ಬ್ರೇಕಿಂಗ್: ಕಮಿಷನರ್‌ ಮುಂದೆ ಶರಣಾಗಲು ಕರವೇ ನಿರ್ಧಾರ

By Web DeskFirst Published Nov 7, 2019, 11:21 PM IST
Highlights

ಜನರ ಭಾವನೆಗೆ ಬೆಲೆ ಕೊಟ್ಟು ಕರವೇ ನಿರ್ಧಾರ/ ಶುಕ್ರವಾರ ಪೊಲೀಸರ ಮುಂದೆ ಶರಣಾಗಲು ನಿರ್ಧಾರ/  ವೈದ್ಯರ ಪ್ರತಿಭಟನೆಗೆ ಹೆದರಿ ಈ ನಿರ್ಧಾರ ಅಲ್ಲ ಎಂದ ನಾರಾಯಣ ಗೌಡ

ಬೆಂಗಳೂರು [ ನ. 07] ಕರವೇ ಕಾರ್ಯಕರ್ತರು ಜನರಿಗೆ ತೊಂದರೆಯಾಗದಿರಲು ನಿರ್ಧಾರಕ್ಕೆ ಬಂದಿದ್ದು ಶುಕ್ರವಾರ ಪೊಲೀಸರ ಮುಂದೆ ಶರಣಾಗುವುದಾಗಿ ತಿಳಿಸಿದ್ದಾರೆ.

ವೈದ್ಯರ ಮುಷ್ಕರಕ್ಕೆ ಹೆದರಿ ಈ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.  ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರಿನಲ್ಲಿ ಕಿರಿಯ ವೈದ್ಯರು ಮಾಡುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿತ್ತು.

ವೈದ್ಯರು ಬೀದಿಗೆ ಇಳಿಯಲು ಕಾರಣವೇನು?

ಶುಕ್ರವಾರ ಬೆಳಗ್ಗೆ 6 ರಿಂದ ಶನಿವಾರ ಬೆಳಗ್ಗೆ 6 ಗಂಟೆ ವರೆಗೆ ಪ್ರತಿಭಟನೆ ನಡೆಯಲಿದ್ದು ಓಪಿಡಿ ಬಂದ್ ಮಾಡಲಿದ್ದೇವೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಈಗ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗ ವೈದ್ಯರು ಮುಷ್ಕರ ಹಿಂಪಡೆಯುತ್ತಾರೆಯೋ ಎಂಬುದನ್ನು ಕಾದು ನೋಡಬೇಕಿದೆ.

ವೈದ್ಯರ ಮೇಲೆ ಹಲ್ಲೆ ಮಾಡಿದ ಕಿರುತೆರೆ ನಟಿ ಅಶ್ವಿನಿ ಗೌಡ ಯಾರು?

ಮಿಂಟೋ ಆಸ್ಪತ್ರೆಯಲ್ಲಿ ಘಟನೆ ನಡೆಯಬೇಕಿದ್ದರೆ ಜತೆಗಿದ್ದ ನಮ್ಮ ಎಲ್ಲ ಹೋರಾಟಗಾರರು ಶುಕ್ರವಾರ ಶರಣಾಗಲಿದ್ದಾರೆ. ಜನರ ಒಳಿತಿಗಾಗಿ ಈ ಕ್ರಮ ತೆಗೆದುಕೊಂಡಿದ್ದೇವೆ, ಜನರಿಗೆ ಕಾರಣವಿಲ್ಲದೇ ತೊಂದರೆಯಾಗಬಾರದು. ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಹೋರಾಟ, ಪ್ರತಿಭಟನೆ ಸುಖಾಂತ್ಯಕ್ಕೆ ಬರುವ ಲಕ್ಷಣಗಳು ಕಾಣುತ್ತಿವೆ. ಹಲ್ಲೆ ಆರೋಪಿಗಳನ್ನು ಬಂಧಿಸಬೇಕು ಎಂಬುದು ಕಿರಿಯ ವೈದ್ಯರ ಪ್ರಮುಖ ಬೇಡಿಕೆಯಾಗಿತ್ತು. ಈಗ ಸ್ವತಃ ಕಾರ್ಯಕರ್ತರೇ ನಾವು ಪೊಲೀಸರ ಮುಂದೆ ಶರಣಾಗಲಿದ್ದೇವೆ ಎಂದು ಹೇಳಿದ್ದಾರೆ. 

click me!