ಸರ್ಕಾರಿ ಶಾಲೆ ಅಭಿವೃದ್ಧಿಗೆ ಕೈಗಾರಿಕಾ ಸಂಸ್ಥೆಗಳು ಕೈಜೋಡಿಸಬೇಕು: ಶಾಸಕ ಪಿ.ಎಂ.ನರೇಂದ್ರಸ್ವಾಮಿ

By Kannadaprabha News  |  First Published Jan 25, 2024, 11:03 PM IST

ಸರ್ಕಾರಿ ಶಾಲೆ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಕೈಗಾರಿಕಾ ಸಂಸ್ಥೆಗಳು ಕೈಜೋಡಿಸುವ ಮೂಲಕ ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗುವಂತೆ ಮಾಡಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು. 
 


ಮಳವಳ್ಳಿ (ಜ.25): ಸರ್ಕಾರಿ ಶಾಲೆ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಕೈಗಾರಿಕಾ ಸಂಸ್ಥೆಗಳು ಕೈಜೋಡಿಸುವ ಮೂಲಕ ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗುವಂತೆ ಮಾಡಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು. ತಾಲೂಕಿನ ತಳಗವಾದಿ ಗ್ರಾಮದಲ್ಲಿ ವೋಲ್ವೋ ಸಮೂಹ ಸಂಸ್ಥೆ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ಖಾಸಗಿ ಕೈಗಾರಿಕೋಧ್ಯಮ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಶೈಕ್ಷಣಿಕ, ಆರೋಗ್ಯ ಸಂಸ್ಥೆಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದರು.

ವೋಲ್ವೋ ಸಮೂಹ ಸಂಸ್ಥೆ ಜನರ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದೆ. ಇದರ ಜೊತೆಗೆ ತಾಲೂಕಿನಲ್ಲಿ ಕೊರತೆ ಇರುವ 118 ಕೊಠಡಿಗಳ ನಿರ್ಮಾಣಕ್ಕೆ ನಮ್ಮೊಂದಿಗೆ ನೆರವಾಗಿ ಆಧುನಿಕ ಶಿಕ್ಷಣ ಒದಗಿಸಲು ತಂತ್ರಜ್ಞಾನ ವಿಭಾಗಕ್ಕೆ ಕೊಡುಗೆ ನೀಡಬೇಕೆಂದು ಕೋರಿದರು. ಮುಂದಿನ ದಿನಗಳಲ್ಲಿ ಬರಗಾಲ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಸೂಚಿಸಿದರು.

Latest Videos

undefined

ಮೈತ್ರಿ ತೀರ್ಮಾನ ಮಾಡದಿದ್ದರೆ ಜೆಡಿಎಸ್‌ ಪಕ್ಷ ಹೈಜಾಕ್‌ ಆಗ್ತಾ ಇತ್ತು: ವೈ.ಎಸ್‌.ವಿ.ದತ್ತ

ಇದೇ ವೇಳೆ ತಳಗವಾದಿ ಗ್ರಾಮಸ್ಥರಿಂದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ವೋಲ್ವೋ ಸಮೂಹ ಸಂಸ್ಥೆ ನಿರ್ದೇಶಕ ಜಿ.ವಿ.ರಾವ್, ಕೈಗಾರಿಕಾ ಸಹಾಯಕ ನಿರ್ದೇಶಕ ಟಿ.ಪಿ.ಲಿಂಗರಾಜು ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಟಿ.ಸಿ.ಸುಲೋಚನಾ, ಉಪಾಧ್ಯಕ್ಷ ಡಿ.ಬಿ.ಬಸವರಾಜು, ಸದಸ್ಯರಾದ ಟಿ.ಎಚ್.ಆನಂದ್, ಪ್ರಭುಸ್ವಾಮಿ, ಶಿವಮ್ಮ, ಪಿಡಿಒ ಜಿ.ರೇಣುಕಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ದೇವರಾಜು, ಮುಖಂಡರಾದ ಆರ್.ಎನ್. ವಿಶ್ವಾಸ್, ಚಂದ್ರಕುಮಾರ್, ಪುಟ್ಟಸ್ವಾಮಿ, ಡಿ.ಸಿ.ಚೌಡಯ್ಯ, ದೀಲಿಪ್ ಕುಮಾರ್ (ವಿಶ್ವ), ಸಿ.ಪಿ.ರಾಜು, ಟಿ.ಎಂ.ಪ್ರಕಾಶ್, ರಾಜಣ್ಣ, ರಾಮಣ್ಣ, ವೋಲ್ವೋ ಸಮೂಹ ಸಂಸ್ಥೆಯ ಆರ್.ಗೋಪಾಲಕೃಷ್ಣ ಇದ್ದರು.

ಸಾಮೂಹಿಕ ಕೃಷಿಯಿಂದ ರೈತರ ಬದುಕು ಹಸನು: ಆಧುನಿಕ ಕೃಷಿ ಪದ್ಧತಿಯಲ್ಲಿ ರೈತರು ಸಾಮೂಹಿಕ ಕೃಷಿ ಮಾಡುವುದರಿಂದ ಆರ್ಥಿಕವಾಗಿ ಬದುಕನ್ನು ಸದೃಢಗೊಳಿಸಿಕೊಳ್ಳಬಹುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು. ತಾಲೂಕಿನ ಬಿಜಿಪುರ ವ್ಯಾಪ್ತಿಯಲ್ಲಿ ಹನಿನೀರಾವರಿ ಯೋಜನೆಯಡಿ ಬೆಳೆದಿರುವ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷತೆ ಹಾಗೂ ಫಲಾನುಭವಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹನಿ ಮತ್ತು ತುಂತುರು ನೀರಾವರಿಯಲ್ಲಿ ಬೆಳೆ ಬೆಳೆಯುವುದು, ರೈತರ ಸಾಮೂಹಿಕ ಪಾತ್ರ. ವಾಣಿಜ್ಯ ಬೆಳೆಗಳ ಕಡೆಗೆ ರೈತರನ್ನು ಆಕರ್ಷಿಸುವುದು, ಒಂದೇ ಬೆಳೆ ಬೆಳೆಯುವುದರಿಂದ ಸಂಸ್ಕರಣಾ ಘಟಕಗಳು ಸ್ಥಾಪನೆಗೊಂಡು ಕೃಷಿ ಉತ್ಪನ್ನಗಳ ಮೌಲ್ಯ ವೃದ್ಧಿಯಾಗುತ್ತದೆ. 

ಜೊತೆಗೆ ರೈತರ ಆದಾಯ ಹೆಚ್ಚುತ್ತದೆ. ಇದು ಹನಿ-ತುಂತುರು ನೀರಾವರಿ ಯೋಜನೆಯ ಮೂಲೋದ್ದೇಶವಾಗಿದೆ ಎಂದರು. ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಾಗ ಗೊಂದಲಗಳು ಮೂಡುವುದು ಸಹಜ. ಹನಿ ನೀರಾವರಿ ವಿಷಯದಲ್ಲಿ ರಾಜಕಾರಣ ಮಾಡಬೇಡಿ. ಇದೊಂದು ಮಹತ್ವಾಕಾಂಕ್ಷಿ ಯೋಜನೆ. ಆರ್ಥಿಕವಾಗಿ ರೈತರ ಬದುಕನ್ನು ಪರಿವರ್ತಿಸುವ ಯೋಜನೆಯಾಗಿದೆ. ವಿವಿಧ ಬೆಳೆಗಳನ್ನು ಸಾಮೂಹಿಕ ಕೃಷಿಯಲ್ಲಿ ಬೆಳೆದು ಆದಾಯವನ್ನು ಗಳಿಸಿಕೊಳ್ಳುವುದಕ್ಕೆ ಉತ್ತಮ ಸದಾವಕಾಶ ದೊರಕಿದೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ರೈತರಲ್ಲಿ ಮನವಿ ಮಾಡಿದರು.

ರಾಮಲಲ್ಲಾ ಪ್ರತಿಷ್ಠಾಪನೆ ದಿನ ಮಸೀದಿ ಕೆಡವುವ ಸಂಕಲ್ಪ ತೊಟ್ಟಿದ್ದ ಸಂಸದ ಅನಂತ ಕುಮಾರ್ ಹೆಗಡೆ!

ಮೊದಲ ಅವಧಿಯಲ್ಲಿ 3 ತಿಂಗಳು, 6 ತಿಂಗಳು ಅಥವಾ 10 ತಿಂಗಳ ಬೆಳೆ ಬೆಳೆಯಬೇಕೇ ಎಂಬುದನ್ನು ಯೋಚನೆ ಮಾಡಿ. ಇದಕ್ಕಾಗಿ ನೋಡಲ್‌ ಸೊಸೈಟಿ ತೆರೆಯಲಾಗುವುದು. ಅಲ್ಲಿ ಬೆಳೆ ವಿಚಾರವಾಗಿ ಬಹುಮತದಿಂದ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು. ಯಾವ ಬೆಳೆ ಬೆಳೆದರೆ ಸೂಕ್ತ. ಯಾವ ಬೆಳೆಗೆ ಎಷ್ಟು ಬೇಡಿಕೆ ಇದೆ ಎಂಬುದನ್ನು ಮನಗಂಡು ಅಂತಹ ಬೆಳೆ ಬೆಳೆಯಲಾಗುತ್ತದೆ. ಜೊತೆಗೆ ನೇರವಾಗಿ ಮಾರುಕಟ್ಟೆ ಪ್ರವೇಶಿಸಲಾಗುವುದು. ಬೆಳೆ ಬೆಳೆಯಲು ಆದ ಖರ್ಚನ್ನು ಕಳೆದು ಉಳಿಕೆ ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಪಪಾವತಿಸಸಲಾಗುವುದು ಎಂದರು.

click me!