Mysur : ಸಿಗ್ಮಾ ಆಸ್ಪತ್ರೆಯಲ್ಲಿ 35 ಕಿಡ್ನಿ ಕಸಿ ಯಶಸ್ವಿ

By Kannadaprabha News  |  First Published Oct 10, 2023, 7:55 AM IST

ಸಿಗ್ಮಾ ಆಸ್ಪತ್ರೆಯಲ್ಲಿ ಕಳೆದ 3 ವರ್ಷಗಳಲ್ಲಿ 35 ಮೂತ್ರಪಿಂಡ ಕಸಿ (ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್) ಯಶಸ್ವಿಯಾಗಿ ಮಾಡಲಾಗಿದೆ ಎಂದು ಸಿಗ್ಮಾ ಆಸ್ಪತ್ರೆಯ ನಿರ್ದೇಶಕ ಹಾಗೂ ಕಿಡ್ನಿ ಟ್ರಾನ್ಸ್ ಪ್ಲಾಂಟ್ ತಂಡದ ಮುಖ್ಯಸ್ಥ ಡಾ.ಕೆ.ಎಂ. ಮಾದಪ್ಪ ತಿಳಿಸಿದರು.


 ಮೈಸೂರು :  ಸಿಗ್ಮಾ ಆಸ್ಪತ್ರೆಯಲ್ಲಿ ಕಳೆದ 3 ವರ್ಷಗಳಲ್ಲಿ 35 ಮೂತ್ರಪಿಂಡ ಕಸಿ (ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್) ಯಶಸ್ವಿಯಾಗಿ ಮಾಡಲಾಗಿದೆ ಎಂದು ಸಿಗ್ಮಾ ಆಸ್ಪತ್ರೆಯ ನಿರ್ದೇಶಕ ಹಾಗೂ ಕಿಡ್ನಿ ಟ್ರಾನ್ಸ್ ಪ್ಲಾಂಟ್ ತಂಡದ ಮುಖ್ಯಸ್ಥ ಡಾ.ಕೆ.ಎಂ. ಮಾದಪ್ಪ ತಿಳಿಸಿದರು.

ಮೈಸೂರಿನ ಸರಸ್ವತಿಪುರಂನಲ್ಲಿರುವ ಸಿಗ್ಮಾ ಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014 ರಲ್ಲಿ ಸಿಗ್ಮಾ ಆಸ್ಪತ್ರೆ ಪ್ರಾರಂಭಿಸಿದೆವು. 2020 ರಿಂದ ಕಿಡ್ನಿ ಕಸಿ ಮಾಡಲಾಗುತ್ತಿದ್ದು, ಈವರೆಗೆ 25 ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಗಿದೆ ಎಂದು ಹೇಳಿದರು.

Latest Videos

undefined

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ 15 ರೋಗಿಗಳಿಗೆ ಉಚಿತವಾಗಿ ಕಿಡ್ನಿ ಕಸಿ ಯಶಸ್ವಿಯಾಗಿ ಮಾಡಲಾಗಿದ್ದು, ಕಿಡ್ನಿ ಸ್ವೀಕರಿಸುವವರಿಗೆ ಶಸ್ತ್ರಚಿಕಿತ್ಸೆ, ಔಷಧವನ್ನೂ ಉಚಿತವಾಗಿ ನೀಡಲಾಗುತ್ತಿದೆ. ಈ ವರ್ಷದ ಜನವರಿ ತಿಂಗಳಿಂದ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತವಾಗಿ ಕಿಡ್ನಿ ಕಸಿ ಮಾಡಲಾಗುತ್ತಿದೆ. ಈ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇಲ್ಲ. ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಜನರು ಕಿಡ್ನಿ ಕಸಿಗಾಗಿ ಕಾಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕೆ.ಆರ್. ಪೇಟೆ ತಾಲೂಕಿನ 34 ವರ್ಷದ ರೈತೊಬ್ಬರು ಸೆಪ್ಟೆಂಬರ್ ತಿಂಗಳಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡರು. ಅವರ ಪತ್ನಿ ಒಂದು ಕಿಡ್ನಿ ದಾನ ಮಾಡಿದರು. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಡಯಾಲಿಸಿಸ್ ಮತ್ತು ಆಹಾರದ ನಿರ್ಬಂಧದ ಬಗ್ಗೆ ಚಿಂತಿಸದೇ ಆರೋಗ್ಯವಾಗಿದ್ದಾರೆ ಎಂದರು.

6 ರೋಗಿಗಳಿಗೆ ಕಸಿ

ನೆಫ್ರಾಲಜಿಸ್ಟ್ ಮತ್ತು ಕಿಡ್ನಿ ಕಸಿ ತಜ್ಞ ಡಾ. ಅನಿಕೇತ್ ಪ್ರಭಾಕರ್ ಮಾತನಾಡಿ, ರಾಜ್ಯ ಸರ್ಕಾರದ ಜೀವ ಸಾರ್ಥಕತೆ ಕಾರ್ಯಕ್ರಮದಲ್ಲಿ ಮೆದುಳು ನಿಷ್ಕ್ರಿಯವಾದ ವ್ಯಕ್ತಿಯಿಂದ ಪಡೆದ ಕಿಡ್ನಿಯನ್ನು ಕಸಿ ಮಾಡುತ್ತಿದ್ದೇವೆ. ರಕ್ತ ಗುಂಪು ವಿರುದ್ಧವಾಗಿರುವ 6 ರೋಗಿಗಳಿಗೆ ಯಶ್ವಸಿ ಕಸಿ ಮಾಡಲಾಗಿದೆ ಎಂದು ತಿಳಿಸಿದರು.

ಮಧುಮೇಹದಿಂದ ಕಿಡ್ನಿ ಸಮಸ್ಯೆ ಬರುತ್ತದೆ. 10 ವರ್ಷದೊಳಗೆ ನಿಯಂತ್ರಣಕ್ಕೆ ಬರದಿದ್ದರೆ ತೊಂದರೆ ಇದೆ. ಮಧುಮೇಹ ಇಲ್ಲದವರಿಗೂ ಕಿಡ್ನಿ ಸಮಸ್ಯೆ ಬರಬಹುದು. ನಿರಂತರವಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದರಿಂದಲೂ ಕಿಡ್ನಿ ಸಮಸ್ಯೆ ಬರುತ್ತದೆ ಎಂದರು.

ಸಿಗ್ಮಾ ಆಸ್ಪತ್ರೆಯ ಎಂಡಿ ಎಸ್. ಜ್ಞಾನಪ್ರಕಾಶ್, ನಿರ್ದೇಶಕಿ ಹಾಗೂ ಮುಖ್ಯ ಮಕ್ಕಳ ತಜ್ಞೆ ಡಾ. ರಾಜೇಶ್ವರಿ ಮಾದಪ್ಪ, ಮೂತ್ರ ಶಾಸ್ತ್ರಜ್ಞ ಮತ್ತು ಕಿಡ್ನಿ ಕಸಿ ಸರ್ಜನ್ ಡಾ.ಡಿ.ಎನ್. ಸೋಮಣ್ಣ ಇದ್ದರು.

ಮೂತ್ರ ಶಾಸ್ತ್ರಜ್ಞ ಮತ್ತು ಕಿಡ್ನಿ ಕಸಿ ಸರ್ಜನ್ ಡಾ.ಡಿ.ಎನ್. ಸೋಮಣ್ಣ ಮಾತನಾಡಿ, ಲ್ಯಾಪ್ರೊಸ್ಕೋಪಿಕ್ ವಿಧಾನದಿಂದ ಶಸ್ತ್ರಚಿಕಿತ್ಸೆಯನ್ನು ದಾನಿಗಳ ಕಿಡ್ನಿಯನ್ನು ಕಸಿ ಮಾಡುವುದರಿಂದ ಅವರು ಚೇತರಿಸಿಕೊಳ್ಳುವ ಮತ್ತು ನೋವನ್ನು ಕಡಿಮೆ ಮಾಡುವುದಲ್ಲದೆ ದಾನಿಗಳು ಅವರ ಮನೆಗೆ 2- 3 ದಿವಸದಲ್ಲಿ ಹಿಂದಿರುಗಬಹುದು. ದೈನಂದಿನ ಚಟುವಟಿಕೆಯಲ್ಲಿ ತೊಡಗಬಹುದು.

- ಡಾ.ಡಿ.ಎನ್. ಸೋಮಣ್ಣ, ಮೂತ್ರ ಶಾಸ್ತ್ರಜ್ಞ ಮತ್ತು ಕಿಡ್ನಿ ಕಸಿ ಸರ್ಜನ್, ಸಿಗ್ಮಾ ಆಸ್ಪತ್ರೆ

click me!