ಕೊರೋನಾ ಸೋಂಕಿತರಿಗಿನ್ನು ಮನೆಯಲ್ಲೇ ಚಿಕಿತ್ಸೆ: ಸರ್ಕಾರದಿಂದ ನಿಗಾ

By Suvarna NewsFirst Published Jul 2, 2020, 2:14 PM IST
Highlights

ಮೈಲ್ಡ್ ಮತ್ತು ಎ ಸಿಂಟಂಮ್ಸ್ ಇರೋರಿಗೆ ಮನೆಯಲ್ಲಿ ಚಿಕಿತ್ಸೆ ಕೊಡುವ ಸಲಹೆ ಎಕ್ಸ್ ಪರ್ಟ್ ಗಳಿಂದ ಬಂದಿದೆ. ವಿಶ್ವದಲ್ಲಿ ಅನೇಕ ಕಡೆ ಹೀಗೆ ಮಾಡಿದ್ದಾರೆ. ನಾವು ಹಾಗೆ ಮಾಡಿ ಅಂತಹವರ ಮೇಲೆ ನಿಗಾ ಇಡುವ ಕೆಲಸ ಮಾಡ್ತೀವಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

ಬೆಂಗಳೂರು(ಜು.02): ಮೈಲ್ಡ್ ಮತ್ತು ಎ ಸಿಂಟಂಮ್ಸ್ ಇರೋರಿಗೆ ಮನೆಯಲ್ಲಿ ಚಿಕಿತ್ಸೆ ಕೊಡುವ ಸಲಹೆ ಎಕ್ಸ್ ಪರ್ಟ್ ಗಳಿಂದ ಬಂದಿದೆ. ವಿಶ್ವದಲ್ಲಿ ಅನೇಕ ಕಡೆ ಹೀಗೆ ಮಾಡಿದ್ದಾರೆ. ನಾವು ಹಾಗೆ ಮಾಡಿ ಅಂತಹವರ ಮೇಲೆ ನಿಗಾ ಇಡುವ ಕೆಲಸ ಮಾಡ್ತೀವಿ. ರೋಗದ ಲಕ್ಷಣ ತೀವ್ರ ಆದ್ರೆ ಅವ್ರನ್ನ ತಕ್ಷಣ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡ್ತೀವಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

ಅಮಾನವೀಯವಾಗಿ ಅಂತ್ಯ ಸಂಸ್ಕಾರ ಮಾಡುತ್ತಿರುವ ಕುರಿತು ನಮಗೆ ಎರಡು ಮೂರು ಕಡೆಯಿಂದ ದೂರ ಬಂದಿದೆ. ಬಳ್ಳಾರಿಯ ಘಟನೆಗೆ ತಕ್ಷಣ ಕ್ರಮವಹಿಸಲಾಗಿದೆ. ಕೊರೊನಾದಿಂದ ಮೃತ ಪಟ್ಟವರ ಅಂತ್ಯ ಸಂಸ್ಕಾರ ಅಮಾನವೀಯವಾಗಿ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ. ಅದೊಂದು ಅಮಾನವೀಯ ಘಟನೆ. ಡಿಸಿ ಕೂಡಾ ಕ್ಷಮೆ ಕೇಳಿದ್ದಾರೆ. ಪ್ರಕರಣದ ಸಂಬಂದ 6 ಜನರನ್ನ ಅಮಾನತು ಮಾಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಸ್ಪಷ್ಟ ಕಾನೂನು ಜಾರಿಗೆ ತರುತ್ತೇವೆ. ಯಾರೇ ಆದ್ರು ಮಾನವೀಯದ ಅಂಶ ಇರಬೇಕು ಎಂದಿದ್ದಾರೆ.

ಅಮೆರಿಕದಲ್ಲಿ ದಿನಕ್ಕೆ 1 ಲಕ್ಷ ಕೊರೋನಾ ಕೇಸಿನ ಭೀತಿ!

ಮೃತದೇಹ ಎಂದ ಕೂಡಲೇ ಅಮಾನವೀಯವಾಗಿ ನೋಡೋದು ಮನುಷ್ಯತ್ವ ಅಲ್ಲ. ಇಂತಹ ಘಟನೆಯನ್ನು ಸರ್ಕಾರ ಖಂಡಿಸುತ್ತದೆ. ಮತ್ತೆ ಇಂತಹ ಘಟನೆಗೆ ಸರ್ಕಾರ ಆಸ್ಪದ ಕೊಡೋದಿಲ್ಲ. ಇನ್ನು ಮೇಲೆ ಇಂತಹ ಅಚಾತುರ್ಯ ಆಗದ ಹಾಗೇ ನೋಡಿಕೊಳ್ಳುತ್ತೇವೆ. ಶೀಘ್ರವೇ ಇದಕ್ಕಾಗಿ ವಿಶೇಷ ಕಾನೂನು ಜಾರಿಗೆ ತರುತ್ತೇವೆ ಎಂದಿದ್ದಾರೆ.

ಅಂತ್ಯ ಸಂಸ್ಕಾರಕ್ಕೆ ಜಾಗದ ಕೊರತೆ ಇಲ್ಲ

ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗ ಇಲ್ಲದೆ ಇರೋ ವಿಚಾರ‌ವಾಗಿ ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗದ ಕೊರತೆ ಇಲ್ಲ. ಅಂತಹ ಸ್ಥಿತಿ ಇನ್ನು ಬೆಂಗಳೂರಿನಲ್ಲಿ ನಿರ್ಮಾಣ ಆಗಿಲ್ಲ. ಮುಂದೆಯೂ ಆಗೊಲ್ಲ. ಅ ಪ್ರಮಾಣದಲ್ಲಿ ಸಾವು ಕೂಡಾ ಆಗ್ತಿಲ್ಲ ಎಂದು ಭರವಸೆ ನೀಡಿದ್ದಾರೆ.

ಕೊರೊನಾ ಕೇರ್ ಸೆಂಟರ್ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇರ್ ಸೆಂಟರ್ ಅನ್ನೋದು ಡೈನಮಿಕ್ ನಂಬರ್ಸ್. ಸೊಂಕಿತರು ಹೆಚ್ಚು ಆದ ಹಾಗೆ ಕೇರ್ ಸೆಂಟರ್ ಹೆಚ್ಚಳ ಮಾಡಬೇಕು. ಮಾರ್ಗಸೂಚಿಗಳನ್ನು ನಾವು ಬದಲಾವಣೆ ಮಾಡುತ್ತಿದ್ದೇವೆ‌. ನಿನ್ನೆ ಪರಿಣಿತರ ಜೊತೆ ಚರ್ಚೆ ಮಾಡಿದ ಮೇಲೆ ಕೆಲ ಸಲಹೆ ಕೊಟ್ಟಿದ್ದಾರೆ ಎಂದಿದ್ದಾರೆ.

ಗುಡ್‌ ನ್ಯೂಸ್: ಡಾ| ಕಜೆ ಕೋವಿಡ್‌ ಔಷಧ ಯಶಸ್ವಿ, ರೋಗಿಗಳು ಪೂರ್ಣ ಗುಣಮುಖ!

ಸಾಧಕ ಬಾಧಕ ಚರ್ಚೆ ಆಗ್ತಿದೆ. ಇಂದು ಅಧಿಕಾರಿಗಳ ಸಭೆ ಮಾಡ್ತಿದ್ದೇನೆ. ಸಭೆ ಬಳಿಕ ಸಿಎಂ ಹಾಗೂ ಟಾಸ್ಕ್ ಫೋರ್ಸ್ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ತೀವಿ. ಅಂತಿಮ ರೂಪುರೇಷೆ ಇಂದು ಸಂಜೆ ಅಥವಾ ನಾಳೆಯೊಳಗೆ ಬಿಡುಗಡೆ ಮಾಡ್ತೀವಿ ಎಂದಿದ್ದಾರೆ.

ನಿನ್ನೆ ಎಕ್ಸ್ ಪರ್ಟ್ ಜೊತೆ ಚರ್ಚೆ ಮಾಡಿದ್ದೇವೆ. ರೋಗದ ಲಕ್ಷಣ ಇರೋರು, ಲಕ್ಷಣ ಇಲ್ಲದೆ ಇರೋರಿಗೆ ಪಾಸಿಟೀವ್ ಇರುತ್ತೆ. ಅವರಿಗೆ ಯಾವುದೇ ರೋಗ ಲಕ್ಷಣ ಇರೋದಿಲ್ಲ. ಅಂತಹವರನ್ನ ಎ ಕ್ಯಾಟಗರಿ ಅಂತ ಮಾಡಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

ಕೊರೋನಾ ಅಟ್ಟಹಾಸ: ಹೋಟೆಲ್‌ ಬಂದ್‌ ಮಾಡಲು ನಿರ್ಧಾರ

ಬೆಂಗಳೂರಿನಲ್ಲಿ ದಿನೇ ದಿನೇ ಕೇಸ್ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೋಂಕಿತರ ಸಂಖ್ಯೆ ಹೆಚ್ಚಳ ಆಗೋದ್ರೀಂದ ಹೆಚ್ಚು ಆತಂಕವಾಗೋದು ಬೇಡ. ಲಕ್ಷಾಂತರ ಜನ ಹೊರ ರಾಜ್ಯಗಳಿಂದ ಬಂದಿದ್ದಾರೆ. ನಾವು ಜನಜೀವನ ಸಹಜ ಸ್ಥಿತಿಗೆ ತರಲು ಲಾಕ್ ಡೌನ್ ಸಡಿಲ ಮಾಡಿದ್ದೇವೆ. ಸಡಿಲ ಆಗೋ ಮುಂಚೆ ಮೂರು ಅಂಕಿ ದಾಟಿರಲಿಲ್ಲ.
 
ಮೊದಲ ನಾಲ್ಕು ತಿಂಗಳಲ್ಲಿ 1300 ಕೇಸ್ ಇತ್ತು. ಆದ್ರೆ ಕಳೆದ ಎಂಟು ದಿನಗಳಲ್ಲಿ 4 ಸಾವಿರ ಕೇಸ್ ಆಗಿದೆ. ಕ್ಲಸ್ಟರ್, ಪ್ರೈಮರಿ ಕಾಂಟ್ಯಾಕ್ಟ್ ನಲ್ಲಿ ಸೋಂಕು ಹರಡಿದೆ. ಆದ್ರೆ ನಮ್ಮ ಗುರಿ ಸಾವಿನ ಪ್ರಮಾಣ ಕಡಿಮೆ ಇರಬೇಕು. ಸಾವಿನ ಪ್ರಮಾಣ ನಮ್ಮಲ್ಲಿ ಕಡಿಮೆ ಇದೆ. ಬೇರೆ ವೈರೆಸ್ ಸೋಂಕಿನ ಸಾವಿನ ಪ್ರಮಾಣಕ್ಕಿಂತ ಕೊರೊನಾ ಸೋಂಕಿನ ಸಾವಿನ ಪ್ರಮಾಣ ‌ಕಡಿಮೆ ಇದೆ. ಹೀಗಾಗಿ ಇದರ ಕಡೆ ನಮ್ಮ ಗಮನ ಕೊಡ್ತೀವಿ. ಜೀವ ಉಳಿಸೋದು ಸರ್ಕಾರದ ಮುಂದೆ ಇರೋ ಸವಾಲು ಎಂದಿದ್ದಾರೆ.

ದಯನೀಯವಾಗಿರುವ ಪಕ್ಷವನ್ನು ಡಿಕೆಶಿ ಸ್ವಲ್ಪ ಉತ್ತಮ ಸ್ಥಿತಿಗೆ ತರಲಿ

ಡಿಕೆ ಶಿವಕುಮಾರ್ ಕೆಪಿಸಿಸಿ ಸಾರಥಿ ಆಗಿ ಅಧಿಕಾರ ಸ್ವೀಕಾರ ವಿಚಾರವಾಗು ಮಾತನಾಡಿ, ಅವರಿಗೆ ಒಳ್ಳೆಯದಾಗಲಿ. ದೇವರು ಅವರಿಗೆ ಆರೋಗ್ಯ, ಶಕ್ತಿ, ನೆಮ್ಮದಿ ಕೊಡಲಿ. ರಾಜ್ಯ ಪ್ರವಾಸ ಮಾಡಲಿ. ಪಾಪ ದಯನೀಯವಾಗಿರುವ ಪಕ್ಷವನ್ನು ಅವರು ಸ್ವಲ್ಪ ಉತ್ತಮ ಸ್ಥಿತಿಗೆ ತರಲಿ ಎಂದಿದ್ದಾರೆ.

ಡಿಕೆ ಶಿವಕುಮಾರ್ ಯಾರಿಗೂ ಜಗ್ಗೋ ಮಗ ಅಲ್ಲ: ಬಿಜೆಪಿ ಮುಕ್ತ ರಾಷ್ಟ್ರವಾಗಿಸಲು ಕರೆ!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಸದೃಢವಾಗಿ ಇರಬೇಕು. ಆಗ ನಾವು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಬಿಜೆಪಿ ಪಕ್ಷ ಕೇಡರ್ ಬೇಸ್ ಪಕ್ಷ. ಬೇರೆ ಪಕ್ಷದ ಅಧ್ಯಕ್ಷರು ಯಾರ್ ಆಗ್ತಾರೆ ಅನ್ನೋದು ನಮಗೆ ಮುಖ್ಯ ಅಲ್ಲ. ನಮ್ಮ ಉತ್ತಮ ಸೇವೆಯನ್ನ ಮತ್ತಷ್ಟು ಉತ್ತಮ ಪಡಿಸೋದು ನಮ್ಮ ಆದ್ಯತೆ‌. ನಾವು ಈಗ 120 ಇದ್ದೇವೆ. ಅದನ್ನ 150 ಕ್ಕೆ ಮುಂದಿನ ಸಾರಿ ತೆಗೆದುಕೊಂಡು ಹೋಗೋ ಕಡೆ ನಮ್ಮ ದೃಷ್ಟಿ ಇರುತ್ತದೆ ಎಂದಿದ್ದಾರೆ.

click me!