ಲಕ್ಷಣವಿಲ್ಲದಿದ್ರೂ ಸೊಂಕು: ಜಿಲ್ಲಾಡಳಿತಕ್ಕೆ ತಲೆನೋವು

By Kannadaprabha NewsFirst Published May 28, 2020, 2:53 PM IST
Highlights

ಕೋಲಾರ ಜಿಲ್ಲೆಯಲ್ಲಿ ಸದ್ಯ ಪತ್ತೆಯಾಗುತ್ತಿರುವ ಕೊರೋನಾ ಸೋಂಕಿತರಲ್ಲಿ ಯಾವುದೇ ಸೋಂಕಿನ ಗುಣಲಕ್ಷಣಗಳು ಇರುವುದಿಲ್ಲ. ಆದರೆ ಅವರಲ್ಲಿ ಪಾಸಿಟಿವ್‌ ಖಚಿತವಾಗಿರುತ್ತದೆ. ಇದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ತಲೆ ನೋವು ತಂದಿದೆ.

ಕೋಲಾರ(ಮೇ 28): ಜಿಲ್ಲೆಯಲ್ಲಿ ಸದ್ಯ ಪತ್ತೆಯಾಗುತ್ತಿರುವ ಕೊರೋನಾ ಸೋಂಕಿತರಲ್ಲಿ ಯಾವುದೇ ಸೋಂಕಿನ ಗುಣಲಕ್ಷಣಗಳು ಇರುವುದಿಲ್ಲ. ಆದರೆ ಅವರಲ್ಲಿ ಪಾಸಿಟಿವ್‌ ಖಚಿತವಾಗಿರುತ್ತದೆ. ಇದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ತಲೆ ನೋವು ತಂದಿದೆ.

ವಿಶ್ವದಾದ್ಯಂತ ಕೊರೋನಾ ಮಹಾಮಾರಿ ಜನರನ್ನು ಕಾಡುತ್ತಾ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಆದರೆ ಆ ಜಿಲ್ಲೆಯ ಕೊರೋನಾ ಸೋಂಕೇ ಕಾಣಿಸುವುದಿಲ್ಲ. ಕೋಲಾರದಲ್ಲಿ ಸೋಂಕಿತರಿಗೆ ಜ್ವರವೂ ಇಲ್ಲ. ನೆಗಡಿ ಮತ್ತು ಕೆಮ್ಮೂ ಇಲ್ಲ ಇದರ ಪರಿಣಾಮ ಆರೋಗ್ಯ ಇಲಾಖೆಗೆ ಸೊಂಕಿತರ ಪತ್ತೆ ತಲೆನೋವಾಗಿ ಪರಿಣಮಿಸಿದೆ. ಹೌದು, ಕೋಲಾರ ಜಿಲ್ಲೆಯಲ್ಲಿ 18 ಜನ ಕೊರೋನಾ ಸೋಂಕಿತರಿದ್ದು ಯಾರೊಬ್ಬರಲ್ಲೂ ಕೂಡಾ ಸಣ್ಣಪುಟ್ಟಗುಣಲಕ್ಷಣಗಳೂ ಪತ್ತೆಯಾಗಿಲ್ಲ, ಆದರೆ ಕೆಲವು ಪ್ರದೇಶಗಳಲ್ಲಿ ವಯಸ್ಸಾದವರಲ್ಲಿ ಕೊರೋನಾ ಸೋಂಕು ಪತ್ತೆಯಾದರೆ ಅವರಲ್ಲಿ ಉಸಿರಾಟದ ತೊಂದರೆ ಸೇರಿದಂತೆ ಹಲವು ಗುಣ ಲಕ್ಷಣಗಳು ಕಂಡು ಬಂದಿವೆ.

Latest Videos

ಜೂನ್ ನಂತ್ರ ಮಾಲ್, ಥಿಯೇಟರ್ ಬಿಟ್ಟು ಮತ್ತೆಲ್ಲವೂ ಓಪನ್..?

ಕೋಲಾರದಲ್ಲಿ ಪತ್ತೆಯಗಿರುವ ಪಿ907, ಪಿ1812, ಪಿ2147 ಸೋಂಕಿತರಲ್ಲೂ ಕೂಡಾ ಈವರೆಗೆ ಯಾವುದೇ ರೋಗ ಲಕ್ಷಣಗಳಿಲ್ಲ ಅವರಿಗೆ ಕನಿಷ್ಠ ಉಸಿರಾಟದ ತೊಂದರೆ ಕೆಮ್ಮು, ನೆಗಡಿಯಂತ ಲಕ್ಷಣಗಳೂ ಕೂಡ ಕಂಡು ಬಂದಿಲ್ಲ. ಸದ್ಯ ಆರೋಗ್ಯ ಇಲಾಖೆಗೆ ತಲೆನೋವಾಗಿರುವ ಅಂಶ ಅಂದ್ರೆ ಸೋಂಕಿತರಲ್ಲೂ ರೋಗ ಲಕ್ಷಣ ಇಲ್ಲ, ಅವರ ಪ್ರಾಥಮಿಕ ಸಂಪರ್ಕ ಹೊಂದಿರುವವರಲ್ಲೂ ರೋಗ ಲಕ್ಷಣಗಳಿಲ್ಲ ಪರಿಣಾಮ ಸೋಂಕಿತರನ್ನು ಪತ್ತೆ ಹಚ್ಚೋದು ಆರೋಗ್ಯ ಇಲಾಖೆಗೆ ಕಷ್ಟವಾಗಿದೆ.

ಹಾಗಾಗಿ ಜಿಲ್ಲೆಯಲ್ಲಿ ಕಂಟೈನ್‌ಮೆಂಟ್‌ ಏರಿಯಾಗಳಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ರಾರ‍ಯಂಡಮ್‌ ಟೆಸ್ಟ್‌ಗಳನ್ನು ಮಾಡುವ ಮೂಲಕ ಕೊರೋನಾ ಸೋಂಕನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ.

ಸೋಂಕು ಡ್ರೈವರ್‌ಗಳಿಂದಲೇ ಹೆಚ್ಚು:

ಇನ್ನು ಕೋಲಾರ ಜಿಲ್ಲೆಯಲ್ಲಿ ಯಾವಾಗ ಎಪಿಎಂಸಿ ಮಾರುಕಟ್ಟೆಗಳಿಂದ ಹೊರ ರಾಜ್ಯಗಳಿಗೆ ಹೋಗಿ ಬರುತ್ತಿರವ ಡ್ರೈವರ್‌ಗಳಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿತ್ತೋ ಹಾಗಾಗಿ ಕೋಲಾರದಲ್ಲಿ ಹೊರ ರಾಜ್ಯಗಳಿಗೆ ಹೋಗಿ ಬರುವ ಕೇಸ್‌ಗಳನ್ನು ಹೈರಿಸ್ಕ್‌ ಎಂದು ಪರಿಗಣಿಸಲಾಗುತ್ತಿದೆ.

ಹೊರ ರಾಜ್ಯಕ್ಕೆ ಹೋಗಿ ಬರುವ ಡ್ರೈವರ್‌ಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಜೊತೆಗೆ ಕೆಲವರು ಮಾಹಿತಿ ನೀಡದೆ ಹೋಗಿ ಬಂದಿರುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಕಾರಣದಿಂದಲೇ ಹೊರ ರಾಜ್ಯಗಳಿಗೆ ಹೋಗಿ ಬಂದಿರುವ ಡ್ರೈವರ್‌ಗಳನ್ನು ಪತ್ತೆಹಚ್ಚಲು ಪೊಲೀಸ್‌ ಇಲಾಖೆ ಸಹಾಯವನ್ನು ಪಡೆಯಲಾಗುತ್ತಿದೆ. ಹೊರ ರಾಜ್ಯಗಳಿಗೆ ಹೋಗಿ ಬಂದಿರುವ ಡ್ರೈವರ್‌ಗಳ ಟವರ್‌ ಲೊಕೇಶನ್‌ ಟ್ರೇಸ್‌ ಮಾಡುವ ಮೂಲಕ ಅಂತ ಡ್ರೈವರ್‌ಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಕಾರಣ ಸೋಂಕಿತರಲ್ಲಿ ರೋಗ ಲಕ್ಷಣ ಕಾಣಿಸದಿದ್ದರೂ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರಲ್ಲಿ ರೋಗ ಹರಡುತ್ತಿದೆ. ಅದಕ್ಕೆ ಉದಾಹರಣೆಯಾಗಿ ಪಿ.1587, ಪಿ.1946, ಪಿ1128 ಡ್ರೈವರ್‌ಗಳಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿತ್ತು. ನಂತರ ಅವರ ಪತ್ನಿ ಮತ್ತು ಮಕ್ಕಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿದೆ ಹಾಗಾಗಿ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೋಂಕಿತರನ್ನು ಪತ್ತೆ ಹಚ್ಚೋದು ಚಾಲೆಂಜಿಂಗ್‌ ಕೆಲಸ ಆಗಿದೆ.

ವಾರಿಯರ್ಸ್‌ಗೂ ಕೊರೊನಾ ಭೀತಿ:

ಸೋಂಕು ಹರಡದಂತೆ ಹಗಲಿರುಳು ಗಡಿಯಲ್ಲಿ ಕಾಯುವ ಕೊರೋನಾ ವಾರಿಯರ್ಸ್‌ಗೆ ಭೀತಿ ಆವರಿಸಿದೆ. ಗಡಿ ಜಿಲ್ಲೆ ಕೋಲಾರಕ್ಕೆ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳು ಕಂಟಕವಾಗಿದ್ದು, ಗಡಿ ಕಾಯುವ ಕೊರೋನಾ ವಾರಿಯರ್ಸ್‌ಗೆ ಯಾವುದೆ ರಕ್ಷಣೆ ಇಲ್ಲದಂತ್ತಾಗಿದೆ. ಗಡಿಯಲ್ಲಿ ನಿಂತಿರುವ ಈ ವಾರಿಯ​ರ್‍ಸ್ ಕೇವಲ ಮಾಸ್ಕ್‌ ಮಾತ್ರ ಹಾಕಿ ಕೆಲಸ ಮಾಡುತ್ತಿದ್ದಾರೆ, ಹ್ಯಾಂಡ್‌ ಗ್ಲೌಸ್‌ ಇಲ್ಲ, ಪಿಪಿಇ ಕಿಟ್‌ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಯಲ್ಲಿ ಹಗಲಿರುಳು ಕೆಲಸ ಮಾಡುವ ಈ ಸಿಬ್ಬಂದಿಯೇ ಸೋಂಕಿನ ಆತಂಕವನ್ನು ಎದುರಿಸುತ್ತಿದ್ದಾರೆ.

ಪಕ್ಷಾಂತರ ಕಾಯ್ದೆ ವಿಚಾರ ಡಿಕೆಶಿ ಸಲಹೆ: ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ

ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಕಾವಲು ಕಾಯುವ ವಾರಿಯರ್ಸ್‌ಗಳಿಗೆ ಬೇಕಾದ ಮಾಸ್ಕ್‌ಗಳನ್ನು, ಸ್ಯಾನಿಟೈಸರ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡಿರುವವರಲ್ಲಿ ಯಾವುದೇ ರೋಗದ ಲಕ್ಷಣಗಳು ಕಾಣಿಸುತ್ತಿಲ್ಲ, ಎಲ್ಲರೂ ಆರೋಗ್ಯವಾಗಿದ್ದಾರೆ ಆದರೆ ಅವರಿಗೆ ಪಾಸಿಟಿವ್‌ ಬಂದಿರುವುದು ಪತ್ತೆಯಾಗಿದೆ ಎಂದು ಕೋಲಾರ ಡಿಎಚ್‌ಒ ಡಾ.ವಿಜಯಕುಮಾರ್ ತಿಳಿಸಿದ್ದಾರೆ.

click me!