ಮುಂಗಾರು ಪೂರ್ವಕ್ಕೆ ಹೆಚ್ಚಿದ ತುಂಗಭದ್ರಾ ಒಳಹರಿವು

By Girish GoudarFirst Published May 14, 2022, 2:11 PM IST
Highlights

*  ಮುಂಡರಗಿ ಸೇರಿ ಅರ್ಧ ಭಾಗ​ಕ್ಕಿಲ್ಲ ಕುಡಿಯುವ ನೀರಿನ ಕೊರತೆ
*  ಸಿಂಗಟಾಲೂರು ಬ್ಯಾರೇಜ್‌ನಲ್ಲಿ 1.83 ಟಿಎಂಸಿ ನೀರು ಸಂಗ್ರಹ
*  ಬಹು​ಗ್ರಾಮ ಕುಡಿವ ನೀರಿನ ಯೋಜನೆ ಮೂಲ ಆಧಾರ
 

ಶರಣು ಸೊಲ​ಗಿ

ಮುಂಡರಗಿ(ಮೇ.14):  ಜಿಲ್ಲಾ ಕೇಂದ್ರ​ ಗದಗ(Gadag) ಸೇರಿ​ದಂತೆ ಜಿಲ್ಲೆಯ ಅರ್ಧ ಭಾಗಕ್ಕೆ ಕುಡಿವ ನೀರಿನ ಮೂಲ ಆಧಾ​ರ​ವಾ​ಗಿ​ರುವ ತುಂಗ​ಭದ್ರಾ ನದಿಗೆ(Tungabhadra River) ಮುಂಗಾರು ಪೂರ್ವದ ವ್ಯಾಪಕ ಮಳೆ​ಯಿಂದಾಗಿ ಅಪಾರ ಪ್ರಮಾಣ ನೀರು ಹರಿದು ಬರು​ತ್ತಿದ್ದು, ಪ್ರಸಕ್ತ ಸಾಲಿನ ಬೇಸಿ​ಗೆ​ಯಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಣೆಯಾಗಿದೆ.

ಮುಂಗಾರು ಪೂರ್ವದ ಮಳೆ(Rain) ಕೇವಲ ಮಧ್ಯ ಕರ್ನಾ​ಟಕ(Karnataka) ಮಾತ್ರ​ವಲ್ಲ, ತುಂಗ​ಭದ್ರಾ ನದಿಯ ಅಚ್ಚು​ಕಟ್ಟು ಪ್ರದೇ​ಶ​ವಾದ ಮಲೆ​ನಾಡು ಭಾಗ​ದ​ಲ್ಲಿಯೂ ಹಲವು ದಿನ​ಗ​ಳಿಂದ ಅಬ್ಬ​ರಿ​ಸು​ತ್ತಿದ್ದು, ಇದ​ರಿಂದಾಗಿ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು ನೆಮ್ಮ​ದಿಯ ವಿಷ​ಯ​ವಾ​ಗಿದೆ.

ನಿಶ್ಚಿತಾರ್ಥದ ದಿನವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ!

2800 ಕ್ಯುಸೆಕ್‌ ಒಳ​ಹ​ರಿವು

ತಾಲೂಕಿನ ಹಮ್ಮಿಗಿ ಹತ್ತಿರವಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜಿಗೆ ಉತ್ತಮ ಮಳೆ ಹಿನ್ನೆ​ಲೆ​ಯ​ಲ್ಲಿ ನಿತ್ಯವೂ 2800 ಕ್ಯುಸೆಕ್‌ ನೀರಿನ ಒಳ​ಹ​ರಿವು ಇದ್ದು, ಬ್ಯಾರೇಜಿನಲ್ಲಿ ಅದರ ಮಿತಿಯ ಒಟ್ಟು 1.83 ಟಿಎಂಸಿ ನೀರು ಸಂಗ್ರ​ಹ​ವಿದೆ. ನಿತ್ಯವೂ 2800 ಕ್ಯುಸೆಕ್‌ ನೀರನ್ನು ಬ್ಯಾರೇಜಿನಿಂದ ಹೊರಗೆ ಬಿಡಲಾಗುತ್ತಿದ್ದು, ಬೇಸಿ​ಗೆಯ(Summer) ಇನ್ನು​ಳಿದ ಅವ​ಧಿಗೆ ನೀರಿನ ಸಮಸ್ಯೆ ನಿವಾರಣೆಯಾಗಿದೆ.

ಬಹು​ಗ್ರಾಮ ಕುಡಿವ ನೀರಿನ ಯೋಜನೆ ಮೂಲ ಆಧಾರ

ಜಿಲ್ಲೆಯ ಎಲ್ಲಾ ಜನ​ವ​ಸ​ತಿ​ಗ​ಳಿಗೆ ನದಿ ಮೂಲದ ನೀರು(Water) ಪೂರೈಕೆ ಮಾಡುವ ನಿಟ್ಟಿ​ನಲ್ಲಿ 2015ರಲ್ಲಿ . 1046 ಕೋಟಿ ವೆಚ್ಚದ ಸಿಂಗಟಾಲೂರು ಏತ ನೀರಾವರಿ ಯೋಜ​ನೆ​ಯನ್ನು ಅನು​ಷ್ಠಾನ ಮಾಡ​ಲಾ​ಗಿದ್ದು, ಈ ಯೋಜ​ನೆಯ ವ್ಯಾಪ್ತಿ​ಯಲ್ಲಿ ಜಿಲ್ಲೆಯ ಗದಗ​-ಬೆಟ​ಗೇರಿ ಅವಳಿ ನಗರ, ಶಿರ​ಹಟ್ಟಿ, ಲಕ್ಷ್ಮೇ​ಶ್ವರ, ಮುಳ​ಗುಂದ ಪಟ್ಟಣ ಸೇರಿ​ದಂತೆ ಒಟ್ಟು 118 ಗ್ರಾಮ​ಗ​ಳಿಗೆ ಕುಡಿವ ನೀರು ಪೂರೈಕೆಯಾಗುತ್ತಿದೆ. ತುಂಗ​ಭದ್ರಾ ನದಿಗೆ ಅಡ್ಡ​ವಾಗಿ ನಿರ್ಮಿ​ಸ​ಲಾ​ಗಿ​ರುವ ಸಿಂಗ​ಟಾ​ಲೂರು ಏತ ನೀರಾ​ವರಿ ಬ್ಯಾರೇಜ್‌ನಲ್ಲಿ 1.83 ಟಿಎಂಸಿಗೂ ಅಧಿಕ ನೀರು ಸಂಗ್ರ​ಹ​ವಿ​ರು​ವುದು ಜಿಲ್ಲಾ​ಡ​ಳಿ​ತಕ್ಕೆ ನಿಟ್ಟು​ಸಿರು ಬಿಡು​ವಂತೆ ಮಾಡಿದೆ.

Gadag: 'ಎಸಿಬಿ ರೇಡ್' ನಾಟಕ ಮಾಡಿ ಹಣ ಕಿತ್ತಲು ಮುಂದಾದ ಖದೀಮರ ಟೀಮ್!

ಗಂಭೀರ ಸಮಸ್ಯೆ

ಪ್ರತಿ ಬೇಸಿ​ಗೆ​ಯ​ಲ್ಲಿಯೂ ತುಂಗಭದ್ರಾ ನದಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋಗಿ ಜಿಲ್ಲಾ ಕೇಂದ್ರ​ವಾದ ಗದಗ ನಗ​ರ​ದಲ್ಲಿ ಕುಡಿಯುವ ನೀರಿಗಾಗಿ ಸಾರ್ವ​ಜ​ನಿ​ಕರು ಪರ​ದಾ​ಡು​ತ್ತಿ​ದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ನದಿ​ಯಲ್ಲಿ ಸಾಕಷ್ಟುನೀರಿ​ದ್ದರೂ ನೀರು ಸರ​ಬ​ರಾಜು ಮಾಡುವ ಇಲಾಖೆ ಅಧಿ​ಕಾ​ರಿ​ಗಳ ನಿರ್ಲ​ಕ್ಷ್ಯ​ದಿಂದಾಗಿ ಸಾರ್ವ​ಜ​ನಿ​ಕರು ಪರ​ದಾ​ಡು​ವುದು ಮಾತ್ರ ತಪ್ಪಿಲ್ಲ.

4-5 ದಿನಗಳಿಂದ ರಾಜ್ಯಾದ್ಯಂತ(Karnataka) ಅಲ್ಲಲ್ಲಿ ಜೋರಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಗೆ ನೀರು ಬರುತ್ತಿದೆ. ಇದೀಗ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನಲ್ಲಿ 1.83 ಟಿಎಂಸಿ ನೀರು ನಿಂತಿದ್ದು, ಒಳ ಹರಿವು ಇದೆ, ಈಗಿರುವಷ್ಟೇ ನೀರು ಇನ್ನೂ ಮುಂದಿನ ಒಂದರಿಂದ ಒಂದೂವರೆ ತಿಂಗಳವರೆಗೆ ಕುಡಿಯುವ ನೀರಿಗೆ ಯಾವುದೇ ತೊದರೆಯಾಗುವುದಿಲ್ಲ. ನಂತರದಲ್ಲಿ ಮತ್ತೆ ದೊಡ್ಡ ಮಳೆಯಾದಲ್ಲಿ ಹೆಚ್ಚಿನ ನೀರು ಬರು​ತ್ತದೆ ಅಂತ ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಭಾಗ 2ರ ಕಾರ್ಯಪಾಲಕ ಅಭಿಯಂತರ ಐಗೋಳ ಪ್ರಕಾಶ ತಿಳಿಸಿದ್ದಾರೆ.  
 

click me!