
ಬೆಂಗಳೂರು (ಮಾ.11): ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಸಾದ ಯೋಜನೆಯ ಭಾಗವಾಗಿ ಬೆಳಗಾವಿಯ ಸವದತ್ತಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಮಾಡುವುದಾಗಿ ತಿಳಿಸಿದೆ. ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರಸಾದ ಯೋಜನೆಯ ಅಡಿಯಲ್ಲಿ 18.37 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾಹಿತಿ ನೀಡಿದ್ದಾರೆ. 18.37 ಕೋಟಿ ರೂ. ವೆಚ್ಚದಲ್ಲಿ, ದೇವಾಲಯವು ಭಕ್ತಾದಿಗಳ ಆಗಮನ ಕೇಂದ್ರ, ಕೆಫೆಟೇರಿಯಾ, ಪ್ರಥಮ ಚಿಕಿತ್ಸಾ ಕೇಂದ್ರ ಮತ್ತು ಇತರ ಆಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳ್ಳಲಿದ್ದು, ಇದು ದೇವಾಲಯಕ್ಕೆ ಭೇಟಿ ನೀಡುವ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಏನಿದು ಪ್ರಸಾದ ಯೋಜನೆ: ಪ್ರಸಾದ್ ಯೋಜನೆ ಅಥವಾ ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ವರ್ಧನೆಯ ಕಾರ್ಯಕ್ರಮವಾಗಿದೆ., ಭಾರತದಲ್ಲಿನ ತೀರ್ಥಯಾತ್ರೆಯ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಸಚಿವಾಲಯದ ಒಂದು ಯೋಜನೆಯಾಗಿದೆ. ಈ ಯೋಜನೆಯನ್ನು 2014-2015 ರಲ್ಲಿ ಪ್ರಾರಂಭಿಸಲಾಯಿತು.
ಈ ಯೋಜನೆಯ ಅಡಿಯಲ್ಲಿ ತೀರ್ಥಯಾತ್ರೆ ಮತ್ತು ಪಾರಂಪರಿಕ ತಾಣಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು, ಧಾರ್ಮಿಕ ಪ್ರವಾಸೋದ್ಯಮ ಅನುಭವವನ್ನು ಸುಧಾರಿಸುವುದು, ಭಾರತದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಸುಸ್ಥಿರ ರೀತಿಯಲ್ಲಿ ತೀರ್ಥಯಾತ್ರೆ ತಾಣಗಳನ್ನು ಸಂಯೋಜಿಸುವುದು, ಜೀವನೋಪಾಯ, ಕೌಶಲ್ಯ, ಸ್ವಚ್ಛತೆ, ಭದ್ರತೆ, ಪ್ರವೇಶಸಾಧ್ಯತೆ ಮತ್ತು ಸೇವಾ ವಿತರಣೆಯ ಮೇಲೆ ಕೇಂದ್ರೀಕರಿಸುವ ಕಾರ್ಯಗಳನ್ನು ಮಾಡಬಹುದಾಗಿದೆ.
ಕನ್ನಡಿಗರ ಮೇಲೆ ಮಾರಾಠಿಗರ ಪುಂಡಾಟ ಖಂಡಿಸಿ ರಾಜಭವನಕ್ಕೆ ವಾಟಾಳ್ ನಾಗರಾಜ್ ಮುತ್ತಿಗೆ ಯತ್ನ!
ಈ ಯೋಜನೆ ಹೇಗೆ ಕೆಲಸ ಮಾಡಲಿದೆ: ಈ ಯೋಜನೆಯು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಯೋಜನೆಯಡಿಯಲ್ಲಿ ಮಂಜೂರಾದ ಯೋಜನೆಗಳನ್ನು ಆಯಾ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಕಾರ್ಯಗತಗೊಳಿಸುತ್ತವೆ. ಪ್ರವಾಸೋದ್ಯಮ ಸಚಿವಾಲಯವು ಯೋಜನೆಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಿದೆ.
ಕಾಗವಾಡ ಶಾಸಕ ರಾಜು ಕಾಗೆ ಅವರ ಹಿರಿಯ ಪುತ್ರಿ ಕೃತಿಕಾ ನಿಧನ!
ಈಗಾಗಲೇ ಈ ಯೋಜನೆಯ ಅಡಿಯಲ್ಲಿ ಅಸ್ಸಾಂನ ಕಾಮಾಕ್ಯ ದೇವಾಲಯದಲ್ಲಿ ತೀರ್ಥಯಾತ್ರೆ ಸೌಲಭ್ಯಗಳ ಅಭಿವೃದ್ಧಿ ಮಾಡಲಾಗಿದೆ. ಬಿಹಾರದ ಪಾಟ್ನಾ ಸಾಹಿಬ್, ವಿಷ್ಣುಪಾದ ದೇವಾಲಯದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಛತ್ತೀಸ್‌ಗಢದ ಮಾ ಬಮ್ಲೇಶ್ವರಿ ದೇವಿ ದೇವಾಲಯದಲ್ಲಿ ತೀರ್ಥಯಾತ್ರೆ ಸೌಲಭ್ಯಗಳ ಅಭಿವೃದ್ಧಿ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ