ನಗರದ ನಲ್ಲಿ ನೀರು ಕುಡಿಯಲು ಅಯೋಗ್ಯ: ಎಚ್ಚರ... ಎಚ್ಚರ...!

By Kannadaprabha NewsFirst Published Nov 17, 2019, 9:22 AM IST
Highlights

ಕುಡಿಯುವ ನೀರಿನ ಕೊರತೆ ಹೆಚ್ಚುತ್ತಿರುವ ನಡುವೆಯೇ, ಮಾಹಿತಿ ತಂತ್ರಜ್ಞಾನ ರಾಜಧಾನಿಯಲ್ಲಿ ನಲ್ಲಿ ಮೂಲಕ ವಿತರಿಸುವ ನೀರು ನೇರವಾಗಿ ಬಳಕೆಗೆ ಯೋಗ್ಯವಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 

ನವದೆಹಲಿ (ನ.17):  ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚುತ್ತಿರುವ ನಡುವೆಯೇ, ಮಾಹಿತಿ ತಂತ್ರಜ್ಞಾನ ರಾಜಧಾನಿಯಲ್ಲಿ ನಲ್ಲಿ ಮೂಲಕ ವಿತರಿಸುವ ನೀರು ನೇರವಾಗಿ ಬಳಕೆಗೆ ಯೋಗ್ಯವಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು, ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್‌ (ಬಿಐಎಸ್‌) ಮೂಲಕ ದೇಶದ 17 ರಾಜ್ಯಗಳ ರಾಜಧಾನಿಯಲ್ಲಿನ ನಲ್ಲಿ ನೀರನ್ನು ಸಮೀಕ್ಷೆಗೆ ಒಳಪಡಿಸಿದ ವೇಳೆ ಈ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ 10 ಸ್ಥಳಗಳಲ್ಲಿ ನಲ್ಲಿ ನೀರನ್ನು ಪರೀಕ್ಷೆಗೆಂದು ತೆಗೆದುಕೊಳ್ಳಲಾಗಿದ್ದು, ಈ ಪೈಕಿ ಒಂದೇ ಒಂದು ಮಾದರಿ ಕೂಡಾ ಶುದ್ಧೀಕರಿಸದೇ ಕುಡಿಯಲು ಯೋಗ್ಯವಲ್ಲ ಎಂಬುದು ಪರೀಕ್ಷೆ ವೇಳೆ ಖಚಿತಪಟ್ಟಿದೆ. ಕುಡಿಯುವ ನೀರಿನಲ್ಲಿ ಸೇರಿರುವ ರಾಸಾಯನಿಕ ಮತ್ತು ವಿಷಕಾರಿ ವಸ್ತುಗಳು ಮತ್ತು ಬ್ಯಾಕ್ಟೀರಿಯಾಗಳ ಪತ್ತೆಗಾಗಿ ಈ ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆಯ ವರದಿಯನ್ನು ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಶನಿವಾರ ಬಿಡುಗಡೆಗೊಳಿಸಿದ್ದಾರೆ.

ಮುಂಬೈ ಬೆಸ್ಟ್‌:

ದೇಶದ ಇತರ ನಗರಗಳಿಗೆ ಹೋಲಿಸಿದರೆ ಮುಂಬೈನಲ್ಲಿ ಮಾತ್ರ ನಲ್ಲಿ ನೀರು ಸುರಕ್ಷಿತವಾಗಿದೆ. ನೀರು ಶುದ್ಧೀಕರಣ ಯಂತ್ರಗಳನ್ನು ಬಳಸಬೇಕಾದ ಅಗತ್ಯವಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ಈ ವರದಿಯ ಪ್ರಕಾರ, ಮುಂಬೈನಲ್ಲಿ ಸಂಗ್ರಹಿಸಿದ ನಲ್ಲಿ ನೀರಿನ ಮಾದರಿ ಎಲ್ಲಾ 11 ಮಾನದಂಡಗಳನ್ನೂ ಒಳಗೊಂಡಿದೆ. ಆದರೆ, ದೆಹಲಿ, ಕೋಲ್ಕತಾ ಮತ್ತು ಮುಂಬೈ ನಗರಗಳು 11 ಮಾನದಂಡಗಳ ಪೈಕಿ 10ರಲ್ಲಿ ವಿಫಲವಾಗಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು, ಗುವಾಹಟಿ, ಚಂಡೀಗಢ, ಲಖನೌ ಸೇರಿದಂತೆ 13 ರಾಜ್ಯ ರಾಜಧಾನಿಗಳಿಂದ ಸಂಗ್ರಹಿಸಲಾದ ನಲ್ಲಿ ನೀರಿನ ಮಾದರಿಗಳು ಭಾರತದಲ್ಲಿ ನಿಗದಿಪಡಿಸಿರುವ ಕುಡಿಯುವ ನೀರಿನ ಗುಣಮಟ್ಟವನ್ನು ಹೊಂದಿಲ್ಲ. ಚೆನ್ನೈನಲ್ಲಿ ಸಂಗ್ರಹಿಸಲಾದ 10 ಮಾದರಿಗಳು ಕ್ಲೋರೈಡ್‌ ಪ್ರಮಾಣ, ಗಡಸುತನ, ಅಮೋನಿಯಾ ಪ್ರಮಾಣ ಸೇರಿದಂತೆ 9 ರೀತಿಯ ಗುಣಮಟ್ಟಪರೀಕ್ಷೆಯಲ್ಲಿ ವಿಫಲವಾಗಿವೆ. ದೆಹಲಿಯಲ್ಲಿ ಸಂಗ್ರಹಿಸಿದ 11 ನೀರಿನ ಮಾದರಿಗಳಯ ಪೈಕಿ ಎಲ್ಲಾ 11 ಮಾದರಿಗಳು ಗುಣಮಟ್ಟಪರೀಕ್ಷೆಯಲ್ಲಿ ವಿಫಲವಾಗಿದ್ದು, ನಲ್ಲಿ ನೀರಿನ ಗುಣಮಟ್ಟಅತಿ ಕಳಪೆ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ನೀರಿನ ಪರೀಕ್ಷೆ ಹೇಗೆ?

ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್‌ (ಬಿಐಎಸ್‌) ಭಾರತದಲ್ಲಿ ಕುಡಿಯುವ ನೀರಿನ ಗುಣಮಟ್ಟ(10500:2012)ವನ್ನು ನಿಗದಿಪಡಿಸಿದೆ. ಶುದ್ಧ ಮತ್ತು ಸುರಕ್ಷಿತ ನೀರು ಪೂರೈಕೆ ಆಗುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಿಂದ ದೇಶದ 20 ನಗರಗಳಿಂದ ನಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಬಿಐಎಸ್‌ ಪರೀಕ್ಷೆಗೆ ಒಳಪಡಿಸಿತ್ತು. ನಲ್ಲಿ ನೀರಿನಲ್ಲಿ ಇಂದ್ರಿಯಗಳ ಮೇಲೆ ಪರಿಣಾಮ ಉಂಟು ಮಾಡುವ ಅಂಶಗಳು, ದೈಹಿಕ ಮತ್ತು ರಾಸಾಯನಿಕ ಪರೀಕ್ಷೆ, ವಿಷಕಾರಿ ವಸ್ತುಗಳು ಮತ್ತು ಬ್ಯಾಕ್ಟೀರಿಯಾಗಳ ಇರುವಿಕೆಯನ್ನು ಮೊದಲ ಹಂತದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಹುತೇಕ ನೀರಿನ ಮಾದರಿಗಳು ನಿಗದಿತ ಗುಣಮಟ್ಟಹೊಂದಿಲ್ಲದೇ ಇರುವುದು ಪರೀಕ್ಷೆಯ ವೇಳೆ ತಿಳಿದುಬಂದಿದೆ.

ಎಲ್ಲ ವಿಭಾಗದಲ್ಲೂ ಕಳಪೆ ನೀರು!

ನೀರಿನ ಗುಣಮಟ್ಟಅಳೆಯಲು ಬಣ್ಣ, ರುಚಿ, ಗಡಸುತನ, ಕ್ಲೋರೈಡ್‌, ಫೆä್ಲೕರೈಡ್‌, ಅಮೋನಿಯಾ, ಬೋರಾನ್‌, ಕೋಲಿಫಾಮ್‌ರ್‍, ತಾಮ್ರ, ಖನಿಜಾಂಶ ಹಾಗೂ ಲವಣಾಂಶಗಳು ಸೇರಿದಂತೆ 48 ಮಾನದಂಡಗಳನ್ನು ಬಿಐಎಸ್‌ ನಿಗದಿಪಡಿಸಿದೆ. ಈ ಪೈಕಿ ಯಾವುದರಲ್ಲೂ ಬೆಂಗಳೂರಿನಲ್ಲಿ ಸಂಗ್ರಹಿಸಿದ ನೀರಿನ ಮಾದರಿ ಪಾಸ್‌ ಆಗಿಲ್ಲ.

click me!