
ಈಗ ಟ್ರೆಂಡ್ ಬದಲಾಗಿದೆ. ಜನರು ಕೃತಕ ಬುದ್ಧಿಮತ್ತೆ ಎಐ (Artificial Intelligence AI) ಹೆಚ್ಚು ಬಳಕೆ ಮಾಡ್ತಿದ್ದಾರೆ. ಚಿಕ್ಕ ಸಮಸ್ಯೆ ಇರಲಿ ಇಲ್ಲ ಕ್ಷುಲ್ಲಕ ಸಮಸ್ಯೆ ಇರಲಿ ಜನರು ಚಾಟ್ ಜಿಪಿಟಿ (Chat GPT)ಯಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಾರೆ. ಈಗ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ತಾನು ಚಾಟ್ ಜಿಪಿಟಿಯನ್ನು ಹೇಗೆ ಬಳಸಿದ್ದೇನೆ ಎಂಬುದನ್ನು ಹೇಳಿಕೊಂಡಿದ್ದಾನೆ. ಇದು ಮುಜುಗರದ ಹ್ಯಾಕ್ ಎಂದು ಆತ ತನ್ನ ಪೋಸ್ಟ್ ನಲ್ಲಿ ಹಾಕಿದ್ದಾನೆ. ಆದ್ರೆ ಇದು ಮುಜುಗರದ ಹ್ಯಾಕ್ ಅಲ್ಲ, ಒಳ್ಳೆ ಐಡಿಯಾ ಎಂಬುದು ಬಳಕೆದಾರರ ವಾದವಾಗಿದೆ.
ಓಪನ್‌ಎಐ ಚಾಟ್‌ಬಾಟ್‌ಗಳಿಗಾಗಿ ಮಾಹಿತಿ ಮತ್ತು ತಂತ್ರಗಳನ್ನು ಹಂಚಿಕೊಳ್ಳಲು ಮೀಸಲಾಗಿರುವ ಸಬ್‌ರೆಡಿಟ್ (subreddit)ನಲ್ಲಿ ಮಾತನಾಡಿದ ಆ ವ್ಯಕ್ತಿ, ಕೆಲಸದಲ್ಲಿ ತನಗೆ ತುಂಬಾ ಒತ್ತಡವಿದೆ. ಒತ್ತಡದಿಂದ ಉಳಿದ ನಿತ್ಯದ ಕೆಲಸ ಮಾಡಲು ಆಗ್ತಿರಲಿಲ್ಲ. ಆದ್ರೆ ಅದನ್ನು ಎಐ ನಿಭಾಯಿಸಿದೆ ಎಂದಿದ್ದಾನೆ.
ಚಾಟ್‌ಜಿಪಿಟಿ ಹಿಂದಿಕ್ಕಿ ದಾಖಲೆ ಬರೆದ ಸದ್ಗುರು ಮಿರಾಕಲ್ ಮೈಂಡ್ ಆ್ಯಪ್, ಏನಿದೆ ಇದರಲ್ಲಿ?
ಮನೆ ಕೆಲಸದಲ್ಲಿ ಸಹಾಯ ಮಾಡಿದ ಚಾಟ್ ಜಿಪಿಟಿ : ಕೆಲಸಕ್ಕೆ ಹೋಗುವ ಜನರಿಗೆ ಮನೆ ಕೆಲಸವನ್ನು ಹೇಗೆ ಮಾಡ್ಬೇಕು ಎನ್ನುವ ಚಿಂತೆ ಕಾಡುತ್ತದೆ. ಅದ್ರಲ್ಲೂ ಮನೆ ಕ್ಲೀನಿಂಗ್ ದೊಡ್ಡ ತಲೆನೋವು. ಈ ವ್ಯಕ್ತಿಗೂ ಮನೆ ಕ್ಲೀನಿಂಗ್ ಸಮಸ್ಯೆಯಾಗಿತ್ತು. ಅದನ್ನು ಪರಿಹರಿಸಲು ಚಾಟ್ ಜಿಪಿಟಿ ಸಹಾಯ ಪಡೆದಿದ್ದಾನೆ. ಚಾಟ್ ಜಿಪಿಟಿ ನೀಡಿದ ಸಲಹೆಯಂತೆ ಮನೆ ಕ್ಲೀನ್ ಮಾಡಿದ್ದಾನೆ. ಇದ್ರಿಂದ ದೊಡ್ಡ ತಲೆ ನೋವು ಕಡಿಮೆ ಆಗಿದೆ ಎಂದಿರುವ ವ್ಯಕ್ತಿ ಇದು ನನ್ನ ಮುಜುಗರದ ಹ್ಯಾಕ್ ಎಂದಿದ್ದಾನೆ. ನನಗೆ ಕೆಲಸದಲ್ಲಿ ಹೆಚ್ಚಿನ ಒತ್ತಡವಿತ್ತು. ಹಾಗಾಗಿ ನಾನು ನನ್ನ ಅಪಾರ್ಟ್ಮೆಂಟ್ ಕ್ಲೀನ್ ಮಾಡಲು ತುಂಬಾ ಸೋಮಾರಿಯಾಗಿದ್ದೆ. ಅಪಾರ್ಟ್ಮೆಂಟ್ ಕ್ಲೀನ್ ಮಾಡಲು ನನ್ನನ್ನು ನಾನು ಪ್ರೇರೇಪಿಸಿಕೊಳ್ಳಬೇಕಿತ್ತು. ಅದಕ್ಕೆ ಡಿಜಿಟಲ್ ಕ್ಯಾಮರಾ ಸಹಾಯದಿಂದ ನನ್ನ ಮನೆಯ ಫೋಟೋ ಕ್ಲಿಕ್ ಮಾಡಿದೆ. ಅದನ್ನು ಚಾಟ್ ಜಿಪಿಟಿಗೆ ಅಪ್ಲೋಡ್ ಮಾಡಿದ್ದೆ. ನನ್ನ ರೂಮ್ ಹೇಗೆ ಕ್ಲೀನ್ ಮಾಡ್ಬೇಕು ಎಂದು ಚಾಟ್ ಜಿಪಿಟಿಯನ್ನು ಕೇಳಿದ್ದೆ ಎಂದಿದ್ದಾನೆ.
ಚಾಟ್ ಜಿಪಿಟಿ ಆತನಿಗೆ ಸಹಾಯ ಮಾಡಿದೆ. ಕೆಲಸವನ್ನು ವಿಂಗಡಿಸಿ, ಯಾವಾಗ ಏನು ಮಾಡ್ಬೇಕು ಎಂಬುದನ್ನು ಹೇಳಿದೆ. ಈ ವಿಷ್ಯವನ್ನು ಕೂಡ ಆತ ಎಲ್ಲರ ಮುಂದಿಟ್ಟಿದ್ದಾನೆ. ಚಾಟ್ ಜಿಪಿಟಿಗೆ ಫೋಟೋ ಅಪ್ಲೋಡ್ ಮಾಡಿ ಪ್ರಶ್ನೆ ಕೇಳಿದ್ದು ನನಗೆ ಸಹಾಯವಾಗಿದೆ. ಚಾಟ್ ಜಿಪಿಟಿ ಹೇಗೆ ಮನೆ ಕ್ಲೀನ್ ಮಾಡ್ಬೇಕು ಎಂಬುದನ್ನು ಹೇಳಿದೆ. ಶುಚಿಗೊಳಿಸುವ ಹಂತ ಹಂತವನ್ನು ಇದ್ರಲ್ಲಿ ವಿವರಿಸಲಾಗಿದೆ. ಸಣ್ಣ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಇದು ಪ್ರೋತ್ಸಾಹ ನೀಡುತ್ತದೆ ಎಂದು ಆತ ಹೇಳಿದ್ದಾನೆ. ನನಗೆ ಮನೆ ಸ್ವಚ್ಛಗೊಳಿಸಲು ಚಾಟ್ ಜಿಪಿಟಿ ಸಹಾಯ ಪಡೆಯುತ್ತಿದ್ದೇನೆ ಎಂಬುದನ್ನು ಹೇಳಲು ಮುಜುಗರ. ಯಾಕೆಂದ್ರೆ ಈ ಕೆಲಸವನ್ನು ನಾನು ಮಾಡ್ಬೇಕು ಎಂದಿದ್ದಾನೆ.
AI Chatbots ಜೊತೆ ಎಂದಿಗೂಈ ವಿಷಯಗಳನ್ನು ಶೇರ್ ಮಾಡಿಕೊಳ್ಳಬೇಡಿ!
ಬಳಕೆದಾರರು ಮಾತ್ರ ಮನೆ ಸ್ವಚ್ಛಗೊಳಿಸಲು ಚಾಟ್ ಜಿಪಿಟಿ ಸಹಾಯ ಪಡೆದ ವ್ಯಕ್ತಿಯ ಪ್ಲಾನ್ ಮೆಚ್ಚಿಕೊಂಡಿದ್ದಾರೆ. ಇದು ಮುಜುಗರದ ವಿಷ್ಯವಲ್ಲ. ಇದು ಚಾಟ್ ಜಿಪಿಟಿಯ ಅಧ್ಬುತ ಬಳಕೆ ಎಂದು ಒಬ್ಬರು ಬರೆದಿದ್ದಾರೆ. ಅಗಾಧವಾದ ಕೆಲಸಗಳನ್ನು ಸಣ್ಣ ಹಂತಗಳಾಗಿ ವಿಭಜಿಸುವುದು ಒಂದು ಬುದ್ಧಿವಂತ ಮತ್ತು ಪರಿಣಾಮಕಾರಿ ತಂತ್ರವಾಗಿದೆ. ನೀವು ಅದನ್ನು ಮಾಡಲು ತುಂಬಾ ಸೃಜನಶೀಲ ಮಾರ್ಗವನ್ನು ಕಂಡುಕೊಂಡಿದ್ದೀರಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನಾವು ಮಾಡುವ ಕೆಲಸ ಕಠಿಣ ಎನ್ನಿಸಿದಾಗ ಅದನ್ನು ಸುಲಭಗೊಳಿಸಲು ಈ ತಂತ್ರಜ್ಞಾನದ ಸಹಾಯ ಪಡೆಯುವುದ್ರಲ್ಲಿ ತಪ್ಪೇನಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ.