ದಿವ್ಯಾಂಗ ವಿದ್ಯಾರ್ಥಿನಿ ಮೇಲೆ 60ರ ಮುದುಕನಿಂದ ನಿರಂತರ ಅತ್ಯಾಚಾರ..!

ವಿಶೇಷಚೇತನ ವಿದ್ಯಾರ್ಥಿಯನ್ನು ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಮುದಿಯನೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ತನ್ನ ಸ್ಕೂಟರ್‌ನಲ್ಲಿ ಶಾಲೆಗೆ ಕೊಂಡೊಯ್ದು ಬಿಡುವುದಾಗಿ ಮನೆಮಂದಿಯನ್ನು ನಂಬಿಸಿ ರಬ್ಬರ್‌ ತೋಟಕ್ಕೆ ವಿದ್ಯಾರ್ಥಿನಿಯನ್ನು ಕೊಂಡೊಯ್ದು ನಿರಂತರವಾಗಿ ಅತ್ಯಾಚಾರ ಎಸಗಿದ್ದ.


ಮಂಗಳೂರು(ಫೆ.26): ವಿಶೇಷಚೇತನ ವಿದ್ಯಾರ್ಥಿಯನ್ನು ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಮುದಿಯನೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಂಡಿತ್‌ ಹೌಸ್‌ ನಿವಾಸಿ ಥಾಮಸ್‌ (60) ಬಂಧಿತ ಆರೋಪಿ. ಈತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ತನ್ನ ಸ್ಕೂಟರ್‌ನಲ್ಲಿ ಶಾಲೆಗೆ ಕೊಂಡೊಯ್ದು ಬಿಡುವುದಾಗಿ ಮನೆಮಂದಿಯನ್ನು ನಂಬಿಸಿ ರಬ್ಬರ್‌ ತೋಟಕ್ಕೆ ವಿದ್ಯಾರ್ಥಿನಿಯನ್ನು ಕೊಂಡೊಯ್ದು ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಪಂಡಿತ್‌ ಹೌಸ್‌ ಜಂಕ್ಷನ್‌ನಲ್ಲಿ ಸಂಜೆ ಹೊತ್ತು ಟೆಂಪೋ ಒಂದರಲ್ಲಿ ಮೊಬೈಲ್‌ ಕ್ಯಾಂಟೀನ್‌ ವ್ಯವಹಾರ ನಡೆಸುತ್ತಿದ್ದ ಈತನಿಗೆ ಬಾಲಕಿಯ ಮನೆಮಂದಿಯ ಪರಿಚಯವಿತ್ತು.

Latest Videos

ಒಂದು ಅಫೇರ್-ಮೂರು ಸಾವು..ಅಮಾಯಕ ಗಂಡನಿಗೆ ಜೈಲುಪಾಲು!

ನಿತ್ಯ ಶಾಲೆಗೆ ತನ್ನ ಸ್ಕೂಟರ್‌ನಲ್ಲಿ ಬೇರೆ ದಾರಿಯಾಗಿ ಕರೆದುಕೊಂಡು ಹೋಗುತ್ತಿದ್ದ ಥಾಮಸ್‌ನ ವರ್ತನೆಯ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದರು. ಅದರಂತೆ ಮಂಗಳವಾರ ಅಪ್ರಾಪ್ತೆಯನ್ನು ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗುವಾಗ ಸ್ಥಳೀಯರು ಹಿಂಬಾಲಿಸಿದಾಗ, ಆತ ರಬ್ಬರ್‌ ತೋಟದತ್ತ ವಿಶೇಷಚೇತನ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗುವುದನ್ನು ಗಮನಿಸಿದರು. ಅಲ್ಲಿ ತೋಟದಲ್ಲಿ ಆತ ಅತ್ಯಾಚಾರ ನಡೆಸಲು ಮುಂದಾಗುತ್ತಿದ್ದಂತೆ ಸ್ಥಳೀಯರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

4 ವರ್ಷಗಳ ಹಿಂದಿನ 'ಕಿರಿಕ್', ನಟ ರಕ್ಷಿತ್ ಶೆಟ್ಟಿಗೆ ಬಂಧನದ ಭೀತಿ

ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಕೆಯ ತಾಯಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಹಾಗೂ ಜೀವಬೆದರಿಕೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

click me!