ಮದುವೆಯಾಗಿ 2 ರಿಂದ 3 ಲಕ್ಷ ರೂಪಾಯಿ ಸಂಪಾದನೆ ಮಾಡಿ; ಇಲ್ಲಿದೆ ಹಣ ಗಳಿಸೋ ಸೂಪರ್ ಟಿಪ್ಸ್!

Published : Mar 11, 2025, 12:15 PM ISTUpdated : Mar 11, 2025, 12:36 PM IST
ಮದುವೆಯಾಗಿ 2 ರಿಂದ 3 ಲಕ್ಷ ರೂಪಾಯಿ ಸಂಪಾದನೆ ಮಾಡಿ; ಇಲ್ಲಿದೆ ಹಣ ಗಳಿಸೋ ಸೂಪರ್ ಟಿಪ್ಸ್!

ಸಾರಾಂಶ

Money Making Idea: ಮದುವೆಯಾಗುವ ಮೂಲಕ ಹಣ ಗಳಿಸುವ ಮಾರ್ಗವೊಂದಿದೆ. ಈ ರೀತಿ ಮದುವೆಯಾದ್ರೆ ಹಣಕಾಸಿನ ಸಮಸ್ಯೆಗಳು ಉಂಟಾಗಲ್ಲ. ಈ ಹಣ ಬಳಸಿಕೊಂಡು ಅದ್ಧೂರಿಯಾಗಿ ಮದುವೆಯಾಗಬಹುದು.

ಬೆಂಗಳೂರು: ಮದುವೆ ಅಂದ್ರೆ ನಮ್ಮಲ್ಲಿ ನಡೆಯುವ ಅತ್ಯಂತ ಸಂಭ್ರಮದ ಹಬ್ಬ. ಇನ್ನು ಒಂದು ತಿಂಗಳು ಇರುವಾಗಲೇ ಮನೆಗಳಲ್ಲಿ ಮದುವೆ ಸಿದ್ಧತೆಗಳು ನಡೆಯುತ್ತವೆ. ಮಕ್ಕಳ ಮದುವೆ ಮಾಡಲು ಪೋಷಕರು ತಮ್ಮ ಜೀವಮಾನದ ಉಳಿತಾಯದ ಹಣವನ್ನೆಲ್ಲಾ ಖರ್ಚು ಮಾಡುತ್ತಾರೆ. ಅದರಲ್ಲಿಯೂ ಯುವಕರು ಸಹ ಪೋಷಕರ ಹಣದೊಂದಿಗೆ ಸಾಲವನ್ನು ಮಾಡಿಕೊಳ್ಳುತ್ತಾರೆ. ಇತ್ತೀಚಿನ ವರದಿಯೊಂದರ ಪ್ರಕಾರ, ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬವೊಂದು ಅಂದಾಜು 32 ಲಕ್ಷ ರೂಪಾಯಿ ಖರ್ಚು ಮಾಡುತ್ತದೆ. ಇಂದು ನಾವು ಹೇಳುವ ಟ್ರಿಕ್ ಫಾಲೋ ಮಾಡಿದ್ರೆ ನಿಮ್ಮ ಮದುವೆಯಲ್ಲಿ ನೀವು ಕನಿಷ್ಠ 2 ರಿಂದ 3 ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು. ಮದುವೆಯೂ ಆಗುತ್ತೆ ಮತ್ತು ಹಣದ ಉಳಿತಾಯವೂ ಆಗುತ್ತದೆ. 

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮದುವೆಗೆ ಅಂದಾಜು 100 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಇನ್ನು ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ಸಹ 70 ರಿಂದ 77 ಕೋಟಿ ರೂ.ಗಳವರೆಗೆ ಹಣ ಖರ್ಚು ಮಾಡಿದ್ದರು. ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ 5,000 ಕೋಟಿ ರೂಪಾಯಿ ಖರ್ಚು ಮಾಡುವ ಮೂಲಕ ವಿಶ್ವದಲ್ಲಿಯೇ ದಾಖಲೆ ಬರೆದಿದ್ದರು. ಸಾಮಾನ್ಯವಾಗಿ ಮದುವೆ ಮತ್ತು ನಂತರದ ಶಾಸ್ತ್ರಗಳು 5 ರಿಂದ 7 ದಿನ ನಡೆಯುತ್ತವೆ. ಆದ್ರೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಮೂರು ತಿಂಗಳು ನಡೆದಿತ್ತು. ಈ ಲೇಖನದಲ್ಲಿ ನಿಮಗೆ ಮದುವೆಯಾಗಿ ಹಣ ಸಂಪಾದನೆ ಮಾಡೋದು ಹೇಗೆ ಎಂಬುದರ ಬಗ್ಗೆ ಹೇಳುತ್ತಿದ್ದೇವೆ. 

ಹಣ ಗಳಿಸೋ ಸೂಪರ್ ಟಿಪ್ಸ್!
ನೀವು ಮದುವೆ ಆಗುತ್ತಿದ್ರೆ, ಈ ಮಾಹಿತಿಯನ್ನು www.joinmywedding.com ದಾಖಲಿಸಬೇಕು. ಈ ವೆಬ್‌ಸೈಟ್ ಮೂಲಕ ವಿದೇಶಿಗರು ಇಲ್ಲಿಂದ ನಿಮ್ಮ ಮದುವೆಗೆ ಬರಲು ಟಿಕೆಟ್ ಪಡೆದುಕೊಳ್ಳುತ್ತಾರೆ. ನಿಮ್ಮ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವಿದೇಶಿಗರು ನಿಮಗೆ ಒಬ್ಬರು ಕನಿಷ್ಠ 250 ಡಾಲರ್ ಹಣ ನೀಡುತ್ತಾರೆ. ಈ ವಿದೇಶಿಗರಿಗೆ ಭಾರತೀಯರ ಮದುವೆಗಳಲ್ಲಿ ಭಾಗಿಯಾಗುವ ಆಸೆ ಇರುತ್ತದೆ. ಇದಕ್ಕಾಗಿ ಹಣ ಖರ್ಚು ಮಾಡಿಕೊಂಡು ವಿದೇಶದಿಂದ ಭಾರತಕ್ಕೆ ಬರುತ್ತಾರೆ. ಮದುವೆಗೆ ವಿಶೇಷ ಅತಿಥಿಗಳಾಗಿ ಆಗಮಿಸುವ ಇವರು, ಕುಣಿದು ಕುಪ್ಪಳಿ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಾರೆ. 

ನಿಮ್ಮ ಮದುವೆಗೆ ಕನಿಷ್ಟ 10 ರಿಂದ 15 ವಿದೇಶಿಗಳು ಬಂದ್ರೆ ನೀವು ಕನಿಷ್ಠ 2 ರಿಂದ 3 ಲಕ್ಷ ರೂಪಾಯಿ ಹಣ ಸಂಪಾದನೆ ಮಾಡಬಹುದು. ಇದರಿಂದ ಮದುವೆಯ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಹಾಗೆ ನಿಮ್ಮ ಸಂಬಂಧಿಕರು ವಿದೇಶಿ ಅತಿಥಿಗಳನ್ನು ಕಂಡು ಆಶ್ಚರ್ಯವಾಗುತ್ತಾರೆ.

ಇದನ್ನೂ ಓದಿ: ನಾಲ್ವರು ಹೆಂಡ್ತಿಯರಿದ್ರೂ 5ನೇ ಮದುವೆ ಆಸೆ ಹೇಳಿಕೊಂಡ ವ್ಯಕ್ತಿಗೆ ಮೌಲಾನಾ ಕೊಟ್ಟ ಸಲಹೆ ಏನು?

ನಿಮ್ಮ ಮದುವೆಗೆ ವಿಶೇಷ ಅತಿಥಿಗಳು ಆಗಮಿಸಬೇಕಾದ್ರೆ www.joinmywedding.com ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಂತರ Register your wedding ಮೇಲೆ ಕ್ಲಿಕ್ ಮಾಡಬೇಕು. ಇ-ಮೇಲ್ ಮೂಲಕ  ಈ ಪೇಜ್‌ಗೆ ಲಾಗಿನ್ ಆಗಬೇಕಾಗುತ್ತದೆ. ನಂತರ ನಿಮ್ಮ ಮದುವೆ ಸ್ಥಳ, ದಿನಾಂಕ, ಸಂಪ್ರದಾಯ ಆಚರಣೆ ಮತ್ತು ನೀವು ವಿಧಿಸುವ ಶುಲ್ಕ ಸೇರಿದಂತೆ ಇನ್ನಿತರ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ. ಹಾಗೆ ಮದುವೆಯಾಗುತ್ತಿರುವ ಜೋಡಿಯ ಫೋಟೋಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ನಿಮ್ಮ ಮದುವೆಗೆ ಬರಲು ಒಪ್ಪುವ ಮತ್ತು ಶುಲ್ಕ ಪಾವತಿಸುವ ವಿದೇಶಿಗರಿಗೆ ನಿಮ್ಮ ಮಾಹಿತಿ ಮತ್ತು ಫೋಟೋಗಳನ್ನು ನೀಡಲಾಗುತ್ತದೆ ಎಂದು joinmywedding ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಡೋಂಟ್ ಟಚ್ ಮಿ ಮೇಡಂ.. ಕ್ಯಾಬ್‌ನಲ್ಲಿ ನಶೆ ಏರಿಸ್ಕೊಂಡ ಮಹಿಳೆ ಹಾರಾಟ, ಕೂಗಾಟ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ