ಬೈಕ್‌ಗಳ ಕರ್ಕಶ ಶಬ್ದ ಮಾಡದಂತೆ ನೋಡಿಕೊಳ್ಳಬೇಕೆ ಹೊರತು, ಅವುಗಳಿಗೆ ಮೆಕ್ಯಾನಿಕ್ ಗಳು ಅವಕಾಶ ನೀಡಬಾರದು ಎಂದು ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್ ಮನವಿ ಮಾಡಿದರು.
ಎಚ್.ಡಿ. ಕೋಟೆ : ಬೈಕ್‌ಗಳ ಕರ್ಕಶ ಶಬ್ದ ಮಾಡದಂತೆ ನೋಡಿಕೊಳ್ಳಬೇಕೆ ಹೊರತು, ಅವುಗಳಿಗೆ ಮೆಕ್ಯಾನಿಕ್ ಗಳು ಅವಕಾಶ ನೀಡಬಾರದು ಎಂದು ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್ ಮನವಿ ಮಾಡಿದರು.
ಪಟ್ಟಣದ ಹ್ಯಾಂಡ್ ಪೋಸ್ಟ್ ನ ಸಮುದಾಯ ಭವನದಲ್ಲಿ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕು ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದಿಂದ ನಡೆದ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
undefined
ಸಂಘ ಸಂಸ್ಥೆಗಳ ಸ್ಥಾಪನೆಯಿಂದ ಆರ್ಥಿಕ ಅಭಿವೃದ್ಧಿ ಕಾಣಲು ಸಾಧ್ಯ. ಸಂಘದ ಸದಸ್ಯರು ಪರಸ್ಪರ ಹೊದಾಣಿಕೆಯಿಂದ ಇದ್ದಲ್ಲಿ ಅಭಿವೃದ್ದಿ ಸಾಧ್ಯ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ವಾಹನಗಳನ್ನು ತಮಗಿಷ್ಟದ ರೀತಿ ಬದಲಾಯಿಸಲು ಬರುತ್ತಾರೆ. ಈ ರೀತಿ ಬದಲಿಸುವ ವೇಳೆ ಕರ್ಕಶವಾದ ಶಬ್ದ ಬರುವಂತೆ ಹೇಳುತ್ತಾರೆ. ಇದರಿಂದ ಶಬ್ದ ಮಾಲಿನ್ಯ ಎದುರಾಗುತ್ತದೆ. ಆದ್ದರಿಂದ ಕರ್ಕಶವಾದ ಶಬ್ದ ಬರುವಂತೆ ಬೈಕ್ ಗಳನ್ನು ಬದಲಿಸಬಾರದು ಎಂದರು.
ಸಂಘದ ಅಧ್ಯಕ್ಷ ರಾಯಪ್ಪನ್ ಮಾತನಾಡಿ, ನಮ್ಮ ಸಂಘದ ವತಿಯಿಂದಸಂಘದಸದಸ್ಯರ ಜೀವನದಲ್ಲಿ ಏರೂಪೇರಾದಾಗ ಅವರಿಗೆ ಆರ್ಥಿಕ ಸಹಾಯ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಕೂಡ ದೇ ರೀತಿ ಸಹಾಯ ಮಾಡಲಾಗುವುದು ಎಂದು ಅವರು ಹೇಳಿದರು.
ಸಂಘಕ್ಕೆ ಏನಾದರೂ ದೂರು ನೀಡಲು ಬಯಸಿದರೆ, ಲಿಖಿತ ರೂಪದಲ್ಲಿ ದೂರನ್ನು ನೀಡಬೇಕು ಎಂದು ಮನವಿ ಮಾಡಿದರು.
ಮೇ 1ರ ಕಾರ್ಮಿಕ ದಿನದಂದು ಮತ್ತು ಡಿ. 30 ರಂದು ಸರ್ವ ಸದಸ್ಯರ ಸಭೆ ಕರೆಯಲಾಗುವುದು. ಆದ್ದರಿಂದ ಈ ಸಭೆಗಳಲ್ಲಿ ತಮ್ಮ ಕುಂದು ಕೊರತೆಯನ್ನು ಸಲ್ಲಿಸಬಹುದು ಎಂದರು.
ಕೆಂದ್ರ ಸರ್ಕಾರವು ಅಂಚೆ ಇಲಾಖೆ ವತಿಯಿಂದ 10 ಲಕ್ಷ ರೂ ಹಣದ ವಿಮೆಯನ್ನು 400 ರೂ ವೆಚ್ಚದಲ್ಲಿ ನೀಡುತ್ತಿದ್ದು, ಸಂಘದ 140 ಮಂದಿಗೆ ಉಚಿತವಾಗಿ ಮಾಡಲಾಗಿದೆ ಎಂದರು.
ಈ ವೇಳೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಜಯ ಗಳಿಸಿದವರಿಗೆ ಬಹುಮಾನ ನೀಡಲಾಯಿತು. ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆತೋರಿದವರನ್ನೂ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಧನರಾಜ್, ರವಿ, ಯುಸೂಪ್, ಸಯ್ಯದ್ ರಫೀಕ್, ಫರ್ಹಾನ್ ಅಹಮದ್, ತೌಸಿಫ್, ಸಾಜಿಲ್ಶರೀಫ್, ಕುಮಾರ್, ಸುನೀಲ್, ಚಿನ್ನಯ್ಯ, ಸಂಘದ ಅಧ್ಯಕ್ಷ ರಾಯಪ್ಪನ್, ಉಪಾಧ್ಯಕ್ಷ ನಟೇಶ್, ಸಹ ಕಾರ್ಯದರ್ಶಿ ಎನ್. ರಾಜು, ಖಜಾಂಚಿ ನೌಷಿದ್, ಕಾರ್ಯದರ್ಶಿ ಶಫಿವುದ್ದೀನ್, ಸೂರಿ ಇದ್ದರು.
ಇಯರ್ ಬಡ್ನಿಂದ ಕಿವಿಗೆ ಹಾನಿ
ದಿನದಲ್ಲಿ ವಿರಾಮದ ಸಮಯವನ್ನು ಕಳೆಯುವ ಮಾರ್ಗವೇ ಇಂದು ಸ್ಕ್ರೀನ್ ಗಳಾಗಿವೆ. ಹಿರಿಯರಿಂದ ಹಿಡಿದು ಯುವ ಮಂದಿ, ಮಕ್ಕಳವರೆಗೆ ಎಲ್ಲರೂ ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ ಗಳನ್ನು ವೀಕ್ಷಿಸುವುದು ಸಾಮಾನ್ಯವಾಗಿದೆ. ಮಕ್ಕಳಿಗೆ ಕೆಲವು ಹೋಂ ವರ್ಕನ್ನೂ ಸಹ ಟ್ಯಾಬ್ ಗಳಲ್ಲಿ ಮಾಡುವ ಅವಕಾಶ ಇರುವುದರಿಂದ ಅವರ ಸ್ಕ್ರೀನ್ ಸಮಯ ಇನ್ನಷ್ಟು ಹೆಚ್ಚಾಗಿದೆ. ಬೆಳಗ್ಗೆ, ಸಂಜೆಯ ವಾಕ್ ಗೆಂದು ಪಾರ್ಕ್ ಗಳಿಗೆ ಬರುವ ಹಿರಿಯರು ಕೂಡ ತಮ್ಮ ತಮ್ಮ ಮೊಬೈಲ್ ಗಳಲ್ಲಿ ಹಾಡು ಕೇಳುವುದು ಸಾಮಾನ್ಯ. ಈ ಸಮಯದಲ್ಲೆಲ್ಲ ಮತ್ತೊಬ್ಬರಿಗೆ ತೊಂದರೆಯಾಗಬಾರದೆಂದು ಕಿವಿಗಳಿಗೆ ಇಯರ್ ಬಡ್ಸ್ ಬಳಕೆ ಮಾಡುವುದು ಎಲ್ಲೆಡೆ ಕಂಡುಬರುತ್ತದೆ. ಆದರೆ, ಈ ಅಭ್ಯಾಸದಿಂದ ನಿಧಾನವಾಗಿ ಕಿವಿಗಳು ತಮ್ಮ ಶ್ರವಣ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ. ಅನುಕೂಲವೆಂದು ನಾವು ಬಳಕೆ ಮಾಡುವ ಇಯರ್ ಫೋನ್ ಗಳು ಕಿವಿಗಳಿಗೆ ಶಬ್ದ ಮಾಲಿನ್ಯವಾಗಿವೆ. ಕೇಳುವ ಸಾಮರ್ಥ್ಯದ ಮೇಲೆ ಶಬ್ದ ಮಾಲಿನ್ಯ ಅತ್ಯಂತ ಪರಿಣಾಮ ಬೀರುತ್ತದೆ. ವಾಹನಗಳ ಹಾರ್ನ್ ನಿಂದ ಹಿಡಿದು ಇತರ ಜೋರಾದ ಎಲ್ಲ ರೀತಿಯ ಸದ್ದುಗಳಂತೆಯೇ ಇಯರ್ ಫೋನ್ ಕೂಡ ನಮ್ಮ ಕಿವಿಗಳ ಮೇಲೆ ಪರಿಣಾಮ ಬೀರುತ್ತವೆ.
ಸುಧಾರಿಸಿಕೊಳ್ಳಲು ಸಮಯವಿಲ್ಲದಿದ್ದರೆ...
ಗದ್ದಲದಿಂದ ಶ್ರವಣ ಸಾಮರ್ಥ್ಯ ಕುಗ್ಗಬಹುದು ಅಥವಾ ಶಾಶ್ವತವಾಗಿ ಕಿವಿ ಕೇಳದಿರಬಹುದು. ಒಳಗಿವಿಯಲ್ಲಿರುವ ಸೂಕ್ಷ್ಮವಾದ, ಅತ್ಯಂತ ಸಣ್ಣದಾದ ಕೂದಲ ಕೋಶಗಳು ಕಿವಿಗಳಿಗೆ ಕೇಳುವ ಸಾಮರ್ಥ್ಯ ನೀಡುತ್ತವೆ. ಅವುಗಳನ್ನು ಪದೇ ಪದೆ ಅತಿಯಾಗಿ ಬಾಗಿಸುವುದರಿಂದ, ಜೋರಾದ ಗದ್ದಲಕ್ಕೆ ತೆರೆದುಕೊಳ್ಳುವುದರಿಂದ ಅವುಗಳ ಮೇಲೆ ಭಾರೀ ಪರಿಣಾಮ ಉಂಟಾಗುತ್ತದೆ. ಇಯರ್ ಬಡ್ಸ್, ಹೆಡ್ ಫೋನ್ ಯಾವುದನ್ನೇ ಬಳಕೆ ಮಾಡಿದರೂ ಇವುಗಳ ಮೇಲೆ ಪ್ರಭಾವ ಉಂಟಾಗುತ್ತದೆ. ಪಟಾಕಿಯಂತಹ ಸದ್ದುಗಳಿಗೆ ಎದುರಾದ ಬಳಿಕ ಸುಧಾರಿಸಿಕೊಳ್ಳಲು ಇವುಗಳಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಅಷ್ಟು ಸಮಯ ದೊರೆಯದೇ ಮತ್ತೆ ಮತ್ತೆ ಒತ್ತಡಕ್ಕೆ ತುತ್ತಾಗುತ್ತಲೇ ಇದ್ದಾಗ ಇವು ಹಾನಿಗೆ ಒಳಗಾಗಿ ಕಾಯಮ್ಮಾಗಿ ಕೇಳುವ ಸಾಮರ್ಥ್ಯ ನಷ್ಟವಾಗಬಹುದು.
Healthy Food : ಮನೆಯಲ್ಲೇ ಬೋರ್ನ್ ವಿಟಾ ಮಾಡಬುಹದು, ಹೇಗೆ ಇಲ್ಲಿದೆ ನೋಡಿ
ಕಿವಿಗಳಲ್ಲಿರುವ ಸೂಕ್ಷ್ಮ ಕೂದಲುಗಳು ಹಾನಿಗೆ ಒಳಗಾಗಲು ಹೆಡ್ ಫೋನ್ ಅಥವಾ ಇಯರ್ ಬಡ್ ಗಳ ವಾಲ್ಯೂಮ್ ತೀರ ಹೆಚ್ಚಾಗಿರಬೇಕು ಎಂದೇನೂ ಇಲ್ಲ. ಹಲವಾರು ಪ್ರಕರಣಗಳಲ್ಲಿ, ನಿರಂತರವಾಗಿ ಮಧ್ಯಮ ಮಟ್ಟದ ಶಬ್ದದ ತರಂಗಗಳಿಗೆ ತೆರೆದುಕೊಂಡಾಗಲೂ ಅವು ಶಾಶ್ವತವಾಗಿ ಹಾನಿಗೆ ತುತ್ತಾಗಿರುವುದು ಕಂಡುಬಂದಿದೆ ಎನ್ನುತ್ತಾರೆ ಹಲವಾರು ತಜ್ಞರು.