ಯುಗಾದಿ ಹಬ್ಬವನ್ನು ರಾಜ್ಯದಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ. ಇಂದು ಹೊಸತಡಕು ಹಬ್ಬದ ಹಿನ್ನಲೆಯಲ್ಲಿ ಮಾಂಸದ ಅಂಗಡಿಗಳ ಮುಂದೆ ಮಾಂಸಪ್ರಿಯರು ಕ್ಯೂನಿಂತು ಖರೀದಿಸುತ್ತಿದ್ದಾರೆ. ಬೆಂಗಲೂರಿನ ಬಹುತೇಕ ಮಾಂಸದ ಅಂಗಡಿಗಳ ಮುಂದೆ ಬೆಳಗ್ಗೆ 4 ಗಂಟೆಯಿಂದಲೇ ಜನ ಸೇರಿದ್ದಾರೆ. ಜನಪ್ರಿಯ ಬ್ಯಾಟರಾಯನಪುರ ಪಾಪಣ್ಣ ಮಟನ್ ಸ್ಟಾಲ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಮತ್ತೊಂದೆಡೆ ದಾವಣೆಗರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆ ಕಾವು ಏರತೊಡಗಿದೆ. ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಕಸರತ್ತು ತೀವ್ರಗೊಂಡಿದೆ. ಇಂದಿನ ಕ್ಷಣ ಕ್ಷಣದ ಲೈವ್ ಅಪ್‌ಡೇಟ್ ಇಲ್ಲಿದೆ.

10:45 PM (IST) Mar 20
ಬಿಜೆಪಿಯಿಂದ ಟಿಕೆಟ್ ಘೋಷಣೆಯಾಗಿದೆ. ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
09:44 PM (IST) Mar 20
09:31 PM (IST) Mar 20
Karnataka hailstorm truth: ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಆಲಿಕಲ್ಲು ಮಳೆ ಆಯ್ತು. ಇದಕ್ಕೆ ಬಿಲ್‌ಗೇಟ್ಸ್ ಕಾರಣ ಎಂಬ ಪೋಸ್ಟ್ ವೈರಲ್ ಆಯ್ತು. ಈ ಬಗ್ಗೆ ಖಾಸಗಿ ಕಂಪೆನಿ ಎಚ್‌ಆರ್ ಸಂಕೇತ್ ರಾಮಕೃಷ್ಣಮೂರ್ತಿ ಅವರು ಫೇಸ್‌ಬುಕ್ ಪೋಸ್ಟ್ ಹಂಚಿಕೊಂಡಿದ್ದಾರೆ.
09:11 PM (IST) Mar 20
Bigg Boss ಕನ್ನಡ ಶೋನಲ್ಲಿ ಭಾಗವಹಿಸಿದ್ದ, ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಟಿವಿ ಮಾಧ್ಯಮದಲ್ಲಿ ಭವಿಷ್ಯ ಹೇಳುತ್ತಾರೆ. ಆರ್ಯವರ್ಧನ್ ಗುರೂಜಿ, ಮಹಿಳೆಯೋರ್ವರ ಮಗನ ಜೊತೆ ಮಾತನಾಡಿ, ಬರೋ ಸೊಸೆ ಏನು ಮಾಡುತ್ತಾಳೆ ಎಂದು ಹೇಳಿದ್ದರು. ಇದನ್ನು ನೋಡಿ ಹುಲಿಕಲ್ ನಟರಾಜ್ ತರಾಟೆಗೆ ತೆಗೆದುಕೊಂಡಿದ್ದಾರೆ.
09:06 PM (IST) Mar 20
ನಮ್ಮ ದೈನಂದಿನ ಜೀವನದ ಮೇಲೆ ರಾತ್ರಿ ಹೊತ್ತು ದೊಡ್ಡ ಪ್ರಭಾವ ಬೀರುತ್ತೆ ಅಂತ ತಜ್ಞರು ಹೇಳ್ತಾರೆ. ಮಲಗೋಕೆ ಮುಂಚೆ ನಾವು ಮಾಡುವ ಸಣ್ಣಪುಟ್ಟ ಅಭ್ಯಾಸಗಳು ನಮ್ಮ ದೈಹಿಕ, ಮಾನಸಿಕ ಆರೋಗ್ಯ ಅಷ್ಟೇ ಅಲ್ಲ, ನಮ್ಮ ಯಶಸ್ಸಿನ ಮೇಲೂ ಪರಿಣಾಮ ಬೀರುತ್ತವಂತೆ.
08:14 PM (IST) Mar 20
ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಆಗಬೇಕು. ಇದರಿಂದ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ. 50 ಸ್ಥಾನಗಳ ಅವಕಾಶ ಸಿಗಲಿದೆ ಎಂದು ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
07:31 PM (IST) Mar 20
ನಟ ರಾಜ್ ಬಿ. ಶೆಟ್ಟಿ ಅವರು ಮದುವೆ ಮತ್ತು ಡಿವೋರ್ಸ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹೊಂದಾಣಿಕೆ ಇಲ್ಲದಿದ್ದರೆ ಡಿವೋರ್ಸ್ ಪಡೆಯುವುದು ತಪ್ಪಲ್ಲ ಎಂಬ ಅವರ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
06:34 PM (IST) Mar 20
06:10 PM (IST) Mar 20
05:31 PM (IST) Mar 20
Kannada Youtuber Nikhil Ravindra Income: ಯುಟ್ಯೂಬರ್ ನಿಖಿಲ್ ರವೀಂದ್ರ-ನಿಶಾ, ಮಧು ಗೌಡ ಅವರು ಯುಟ್ಯೂಬ್ ವಿಡಿಯೋದಿಂದಲೇ ಪದೇ ಪದೇ ಮನೆ ಮಾಡ್ತಾರೆ, ಗೋಲ್ಡ್, ಕಾರ್ ತಗೊಳ್ತಾರೆ ಎಂಬ ಮಾತಿತ್ತು. ಈಗ ಈ ಬಗ್ಗೆ ನಿಶಾ ಮಾತನಾಡಿದ್ದು, ಯುಟ್ಯೂಬ್ ಆದಾಯ ಎಷ್ಟು ಎಂದು ರಿವೀಲ್ ಮಾಡಿದ್ದಾರೆ.
05:26 PM (IST) Mar 20
ದೇಶದಲ್ಲಿ ಸಿಲಿಂಡರ್ ಅಭಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಆತ್ಮೀಯ ಸ್ನೇಹವೇ ಇಂದಿನ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂದು ಸಚಿವ ಎನ್ ಎಸ್ ಬೋಸರಾಜು ಅವರು ಹೇಳಿದರು.
04:56 PM (IST) Mar 20
Muguthi Malli Serial: ಯುಗಾದಿ ಅಂದ್ರೆ ಹೊಸತನ. ಯುಗಾದಿಯ ಶುಭ ದಿನ ಅದು ʼಸನ್ ಉದಯʼವಾಗಿ ಬದಲಾಗಿದೆ. ಹೊಸ ಹೊಸ ಕಾರ್ಯಕ್ರಮಗಳೂ ರೆಡಿಯಾಗ್ತಿವೆ. ಇದರ ಮೊದಲ ಹೆಜ್ಜೆಯೇ ಮುಂದಿನ ಸೋಮವಾರ, ಅಂದ್ರೆ ಮಾರ್ಚ್ 23ಕ್ಕೆ ರಾತ್ರಿ 8 ಗಂಟೆಗೆ ಶುರುವಾಗೋ “ಮೂಗುತಿ ಮಲ್ಲಿ." ಇದೊಂದು ಲವ್ ಸ್ಟೋರಿ.
04:11 PM (IST) Mar 20
04:11 PM (IST) Mar 20
03:17 PM (IST) Mar 20
03:12 PM (IST) Mar 20
ಮಹಿಳೆಯರಿಗೆ ವಯಾಗ್ರ ಪ್ರಸಾದ, ಜ್ಯೋತಿಷಿ ಕಾಮಕೇಳಿ ವಿಡಿಯೋ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು, ತನ್ನ ಬಳಿ ಪರಿಹಾರ ಕೇಳಿ ಬರುತ್ತಿದ್ದ ಮಹಿಳೆಯರಿಗೆ ವಯಾಗ್ರ ನೀಡಿ ಕಾಮಕ್ಕೆ ಬಳಸಿಕೊಳ್ಳುತ್ತಿದ್ದ. ಮಹಿಳೆ ಜೊತೆಗಿನ ಅಶ್ಲೀಲ ವಿಡಿಯೋ ಬೆನ್ನಲ್ಲೇ ಜ್ಯೋತಿಷಿ ಅರೆಸ್ಟ್ ಆಗಿದ್ದಾರೆ.
02:49 PM (IST) Mar 20
Youtuber Madhu Gowda: ಕನ್ನಡ ಯುಟ್ಯೂಬರ್ ಮಧು ಗೌಡ, ಪ್ರಗ್ನೆನ್ಸಿ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ಇವರೊಬ್ಬರೇ ತಾಯಿ ಆಗ್ತಿರೋದಾ? ಮಗು ಹೆರೋದಾ ಎಂದು ಅನೇಕರು ಕಾಮೆಂಟ್ ಮಾಡಿದ್ದರು, ಟ್ರೋಲ್ ಮಾಡಿದ್ದರು. ಇದಕ್ಕೆ ಮಧು ಗೌಡ ಅವರು ತಿರುಗೇಟು ನೀಡಿದ್ದಾರೆ.
01:08 PM (IST) Mar 20
ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದ ಫೋಟೋಗ್ರಾಫರ್ ಮಹೇಶ್ ಉಜನಿಮಠ (33) ಕ್ಷುಲ್ಲಕ ಕಾರಣಕ್ಕೆ ಭೀಕರ ಹತ್ಯೆಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡವಾಡ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.
12:44 PM (IST) Mar 20
ನಟ ರಾಜ್ ಬಿ. ಶೆಟ್ಟಿ 'ಭರ್ಜರಿ ಬ್ಯಾಚುಲರ್ಸ್' ಶೋನಲ್ಲಿ ತಮ್ಮ ಪ್ರೇಮ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ಆರು ವರ್ಷಗಳ ಕಾಲ ಇದ್ದ ಸಂಬಂಧ ಮುರಿದುಬಿದ್ದಿದ್ದು ಹೇಗೆ ಮತ್ತು ಆ ಬ್ರೇಕಪ್ ತನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
12:38 PM (IST) Mar 20
ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ 25ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪರೂಪದ ಶೋಲಾ ಹುಲ್ಲುಗಾವಲು ನಾಶವಾಗುತ್ತಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
11:50 AM (IST) Mar 20
ಸಾಮಾಜಿಕ ಹೋರಾಟಗಾರ್ತಿ ಎಂದು ಕರೆಸಿಕೊಂಡು, ಬಿಗ್ ಬಾಸ್ ಮನೆಯೊಳಗಡೆ ಪ್ರವೇಶ ಮಾಡಿದ್ದ Chaithra Kundapura ಅವರು ತನ್ನ ಬಗ್ಗೆ ಸುಳ್ಳು ಮಾಹಿತಿ ನೀಡುವವರ ವಿರುದ್ಧ ಏನು ರೆಮಿಡಿ ಮಾಡುತ್ತೇನೆ ಎಂದು The Powerhouse Vines ಎನ್ನುವ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
11:39 AM (IST) Mar 20
11:26 AM (IST) Mar 20
11:24 AM (IST) Mar 20
ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ, ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ಪ್ರಾಣಿ ದಾಳಿ ಮಾಡಿದ್ದು, ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದೆ.
11:06 AM (IST) Mar 20
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ ಅವರು ಅದ್ಭುತವಾಗಿ ನಟಿಸುತ್ತಿದ್ದಾರೆ. ರಾಜೇಶ್ ನಟರಂಗ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭದ ಯುಗಾದಿ ಹಬ್ಬ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆ ವೇಳೆ ಸೀರಿಯಲ್ ಬಗ್ಗೆ ಕೂಡ ಮಾತನಾಡಿದ್ದಾರೆ.
10:59 AM (IST) Mar 20
10:52 AM (IST) Mar 20
Samarth Shamanur nomination:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ. ಅಲ್ಪಸಂಖ್ಯಾತರ ಒತ್ತಡದ ನಡುವೆಯೇ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಶಾಮನೂರು ಅವರು ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
10:42 AM (IST) Mar 20
ಚಾಲಕನ ಸಣ್ಣ ನಿರ್ಲಕ್ಷ್ಯದಿಂದಾಗಿ ಬೆಂಗಳೂರಿನ ಪೀಣ್ಯ ಎರಡನೇ ಹಂತದ ಡಿಪೋದಲ್ಲಿ ನಿಯಂತ್ರಣ ಕೊಠಡಿಗೆ ನುಗ್ಗಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಘಟನೆ ಹೇಗೆ ನಡೆಯಿತು, ಘಟನೆಯ ಫೋಟೋ ಇಲ್ಲಿವೆ ನೋಡಿ
09:58 AM (IST) Mar 20
Gadag Chariot Festival Clash ಗದಗ ರಥೋತ್ಸವ ವೇಳೆ ಕಾರು ಅಡ್ಡ ನಿಲ್ಲಿಸಿ ಕಿರಿಕ್, ತೆಗೆಯೋಕೆ ಹೇಳಿದ್ದಕ್ಕೆ ಹಲ್ಲೆ ಭಕ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಅರೆಸ್ಟ್ ಮಾಡಲಾಗಿದೆ. ಘಟನೆ ನಡೆದಿದ್ದು ಹೇಗೆ?
09:24 AM (IST) Mar 20
08:38 AM (IST) Mar 20
Dhurandhar The Revenge: ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರದ ಮೊದಲ ಭಾಗದಿಂದಲೂ 'ಬಡೇ ಸಾಹಬ್' ಯಾರು ಎಂಬ ಪ್ರಶ್ನೆ ಕಾಡುತ್ತಿತ್ತು. ಈಗ 'ಧುರಂಧರ್ 2' ಆ ರಹಸ್ಯವನ್ನು ಬಯಲು ಮಾಡಿದೆ. ವಿಶೇಷ ಅಂದ್ರೆ, ಈ ಪಾತ್ರದ ಬಗ್ಗೆ ಇದ್ದ ಎಲ್ಲಾ ಊಹಾಪೋಹಗಳನ್ನು ಚಿತ್ರತಂಡ ಸುಳ್ಳು ಮಾಡಿದೆ.
08:20 AM (IST) Mar 20
ರಣವೀರ್ ಸಿಂಗ್ ಅಭಿನಯದ 'Dhurandhar The Revenge' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದಿದೆ. ಮೊದಲ ದಿನವೇ 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆದರೂ, ಈ ಚಿತ್ರ ದೇಶದ ಟಾಪ್ 3 ಅತಿದೊಡ್ಡ ಓಪನರ್ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ. ಅವು ಯಾವುವು?
08:00 AM (IST) Mar 20
ಭಾರತಕ್ಕೆ ಗ್ಯಾಸ್ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಶಾಕ್, ಪ್ರತಿ ಲೀಟರ್‌ಗೆ 2 ರೂ ಹೆಚ್ಚಳ, ಇಸ್ರೇಲ್ ಹಾಗೂ ಇರಾನ್ ಯುದ್ಧದಿಂದ ಬೆಂಗಳೂರು ಸೇರಿದಂತೆ ಎಲ್ಲೆಡೆ ಗ್ಯಾಸ್ ಸಮಸ್ಯೆ ಎದುರಾದ ಬೆನ್ನಲ್ಲೇ ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ.
07:48 AM (IST) Mar 20
07:32 AM (IST) Mar 20
ಉಡುಪಿ ಜಿಲ್ಲೆಗೆ ಇಂದು ಸಾರ್ವತ್ರಿಕ ರಜೆ ಘೋಷಿಸಿದ ಜಿಲ್ಲಾಧಿಕಾರಿ, ಹಬ್ಬದ ಹಿನ್ನಲೆಯಲ್ಲಿ ಶಾಲಾ ಕಾಲೇಜು ಸೇರಿದಂತೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಇದರಿಂದ ಉಡುಪಿ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಡಬಲ್ ಆಗಿದೆ.
07:21 AM (IST) Mar 20
ತುಮಕೂರಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ, ಇಸ್ಪೀಟ್ ಆಟದ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯು ಪೊಲೀಸ್ ದೌರ್ಜನ್ಯದಿಂದ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಎಸ್‌ಪಿ ಮನವೊಲಿಕೆ ಬಳಿಕ ಪ್ರತಿಭಟನೆ ಕೈಬಿಟ್ಟರು.
07:00 AM (IST) Mar 20
ಪಾಪಣ್ಣ ಮಟನ್ ಸ್ಟಾಲ್‌ನಲ್ಲಿ ಮಟನ್ ಬೆಲೆಯಲ್ಲಿ ಯಾವುದೇ ವ್ಯತ್ಯಸವಾಗಿಲ್ಲ. ಕೆಜಿಗೆ 900 ರೂಪಾಯಿ ದರದಲ್ಲೇ ಮಾರಾಟ ಮಾಡಲಾಗುತ್ತಿದೆ. ಹಬ್ಬದ ಹಿನ್ನಲೆಯಲ್ಲಿ ಯಾವುದೇ ಬೆಲೆ ಏರಿಕೆ ಮಾಡದೆ ಜನರಿಗೆ ಮಾಂಸ ಮಾರಟ ಮಾಡಲಾಗುತ್ತಿದೆ.