ಕೇಂದ್ರ ಸರ್ಕಾರದ ನೌಕರರಿಗೆ, ಪಿಂಚಣಿದಾರರಿಗೆ ಇಲ್ಲಿಗೆ ಭರ್ಜರಿ ಗುಡ್ ನ್ಯೂಸ್

By Kannadaprabha NewsFirst Published Jan 29, 2021, 8:00 AM IST
Highlights

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಏನದು  ಸಿಹಿ ಸುದ್ದಿ ಇಲ್ಲಿದೆ ಮಾಹಿತಿ 

ನವದೆಹಲಿ (ಜ.29): ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಶೀಘ್ರವೇ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ ತಡೆಯಲಾಗಿದ್ದ ಶೇ.4ರಷ್ಟುತುಟ್ಟಿಭತ್ಯೆಯನ್ನು ಸರ್ಕಾರ ಶೀಘ್ರವೇ ಜಾರಿಗೊಳಿಸುವ ಸಾಧ್ಯತೆ ಇದೆ.

ಒಂದು ವೇಳೆ ಶೇ.4ರಷ್ಟುತುಟ್ಟಿಭತ್ಯೆಯನ್ನು ಸರ್ಕಾರ ಘೋಷಿಸಿದರೆ, ತುಟ್ಟಿಭತ್ಯೆ ಪ್ರಮಾಣ ಈಗಿನ ಶೇ.17ರಿಂದ ಶೇ.21ಕ್ಕೆ ಏರಿಕೆಯಾಗಲಿದೆ.

ಕೆಲಸ ಖಾಲಿ ಇದೆ! 52 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿರುವ ಬಿಇಎಲ್ ...

ಇದು 50 ಲಕ್ಷ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ನೆರವಾಗಲಿದೆ.

ಇದೇ ವೇಳೆ 7ನೇ ವೇತನ ಆಯೋಗದ ಸಲಹೆ ಅನ್ವಯ, ತುಟ್ಟಿಭತ್ಯೆ ಜೊತೆಗೆ ಪ್ರಯಾಣ ಭತ್ಯೆ ಕೂಡಾ ಏರಿಕೆಯಾಗಲಿದೆ ಎನ್ನಲಾಗಿದೆ. ಪ್ರಯಾಣ ಭತ್ಯೆಯನ್ನು ಶೇ.8ರಷ್ಟುಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

click me!