ಯತ್ನಾಳ್‌ಗೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಅಸಮಾಧಾನ ಇದ್ದರೆ, ನಾಲ್ಕು ಗೋಡೆ ಮಧ್ಯೆ ಚರ್ಚಿಸಲಿ. ಮಾಧ್ಯಮದಲ್ಲಿ ಬರಬೇಕೆಂಬ ಹುಚ್ಚಿನಿಂದ ಪಕ್ಷದ ವರಿಷ್ಠರ ವಿರುದ್ಧ ಮಾತನಾಡುವುದರಿಂದ ಪಕ್ಷದ ನಾಯಕರನ್ನು ಬಯ್ಯುವುದರಿಂದ ಇಮೇಜ್ ಬರಲ್ಲ: ಮಾಜಿ ಸಚಿವ ಬಿ.ಸಿ.ಪಾಟೀಲ್
ಮೈಸೂರು(ಡಿ.01): ಪಕ್ಷದಲ್ಲಿ ಕೆಲವು ಆಂತರಿಕ ದುಷ್ಟಶಕ್ತಿಗಳಿದ್ದು, ಅವುಗಳು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿವೆ. ಶೀಘ್ರದಲ್ಲೇ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಆಗಲಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಮತ್ತು ಅವರ ಗುಂಪಿನಿಂದ ಬಿಜೆಪಿ ಕಾರ್ಯಕರ್ತರಿಗೆ ಬೇಸರವಾಗಿದೆ. ಅದಕ್ಕಾಗಿ ಪಕ್ಷದಿಂದ ನಾವೆಲ್ಲ ಒಟ್ಟಿಗೆ ಸೇರಿ ಸ್ಪಷ್ಟ ಸಂದೇಶ ರವಾನೆ ಮಾಡುತ್ತಿದ್ದೇವೆ ಎಂದರು.
ಯತ್ನಾಳ್‌ಗೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಅಸಮಾಧಾನ ಇದ್ದರೆ, ನಾಲ್ಕು ಗೋಡೆ ಮಧ್ಯೆ ಚರ್ಚಿಸಲಿ. ಮಾಧ್ಯಮದಲ್ಲಿ ಬರಬೇಕೆಂಬ ಹುಚ್ಚಿನಿಂದ ಪಕ್ಷದ ವರಿಷ್ಠರ ವಿರುದ್ಧ ಮಾತನಾಡುವುದರಿಂದ ಪಕ್ಷದ ನಾಯಕರನ್ನು ಬಯ್ಯುವುದರಿಂದ ಇಮೇಜ್ ಬರಲ್ಲ ಎಂದರು.
ಶಿಗ್ಗಾಂವಿ ಸೋಲಿಗೆ ಬಸನಗೌಡ ಪಾಟೀಲ್ ಯತ್ನಾಳ್ ಕಾರಣ: ಮಾಜಿ ಸಚಿವ ರೇಣುಕಾಚಾರ್ಯ
ಯತ್ನಾಳ್ ಅವರಿಗೆ ಪಕ್ಷಕ್ಕೆ ಡ್ಯಾಮೇಜ್ ಮಾಡುವ ಉದ್ದೇಶವಿದೆ. ಮುಡಾದ ಬಗ್ಗೆ ಹೋರಾಟ ಮಾಡದೆ ಇರುವವರು ವಕ್ಫ್ ಬಗ್ಗೆ ಮಾತನಾಡುತ್ತಾರೆ. ಯತ್ನಾಳ್ ಹಾಗೂ ಅವರ ಸಂಗಡಿಗರ ಹೋರಾಟಕ್ಕೆ ಪಕ್ಷದ ಬೆಂಬಲ ಇಲ್ಲ ಎಂದರು.
ಯತ್ನಾಳ್ ಬಸವಣ್ಣನ ಬಗ್ಗೆ ಮಾತನಾಡುವಂತಹ ಕೀಳುಮಟ್ಟಕ್ಕೆ ಹೋಗಿದ್ದಾರೆಂದರೆ ನಾಚಿಕೆಗೇಡು. ಬಸವಣ್ಣ ಒಂದು ಸಮಾಜಕ್ಕೆ ಸೀಮಿತವಾದವರಲ್ಲ ಯತ್ನಾಳ್ ಅವರ ಉಚ್ಚಾಟನೆ ಶೀಘ್ರದಲ್ಲೇ ಆಗಲಿದೆ. ಹೊರಗಿನವರಾಗಿದ್ದರೆ ಶೀಘ್ರ ಕ್ರಮ ಆಗುತ್ತಿತ್ತು. ಆದರೆ, ಅವರು ಹಿರಿಯರು ತಿದ್ದುಕೊಳ್ಳಲಿ ಅಂತ ಬಿಟ್ಟಿದ್ದಾರೆ ಎಂದರು.
ಹಿರಿಯರಾದ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಬಸವಣ್ಣನವರ ಬಗ್ಗೆ ಮಾತನಾಡಿದವರು ಯಡಿಯೂರಪ್ಪನವರ ಬಗ್ಗೆ ಮಾತನಾಡುವುದಿಲ್ಲವೇ. ಅವರಿಗೆ ಇತ್ತೀಚೆಗೆ ತಲೆ ಸರಿ ಇಲ್ಲ ಅನಿಸುತ್ತದೆ ಎಂದು ಕಿಡಿಕಾರಿದರು.
ಯತ್ನಾಳ್ ಯಾತ್ರೆಯಲ್ಲಿ ಯಾವ ಕಾರ್ಯಕರ್ತನು ಭಾಗವಹಿಸುತ್ತಿಲ್ಲ. ಒಬ್ಬರೇ ಏನೇನೊ ಮಾತನಾಡಿ ಕೊಂಡು ಓಡಾಡುತ್ತಿದ್ದಾರೆ. ಎಲ್ಲದಕ್ಕೂ ಕಾಲ ಬರುತ್ತಿದೆ ಇರಿ. ನಮ್ಮ ಪಕ್ಷದಲ್ಲಿ ಶಿಸ್ತು ಇದೆ. ಗಟ್ಟಿತನವೂ ಇದೆ. ಅಣ್ಣ ತಮ್ಮಂದಿರ ಜಗಳದಲ್ಲಿ ಒಂದೇ ಭಾರಿ ಕಠಿಣ ನಿರ್ಧಾರ ಮಾಡಲು ಆಗುವುದಿಲ್ಲ. ಇದು ಕೂಡ ಅಷ್ಟೇ ಎಂದರು.
ಯತ್ನಾಳ್ ಬೆಂಬಲಿಗರೇ ಇಲ್ಲದ ಒಬ್ಬ ನಾಯಕ. ಕಾಂಗ್ರೆಸ್ ಬೈದರೇ ಪ್ರಚಾರ ಸಿಗುವುದಿಲ್ಲ ಎಂದು ಯಡಿಯೂರಪ್ಪ, ಅವರ ಮಗನನ್ನು ಬೈಯುತ್ತಿದ್ದಾರೆ. ಬೈಯ್ದುಕೊಂಡು ನಾನು ನಾಯಕ ಆಗುತ್ತೇನೆ ಅಂದುಕೊಂಡಿದ್ದಾರೆ. ಬಿಜೆಪಿ ಹೈಕಮಾಂಡ್ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದೆ. ನಮ್ಮ ಪಕ್ಷದಲ್ಲಿ ಹಾರಾಡಿದವರು, ಬಿಗಿದವರು, ಕುಣಿದವರು ಬಹಳ ಬೇಗ ಮುಗಿದು ಹೋಗಿದ್ದಾರೆ. ಬಹಳಷ್ಟು ಜನ ಠೇವಣಿಯೇ ಕಳೆದುಕೊಂಡು ಮನೆ ಸೇರಿದ್ದಾರೆ. ಇವರ ಕಥೆಯೂ ಅಷ್ಟೇ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಯತ್ನಾಳ್ ಉಚ್ಚಾಟನೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರ ಗದ್ದಲ
ಮೈಸೂರು: ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಗದ್ದಲ ಎಬ್ಬಿಸಿದ ಪ್ರಸಂಗ ಮೈಸೂರಿನಲ್ಲಿ ಶನಿವಾರ ಜರುಗಿತು.
ಮಾಜಿ ಸಚಿವರಾದ ರೇಣುಕಾಚಾರ್ಯ, ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಬಿಜೆಪಿಯ 20ಕ್ಕೂ ಹೆಚ್ಚು ಮಾಜಿ ಶಾಸಕರು, ಸಚಿವರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯ ಕರ್ತರು ಯತ್ನಾಳ್ ಉಚ್ಚಾಟನೆ ಮಾಡುವಂತೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಸಂಘರ್ಷ ದಿಲ್ಲಿಗೆ: ವಿಜಯೇಂದ್ರ, ಯತ್ನಾಳ್ ಜಗಳದ ವಿರುದ್ಧ ಅಮಿತ್ ಶಾಗೆ ದೂರು
ಯತ್ನಾಳ್ ಅವರು ಕೆಲವು ವರ್ಷಗಳಿಂದ ಅನಗತ್ಯವಾಗಿ ಪಕ್ಷದ ವರಿಷ್ಠರು, ರಾಜ್ಯಾಧ್ಯ ಕ್ಷರು ಹಾಗೂ ಬಿ.ಎಸ್.ಯಡಿಯೂರಪ್ಪ ವಿರುದ್ದ ಬಾಯಿಗೆ ಬಂದಂತೆ ಮಾತನಾಡುತ್ತಿ ದ್ದಾರೆ. ಅವರ ಈ ನಡೆಯಿಂದ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆಗುತ್ತಿದೆ. ಬೇರೆ ಪಕ್ಷದವರೊಂ ದಿಗೆ ಮುಖಕೊಟ್ಟು ಮಾತನಾಡಲಾಗುತ್ತಿಲ್ಲ. ಯತ್ನಾಳ್ ಅವರು ಪಕ್ಷಕ್ಕಿಂತ ದೊಡ್ಡವರಲ್ಲ. ಕೂಡಲೇ ಅವರ ವಿರುದ್ಧ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮುಖಂಡರು, ಕಾರ್ಯಕರ್ತರನ್ನು ಸಮಾಧಾನಪಡಿಸಿ, ಶೀಘ್ರದಲ್ಲೇ ಯತ್ನಾಳ್ ವಿರುದ್ಧ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು. ನಂತರವಷ್ಟೇ ಸುಮ್ಮನಾದರು.