ವೈಯಕ್ತಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ವೇತನ ಹೆಚ್ಚಳವು 4.5% ರಿಂದ 7% ವರೆಗೆ ಇರುತ್ತದೆ ಎಂದು ಟಿಸಿಎಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ತಿಳಿಸಿದ್ದಾರೆ. ಅಸಾಧಾರಣವಾಗಿ ಕೆಲಸ ಮಾಡಿದ ಉದ್ಯೋಗಿಗಳು ಡಬಲ್ ಡಿಜಿಟ್ ಹೈಕ್ ನಿರೀಕ್ಷೆ ಮಾಡಬಹುದು ಎಂದಿದ್ದಾರೆ.
ನವದೆಹಲಿ (ಏ.14): ದೇಶದ ಅತಿದೊಡ್ಡ ಐಟಿ ಸೇವಾ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ತನ್ನ ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಳದ ಯೋಜನೆಗಳನ್ನು ಬಹಿರಂಗಪಡಿಸಿದೆ. ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಮಾಹಿತಿ ನೀಡಿರುವ ಪ್ರಕಾರ, ವೈಯಕ್ತಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಸಂಬಳ ಹೆಚ್ಚಳವು 4.5% ರಿಂದ 7% ವರೆಗೆ ಇರುತ್ತದೆ. ಕಳೆದ ಹಣಕಾಸಿ ವರ್ಷದಲ್ಲಿ ಅಸಾಧಾರಣ ನಿರ್ವಹಣೆ ತೋರಿದ ಉದ್ಯೋಗಿಗಳು ಡಬಲ್ ಡಿಜಿಟ್ ಹೈಕ್ ನಿರೀಕ್ಷೆ ಮಾಡಬುದು ಎಂದಿದ್ದಾರೆ. "ನಮ್ಮ ಉದ್ಯೋಗಿಗಳಿಗೆ ವಾರ್ಷಿಕ ಹೆಚ್ಚಳವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ, ನಾವು ಪ್ರತಿ ವರ್ಷವೂ ವೇತನ ಹೆಚ್ಚಳವನ್ನು ಮಾಡಿದ್ದೇವೆ. ಅತ್ಯುತ್ತಮ ನಿರ್ವಹಣೆ ತೋರಿದಂತೆ ಉದ್ಯೋಗಿಗಳು ಡಬಲ್ ಡಿಜಿಟ್ ಹೈಕ್‌ಅನ್ನು ಸ್ವೀಕರಿಸುತ್ತಾರೆ" ಎಂದು ಲಕ್ಕಾಡ್ ಏಪ್ರಿಲ್ 12 ರಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಿಂದಿನ ಹಣಕಾಸು ವರ್ಷದಲ್ಲಿ, ಟಿಸಿಎಸ್ ಅತ್ಯುತ್ತಮ ನಿರ್ವಹಣೆ ತೋರಿದ ಉದ್ಯೋಗಿಗಳಿಗೆ 12-15% ರಷ್ಟು ವೇತನ ಹೆಚ್ಚಳವನ್ನು ಮಾಡಿತ್ತು. ಈ ವರ್ಷದ ಸ್ಯಾಲರಿ ಹೈಕ್‌ಗಳು 2023ರ ಏಪ್ರಿಲ್ 1 ರಿಂದ ಜಾರಿಗೆ ಬರುತ್ತವೆ.
ಟಿಸಿಎಸ್ ತ್ರೈಮಾಸಿಕ ವರದಿ ಘೋಷಣೆ ಬಳಿಕ ಮಾತನಾಡಿದ ಲಕ್ಕಾಡ್, 2023-24ರ ಆರ್ಥಿಕ ವರ್ಷಕ್ಕೆ ಹೆಚ್ಚಿನ ಫ್ರೆಶರ್‌ಗಳು ಆನ್‌ಬೋರ್ಡ್‌ನಲ್ಲಿದ್ದರೆ, ಕೆಲವರು ಇನ್ನೂ ಸೇರಿಲ್ಲ ಎಂದಿದ್ದಾರೆ. ಈ ಉಳಿದ ಫ್ರೆಶರ್‌ಗಳು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. ಟಿಸಿಎಸ್ 2024ರ ಹಣಕಾಸು ವರ್ಷದಲ್ಲಿ ಒಟ್ಟು 40,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ.
undefined
ಲೋಕಲ್ ಶಾಪ್‌ನಲ್ಲಿ 25 ಸಾವಿರ ವೇತನ, 'ಟಿಸಿಎಸ್ ಕೆಲ್ಸಕ್ಕೆ ರಿಸೈನ್ ಮಾಡೋದೇ ಬೆಸ್ಟ್' ಎಂದ ನೆಟ್ಟಿಗರು!
ಏಪ್ರಿಲ್ 12 ರಂದು, ಟಿಸಿಎಸ್ನ ಏಕೀಕೃತ ನಿವ್ವಳ ಲಾಭದಲ್ಲಿ 9% ಹೆಚ್ಚಳವನ್ನು ವರದಿ ಮಾಡಿದೆ, FY24 ರ ನಾಲ್ಕನೇ ತ್ರೈಮಾಸಿಕದಲ್ಲಿ 12,434 ಕೋಟಿ ರೂ.ಗಳಿಗೆ ಹೋಲಿಸಿದರೆ, ಹಿಂದಿನ ವರ್ಷದಲ್ಲಿ 11,392 ಕೋಟಿ ರೂಪಾಯಿ ಆಗಿತ್ತು. ಏಪ್ರಿಲ್ 12 ರಂದು ಐಟಿ ಮೇಜರ್ ಎಕ್ಸ್ಚೇಂಜ್ ಫೈಲಿಂಗ್ ಪ್ರಕಾರ, ಮಾರ್ಚ್ 31, 2024 ಕ್ಕೆ ಕೊನೆಗೊಳ್ಳುವ ಮೂರು ತಿಂಗಳಲ್ಲಿ ಆದಾಯವು 3.5% ರಷ್ಟು ಏರಿಕೆ ಕಂಡು 61,237 ಕೋಟಿ ರೂಪಾಯಿಗೆ ಏರಿದೆ.
TCS ಅಕ್ರಮವಾಗಿ ಉದ್ಯೋಗ ಕಿತ್ತುಕೊಂಡು ಭಾರತೀಯರಿಗೆ ಹಂಚಿಕೆ, ಅಮೆರಿಕ ಟೆಕ್ಕಿಗಳ ಗಂಭೀರ ಆರೋಪ!