Deepavali| ಪಟಾಕಿ ಬೆಲೆ ಭಾರೀ ಏರಿಕೆ, ಜನರ ಕಿಸೆಗೆ ಬೆಂಕಿ..!

Kannadaprabha News   | Asianet News
Published : Nov 04, 2021, 08:23 AM IST
Deepavali| ಪಟಾಕಿ ಬೆಲೆ ಭಾರೀ ಏರಿಕೆ, ಜನರ ಕಿಸೆಗೆ ಬೆಂಕಿ..!

ಸಾರಾಂಶ

*  ಪಟಾಕಿ ವ್ಯಾಪಾರಕ್ಕೂ ತಟ್ಟಿದ ಬೆಲೆ ಹೆಚ್ಚಳ ಬಿಸಿ  *  ಕಚ್ಚಾವಸ್ತು ಪೂರೈಕೆ ಕುಸಿತ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ *  ಪರಿಸರ ಕಾಳಜಿ ಕುರಿತ ಜಾಗೃತಿಯಿಂದಲೂ ಎಚ್ಚೆತ್ತ ಮಂದಿ, ಪಟಾಕಿ ಖರೀದಿಗೆ ಹಿಂದೇಟು  

ಬೆಂಗಳೂರು(ನ.04):  ಕಚ್ಚಾ ವಸ್ತುಗಳ ಕೊರತೆಯಿಂದ ಕುಸಿದ ಉತ್ಪಾದನೆ ಪ್ರಮಾಣ, ಇಂಧನ(Fuel) ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಯಲ್ಲಿ(Deepavali) ಪಟಾಕಿ ಬೆಲೆಯಲ್ಲಿ ಶೇ.30ರ ವರೆಗೆ ಹೆಚ್ಚಳವಾಗಿದೆ. ಹೀಗಾಗಿ ಖರೀದಿಯ ಪ್ರಮಾಣವೂ ಕಡಿಮೆಯಾಗಿದೆ.

ಪಟಾಕಿ(Fireworks) ತಯಾರಿಕೆಗೆ ಬೇಕಾದ ಅಗತ್ಯ ಕಚ್ಚಾ ವಸ್ತುಗಳಾದ(Raw Material) ಸೀಸ, ಕಾರ್ಬನ್‌ ಡೈ ಆಕ್ಸೈಡ್‌, ಕ್ರೋಮಿಯಂ ಮತ್ತು ನೈಟ್ರೈಡ್‌ ಆಕ್ಸೈಡ್‌ಗೆ ವಿದೇಶಗಳನ್ನು(Foreign) ಅವಲಂಬಿಸಲಾಗಿದೆ. ಆದರೆ, ಕೊರೋನಾ(Coronavirus) ಕಾರಣದಿಂದ ಅಂತಾರಾಷ್ಟ್ರೀಯ ವ್ಯಾಪಾರಕ್ಕೂ(International Trade) ಅಡ್ಡಿಯಾಗಿರುವುದರಿಂದ ಕಚ್ಚಾವಸ್ತುಗಳ ಕೊರತೆ ಉಂಟಾಗಿ ಉತ್ಪಾದನೆಯಲ್ಲಿ(Production) ಕುಸಿತವಾಗಿದೆ. ಹೀಗಾಗಿ ನಿರೀಕ್ಷಿತ ಪ್ರಮಾಣದ ಪಟಾಕಿ ಮಾರುಕಟ್ಟೆಗೆ(Market)ಬಂದಿಲ್ಲ. ಇದರ ಪರಿಣಾಮ ಪಟಾಕಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.30ರಷ್ಟು ಹೆಚ್ಚಳವಾಗಿದೆ ಎಂದು ವರ್ತಕರು(Traders) ಹೇಳುತ್ತಾರೆ.

Diwali: ಪಟಾಕಿ ನಿಷೇಧ ಮಾಡಿ ಅನ್ನೋರು ನಡ್ಕೊಂಡೇ ಆಫೀಸ್‌ಗೆ ಹೋಗಿ, ಕಾರ್ ತಗೋಬೇಡಿ ಎಂದ ಕಂಗನಾ

ಶೇ.50ರಷ್ಟು ವ್ಯಾಪಾರ ಕುಸಿತ:

ಕೋವಿಡ್‌ ಕಾರಣದಿಂದ ಜನರು ಇನ್ನೂ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಪಟಾಕಿ ಖರೀದಿಗೆ ಬರುವವರ ಸಂಖ್ಯೆ ಕಡಿಮೆಯಾಗಿದ್ದು, ಶೇ.50ರಷ್ಟುವ್ಯಾಪಾರ ಕುಸಿದಿದೆ. ಜೊತೆಗೆ ಪ್ರಸಕ್ತ ವರ್ಷ ಕಡ್ಡಾಯವಾಗಿ ಶೇ.18ರಷ್ಟು ಜಿಎಸ್‌ಟಿ(GST) ಪಾವತಿ ಮಾಡಬೇಕಾಗಿದೆ. ಈ ಮೊತ್ತ ಗ್ರಾಹಕರಿಗೆ(Customers) ದೊಡ್ಡದಾಗಿ ಕಾಣಿಸುತ್ತಿದ್ದು, ವ್ಯಾಪಾರಕ್ಕೆ(Business) ಮುಂದಾಗುತ್ತಿಲ್ಲ ಎಂದು ಯಲಹಂಕದ ಪಟಾಕಿ ವ್ಯಾಪಾರಿ ಮುರಳಿ ತಿಳಿಸಿದ್ದಾರೆ.

ಜಾಗೃತಿಯಿಂದ ಎಚ್ಚೆತ್ತ ಜನತೆ:

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(Environmental Pollution Control Board) ಮತ್ತು ಮಾಧ್ಯಮಗಳು(Media) ಪಟಾಕಿಯಿಂದಾಗುವ ವಿವಿಧ ರೀತಿಯ ಹಾನಿಯ ಬಗ್ಗೆ ಸತತ ಜಾಗೃತಿ(Awareness) ಮೂಡಿಸುವ ಕೆಲಸ ನಡೆಸುತ್ತಿವೆ. ಪಟಾಕಿ ಬಳಕೆಯಿಂದ ಹೊರಹೊಮ್ಮುವ ಹೊಗೆಯಿಂದ ಶ್ವಾಸಕೋಶಕ್ಕೆ ಹೆಚ್ಚು ಹಾನಿಯಾಗಲಿದೆ. ಅದರಲ್ಲೂ ಕೊರೋನಾ ಸೋಂಕು ತಗುಲಿ ಗುಣಮುಖರಾದವರ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ ಜನತೆಯಲ್ಲಿ ಪರಿಸರ(Environment) ಸಂರಕ್ಷಣೆಗೆ ಕಾಳಜಿ ಬಂದಿದೆ. ಆದ್ದರಿಂದ ಪಟಾಕಿ ಹೊಡೆಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಇದು ಪಟಾಕಿ ಮಾರಾಟಗಾರರಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಸುವರ್ಣ ಕರ್ನಾಟಕ ಕ್ರಾಕ​ರ್ಸ್‌ ಅಸೋಸಿಯೇಷನ್‌ನ ಖಜಾಂಜಿ ಸಿ.ಮಂಜುನಾಥ್‌ ಅಭಿಪ್ರಾಯ ಪಟ್ಟಿದ್ದಾರೆ.

Diwali: ಪಟಾಕಿಯಿಂದ ಗಾಯಗೊಂಡರೆ ಈ ಮನೆ ಮದ್ದು ತಕ್ಷಣವೇ ಮಾಡಿ

ದೊಡ್ಡ ಪ್ರಮಾಣದ ನಷ್ಟ

ಸುಪ್ರೀಂಕೋರ್ಟ್‌(Supreme Court) ಆದೇಶದಿಂದ 2018ರಿಂದ ಸಂಪೂರ್ಣವಾಗಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯ ಪಟಾಕಿಗಿಂತ ಹಸಿರು ಪಟಾಕಿ ಶೇ.20ರಷ್ಟು ಬೆಲೆ ಹೆಚ್ಚು. ಅಲ್ಲದೆ, ಸಾಮಾನ್ಯ ಪಟಾಕಿಯನ್ನು ಮೂರು ವರ್ಷಗಳ ಕಾಲ ಸಂಗ್ರಹಿಸಿ ಬಳಕೆ ಮಾಡಬಹುದಾಗಿತ್ತು. ಆದರೆ, ಹಸಿರು ಪಟಾಕಿಯನ್ನು(Green Fireworks) ಮೂರು ತಿಂಗಳಿಗೂ ಹೆಚ್ಚು ಕಾಲ ಸಂಗ್ರಹ ಮಾಡಲು ಅವಕಾಶವಿಲ್ಲ. ವ್ಯಾಪಾರವೂ ನಡೆಯುತ್ತಿಲ್ಲ. ಇದರಿಂದ ಪಟಾಕಿ ವ್ಯಾಪಾರಿಗಳು ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಮಂಜುನಾಥ್‌ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊರೋನಾದಿಂದ ಪಟಾಕಿ ವ್ಯಾಪಾರ ಸಂಪೂರ್ಣ ಕುಸಿದಿತ್ತು. ಈ ವರ್ಷ ಕೊರೋನಾ ಹಾವಳಿ ಇಲ್ಲದಿದ್ದರೂ, ಬೆಲೆ ಏರಿಕೆಯಿಂದಾಗಿ ಪಟಾಕಿ ಖರೀದಿಗೆ ಜನ ಮುಂದಾಗುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಶೇ.50ಕ್ಕಿಂತ ಕಡಿಮೆ ವ್ಯಾಪಾರ ಆಗುತ್ತಿದ್ದು. ಹಾಕಿದ ಬಂಡವಾಳ(Investment) ವಾಪಸ್‌ ಪಡೆಯಲು ಆಗುತ್ತಿಲ್ಲ ಅಂತ ಸುವರ್ಣ ಕರ್ನಾಟಕ ಕ್ರಾಕ​ರ್ಸ್‌ ಆಸೋಸಿಯೇಷನ್‌ನ ಖಜಾಂಜಿ ಸಿ. ಮಂಜುನಾಥ್‌ ತಿಳಿಸಿದ್ದಾರೆ.   

PREV
Read more Articles on
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!