ಧಾರವಾಡ: ಯೋಗೇಶ್‌ ಗೌಡ ಕೊಲೆ ಪ್ರಕರಣ: ಡಿವೈಎಸ್‌ಪಿ ವಿಚಾರಣೆ

By Kannadaprabha NewsFirst Published Jun 14, 2020, 1:46 PM IST
Highlights

ಯೋಗೇಶ್‌ ಗೌಡ ‌ ಸಹೋದರ ಗುರುನಾಥ ಗೌಡ ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ನಡುವೆ ಮಧ್ಯವರ್ತಿಯಾಗಿ ಸಂಧಾನಗೊಳಿಸಲು ಪ್ರಯತ್ನಿಸಿದ್ದರು ಎಂಬ ಆರೋಪ ಡಿವೈಎಸ್‌ಪಿ ತುಳಜಪ್ಪ ಸುಲ್ಫಿ ಮೇಲಿದೆ| ಸದ್ಯ ಉತ್ತರ ವಲಯ ಐಜಿ ಕಚೇರಿಯಲ್ಲಿ ಡಿವೈಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ತುಳಜಪ್ಪ ಸುಲ್ಫಿ|

ಧಾರವಾಡ(ಜೂ.14): ಜಿಪಂ ಸದಸ್ಯ ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ. ಸಂಧಾನಕ್ಕೆ ಯತ್ನಿಸಿದ್ದ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಹಾಗೂ ಕಾಂಗ್ರೆಸ್‌ ನಾಯಕ ಮನೋಜ ಕರ್ಜಗಿ ಶನಿವಾರ ವಿಚಾರಣೆ ನಡೆಸಿದರು.

ಸದ್ಯ ಉತ್ತರ ವಲಯ ಐಜಿ ಕಚೇರಿಯಲ್ಲಿ ಡಿವೈಎಸ್‌ಪಿಯಾಗಿ ತುಳಜಪ್ಪ ಸುಲ್ಫಿ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಗೀಶಗೌಡ ಗೌಡರ್‌ ಸಹೋದರ ಗುರುನಾಥ ಗೌಡ ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ನಡುವೆ ಮಧ್ಯವರ್ತಿಯಾಗಿ ಸಂಧಾನಗೊಳಿಸಲು ಪ್ರಯತ್ನಿಸಿದ್ದರು ಎಂಬ ಆರೋಪ ಸುಲ್ಫಿ ಮೇಲಿದೆ. ಆಗ ಸುಲ್ಫಿ ಧಾರವಾಡ ಡಿವೈಎಸ್ಪಿ ಆಗಿದ್ದರು. ಇದಲ್ಲದೇ, ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್‌ ಮುಖಂಡ ಮನೋಜ ಕರ್ಜಗಿ ಅವರನ್ನು ಕೂಡ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದರು.

ಧಾರವಾಡ: ಯೋಗೀಶಗೌಡ ಕೊಲೆ ಪ್ರಕರಣ, 14 ಜನರ ಮೇಲೆ ಚಾರ್ಜ್‌ಶೀಟ್‌

ಈಗಾಗಲೇ ಆಗ ಪೊಲೀಸ್‌ ಆಯುಕ್ತ ಆಗಿದ್ದ ಪಾಂಡುರಂಗ ರಾಣೆ, ಡಿಸಿಪಿ ಆಗಿದ್ದ ಮಲ್ಲಿಕಾರ್ಜುನ ಬಾಲದಂಡಿ ಅವರ ವಿಚಾರಣೆ ನಡೆಸಿ ಆಗಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಈ ಸುಲ್ಫಿ, ಕರ್ಜಗಿ ಅವರನ್ನು ಡ್ರೀಲ್‌ ಮಾಡಿದ್ದಾರೆ.
 

click me!