ರಾಜ್ಯದಲ್ಲಿ 1 ಸಾವಿರ ಕೋಟಿ ರು. ಹೂಡಿಕೆ ಮಾಡಿ ವಾಣಿಜ್ಯ ಉದ್ದೇಶದ ವಾಹನ, ತ್ರಿಚಕ್ರ ಹಾಗೂ ದ್ವಿಚಕ್ರ ವಾಹನ ನಿರ್ಮಾಣ ಘಟಕ ಸ್ಥಾಪನೆ ಕುರಿತು ಪ್ರಸ್ತಾಪಿಸಿ. ಗರಿಷ್ಠ 10 ಎಕರೆ ಭೂಮಿ ಒದಗಿಸುವಂತೆ ಕೋರಿದರು. ವಾಹನ ನಿಲ್ದಾಣ ಘಟಕ ಸ್ಥಾಪನೆಗೆ ಧಾರವಾಡ ಸೂಕ್ತ ಸ್ಥಳವಾಗಿದ್ದು, ಅಲ್ಲಿ ಎಲ್ಲ ರೀತಿಯ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್
ಬೆಂಗಳೂರು(ನ.26): ರಾಜ್ಯದಲ್ಲಿ ವಾಣಿಜ್ಯ ಉದ್ದೇಶದ ವಾಹನ ಮತ್ತು ದ್ವಿಚಕ್ರ ವಾಹನಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಂದು ಸಾವಿರ ಕೋಟಿ ರು. ಹೂಡಿಕೆಗೆ ಠಾಣೆ ಗ್ರೂಪ್ ಸಂಸ್ಥೆ ಆಸಕ್ತಿ ತೋರಿದ್ದು, ಈ ಸಂಬಂಧ ಧಾರವಾಡದಲ್ಲಿ ಭೂಮಿ ನೀಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದರು.
ಇನ್ವೆಸ್ಟ್ ಕರ್ನಾಟಕ ಭಾಗವಾಗಿ ಮಂಗಳವಾರ ಚೆನ್ನೈನಲ್ಲಿ ರೋಡ್ ಶೋ ನಡೆಸಿದ ಎಂ.ಬಿ.ಪಾಟೀಲ್, ವಿವಿಧ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ವಾಹನ ಉತ್ಪಾದನಾ ಸಂಸ್ಥೆ ರಾಣೆ ಗ್ರೂಪ್ ಮುಖ್ಯಸ್ಥರು, ರಾಜ್ಯದಲ್ಲಿ 1 ಸಾವಿರ ಕೋಟಿ ರು. ಹೂಡಿಕೆ ಮಾಡಿ ವಾಣಿಜ್ಯ ಉದ್ದೇಶದ ವಾಹನ, ತ್ರಿಚಕ್ರ ಹಾಗೂ ದ್ವಿಚಕ್ರ ವಾಹನ ನಿರ್ಮಾಣ ಘಟಕ ಸ್ಥಾಪನೆ ಕುರಿತು ಪ್ರಸ್ತಾಪಿಸಿ. ಗರಿಷ್ಠ 10 ಎಕರೆ ಭೂಮಿ ಒದಗಿಸುವಂತೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್, ವಾಹನ ನಿಲ್ದಾಣ ಘಟಕ ಸ್ಥಾಪನೆಗೆ ಧಾರವಾಡ ಸೂಕ್ತ ಸ್ಥಳವಾಗಿದ್ದು, ಅಲ್ಲಿ ಎಲ್ಲ ರೀತಿಯ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು.
ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದೀರಾ? ಹಾಗಿದ್ರೆ ಕನ್ನಡ ಕಲಿಯಿರಿ: Zoho CEO ಶ್ರೀಧರ್ ವೆಂಬು
ರೋಡ್ ಶೋನಲ್ಲಿ ಅಶೋಕ್ ಲೇಲ್ಯಾಂಡ್, ಟಾಫೆ, ಸನ್ಮಾರ್ ಗ್ರೂಪ್, ಟ್ಯೂಬ್ ಇನ್ವೆಸ್ಟ್‌ಮೆಂಟ್ಸ್, ಸ್ಟೆಲೆಕ್ಟ್, ವಿಸ್ಟಾನ್, ಆಲ್ಪಾ, ಸಿರ್ಮಾ, ನೋಕೊಯಾ ಸೇರಿ ಇನ್ನಿತರ ಕಂಪನಿ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯದ ಪರವಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತ ಗುಂಜನ್ ಕೃಷ್ಣ ಇತರರಿದ್ದರು.
ಉದ್ಯಮಿಗಳ ನಾವೀನ್ಯತೆ, ಆಧುನಿಕ ತಂತ್ರಜ್ಞಾನಗಳು ಜನಪರ ಯೋಜನೆಗಳಿಗೆ ನೆರವಾಗಲಿ: ಶರಣ್ ಪ್ರಕಾಶ್ ಪಾಟೀಲ್
ಬೆಂಗಳೂರು: ನಮ್ಮ ರಾಜಧಾನಿ ಬೆಂಗಳೂರಿನ ಖ್ಯಾತ 'ಬೆಂಗಳೂರು ಟೆಕ್ ಸಮಿಟ್' ಮೂಲಕ ವಿಶ್ವಮಟ್ಟದಲ್ಲಿ ಇನ್ನಷ್ಟು ಪಸರಿಸಿದೆ. ಅತ್ಯಾಧುನಿಕ ಹಾಗೂ ನಾವೀನ್ಯತೆಯ ಯೋಜನೆಗಳು ಭವಿಷ್ಯದಲ್ಲಿ ಜನೋಪಕಾರಿ ಯೋಜನೆಗಳಿಗೆ ನೆರವಾಗಲಿ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದರು.
ವೈರಲ್ ಆಯ್ತು ಮಾನ್ಯತಾ ಟೆಕ್ ಪಾರ್ಕ್ ಫಾಲ್ಸ್: ಇದೇನಾ ಬ್ರ್ಯಾಂಡ್ ಬೆಂಗಳೂರು ಎಂದ ಟೆಕ್ಕಿಗಳು!
ಬೆಂಗಳೂರು ಟೆಕ್ ಸಮ್ಮಿಟ್-2024 ಶೃಂಗಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಟೆಕ್ ಸಮ್ಮಿಟ್ ಎಂದು ಅಲ್ಲಿ, ನಾವೀನ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ತಂತ್ರಜ್ಞಾನ, ಪ್ರಗತಿಯ ಮನೋಭಾವ ಸಮ್ಮಿಳಿತವಾಗಿರುತ್ತದೆ. ನಾವು ಉತ್ಕೃಷ್ಟತೆಯನ್ನು ಸಾಧಿಸಲು ಮುಂದಾಗಿದ್ದೇವೆ. ಈ ಟೆಕ್ ಸಮ್ಮಿಟ್ ಮೂಲಕ ಅದನ್ನು ಸಾಕಾರಗೊಳಿಸಿಕೊಳ್ಳಬಹುದಾಗಿದೆ. ಬೆಂಗಳೂರು ಅದ್ಭುತ ಕಲ್ಪನೆಗಳ ತವರೂರು ಮತ್ತು ಸ್ಟಾರ್ಟ್ಅಪ್ಗಳಿಗೆ ವಿಶೇಷ ಅವಕಾಶಗಳನ್ನು ತೆರದಿಟ್ಟಿದೆ. ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಉದ್ಯಮಿಗಳು ಕನಸು ಕಾಣಲು, ಅದನ್ನು ನನಸು ಮಾಡಿಕೊಳ್ಳಲು ಇಲ್ಲಿ ಸಾಧ್ಯವಾಗಿದೆ.ಬೆಂಗಳೂರು ಟೆಕ್ ಶೃಂಗಸಭೆಯು ಒಂದು ಪರಂಪರೆಗೆ ಸಾಕ್ಷಿಯಾಗಿದೆ. ನಾವೀನ್ಯತೆ, ಕಲ್ಪನೆಗಳು, ಭವಿಷ್ಯವನ್ನು ರೂಪಿಸಲು, ನಮ್ಮ ಯೋಜನೆಗಳನ್ನು ಸಾಕಾರಗೊಳಿಸಿಕೊಳ್ಳಲು ಉತ್ತಮ ವೇದಿಕೆ ಒದಗಿಸಿದೆ ಎಂದು ತಿಳಿಸಿದ್ದರು.
ಸಾಧನೆಗಳು ಎಲ್ಲರಿಗೂ ಸ್ಫೂರ್ತಿಯಾಗಲಿ: ಟೆಕ್ ಸಮ್ಮಿಟ್‌ನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿಗಳು ಕೇವಲ ಮನ್ನಣೆಗೆ ಮಾತ್ರ ನೀಡಿರುವುದಿಲ್ಲ. ನಿಮ್ಮ ಪರಿಶ್ರಮ, ಸೃಜನಶೀಲತೆ ಮತ್ತು ಪರಿವರ್ತನಾತ್ಮಕ ಹಾಗೂ ಉತ್ತೇಜನಾತ್ಮಕ ತಂತ್ರಕ್ಕೆ ಮತ್ತು ನಿಮ್ಮ ಮಿತಿಯನ್ನು ದಾಟಿ ಮಾಡಿರುವ ಸಾಧನೆಗಳಿಗೆ ಸಿಕ್ಕಿರುವ ಗೌರವವಾಗಿದೆ. ನಿಮ್ಮ ಸಾಧನೆಗಳು ಎಲ್ಲರಿಗೂ ಸ್ಫೂರ್ತಿಯಾಗಲಿದೆ. ಹೊಸ ತಂತ್ರಜ್ಞಾನಗಳ ಮೂಲಕ, ನೈಜ-ಜಗತ್ತಿನಲ್ಲಿ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಿ ಎಂದು ಸಚಿವರು ಶುಭ ಹಾರೈಸಿದ್ದರು.