ಮದ್ರಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಅಪಹರಿಸಿ ಅತ್ಯಾಚಾರ ಯತ್ನ

By Kannadaprabha NewsFirst Published Feb 12, 2020, 3:07 PM IST
Highlights

ಮದ್ರಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು ಅಡ್ಡಗಟ್ಟಿಬಳಿಕ ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಕೊಣಾಜೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ವಿದ್ಯಾರ್ಥಿನಿ ನೀಡಿದ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು(ಫೆ.12): ಪಾವೂರು ಗ್ರಾಮದ ಕೆಳಗಿನ ಮಲಾರ್‌ ಎಂಬಲ್ಲಿ ಮದ್ರಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು ಅಡ್ಡಗಟ್ಟಿಬಳಿಕ ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಕೊಣಾಜೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ವಿದ್ಯಾರ್ಥಿನಿ ನೀಡಿದ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾವೂರು ಗ್ರಾಮದ ಉಗ್ಗನಬೈಲ್‌ನ ಕಿರಣ್‌ ಕುಮಾರ್‌ (26), ಉಗ್ಗನಬೈಲ್‌ ಬಂಗಾರಪಾದೆಯ ಗುಣಪಾಲ್‌( 25) ಹಾಗೂ ನೀರುಮಾರ್ಗದ ವಾಂಟೆಮಾರು ನಿವಾಸಿ ಸುಭಾಷ್‌ (29) ಬಂಧಿತರು.

ಗುದನಾಳದಲ್ಲಿಟ್ಟು 633 ಗ್ರಾಂ ಚಿನ್ನ ಅಕ್ರಮ ಸಾಗಣೆ..!

ಘಟನೆಯ ವಿವರ: ಪಾವೂರು ಗ್ರಾಮದ ಮಲಾರ್‌ ಹರೇಕಳದಲ್ಲಿರುವ ನೂರುಲ್‌ ಇಸ್ಲಾಂ ಮದ್ರಸಕ್ಕೆ ಸೋಮವಾರ ಸಂಜೆ ಸುಮಾರು 5.30ಕ್ಕೆ ಮಲಾರ್‌ ಅಕ್ಷರ ನಗರ ಮತ್ತು ಉಗ್ಗನಬೈಲ್‌ನ ಮೂವರು ವಿದ್ಯಾರ್ಥಿನಿಯರು ತೆರಳುತ್ತಿದ್ದರು. ಈ ಸಂದರ್ಭ ಕೆಳಗಿನ ಮಲಾರ್‌ನ ಸಣ್ಣ ಸೇತುವೆ ಬಳಿ ಅವಿತುಕೊಂಡಿದ್ದ ಈ ಮೂವರು ಆರೋಪಿಗಳು ವಿದ್ಯಾರ್ಥಿನಿಯರ ಬಳಿ ಉಗ್ಗನಬೈಲ್‌ಗೆ ಹೋಗುವ ದಾರಿ ಯಾವುದು ಎಂದು ಕೇಳಿದ್ದು, ಆವಾಗ ಓರ್ವ ವಿದ್ಯಾರ್ಥಿನಿ ದಾರಿ ತೋರಿಸುತ್ತಿದ್ದಾಗ ಆರೋಪಿಗಳ ಪೈಕಿ ಒಬ್ಬಾತ ವಿದ್ಯಾರ್ಥಿನಿಯ ಕೈಯನ್ನು ಗಟ್ಟಿಯಾಗಿ ಹಿಡಿದ ಎನ್ನಲಾಗಿದೆ. ಅದನ್ನು ಕಂಡ ಆಕೆಯ ಸಹೋದರಿ ತಕ್ಷಣ ಆರೋಪಿಯ ಕೈಗೆ ಬಲವಾಗಿ ಕಚ್ಚಿದಳು. ಆಗ ಆಕೆ ಆತನ ಕೈಯಿಂದ ಬಿಡಿಸಿಕೊಂಡು ಓಡಿ ಹೋಗಿ ಮದ್ರಸದ ಶಿಕ್ಷಕರಿಗೆ ಘಟನೆಯ ಬಗ್ಗೆ ವಿವರಿಸಿದಳು. ಆರೋಪಿಗಳು ಇತರ ಇಬ್ಬರು ವಿದ್ಯಾರ್ಥಿನಿಯರನ್ನು ನಿರ್ಜನ ಪ್ರದೇಶಕ್ಕೆ ಅಪಹರಿಸಿಕೊಂಡು ಹೋಗಿ, ಹಲ್ಲೆ ನಡೆಸಿ, ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಲೆಗೆ ಯತ್ನಿಸಿದರು ಎಂದು ಆರೋಪಿಸಲಾಗಿದೆ.

ಪತ್ನಿಯ ಕೊಲ್ಲಲು ಬಂದು ಮಾವನನ್ನು ಕೊಂದ ಅಳಿಯ..!

ವಿಷಯ ತಿಳಿದ ಮದ್ರಸದ ಶಿಕ್ಷಕರು ತಕ್ಷಣ ಆಡಳಿತ ಕಮಿಟಿಯ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು. ಅದರಂತೆ ಊರವರು ಜಮಾಯಿಸಿ ನಿರ್ಜನ ಪ್ರದೇಶದಲ್ಲೆಲ್ಲಾ ಹುಡುಕಾಟ ಆರಂಭಿಸಿದರು. ಈ ವೇಳೆ ವಿದ್ಯಾರ್ಥಿನಿಯೊಬ್ಬಳ ಚಪ್ಪಲಿ ಮತ್ತು ಮದ್ರಸದ ಪಠ್ಯಪುಸ್ತಕ ಪತ್ತೆಯಾಗಿದ್ದು, ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಲೇ ಆತಂಕಗೊಂಡ ಆರೋಪಿಗಳು ವಿದ್ಯಾರ್ಥಿನಿಯರನ್ನು ಅಲ್ಲೇ ಬಿಟ್ಟು ಪರಾರಿಯಾದರು ಎಂದು ತಿಳಿದು ಬಂದಿದೆ. ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದರು. ಸೆಂಟ್ರಿಂಗ್‌ ಕೆಲಸ ಮಾಡಿಕೊಂಡಿದ್ದ ಇವರ ಬಗ್ಗೆ ಮಾಹಿತಿ ಕಲೆ ಹಾಕಿದ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸ್‌ ತಂಡ ಮಂಗಳವಾರ ಮೂವರನ್ನು ಬಂಧಿಸಿ, ಪೋಕ್ಸೊ ಸಹಿತ ಹಲವು ಪ್ರಕರಣ ದಾಖಲಿಸಿದ್ದಾರೆ.ಉಳ್ಳಾಲ

click me!