ಮಂಗ್ಳೂರಿನಲ್ಲಿದ್ದುಕೊಂಡೇ ಗಡಿಯಲ್ಲಿರೋ ಸೈನಿಕರ ಜೀವವುಳಿಸುವ ಕಾರ್ಯ..!

By Kannadaprabha NewsFirst Published Jun 3, 2020, 3:23 PM IST
Highlights

ಹಠಾತ್ತನೆ ಬಂದೆರಗಿ ಪ್ರಾಣಕ್ಕೆ ಅಪಾಯ ತರುವ ಹೃದಯ ಸಂಬಂಧಿ ತೊಂದರೆಗಳಿಗೆ ದೇಶದ ಮಿಲಿಟರಿಯಲ್ಲೂ ಈಗ ಕ್ಷಣಮಾತ್ರದಲ್ಲಿ ವೇಗದ ಸ್ಪಂದನ ಸಿಗುವಂತಾಗಿದೆ.

ಮಂಗಳೂರು(ಜೂ. 03): ಹಠಾತ್ತನೆ ಬಂದೆರಗಿ ಪ್ರಾಾಣಕ್ಕೆ ಅಪಾಯ ತರುವ ಹೃದಯ ಸಂಬಂಧಿ ತೊಂದರೆಗಳಿಗೆ ದೇಶದ ಮಿಲಿಟರಿಯಲ್ಲೂ ಈಗ ಕ್ಷಣಮಾತ್ರದಲ್ಲಿ ವೇಗದ ಸ್ಪಂದನೆ ಸಿಗುವಂತಾಗಿದೆ.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರು ಇದಕ್ಕೆಂದೇ ‘ಕ್ಯಾಡ್ ಜೈ ಜವಾನ್’ ಹೆಸರಿನಲ್ಲಿ ಪ್ರತ್ಯೇಕ ವಾಟ್ಸಾಆ್ಯಪ್ ಗ್ರೂಪ್ ರಚಿಸಿ ಸೈನಿಕರ ಜೀವ ಉಳಿಸುವಲ್ಲಿ ಅಳಿಲು ಸೇವೆ ಮಾಡುತ್ತಿದ್ದಾರೆ.

ಪುಲ್ವಾಮಾ ಎನ್‌ಕೌಂಟರ್: ಮೂವರು ಉಗ್ರರ ಹತ್ಯೆ, ಇಂಟರ್ನೆಟ್ ಸ್ಥಗಿತ

ಸದ್ಯಕ್ಕೆ ಈ ಗುಂಪಿನಲ್ಲಿ  ದೇಶದ 257 ಆರ್ಮಿ ಆಸ್ಪತ್ರೆ, ಬೇಸ್ ಆಸ್ಪತ್ರೆ ಹಾಗೂ ಬೆಟಾಲಿಯನ್ ಆಸ್ಪತ್ರೆಗಳ ವೈದ್ಯರುಗಳಿದ್ದಾರೆ. ಸೈನಿಕರ ಹೃದಯದ ಇಸಿಜಿ ಸೇರಿದಂತೆ ಹೃದಯ ಸಂಬಂಧಿಸಿ ಕಾಯಿಲೆಗಳ ಬಗ್ಗೆ ಈ ಮಿಲಿಟರಿ ಆಸ್ಪತ್ರೆಗಳ ವೈದ್ಯರು ಡಾ.ಪದ್ಮನಾಭ ಕಾಮತ್ ಅವರ ಜೊತೆ ಸಮಾಲೋಚನೆ ನಡೆಸುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ದೇಶದ ಅತಿ ದುರ್ಗಮ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಮಿಲಿಟರಿ ಶಕ್ತಿಗಳಿಗೆ ಈ ಆ್ಯಪ್‌ನ ವೈದ್ಯಕೀಯ ಸಲಹೆ ನೆರವಾಗುತ್ತಿದೆ.

ಮುಖ್ಯವಾಗಿ ಇಸಿಜಿ ವರದಿಗೆ ಸಂಬಂಧಿಸಿ ಮಿಲಿಟರಿ ವೈದ್ಯರು ಮಾತ್ರವಲ್ಲ ತಜ್ಞರ ನೆಲೆಯಲ್ಲಿ ಡಾ.ಪದ್ಮನಾಭ ಕಾಮತ್ ಅವರ ಸಲಹೆಯೂ ಉಪಯುಕ್ತವಾಗುತ್ತಿದೆ.  
ಕಳೆದ ಮೂರು ತಿಂಗಳಿಂದ ಮಿಲಿಟರಿ ವೈದ್ಯಕೀಯ ತಜ್ಞರು ಇರುವ ಈ ವಾಟ್ಸ್‌ಆ್ಯಪ್ ಗುಂಪು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಮಿಲಿಟರಿ ವಿಚಾರವಾದ್ದರಿಂದ ಯಾವ ಸೈನಿಕರಿಗೆ ತೊಂದರೆಯಾಗಿದೆ, ಅವರು ಯಾರು ಎಂಬ ಮಾಹಿತಿ ಗೌಪ್ಯವಾಗಿರುತ್ತದೆ.

ಪುಟ್ಟ ಮನೆಯ ಸುತ್ತಲೂ ಚಂದದ ಗಾರ್ಡನ್, ಪಕ್ಷಿಗಳ ಚಿಲಿಪಿಲಿ, ಇಲ್ಲಿವೆ ಫೋಟೋಸ್

ಈ ಮಾಹಿತಿ ಡಾ.ಕಾಮತ್‌ರಿಗೂ ತಿಳಿದಿರುವುದಿಲ್ಲ. ಕೇವಲ ಕೋಡ್ ಆಧಾರದಲ್ಲಿ ಇಸಿಜಿ ಪೋಸ್‌ಟ್‌ ಮಾಡಿ ಡಾ.ಪದ್ಮನಾಭ ಕಾಮತ್ ಅವರ ತಜ್ಞ ಸಲಹೆಯನ್ನು ಮಿಲಿಟರಿ ವೈದ್ಯರು ಪಡೆಯುತ್ತಾಾರೆ. ಇಲ್ಲಿ ಮಿಲಿಟರಿ ಆಸ್ಪತ್ರೆೆ ಅಥವಾ ವೈದ್ಯರ ವಿವರವನ್ನೂ ಡಾ.ಕಾಮತ್ ಕೇಳುವುದಿಲ್ಲ, ಮಾತ್ರವಲ್ಲ ಬಹಿರಂಗಪಡಿಸುವಂತಿಲ್ಲ. 
ಇದುವರೆಗೆ ಈ ಗುಂಪಿನಿಂದಾಗಿ ವೈದ್ಯಕೀಯ ವಿಚಾರ ವಿನಿಮಯ ನಡೆದು, ಏರ್ ಆ್ಯಂಬುಲೆನ್‌ಸ್‌ ಮೂಲಕ ಹೃದಯ ತೊಂದರೆ ಇರುವ ಸೈನಿಕರನ್ನು ತಕ್ಷಣ ಸೈನಿಕ ಆಸ್ಪತ್ರೆಗೆ ರವಾನಿಸಲು ಸಾಧ್ಯವಾಗಿದೆ.

ದೇಶಾದ್ಯಂತ ಎಲ್ಲ ಕಡೆಗಳಲ್ಲೂ ಮಿಲಿಟರಿ ಆಸ್ಪತ್ರೆೆಗಳಿವೆ. ಆದರೆ ಎಲ್ಲ ಆಸ್ಪತ್ರೆಗಳಲ್ಲಿ ಹೃದ್ರೋಗ ತಜ್ಞರು ಇರುವುದಿಲ್ಲ. ಹಾಗಾಗಿ ಸೈನಿಕರೊಬ್ಬರಿಗೆ ಹೃದಯ ಸಂಬಂಧಿಸಿ ತೊಂದರೆ ಕಾಣಿಸಿದಾಗ ಕ್ಷಣಮಾತ್ರದಲ್ಲಿ ಇಸಿಜಿ ನೋಡಿ ಚಿಕಿತ್ಸೆೆಗೆ ಮಾರ್ಗದರ್ಶನ ಮಾಡಲು ಸಾಧ್ಯವಾಗುತ್ತದೆ. ಇದು ಹೃದೋಗಿಗಳ ಜೀವ ಉಳಿಸುವಲ್ಲಿ ಸುಲಭವಾಗುತ್ತದೆ. ಮಧ್ಯರಾತ್ರಿ ಕೂಡ ಕರೆ ಬಂದು ಸೈನಿಕರ ಜೀವ ಉಳಿಸಲು ನೆರವಾಗಿರುವುದು ಧನ್ಯತೆ ತಂದಿದೆ ಎನ್ನುತ್ತಾರೆ ಡಾ.ಪದ್ಮನಾಭ ಕಾಮತ್ .

ಸುಮಾರು 200ಕ್ಕಿಂತಲೂ ಅಧಿಕ ಸೈನಿಕರಿಗೆ ಆಪತ್ಕಾಲದಲ್ಲಿ ನೆರವಾಗಲು ಸಾಧ್ಯವಾಗಿರುವ ಬಗ್ಗೆ ಆತ್ಮತೃಪ್ತಿ ವ್ಯಕ್ತಪಡಿಸುತ್ತಾರೆ ಡಾ.ಪದ್ಮನಾಭ ಕಾಮತ್. ಇವರ ಕ್ಷಿಪ್ರ ಸ್ಪಂದನ ಹಾಗೂ ಸೈನಿಕರ ಜೀವರಕ್ಷಣೆಯ ವಿಧಾನಕ್ಕೆ ಕಾಶ್ಮೀರಿ ಸೈನ್ಯದ ಓರ್ವ ಕ್ಯಾಪ್ಟನ್ ಪ್ರಶಂಸೆ ವ್ಯಕ್ತಪಡಿಸಿ ಪತ್ರ ರವಾನಿಸಿದ್ದಾರೆ.

3 ದಿನದ ಹಿಂದೆ ಮೃತಪಟ್ಟ ವ್ಯಕ್ತಿಗೆ ಕೊರೋನಾ ಫಾಸಿಟಿವ್..!

ಪುಣೆಯ ಮಿಲಿಟರಿ ಆಸ್ಪತ್ರೆಗೆ ಪರೀಕ್ಷಾ ಮೇಲ್ವಿಚಾರಕರಾಗಿ ಹೋಗುತ್ತಿದ್ದ ಡಾ.ಪದ್ಮನಾಭ ಕಾಮತ್ ಅವರಿಗೆ ಸೇನೆಯ ವೈದ್ಯರ ಪರಿಚಯವಾಗಿ ಈಗ ವೈದ್ಯ ಸಹಪಾಠಿಗಳಿಂದಾಗಿ ಮಿಲಿಟರಿ ಆಸ್ಪತ್ರೆಗಳ ವೈದ್ಯರ ಸಂಪರ್ಕಕ್ಕೆ ಬರುವಂತಾಗಿದೆ ಎನ್ನುತ್ತಾರೆ.

ದೇಶದ ಓರ್ವ ಸಾಮಾನ್ಯ ನಾಗರಿಕನಾಗಿ ಸೇವಾ ತತ್ಪರ ಸೇನಾ ಜವಾನರ ಸೇವೆ ಮಾಡುವ ಅವಕಾಶ ಸಿಕ್ಕಿಿದ್ದು ನನ್ನ ಸೌಭಾಗ್ಯ. ಮುಂದೆ ನೌಕಾ ಸೇನೆ ಹಾಗೂ ವಾಯುಸೇನೆ ಆಸ್ಪತ್ರೆಗಳಿಗೂ ಇದೇ ರೀತಿ ಆ್ಯಪ್ ಮೂಲಕ ಹೃದಯ ಸಂಬಂಧಿಸಿ ಚಿಕಿತ್ಸೆಗೆ ನೆರವಾಗುವ ಆಲೋಚನೆ ಇದೆ ಎಂದು ಮಂಗಳೂರು ಕೆಎಂಸಿಯ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಹೆಳುತ್ತಾರೆ.

-ಆತ್ಮಭೂಷಣ್

click me!