ ಸಿದ್ದೇಶ್ವರ ದೇಗುಲ, ಗಾಂಧಿ ಚೌಕ, ಬಿಎಲ್ಡಿ ರಸ್ತೆ, ಶಿವಾಜಿ ಚೌಕ ಬಳಿಯಲ್ಲಿ ವಾಹನಗಳನ್ನ ನಿಲ್ಲಿಸಿ ಜಲ ಸೇವೆಯನ್ನ ಮಾಡುತ್ತಿದ್ದಾರೆ.
ಮುತ್ತಿಡಲು ಹೋದ ಸಿಎಂಗೆ ಹಾಯಲು ಬಂದ ಗೋವು: ಅಪಾಯದಿಂದ ಪಾರಾದ ಬೊಮ್ಮಾಯಿ..!
ಪೊಲೀಸರು, ಆಟೋ ಚಾಲಕರು, ಗ್ರಾಮೀಣ ಜನರಿಗೆ ಅನುಕೂಲ: ನಗರದಲ್ಲಿ 40 ಡಿಗ್ರಿಯಷ್ಟು ಬಿಸಿಲಿನಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ, ಆಟೋ ಚಾಲಕರಿಗೆ ಸರಿಯಾದ ಸಮಯಕ್ಕೆ ತಂಪಾದ ನೀರು ಸಿಗೋದಿಲ್ಲ. ದಿನಕ್ಕೆ ಕನಿಷ್ಟ ಮೂರು ಲೀಟರ್ ಶುದ್ಧ ನೀರು ಕೊಂಡು ಕುಡಿಯಬೇಕು ಅಂದ್ರು 60 ರೂಪಾಯಿಯಾಗುತ್ತೆ. ಇನ್ನು ಹಳ್ಳಿಗಳಿಂದ ವ್ಯಾಪಾರಕ್ಕಾಗಿ ಬಂದ ಜನರಿಗೆ ಹಣ ನೀಡಿ ನೀರು ಕುಡಿಯೋದು ಅಂದ್ರೆ ಕಷ್ಟ. ಹೀಗಾಗಿ ಅಲ್ಲಲ್ಲಿ ಸ್ವಾಮಿತ್ವ ಸಂಸ್ಥೆಯವರು ನಿಲ್ಲಿಸಿರುವ ತಂಪು ನೀರಿನ ವಾಹನಗಳ ಬಳಿ ಬಂದು ನೀರು ಕುಡಿಯುತ್ತಾರೆ. ಪೊಲೀಸರು, ಆಟೋ ಚಾಲಕರಿಗೆ ಮಧ್ಯಾಹ್ನದ ಬಿಸಿಲಲ್ಲಿ ತಂಪು ನೀರು ಅನುಕೂಲಕರವಾಗಿದೆ.
ತಿಂಗಳಿಗೆ 1.50 ಲಕ್ಷ ರು. ನೀರು ಖರೀದಿಸಿ ಜಲಸೇವೆ: ಸ್ವಾಮಿತ್ವ ಸಂಸ್ಥೆಯವರೇ ಸ್ವತಃ ನೀರಿನ ಸೇವೆಗಳಿಗಾಗಿ ಎರೆಡು ವಾಹನಗಳನ್ನ ಅರೆಂಜ್ ಮಾಡಿದ್ದಾರೆ. ನಿತ್ಯ ಒಂದು ವಾಹನದಲ್ಲಿ 20 ಲೀಟರ್ ನ 40 ರಿಂದ 50 ಕ್ಯಾನ್ ನೀರು ಖಾಲಿಯಾಗುತ್ವೆ. ಇದನ್ನ ಪಿಲ್ಟರ್ ವಾಟರ್ ಮಾರಾಟ ಮಾಡುವವರಿಂದ ಖರೀದಿ ಮಾಡಿ ತಂದು ವಾಹನಗಳಲ್ಲಿಟ್ಟು ಜನರಿಗೆ ಜಲಸೇವೆ ಮಾಡಲಾಗ್ತಿದೆ. ಒಂದು ದಿನಕ್ಕೆ ಒಂದು ವಾಹನದಿಂದ ಸುಮಾರು 2 ವರೆ ಸಾವಿರ ರೂಪಾಯಿಯಷ್ಟು ನೀರು ಖಾಲಿಯಾಗುತ್ತೆ. ಒಟ್ಟು ಅಂದಾಜು ದಿನಕ್ಕೆ 5 ಸಾವಿರದಂತೆ ತಿಂಗಳಿಗೆ 1.50 ಲಕ್ಷ ರೂಪಾಯಿಯನ್ನ ನೀರು ದಾನಕ್ಕಾಗಿ ವ್ಯಯಿಸುತ್ತಿದೆ ಸ್ವಾಮಿತ್ವ ಸಂಸ್ಥೆ.
ಸತತ 7 ವರ್ಷಗಳಿಂದ ಬೇಸಿಗೆಯಲ್ಲಿ ಜಲ ಸೇವೆ: ಸ್ವಾಮಿತ್ವ ಸಂಸ್ಥೆ ಹಾಗೂ ಜೈನ ಸಮುದಾಯಗಳು ಕಳೆದ 7ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಶೀತ ಜಲ ಸೇವೆ ಮಾಡ್ತಿವೆ. ಬೇಸಿಗೆಯಲ್ಲಿ ಉಂಟಾಗೋ ಕುಡಿಯುವ ನೀರಿನ ಸಮಸ್ಯೆಯನ್ನ ಅರಿತ ಸ್ವಾಮಿತ್ವ ಸಂಸ್ಥೆ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನ ಮಾಡ್ತಿದೆ. ವಿವಿಧ ಕಂಪನಿಗಳು, ಉದ್ಯಮ, ವ್ಯಾಪಾರದಲ್ಲಿ ತೊಡಗಿರುವ ಹೆಸರು ಹೇಳಿಕೊಳ್ಳಲು ಬಯಸದ ಜೈನ ಸಮುದಾಯದ ಕೆಲವರು ಸೇರಿ ಈ ಸ್ವಾಮಿತ್ವ ಸಂಸ್ಥೆಯ ಮೂಲಕ ಜಲ ಸೇವೆ ಮಾಡ್ತಿದ್ದಾರೆ.
ರೈತರ ಕನಸು ನನಸು ಮಾಡಿದ ಸಿಎಂ, ರೈತರಿಂದ ಬೊಮ್ಮಾಯಿಗೆ ಜೋಡೆತ್ತು ಗಿಫ್ಟ್
ಪಂಚನದಿಗಳ ನಾಡಲ್ಲಿ ಇದೆಂಥ ಸಮಸ್ಯೆ: ವಿಜಯಪುರ ಜಿಲ್ಲೆಯಲ್ಲಿ ಮನೆಗೆ ಬಂದವ್ರಿಗೆ ಊಟ ಕೊಡ್ತೀವಿ. ಆದ್ರೆ ಕುಡಿಯೋಕೆ ನೀರು ಕೊಡೋದು ಕಷ್ಟ ಅನ್ನೋ ಮಾತಿದೆ. ಯಾಕಂದ್ರೆ ಬೇಸಿಗೆ ಕಾಲದಲ್ಲಿ ಅಷ್ಟೊಂದು ನೀರಿನ ಬವಣೆ ಇರುತ್ತೇ. ವಿಜಯಪುರ ಜಿಲ್ಲೆಯಲ್ಲಿ ಪಂಚ ನದಿ ಹರಿದಿದ್ರೂ ಕುಡಿಯೋ ನೀರಿಗಾಗಿ ತತ್ವಾರ ಇರುತ್ತೆ. ವಿಜಯಪುರ ಜಿಲ್ಲೆಯಲ್ಲಿ ಈ ವರ್ಷ ಬೇಸಿಗೆ ಬಿಸಿಲಿನ ತಾಪ ಹೆಚ್ಚಿದೆ. 10ಗಂಟೆಗೆ ಹೊರಗಡೆ ಕಾಲಿಡೋದಕ್ಕೂ ಜನ ಬಿಸಿಲಿಗೆ ಹೆದರುತ್ತಿದ್ದಾರೆ. ಮಧ್ಯಾಹ್ನ ಬೇರೆ ಬೇರೆ ಕೆಲಸಕ್ಕಾಗಿ ಮನೆಯಿಂದ ಹೊರಗಡೆ ಬರುವ ಜನ್ರು ಬಾಯಾರಿಕೆ ಆಗಿ ನೀರು ಸಿಕ್ಕರೆ ಸಾಕು ಅಂತಿರ್ತಾರೆ. ತಂಪಾದ ನೀರು ಕುಡಿಯೋದ್ರೊಂದಿಗೆ ಬಾಟಲಿಯಲ್ಲಿ ನೀರು ತುಂಬಿಕೊಂಡು ಹೋಗ್ತಾರೆ.ಶಾಲಾ ಕಾಲೇಜು ವಿದ್ಯಾರ್ಥಿಗಳು, ಕರ್ತವ್ಯ ನಿರತ ಪೊಲೀಸರು, ವೃದ್ಧರು ಮಕ್ಕಳು ತಂಪಾದ ನೀರು ಸೇವಿಸಿ ಖುಷ್ ಆಗಿ ಸ್ವಾಮಿತ್ವ ಸಂಸ್ಥೆ ಜಲ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸ್ತಾರೆ.