ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣ ಎನಿಸಿದ್ದ ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ -29 ರ ಉಪಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದಿದ್ದು, ಬಿಜೆಪಿ ಅಭ್ಯರ್ಥಿ ಗಿರೀಶ ಪಾಟೀಲ (ಬಿರಾದಾರ) ದಿಗ್ವಿಜಯ ಸಾಧಿಸುವ ಮೂಲಕ ವಾರ್ಡ್ 29 ಮತ್ತೆ ಬಿಜೆಪಿ ತೆಕ್ಕೆಗೆ ಸೇರಿದೆ.
ವಿಜಯಪುರ (ನ.26) : ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣ ಎನಿಸಿದ್ದ ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ -29 ರ ಉಪಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದಿದ್ದು, ಬಿಜೆಪಿ ಅಭ್ಯರ್ಥಿ ಗಿರೀಶ ಪಾಟೀಲ (ಬಿರಾದಾರ) ದಿಗ್ವಿಜಯ ಸಾಧಿಸುವ ಮೂಲಕ ವಾರ್ಡ್ 29 ಮತ್ತೆ ಬಿಜೆಪಿ ತೆಕ್ಕೆಗೆ ಸೇರಿದೆ.
ಬಿಜೆಪಿ ಸದಸ್ಯನ ನಿಧನದಿಂದ ಚುನಾವಣೆ!
ವಿಜಯಪುರ ಮಹಾನಗರ ಪಾಲಿಕೆಯ 29 ನೇ ವಾರ್ಡಿಗೆ ಸದಸ್ಯರಾಗಿದ್ದ ಬಿಜೆಪಿಯ ವಿಜಯಕುಮಾರ ಬಿರಾದಾರ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ನ.23 ರಂದು ಉಪಚುನಾವಣೆ ಜರುಗಿತ್ತು. ಬಿಜೆಪಿಯಿಂದ ಹಿಂದಿನ ಸದಸ್ಯರಾಗಿದ್ದ ದಿ.ವಿಜಯಕುಮಾರ ಪಾಟೀಲ (ಬಿರಾದಾರ) ಅವರ ಪುತ್ರ ಗಿರೀಶ ಪಾಟೀಲ ಕಣಕ್ಕಿಳಿದರೆ, ಕಾಂಗ್ರೆಸ್ ನಿಂದ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡು ಉಪಚುನಾವಣೆ ವೇಳೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಬಾಬು ಏಳಗಂಟಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ವೃದ್ಧನ ಆಸ್ತಿ ಬರೆಸಿಕೊಂಡು ಮನೆಯಿಂದ ಹೊರಹಾಕಿದ ಮಕ್ಕಳು! ಚಿಕ್ಕಮಗಳೂರು ಬಿಜೆಪಿ ಭೀಷ್ಮನಿಗೆ ಇದೆಂಥ ಸ್ಥಿತಿ!
ಉಭಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದ ಪಾಲಿಕೆ!
ಪಾಲಿಕೆಯ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಇಬ್ಬರೂ ಅಭ್ಯರ್ಥಿಗಳ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ತುರುಸಿನ ಪೈಪೋಟಿಯಲ್ಲಿ ಬಿಜೆಪಿ ಅಭ್ಯರ್ಥಿ ಗಿರೀಶ ವಿಜಯಕುಮಾರ ಬಿರಾದಾರ (ಪಾಟೀಲ) 2754 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಭಾಗಪ್ಪ (ಬಾಬು) ಏಳಗಂಟಿ ಅವರು 1762 ಮತಗಳನ್ನು ಪಡೆದು ಪರಾಭವಗೊಂಡರು. ನ. 23 ರಂದು ವಿಜಯಪುರ ಮಹಾನಗರ ಪಾಲಿಕೆ ವಾರ್ಡ್ ನಂ.29 ಕ್ಕೆ ನಡೆದ ಉಪಚುನಾವಣೆಯಲ್ಲಿ ಒಟ್ಟು 9861 ಮತದಾರರ ಪೈಕಿ 4554 ಮತ ಚಲಾವಣೆಯಾಗುವ ಮೂಲಕ ಒಟ್ಟಾರೆ ಶೇ 46.18 ಮತದಾನವಾಗಿತ್ತು. ಈ ಪೈಕಿ ಅಂತಿಮ ಕಣದಲ್ಲಿ ಇಬ್ಬರೇ ಅಭ್ಯರ್ಥಿಗಳು ಉಳಿದು ವಿಜೇತ ಬಿಜೆಪಿ ಅಭ್ಯರ್ಥಿ ಗಿರೀಶ ಪಾಟೀಲ 2754 ಮತಗಳನ್ನು ಪಡೆದರೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಭಾಗಪ್ಪ (ಬಾಬು) ಏಳಗಂಟಿ 1762 ಮತಗಳನ್ನು ಪಡೆದರು. 38 ನೋಟಾ ಮತಗಳಾಗಿದ್ದವು.
ಸ್ವತಃ ಶಾಸಕ ಯತ್ನಾಳರಿಂದಲೆ ನಡೆದಿದ್ದ ಪ್ರಚಾರ!
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಹಾಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಈ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ, ಪ್ರಚಾರ ನಡೆಸಿತ್ತು. ಸಚಿವ ಎಂ.ಬಿ.ಪಾಟೀಲರು ಹೆಚ್ಚಿನ ಮುತುವರ್ಜಿ ವಹಿಸಿ, ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ತಂತ್ರ ರೂಪಿಸಿದ್ದರು. ಇತ್ತ ಬಿಜೆಪಿ ಅಭ್ಯರ್ಥಿಯ ಪರವಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೇ ಎರಡು ದಿನಗಳ ಕಾಲ ಪ್ರಚಾರ ನಡೆಸಿದ್ದರು. ವಾರ್ಡ್ ಅನ್ನು ವಶಕ್ಕೆ ಪಡೆದು ಪಾಲಿಕೆಯಲ್ಲಿ ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಉಭಯ ಪಕ್ಷಗಳು ಸಮಬಲದ ಹೋರಾಟ ನಡೆಸಿದ್ದವು.
ಮೇಯರ್, ಉಪಮೇಯರ್ ಎಲೆಕ್ಷನ್‌ಗು ಸದ್ದಿಲ್ಲದೆ ತಯಾರಿ!
ವಿಜಯಪುರ ಮಹಾನಗರ ಪಾಲಿಕೆ 35 ಸ್ಥಾನಗಳ ಪೈಕಿ ಸದ್ಯ ಬಿಜೆಪಿ 17, ಕಾಂಗ್ರೆಸ್ 10, ಜೆಡಿಎಸ್ 1, ಎಐಎಂಐಎಂ 2 ಹಾಗೂ ಪಕ್ಷೇತರ 5 ಸದಸ್ಯರಿದ್ದಾರೆ. ಸದ್ಯ ಕಾಂಗ್ರೆಸ್ ಅಧಿಕಾರದ ಗದ್ದುಗೆಯಲ್ಲಿ ಇದೆ. ಜನವರಿಯಲ್ಲಿ ಹಾಲಿ ಮೇಯರ್, ಉಪ ಮೇಯರ್ ಅವಧಿ ಮುಗಿಯಲ್ಲಿದ್ದು, ಮುಂದಿನ ಅವಧಿಗೆ ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ, ಕಾಂಗ್ರೆಸ್ ನಡುವೆ ಈಗಾಗಲೇ ತೆರೆಮರೆಯಲ್ಲಿ ಪ್ರಯತ್ನ ಆರಂಭವಾಗಿದೆ.
ಬಿಜೆಪಿ ಅಭ್ಯರ್ಥಿ ಗೆಲುವು; ವಿಜಯೋತ್ಸವ!
ಮಹಾನಗರ ಪಾಲಿಕೆ ವಾರ್ಡ್ ನಂ.29ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಿರೀಶ ಪಾಟೀಲ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಪ್ಲಾನಿಂಗ್ ಇಲ್ಲದೇ ಸರ್ಕಾರಿ ಕಟ್ಟಡ, ಶಾಲೆ ನಿರ್ಮಾಣ; ಸರ್ಕಾರದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಿಡಿಶಾಪ!
ಫಲಿತಾಂಶ ಹೊರ ಬಿಳುತ್ತಿದ್ದಂತೆ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು,. ನಂತರ ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ, ವಾರ್ಡ್ ನಂ.29 ಬಡಾವಣೆ/ಕಾಲೊನಿಗಳಲ್ಲಿ ಸಂಚರಿಸಿ ಮತದಾರರಿಗೆ ಅಭಿನಂದನೆ ಸಲ್ಲಿಸಲಾಯಿತು. ನಂತರ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು. ಭಾರತ್ ಮಾತಾ ಕೀ ಜೈ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರ ಪರ ಜಯಘೋಷ ಮೊಳಗಿಸಿದರು