Karave  

(Search results - 33)
 • 08 top10 stories

  News8, Nov 2019, 4:37 PM IST

  ತಲೈವಾ ಆರೋಪಕ್ಕೆ BJP ಗಡ ಗಡ, ಪೊಲೀಸ್ರಿಗೆ ಶರಣಾದ ಅಶ್ವಿನಿ ಗೌಡ; ನ.8ರ ಟಾಪ್ 10 ಸುದ್ದಿ!

  ಬಿಜೆಪಿ ಕುರಿತು ಸಾಫ್ಟ್ ಕಾರ್ನರ್ ಹೊಂದಿದ್ದ, ಸೂಪರ್ ಸ್ಟಾರ್ ರಜನಿ ಕಾಂತ್ ಇದೀಗ ತಿರುಗಿ ಬಿದ್ದಿದ್ದಾರೆ. ತಲೈವಾ ಆರೋಪಕ್ಕೆ ಬಿಜೆಪಿ ಬೆಚ್ಚಿ ಬಿದ್ದಿದೆ. ರಾಜ್ಯದಲ್ಲಿ ವೈದ್ಯರ ಮುಷ್ಕರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ  ನಟಿ ಹಾಗೂ ರಕ್ಷಣಾ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿದಂತೆ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿದ್ದಾರೆ. ಆಯೋಧ್ಯೆ ತೀರ್ಪಿಗೆ ಮೂಹೂರ್ತ ಫಿಕ್ಸ್, ಸ್ಟಾರ್ ಕ್ರಿಕೆಟಿಗನ ಕಪಾಳಕ್ಕೆ ಭಾರಿಸಿ ಫಿಕ್ಸಿಂಗ್ ಮಾಹಿತಿ ಕಕ್ಕಿಸಿದ ಪೊಲೀಸ್ ಸೇರಿದಂತೆ ನವೆಂಬರ್ 8ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

 • ashwini gowda surrenders after assaulted the doctors in minto hospital
  Video Icon

  Bengaluru-Urban8, Nov 2019, 2:07 PM IST

  ವೈದ್ಯರ ಮುಷ್ಕರ: ಅಶ್ವಿನಿ ಗೌಡ ಸೇರಿ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣು

  ನಗರದ ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರವೇ ಕಾರ್ಯಕರ್ತರ ಹಲ್ಲೆ ಖಂಡಿಸಿ, ರಾಜ್ಯದೆಲ್ಲೆಡೆ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಟಿ ಹಾಗೂ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿ ಹಲವರು ಪೊಲೀಸರಿಗೆ ಶರಣಾಗಿದ್ದಾರೆ. ಆದರೆ, ಮುಷ್ಕರವಿನ್ನೂ ಮುಂದುವರಿದಿದೆ. ಅಲ್ಲದೇ ತಮ್ಮ ಹೋರಾಟವನ್ನು ಇನ್ನಷ್ಟೂ ಮುಂದುವರಿಸುವುದಾಗಿ ಕರವೇ ಎಚ್ಚರಿಸಿದೆ. 

 • Video Icon

  state8, Nov 2019, 12:36 PM IST

  ಬೀದಿಗಿಳಿದ ವೈದ್ಯರು; ಹಲ್ಲೆಕೋರರ ಬಂಧನಕ್ಕೆ ಆಗ್ರಹ

  ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಡೆಸಿದ್ದಾರೆನ್ನಲಾದ ಹಲ್ಲೆಯನ್ನು ಖಂಡಿಸಿ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಹಲ್ಲೆ ನಡೆಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿ ಬೆಳಗ್ಗೆ 6 ರಿಂದ 24 ಗಂಟೆಗಳ ಕಾಲ ರಾಜ್ಯಾದ್ಯಂತ ವೈದ್ಯರು ಬೀದಿಗಿಳಿದಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ಪ್ರತಿಭಟನೆಗೆ ಕರೆ ನೀಡಿದ್ದು, ಹೊರರೋಗಿ ವಿಭಾಗ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 

 • Minto

  Bengaluru-Urban8, Nov 2019, 12:35 PM IST

  ಅಂಧ ಟೈಲರ್ ಯುವತಿಯ ಫೋಟೊ ಬಳಕೆ : ಕರವೇ ವಿವಾದ

  ಕರ್ನಾಟಕ ರಕ್ಷಣಾ ವೇದಿಕೆ ಬಳಕೆ ಮಾಡಿರುವ ಪೋಸ್ಟರ್ ಒಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಂಧ ಯುವತಿಯ ಫೋಟೊ ಬಳಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

 • Karnataka Districts7, Nov 2019, 11:21 PM IST

  ಬ್ರೇಕಿಂಗ್: ಕಮಿಷನರ್‌ ಮುಂದೆ ಶರಣಾಗಲು ಕರವೇ ನಿರ್ಧಾರ

  ಒಂದು ಕಡೆ ವೈದ್ಯರು ಮುಷ್ಕರಕ್ಕೆ ಕರೆ ಕೊಟ್ಟಿದ್ದರೆ ಇನ್ನೊಂದು ಕಡೆ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಲು ನಿರ್ಧಾರ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ ನಾವೆಲ್ಲರೂ ಸೇರಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ವೈದ್ಯರ ಸಂಘಟನೆಯ ಶ್ರೀನಿವಾಸ್ ತಿಳಿಸಿದ್ದಾರೆ.

 • rashmi gowda
  Video Icon

  Karnataka Districts7, Nov 2019, 6:15 PM IST

  ವೈದ್ಯರು VS ಅಶ್ವಿನಿ ಗೌಡ, ಶುಕ್ರವಾರ ರಾಜ್ಯಾದ್ಯಂತ ಆಸ್ಪತ್ರೆಗಳ OPD ಬಂದ್

  ಬೆಂಗಳೂರು [ ನ. 07] ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಾಳೆ ಅಂದರೆ ನವೆಂಬರ್ 8 ರಂದು ರಾಜ್ಯದ ಎಲ್ಲ ಹೊರ ರೋಗಿಗಳ ವಿಭಾಗ (ಒಪಿಡಿ) ಬಂದ್ ಆಗಲಿವೆ.  ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರಿನಲ್ಲಿ ಕಿರಿಯ ವೈದ್ಯರು ಮಾಡುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.

  ಎಚ್ಚರ ಎಚ್ಚರ...ವೈದ್ಯರು ಬೀದಿಗೆ ಇಳಿದು ಪ್ರತಿಭಟನೆ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆ 6 ರಿಂದ ಶನಿವಾರ ಬೆಳಗ್ಗೆ 6 ಗಂಟೆ ವರೆಗೆ ಪ್ರತಿಭಟನೆ ನಡೆಯಲಿದೆ. ಸರ್ಕಾರಿ ಮತ್ತು ಖಾಸಗಿ ವೈದ್ಯರು ಪ್ರತಿಭಟನೆ ನಡೆಸಲಿದ್ದು ಸಣ್ಣ ಸಣ್ಣ ಕ್ಲಿನಿಕ್ ಡಾಕ್ಟರ್ ಗಳು ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.

 • BSY

  Kolar2, Nov 2019, 2:39 PM IST

  ಕೋಲಾರ: ಸಿಎಂ ಹಿಂದಿಯ ಗುಲಾಮ ಎಂದ ಕರವೇ..!

  ಕೋಲಾರ ಕರವೇ ಸಿಎಂ ಬಿ. ಎಸ್ ಯಡಿಯೂರಪ್ಪ ಅವರನ್ನು ಹಿಂದಿಯ ಗುಲಾಮ ಎಂದು ಕರೆದಿದೆ. ಶುಕ್ರವಾರ ರಾಜ್ಯೋತ್ಸವ ಸಂಭ್ರಮಾಚರಣೆ ಸಂದರ್ಭ ಸಂದರ್ಭ ಸಿಎಂ ಹಿಂದಿ ಹೇರಿಕೆ ಮಾಡುವ ಕುರಿತು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • Minto

  state2, Nov 2019, 10:17 AM IST

  ಮಿಂಟೋ ವೈದ್ಯರ ಮೇಲೆ ಕರವೇ ಕಾರ್ಯಕರ್ತೆ ಹಲ್ಲೆ..?

  ಜುಲೈ ತಿಂಗಳಲ್ಲಿ ನಡೆದ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ತಪ್ಪಿನಿಂದಾಗಿ ಕಣ್ಣು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಮಿಂಟೋ ಆಸ್ಪತ್ರೆ ಮುಂಭಾಗ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಕಾರ್ಯಕರ್ತರು ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

 • bjp mp Suresh Angadi

  NEWS19, Jun 2019, 3:38 PM IST

  ಬಿಜೆಪಿ ಸಂಸದ ಅಂಗಡಿ ರಾಜೀನಾಮೆಗೆ ಆಗ್ರಹ : ಎದುರಾಯ್ತು ಆಕ್ರೋಶ

  ಬೆಳಗಾವಿ ಸಂಸದ ಸುರೇಶ್ ಅಂಗಡಿ ವಿರುದ್ಧ ಭಾರೀ ಆಕ್ರೋಶ ಎದುರಾಗಿದೆ. ಅಲ್ಲದೇ  ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಗಿದೆ.

 • NEWS18, Jun 2019, 10:54 AM IST

  ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ: ಸುರೇಶ್ ಅಂಗಡಿ ಹೇಳಿದ್ದೇನು?

  ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಹೊರತುಪಡಿಸಿ, ಕರ್ನಾಟಕದ ಸಂಸದರು ಮಳೆಗಾಲದ ಅಧಿವೇಶನದ ಮೊದಲ ದಿನ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಉಳಿದವರೆಲ್ಲರೂ ಕನ್ನಡದಲ್ಲಿಯೇ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಆದರೆ, ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಏಕೆ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು?

 • Karnmataka

  NEWS31, May 2019, 10:51 AM IST

  ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸದ್ದಕ್ಕೆ ಕರವೇ ಆಕ್ಷೇಪ

  ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸದ್ದಕ್ಕೆ ಕರವೇ ಆಕ್ಷೇಪ| ನೂತನ ಸಚಿವರಿಂದ ಕನ್ನಡಿಗರಿಗೆ ಅವಮಾನ: ನಾರಾಯಣಗೌಡ| ಮುಂದೆಯೂ ಹೀಗೆ ಮಾಡಿದರೆ ಹೋರಾಟ; ಎಚ್ಚರಿಕೆ

 • veeramadevi sunnu leone

  NEWS23, Oct 2018, 8:46 AM IST

  ರಾಣಿ ಪಾತ್ರದಲ್ಲಿ ಸನ್ನಿ : ಎದುರಾಯ್ತು ಸಂಕಷ್ಟ

  ವೀರಮಾದೇವಿ ಸಿನಿಮಾದಿಂದ ನೀಲಿ ಚಿತ್ರ ತಾರೆ ನಟಿ ಸನ್ನಿ ಲಿಯೋನ್‌ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರು, ಹುಬ್ಬಳ್ಳಿ ಮತ್ತು ಕೊಪ್ಪಳ ನಗರಗಳಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. 

 • Video Icon

  NEWS13, Oct 2018, 3:57 PM IST

  ಕೊಲೆ ಯತ್ನ: ಕರವೇ ಅಧ್ಯಕ್ಷ ನಾರಾಯಣ ಗೌಡ ವಿರುದ್ಧ ಎಫ್‌ಐಆರ್

  ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ನಾರಾಯಣ ಗೌಡ ಹಾಗೂ ಬೆಂಬಲಿಗರ ವಿರುದ್ಧ ದೂರು ದಾಖಲಾಗಿದೆ. ಕರವೇ ಪ್ರವೀಣ್ ಶೆಟ್ಟಿ ಬಣದ ನಾಯಕ ನಾಗರಾಜ್ ಕೊಲೆಯತ್ನ ನಡೆಸಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.  

 • Gadaga- Karave

  Gadag3, Oct 2018, 12:09 PM IST

  ಕರವೇ ಅಧ್ಯಕ್ಷರಾದ ಮಾತ್ರಕ್ಕೆ ಟಿಕೆಟ್ ಇಲ್ಲದೆಯೂ ಪ್ರಯಾಣಿಸಬಹುದಾ?

  ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕುಡಿದ ಅಮಲಿನಲ್ಲಿ ಕರವೇ ಜಿಲ್ಲಾಧ್ಯಕ್ಷನೋರ್ವ ಬಸ್ ನಿರ್ವಾಹಕನ ಮೇಲೆ ಮನಬಂದಂತೆ ಹಲ್ಲೆ ಮಾಡಿ ದರ್ಪ ತೋರಿರುವ ಘಟನೆ ಗದಗ ತಾಲೂಕಿನ ಹೊಂಬಳ ಬಳಿ ನಡೆದಿದೆ.  ಕರವೇ ಸ್ವಾಭಿಮಾನಿ ಬಣದ ಗದಗ ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಚೌಡಣ್ಣವರ್ ಎಂಬುವರು ಬಸ್ ನಿರ್ವಾಹಕ ಪ್ರಕಾಶ ಎಂಬುವರ ಮೇಲೆ ಹಲ್ಲೆ ಮಾಡಿ ಅವರಲ್ಲಿದ್ದ ಹಣ ದೋಚಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

 • NEWS27, Aug 2018, 11:42 AM IST

  ಕರವೇಯಿಂದ ನೂತನ ರಾಜಕೀಯ ಪಕ್ಷ ಶುರು?

   ಕರ್ನಾಟಕ ರಕ್ಷಣಾ ವೇದಿಕೆ ಇದೀಗ ನಾಡಿನ ಹಿತ ಕಾಪಾಡುವ ಉದ್ದೇಶದೊಂದಿಗೆ ಪ್ರತ್ಯೇಕ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಲೋಕಸಭಾ ಚುನಾವಣೆ ಮುಗಿದ ನಂತರ ಪ್ರಾದೇಶಿಕ ಪಕ್ಷ ಸ್ಥಾಪನೆ ಮಾಡುವ ಸಾಧ್ಯತೆಯಿದೆ