ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ರೈತರ ಜೀವ ಹಿಂಡುತ್ತಿವೆ  ಆಗ್ರೋ ಏಜೆನ್ಸಿಗಳು!

By Ravi Janekal  |  First Published Sep 20, 2022, 11:16 AM IST

ಕೃಷಿ ಸಚಿವ ಬಿ.ಸಿ.ಪಾಟೀಲರ ಉಸ್ತುವಾರಿ ಜಿಲ್ಲೆ ಗದಗನಲ್ಲಿ ಆಗ್ರೋ ಏಜೆನ್ಸಿಗಳು ರೈತರ ಹಣ ಸುಲಿಗೆ ಮಾಡುತ್ತಿದ್ದಾರೆ. ಗೊಬ್ಬರ ಖರೀದಿಸಬೇಕೆಂದರೆ ಮತ್ತೊಂದು ಖರೀದಿಸಬೇಕಾಗಿದೆ! ಒಂದು ಕಡೆ ಕೃಷಿ ಇಲಾಖೆ ಸಾವಯವ ಕೃಷಿಗೆ ಉತ್ತೇಜನ ಕೊಡುತ್ತೆ‌. ಇನ್ನೊಂದು ಕಡೆ ಹಿಂಬಾಗಿಲಿಂದ ರಸಗೊಬ್ಬರ ಮಾರಾಟಕ್ಕೆ ಉತ್ತೇಜನ ನೀಡ್ತಿದೆಯಾ ಅನ್ನೋ ಅನುಮಾನ ಮೂಡಿಸಿದೆ.


ವರದಿ : ಗಿರೀಶ್ ಕಮ್ಮಾರ, ಏಷ್ಯನೆಟ್ ಸುವರ್ಣ ನ್ಯೂಸ್, ಗದಗ

ಗದಗ (ಸೆ.20) :: ಮುಂಗಾರು ಹಂಗಾಮಿನಲ್ಲಿ ನೆರೆಯಿಂದ ಬೆಳೆನಷ್ಟ ಅನುಭವಿಸಿದ್ದ ರೈತರು ಹಿಂಗಾರು ಬೆಳೆ ಬೆಳೆದು ಆಗಿರೋ ನಷ್ಟ ಸರಿದೂಗಿಸಬೇಕು ಅನ್ನೋ ಉಮೇದಿನಲ್ಲಿದ್ದಾರೆ.‌ ಮಳೆ ನಿಂತ್ರೆ ಸಾಕು ಕೃಷಿ ಚಟುವಟಿಕೆ ಆರಂಭವಾಗುತ್ತೆ. ಹೀಗಾಗಿ ಮುಂಚಿತವಾಗಿ ರಸಗೊಬ್ಬರ ಸ್ಟಾಕ್ ಮಾಡ್ಕೊಳೋಣ ಅಂತಾ ಯೋಚ್ನೆ ಮಾಡ್ತಿರೋ ರೈತ್ರಿಗೆ ಶಾಕ್ ಆಗಿದೆ. ಆಗ್ರೋ ಅಂಗಡಿಗೆ ಹೋಗಿ ಡಿಎಪಿ ಬೇಕು ಅಂತಾ ಕೇಳುವ ರೈತರಿಗೆ, ಜೊತೆಗೆ ಮತ್ತೊಂದು ರಸ ಗೊಬ್ಬರ ಇಲ್ಲವೇ ಔಷಧಿ ಪ್ಯಾಕೆಟ್ ಖರೀದಿ ಮಾಡ್ಬೇಕು ಅನ್ನೋ ನಿಯಮ ಮುಂದಿಡ್ತಿದಾರೆ. ಇದ್ರಿಂದಾಗಿ ಮೊದಲೇ ಕಂಗಾಲಾಗಿರೋ ರೈತ್ರಿಗೆ ಗಾಯದ ಮೇಲೆ ಬರೆ ಎಳೆದ ಅನುಭವ ಆಗ್ತಿದೆ..

Latest Videos

undefined

ರೈತರೇ ಆಧುನಿಕ, ವೈಜ್ಞಾನಿಕ ಕೃಷಿಯತ್ತ ಚಿತ್ತ ಹರಿಸಿ: ಸಚಿವ ಬಿ.ಸಿ.ಪಾಟೀಲ್‌

ಈ ಬಗ್ಗೆ ಏಷ್ಯ ನೆಟ್ ಸುವರ್ಣ ನ್ಯೂಸ್ ಗೆ ದೂರು ಬರ್ತಿದ್ದಂತೆ, ನಮ್ಮ ತಂಡ ರಿಯಾಲಿಟಿ ಚೆಕ್ ಗೆ ಮುಂದಾಗಿತ್ತು. ಕೃಷಿ ಇಲಾಖೆ ಸಚಿವ ಬಿಸಿ ಪಾಟೀಲ(B.C.Patil)ರ ಉಸ್ತುವಾರಿ ಗದಗ(Gadag) ಜಿಲ್ಲೆಯ ನರಗುಂದ(Naragunda)ದ ವಿವಿಧ ಅಂಗಡಿಗೆ ಭೇಟಿ ನೀಡಿ ವಿಚಾರಿಸಿದ್ವಿ. ರಹಸ್ಯ ಕ್ಯಾಮರಾ ಇಟ್ಕೊಂಡು ವ್ಯಾಪಾರಸ್ಥರನ್ನ ಪ್ರಶ್ನಿಸಲಾಯ್ತು. ಈ ವೇಳೆ ನರಗುಂದದ ಗೊಬ್ಬರ ವ್ಯಾಪಾರಸ್ಥರು, ಆಗ್ರೋ ಕಂಪನಿಗಳೇ ಒತ್ತಾಯ ಪೂರ್ವಕವಾಗಿ ಗೊಬ್ಬರ ಕಳಿಸ್ತಿದಾರೆ.. ಹೀಗಾಗಿ ರೈತರಿಗೆ ಒಂದರ ಜೊತೆಗೆ ಮತ್ತೊಂದನ್ನ 'ಲಿಂಕ್' ಮಾಡಿ ಕೊಡ್ತಿದಿವಿ ಅಂತಿದಾರೆ.

ಗೊಬ್ಬರ ಬೇಕಾದ್ರೆ ಕಡ್ಡಾಯವಾಗಿ ಮತ್ತೊಂದು ವಸ್ತು ಖರೀದಿಸಬೇಕು!

ಅತಿವೃಷ್ಟಿ, ನೆರೆಯಿಂದ ಗದಗ ನರಗುಂದ ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ. ಅಂದಾಜಿನ ಪ್ರಕಾರ 1 ಲಕ್ಷ 70 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾದ ಬಗ್ಗೆ ವರದಿ ಇದೆ.‌. ಇಂಥ ಸಂದರ್ಭದಲ್ಲಿ ಒತ್ತಾಯದಿಂದ ಮತ್ತೊಂದು ಗೊಬ್ಬರ ಅಥವಾ ಔಷಧಿ ಖರೀದಿಸ್ಬೇಕು ಎಂಬ ನಿಯಮ ಮಾಡಿರೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ರೈತರ ಪ್ರಶ್ನೆ.
 
ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಆಗ್ರೋ ಅಂಗಡಿಗಳಿಂದ ಹಗಲು ದರೋಡೆ:

ಗದಗ ಜಿಲ್ಲೆಯಾದ್ಯಂತ ಕಡ್ಡಾಯ ಖರೀದಿಯ ನಿಯಮ ಚಾಲ್ತಿಯಲ್ಲಿದೆ. ಹಿಂಗಾರು ಬಿತ್ತನೆಯ ಹೊಸ್ತಿಲಲ್ಲಿ ಇರುವ ರೈತರಿಗೆ 'ಲಿಂಕ್' ಆಫರ್ ಬಿಸಿ ತುಪ್ಪವಾಗಿದೆ. ಡಿಎಪಿ(D Ammonium phosphate) ಖರೀದಿಸಿದ್ರೆ ನ್ಯಾನೋ ಯೂರಿಯಾ(Nano urea) ಖರೀದಿ ಕಡ್ಡಾಯವಾಗಿ ಖರಿದಿಸ್ಬೇಕು ಅನ್ನೋ ನಿಯಮವನ್ನ ಗೊಬ್ಬರದ ಅಂಗಡಿ ಮಾಲೀಕರು ಹಾಕಿಕೊಂಡಿದಾರೆ. 

ಡಿಎಪಿ(DAP) 50 ಕೆಜಿಯ ಚೀಲಕ್ಕೆ 1350 ರೂಪಾಯಿ ಪಾವತಿಸ್ಬೇಕು.. ಜೊತೆಗೆ, ಬೇಕೋ ಬೇಡ್ವೊ 240 ರೂಪಾಯಿ ಕೊಟ್ಟು ನ್ಯಾನೊ ಯೂರಿಯಾ ಖರೀದಿ ಮಾಡ್ಲೇಬೇಕು. ಇಲ್ಲದಿದ್ರೆ ಡಿಎಪಿ ಗೊಬ್ಬರದ ಜೊತೆ ಪೊಟ್ಯಾಷ್, ಕಾಂಪ್ಲ್ಯಾಕ್ಸ್ ಖರೀದಿಸ್ಬೇಕು ಅಂತಾ ವ್ಯಾಪಾರಸ್ಥರು ಹೇಳ್ತಾರೆ. ಬೇರೆ ಏನನ್ನೂ ಖರೀದಿಸಲ್ಲ, ಡಿಎಪಿ ಮಾತ್ರ ಕೊಡಿ ಅಂದ್ರೆ, ಗೊಬ್ಬರ ಇಲ್ಲ ಹೋಗಿ ಅಂತಾ ನಿರ್ದಾಕ್ಷಿಣ್ಯವಾಗಿ ವ್ಯಾಪಾರಸ್ಥರು ಹೇಳ್ತಾರಂತೆ. ಹೀಗಾಗಿ, ಕೃಷಿ ಸಚಿವರ ಕುಮ್ಮಕ್ಕಿನಿಂದ ಆಗ್ರೋ ಕಂಪನಿಗಳು ಬೇಕಾಬಿಟ್ಟಿ ನಿಯಮ ಹಾಕ್ತಿವೆ ಅನ್ನೋದು ರೈತರ ಆರೋಪ.

ಕೃಷಿ ಇಲಾಖೆ ಸಾವಯವ ಕೃಷಿಗೆ ಉತ್ತೇಜನ ಕೊಡುತ್ತೆ‌. ಸಾವಯವ ಗೊಬ್ಬರ ಬಳಸುವಂತೆ ರೈತರಿಗೆ ಮನವಿ ಮಾಡುತ್ತೆ.. ಆದ್ರೆ, ಹಿಂಬಾಗಿಲಿಂದ ರಸಗೊಬ್ಬರ ಮಾರಾಟಕ್ಕೆ ಉತ್ತೇಜನ ನೀಡ್ತಿದೆಯಾ ಅನ್ನೋ ಪ್ರಶ್ನೆಯೂ ಮೂಡುವಂತೆ ಮಾಡಿದೆ.‌ ರಸ ಗೊಬ್ಬರವನ್ನ ಬೇಕಾಬಿಟ್ಟಿಯಾಗಿ ಮಾರಾಟ ಮಾಡ್ತಿದ್ರೂ ಯಾರೂ ಕೇಳ್ತಿಲ್ಲ ಅನ್ನೋದು ರೈತ್ರ ಮನಸ್ಸಲ್ಲಿ ನೂರಾರು ಪ್ರಶ್ನೆ ಮೂಡುವಂತೆ ಮಾಡಿದೆ.‌

ಗ್ರಾಹಕರ ಹಕ್ಕಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ..!

ಗ್ರಾಹಕರು ತಮಗೆ ಯಾವ ವಸ್ತುಗಳು ಬೇಕೋ ಅವುಗಳನ್ನ ಖರೀದಿಸುವ ಅಧಿಕಾರ ಇರುತ್ತೆ. ಆದ್ರೆ, ರೈತರ ವಿಷ್ಯದಲ್ಲಿ ಇದು ಸುಳ್ಳು ಎನ್ನುವಂತಿದೆ. ತಮಗೆ ಬೇಕಾದ ಡಿಎಪಿ ಖರೀದಿಸ್ಬೇಕೆಂದರೆ, ರೈತರು ಕಡ್ಡಾಯವಾಗಿ ಹಣಕೊಟ್ಟು ಮತ್ತೊಂದು ಗೊಬ್ಬರ ಖರೀದಿ ಮಾಡ್ಬೇಕು! ಇದ್ಯಾವ ನ್ಯಾಯ? ಗ್ರಾಹಕರ ನಿಯಮ ಉಲ್ಲಂಘನೆಯಾದ್ರೂ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.

ಯಾವುದೇ ಕಾರಣಕ್ಕೂ ದೂಡಾಕ್ಕೆ ಜಮೀನು ನೀಡುವುದಿಲ್ಲ; ಹಳೇ ಕುಂದುವಾಡ ರೈತರ ಸ್ಪಷ್ಟನೆ

ಇನ್ನು ಈ ಬಗ್ಗೆ ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾಉಲ್ಲಾ ಕೆ ಅವರನ್ನ ಕೇಳಿದ್ರೆ, ರೈತರು ನಿಗದಿತ ದರವನ್ನೇ ನೀಡ್ಬೇಕು. ಹೆಚ್ಚುವರಿ ಗೊಬ್ಬರ ಖರೀದಿ ಮಾಡುವಂತೆ ಕೇಳಿದ್ರೆ ನಿರಾಕರಿಸ್ಬೇಕು.. ಕೃಷಿ ಇಲಾಖೆ ಅಧಿಕಾರಿಗಳನ್ನ ಸಂಪರ್ಕಿಸಿ ದೂರು ನೀಡಿ ಅಂತಾ ಹೇಳ್ತಿದಾರೆ. ಆದ್ರೆ ಮುಗ್ಧ ರೈತರು ಸರ್ಕಾರದ ನಿಯಮ ಇರ್ಬೇಕು ಅಂತಾ ಅನ್ಕೊಂಡು ಹೊರೆಯಾದ್ರೂ ಹೆಚ್ಚುವರಿ ಗೊಬ್ಬರ ಖರೀದಿಸ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಶೀಘ್ರ ಕ್ರಮ ಕೈಗೊಳ್ಳಬೇಕಿದೆ.

ರಹಸ್ಯ ಕಾರ್ಯಾಚರಣೆ : 1

ಅಂಗಡಿ ಹೆಸರು : ಶ್ರೀನಿವಾಸ ಆಗ್ರೋ ಕೇಂದ್ರ

ವ್ಯಾಪಾರಸ್ಥ : ಏನ್ ಬೇಕು..
ಪ್ರತಿನಿಧಿ : ಡಿಎಪಿ

ವ್ಯಾಪಾರಸ್ಥ : ಡಿಎಪಿ ಜೊತೆ ನ್ಯಾನೊ ಯೂರಿಯಾ.. ಎರಡು ಚೀಲಕ್ಕೆ ಒಂದು..
ಪ್ರತಿನಿಧಿ : ಎರಡು ಚೀಲ ಡಿಎಪಿಗೆ ಒಂದು ಯೂರಿಯಾ.. ಅರ್ಧ ಲೀಟರ್ ದು..?
ವ್ಯಾಪಾರಸ್ಥ : ಹಾ..

ಪ್ರತಿನಿಧಿ : ಅದೇನ್ ತುಗೋಳ್ಬೇಕು..? ನೂರು ಚೀಲ ಬೇಕು..
ವ್ಯಾಪಾರಸ್ಥ : ನೋಡಿ ಹಾಕೋಣ..

ಪ್ರತಿನಿಧಿ : ಯೂರಿಯಾ ಇಲ್ಲದೇ ಡಿಎಪಿ ಇಲ್ಲವಾ..?
ವ್ಯಾಪಾರಸ್ಥ : ಕಂಪನಿಯವರು ಕಳ್ಸಿದಾರೆ..

ಪ್ರತಿನಿಧಿ : ಯಾವ ಕಂಪನಿ ಮೇಡಂ
ವ್ಯಾಪಾರಸ್ಥೆ : ಇಪ್ಕೊ, ಗೂಗಲ್ ನಲ್ಲಿ ಸರ್ಚ್ ಮಾಡಿದಾರೆ..

ಪ್ರತಿನಿಧಿ : ಕಂಪನಿಯವರೇ ಲಿಂಕ್ ಮಾಡಿದ್ದಾರಾ..?
ವ್ಯಾಪಾರಿ : ಯೂರಿಯಾ ಬಳಕೆ ಕಡಿಮೆಯಾಗಿದೆ.. ಅದ್ಕೆ ಲಿಂಕ್ ಮಾಡಿದಾರೆ.. ಯೂರಿಯಾ ಗೊಬ್ಬರ ಮತ್ತೇ ಹಾಕ್ಬೇಕಾಗುತ್ತ.. ಈಗ ಕೊಟ್ರ ಸ್ಪ್ರೇ ಮಾಡಿ ಬಿಡ್ತಾರ..

ಪ್ರತಿನಿಧಿ : ಯೂರಿಯಾ ಎಷ್ಟು ಐತ್ರಿ..
ವ್ಯಾಪಾರಸ್ಥ : 240.. ಅರ್ಧ ಲೀಟರ್..

***

ರಹಸ್ಯ ಕಾರ್ಯಾಚರಣೆ: ಭಾಗ-2

ಅಂಗಡಿ ಹೆಸರು : ಅಭಿಷೇಕ ಅಸೋಸಿಯೇಷನ್

ವ್ಯಾಪಾರಸ್ಥ : ಎಷ್ಟು ಬೇಕಿತ್ತು.. 

ಪ್ರತಿನಿಧಿ : ನೂರು ಚೀಲ, 80 ಎಕರೆ ಐತ್ರಿ, ಒಂದೊಂದ್ ಚೀಲ ಹಾಕಿದ್ರೂ.. ಲಿಂಕ್ ಐತಾ..?
ವ್ಯಾಪಾರಸ್ಥ : ಐತಿ.. ನಿಮಗ್ ಏನ್ ಬೇಕೋ ಅದನ್ ತುಗೋರಿ.. ನಾವ್ ಕೊಟ್ಟಿದ್ದು ನೀವ್ ಒಯ್ಯೊದಿಲ್ಲ..

ಪ್ರತಿನಿಧಿ : ಲಿಂಕ್ (ಕಡ್ಡಾಯವಾಗಿ ಒಯ್ಯುವ ವಸ್ತು) ಗೆ ದೊಡ್ಡ ರೊಕ್ಕ ಆಗುತ್ತ..
ವ್ಯಾಪಾರಸ್ಥ : ಜಿಂಕ್ ತುಗೊರ್ರಿ, ಇದನ್ನ ಒಯ್ಯರಿ.. ಇಲ್ಲೇ ಐತಿ.. 
ಪ್ರತಿನಿಧಿ : ಎಷ್ಟು ರೇಟ್ 

ವ್ಯಾಪಾರಸ್ಥ : 900 ರೂಪಾಯಿ.. ಸನ್ಫರ್, ಪೊಟ್ಯಾಷ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಇರುತ್ತೆ‌‌..

ಪ್ರತಿನಿಧಿ : ಎಲ್ಲಕಡೆ ಲಿಂಕ್ ಇಟ್ಟೇ ಮಾರ್ತಿರಾ..?
ವ್ಯಾಪಾರಸ್ಥ : ಹೌದು.. ಇದು ಬೇಡ ಅಂದ್ರ 19 ಆನ್ ಕೊಡ್ತೇನಿ

ಪ್ರತಿನಿಧಿ : ಇದನ್ನ ತುಗೊಳ್ಳಲೇ ಬೇಕಾ..?
ವ್ಯಾಪಾರಸ್ಥ : ಬಾಳ್ ಅದಾವು.. ನಾವು ಎಡ್ಜೆಸ್ಟ್ ಮಾಡಾಕತ್ತೇವಿ..

ಪ್ರತಿನಿಧಿ : ನೂರು ಚೀಲ ತುಗೊಂಡ್ರೆ, ಇದಕ್ಕೆ ಹೆಚ್ಚಾಗುತ್ತೆ.. ಹೆಂಗ್ ಮೆಂಟೈನ್ ಮಾಡೋದು ಗೊತ್ತಾಗ್ವಲ್ದು..?
ವ್ಯಾಪಾರಸ್ಥ : 70/…

click me!