ಜೀವನ ಹಾಳಾದ ಬೇಸರ, ಪತಿ ಜತಿನ್‌ ಹುಕ್ಕೇರಿಯೇ ನಟಿ ರನ್ಯಾಳ ಕೃತ್ಯದ ಜಾಲವನ್ನು ಅಧಿಕಾರಿಗಳಿಗೆ ಕೊಟ್ರಾ?

Published : Mar 11, 2025, 12:16 PM ISTUpdated : Mar 11, 2025, 12:21 PM IST
ಜೀವನ ಹಾಳಾದ ಬೇಸರ, ಪತಿ ಜತಿನ್‌ ಹುಕ್ಕೇರಿಯೇ ನಟಿ ರನ್ಯಾಳ ಕೃತ್ಯದ ಜಾಲವನ್ನು ಅಧಿಕಾರಿಗಳಿಗೆ ಕೊಟ್ರಾ?

ಸಾರಾಂಶ

ದುಬೈ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನವಾಗಿದೆ. ಡಿಆರ್‌ಐ ಅಧಿಕಾರಿಗಳು ಆಕೆಯ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪತಿ ಜತಿನ್ ಕೌಟುಂಬಿಕ ಕಲಹದಿಂದ ದೂರವಿದ್ದು, ಆಕೆಯ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ರನ್ಯಾ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಹೆಸರಲ್ಲಿ ಪ್ರೋಟೋಕಾಲ್ ಪಡೆದಿದ್ದು, ಅವರಿಗೂ ತನಿಖೆಯ ಬಿಸಿ ತಟ್ಟುವ ಸಾಧ್ಯತೆ ಇದೆ.

ದುಬೈನಿಂದ ಕೆ.ಜಿ.ಗಟ್ಟಲೆ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ಆರೋಪಿ ರನ್ಯಾ ರಾವ್‌ ಜತೆಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸ್ಮಗ್ಲರ್‌ ರನ್ಯಾಳನ್ನು 2 ತಿಂಗಳಿಂದ ದೂರ ಇಟ್ಟಿದ್ದ ಪತಿ ಜತಿನ್‌?  ರನ್ಯಾಳನ್ನು ಮದುವೆಯಾದ ಬಳಿಕ ಆಕೆಯ ಮತ್ತೊಂದು ಮುಖ ಅರಿವಾದ ಹಿನ್ನೆಲೆಯಲ್ಲಿ ಆಕೆಯೊಂದಿಗೆ ಹಲವು ಬಾರಿ ಜಗಳವಾಡಿದ್ದ ಪತಿ ಜತಿನ್‌. ಇದೇ ಕಾರಣಕ್ಕೆ ಆಕೆಯನ್ನು 2 ತಿಂಗಳಿನಿಂದ ದೂರ ಇಟ್ಟಿದ್ದರು ಎನ್ನಲಾಗಿದೆ. ಆಕೆಯ ವಿದೇಶ ಪ್ರಯಾಣ, ರಹಸ್ಯವಾಗಿ ಕೆಲವರೊಂದಿಗೆ ಮಾತನಾಡುತ್ತಿದ್ದಾಗ ಪತಿಗೆ ಅನುಮಾನ ಮೂಡಿ, ಪತ್ನಿ ರನ್ಯಾಳ ನಿಗೂಢ ನಡವಳಿಕೆ ಬೆನ್ನು ಹತ್ತಿ ಹೋದಾಗ ಆಕೆಯ ಕಳ್ಳ ವ್ಯವಹಾರಗಳು ಗೊತ್ತಾಗಿದೆ. ಇದರ ನಂತರ ಜತೀನ್ ಜಗಳವಾಡಿ ಮೋಸ ಮಾಡಿದೆ ವಿಚ್ಚೇದನ ಕೊಡುತ್ತೇನೆ ಎಂದು ಪ್ರತ್ಯೇಕವಾಗಲು ಮುಂದಾಗಿದ್ದರು ಎನ್ನಲಾಗಿದೆ.

ಚಿನ್ನ ಸಾಗಣೆಯಲ್ಲಿ ನಟಿ ರನ್ಯಾ ರಾವ್ ಬಂಧನ ಪ್ರಕರಣ, ದೇಶದಾದ್ಯಂತ ತನಿಖೆ ಆರಂಭಿಸಿದ ಸಿಬಿಐ!

ಅಳಿಯನಿಗೆ ಮಲತಂದೆ ಧಮ್ಕಿ:
ಕೌಟುಂಬಿಕ ಕಲಹ ಹಿನ್ನೆಲೆ ಜನವರಿಯಲ್ಲಿ ಜತಿನ್ ವಿಚ್ಚೇದನಕ್ಕೆ ಮುಂದಾಗಿದ್ದರು. ಆಗ ಆಕೆಯ ಸ್ವಂತ ತಂದೆ ಹೆಗ್ದೇಶ್ ಮತ್ತು ಮಲತಂದೆ ರಾಮಚಂದ್ರರಾಮ್ ಮಧ್ಯಪ್ರವೇಶಿಸಿ ಸಂಧಾನಕ್ಕೆ ಮುಂದಾಗಿದ್ದರು. ಆದರೆ ಅದು  ವಿಫಲವಾಗಿದ್ದಕ್ಕೆ ನಿನ್ನಿಂದ ನನ್ನ ಮಗಳು ಒಳ್ಳೆಯ ದಾರಿಗೆ ಬರುವ ನಿರೀಕ್ಷೆ ಇದೆ ಸುಮ್ಮನೆ ಆಕೆಯೊಂದಿಗೆ ಜೀವನ ಮಾಡು ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಡಿಜಿಪಿ ಧಮ್ಕಿ ಹಾಕಿದ್ದರು ಎಂಬ ಆರೋಪವಿದೆ. ಇದರಿಂದ ಕದಲಿದ ಜತಿನ್ 2 ತಿಂಗಳಿಂದ ಪತ್ನಿಯಿಂದ ದೂರವಾಗಿದ್ದರು ಎನ್ನಲಾಗಿದೆ.

ಜತಿನ್‌ ಹುಕ್ಕೇರಿ ಪರಿಚಯವಾಗಿದ್ದು ಹೇಗೆ?
ರನ್ಯಾಗೆ ವನ್ಯಜೀವಿ ಫೋಟೋಗ್ರಫಿ ಹವ್ಯಾಸವಿತ್ತು. ಈ ಬಗ್ಗೆ 4 ವರ್ಷದ ಹಿಂದೆ ಕಂಪೆನಿ ಕೂಡ ತೆರೆದಿದ್ದು ಬಳಿಕ ಮುಚ್ಚಿದ್ದಳು. 2024ರ ಫೆಬ್ರವರಿಯಲ್ಲಿ ವನ್ಯಜೀವಿ ಫೋಟೋ ತೆಗೆಯಲು ರನ್ಯಾ ಕಾಡಿಗೆ ಹೋಗಿದ್ದಾಗ ಅದೇ ಕಾಡಿಗೆ ವಿಹಾರಕ್ಕೆಂದು ವಾಸ್ತುಶಿಲ್ಪಿ ಜತಿನ್‌ ಸಹ ಬಂದಿದ್ದರು. ಅಲ್ಲಿ ಪರಿಚಯವಾಗಿ ಬಳಿಕ ಪ್ರೀತಿಗೆ ತಿರುಗಿ ಎರಡೂ ಕುಟುಂಬಳ ಸಮ್ಮತಿ ಪಡೆದು ಇಬ್ಬರೂ ಅದೇ ವರ್ಷ ನವೆಂಬರ್‌ ನಲ್ಲಿ ಮದುವೆಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ನಟಿ ರನ್ಯಾ ತಂಡದ ಚಿನ್ನ ಕಳ್ಳ ಸಾಗಾಣಿಕೆ ಕೃತ್ಯದ ಮಾಹಿತಿಯನ್ನು ಕಂದಾಯ ಜಾರಿನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳಿಗೆ ಆಕೆಯ ಪತಿ ಹಾಗೂ ಕಾಂಗ್ರೆಸ್ ಪಕ್ಷದ ಒಂದು ಬಣವೇ ಸೋರಿಕೆ ಮಾಡಿದೆ ಎನ್ನಲಾಗುತ್ತಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿ ಜತೆ ಮುನಿಸಿಕೊಂಡು ದೂರವಾಗಿದ್ದ ರನ್ಯಾಳ ಪತಿ ಜತಿನ್ ಹುಕ್ಕೇರಿ ಅಥವಾ ಸಚಿವರೊಬ್ಬರಿಗೆ ಬ್ರೇಕ್ ಹಾಕುವ ಸಲುವಾಗಿ ಚಿನ್ನ ಸಾಗಾಣಿಕೆ ಬಗ್ಗೆ ಡಿಆರ್‌ಐ ಅಧಿಕಾರಿಗೆ ಆ ಸಚಿವರ ರಾಜಕೀಯ ವಿರೋಧಿ ಗುಂಪಿನ ಪ್ರಭಾವಿ ಮಾಹಿತಿ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್ ದುಬೈ ನಂಟು ಬಯಲು, 40 ಬಾರಿ ವಿದೇಶ ಪ್ರವಾಸ!

ನಟಿಯಾಗಿರುವ ರನ್ಯಾ ಹಲವು ರಾಜಕಾರಣಿಗಳು, ಚಿನ್ನಾಭರಣ ವ್ಯಾಪಾರಿಗಳು, ಸರ್ಕಾರಿ ಅಧಿಕಾರಿಗಳು, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಜತೆಗೆ ನಂಟು ಹೊಂದಿರುವುದು ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದುಬೈನಲ್ಲಿ ಕೆ.ಜಿ.ಗಟ್ಟಲೆ ಚಿನ್ನ ಖರೀದಿಗೆ ಹಣ ನೀಡಿದವರ ಬಗ್ಗೆ ರನ್ಯಾ ಈವರೆಗೂ ಬಾಯ್ಬಿಟ್ಟಿಲ್ಲ. ತಾನು ಟ್ರ್ಯಾಪ್‌ಗೆ ಒಳಗಾಗಿರುವುದಾಗಿ ತನಿಖೆ ಆರಂಭದಲ್ಲಿ ಹೇಳಿಕೆ ನೀಡಿದ್ದ ರನ್ಯಾ, ಆ ಟ್ರ್ಯಾಪ್‌ ಮಾಡಿದವರು ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಡಿಆರ್‌ಐ ಅಧಿಕಾರಿಗಳಿಗೆ ರನ್ಯಾ ಹೇಳಿಕೆ ಬಗ್ಗೆಯೇ ಅನುಮಾನ ಮೂಡಿದೆ.

ಸಂಪರ್ಕದಲ್ಲಿದ್ದ ವ್ಯಕ್ತಿಗಳ ವಿಚಾರಣೆ?: ರನ್ಯಾ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ಜಪ್ತಿ ಮಾಡಿರುವ ಡಿಆರ್‌ಐ ಅಧಿಕಾರಿಗಳು, ರನ್ಯಾ ಜತೆಗೆ ಯಾರೆಲ್ಲ ಸಂಪರ್ಕದಲ್ಲಿದ್ದರು ಎಂಬುದನ್ನು ಪಟ್ಟಿ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಆ ವ್ಯಕ್ತಿಗಳಿಗೆ ನೋಟಿಸ್‌ ನೀಡಿ ವಿಚಾರಣೆಗೆ ಒಳಪಡಿಸಲಿದ್ದಾರೆ. ಮತ್ತೊಂದೆಡೆ ರನ್ಯಾ ಬಂಧನದ ಬೆನ್ನಲ್ಲೇ ಆಕೆ ಜತೆಗೆ ಸಂಪರ್ಕದಲ್ಲಿದ್ದ ಕೆಲ ವ್ಯಕ್ತಿಗಳು ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ. ದುಬೈನಿಂದ ಚಿನ್ನ ಕಳ್ಳಸಾಗಣೆ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡಿರುವ ಬಗ್ಗೆ ಡಿಆರ್‌ಐ ಅಧಿಕಾರಿಗಳು ಶಂಕಿಸಿದ್ದಾರೆ. ಈ ಜಾಲ ಭೇದಿಸುವ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಣಿಕೆ ಪ್ರಕರಣ ಸಂಬಂಧ ನಟಿ ರನ್ಯಾ ರಾವ್‌ ಮನೆ ಮೇಲೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದ ವೇಳೆ ದುಬಾರಿ ಮೌಲ್ಯದ 39 ವಿದೇಶಿ ವಾಚ್‌ಗಳು ಪತ್ತೆಯಾಗಿವೆ.

ಡಿಜಿಪಿ ರಾಮಚಂದ್ರರಾವ್ ಗೆ  ತಟ್ಟಲಿದೆ ತನಿಖೆ  ಬಿಸಿ:
ಇನ್ನು ಈ ಪ್ರಕರಣದಲ್ಲಿ ರನ್ಯಾಳ ಮಲತಂದೆ ಡಿಜಿಪಿ ರಾಮಚಂದ್ರರಾವ್ ಗೆ ತನಿಖೆ ಬಿಸಿ ತಟ್ಟಲಿದೆ. ಚಿನ್ನ ಕಳ್ಳಸಾಗಣೆ ಮಾಡಲು ರಾಮಚಂದ್ರರಾವ್ ಹೆಸರಲ್ಲಿ ರನ್ಯಾ ಪ್ರೋಟೋಕಾಲ್ ಪಡೆದಿದ್ದಳು. ರಾಮಚಂದ್ರರಾವ್ ಸೂಚನೆ ಮೇರೆಗೆ ಏರ್ಪೋರ್ಟ್ ಠಾಣೆ  ಪೊಲೀಸರು ಪ್ರೋಟೋಕಾಲ್ ನೀಡಿದ್ದರು. ಇದೇ ಪೊಲೀಸರ ಭದ್ರತೆಯಲ್ಲಿ ಚಿನ್ನ ಸಾಗಾಟಕ್ಕೆ ಮುಂದಾಗಿದ್ದಳು.  ಹೀಗಾಗಿ ರಾಮಚಂದ್ರರಾವ್ ಗೂ ನೋಟಿಸ್ ನೀಡಿ ತನಿಖೆಗೆ ಕರೆಯುವ ಸಾಧ್ಯತೆ ದಟ್ಟವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ