
ನವದೆಹಲಿ: ಕನ್ನಡ ಸೇರಿದಂತೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಬರುವ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಗಳನ್ನು ಒದಗಿಸುವ ಆನ್‌ಲೈನ್ ಸೇವೆಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಬುಧವಾರ ಇಲ್ಲಿ ಚಾಲನೆ ನೀಡಿದರು. ಇ-ಎಸ್‌ಸಿಆರ್ (ಎಲೆಕ್ಟ್ರಾನಿಕ್- ಸುಪ್ರೀಂಕೋರ್ಟ್ ರಿಪೋರ್ಟ್ಸ್) ಯೋಜನೆಯಡಿ ಗುರುವಾರದಿಂದ ದೇಶದ ಯಾವುದೇ ಪ್ರಜೆ ಉಚಿತವಾಗಿ ತಮ್ಮ ಆಯ್ಕೆಯ ಭಾಷೆಯಲ್ಲಿ ಲಭ್ಯವಿರುವ ತೀರ್ಪುಗಳನ್ನು ಓದಬಹುದಾಗಿದೆ.
ಈಗಾಗಲೇ ಇ-ಎಸ್‌ಸಿಆರ್ ತಂತ್ರಾಂಶದಲ್ಲಿ ಸುಪ್ರೀಂಕೋರ್ಟ್‌ನ 34,000 ತೀರ್ಪುಗಳನ್ನು ಸೇರಿಸಲಾಗಿದ್ದು, ಅವುಗಳನ್ನು ಸುಲಭವಾಗಿ ಹುಡುಕುವ ವ್ಯವಸ್ಥೆ ಮಾಡಲಾಗಿದೆ. ಇದರ ಮುಂದುವರೆದ ಭಾಗವಾಗಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಗಿರುವ 1091 ತೀರ್ಪುಗಳನ್ನು ಗುರುವಾರ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಕನ್ನಡದ 17, ಒಡಿಯಾದ 21, ಮರಾಠಿ 14 ಸೇರಿದಂತೆ ವಿವಿಧ ಭಾಷೆಗಳಿಗೆ ಸೇರಿದ ತೀರ್ಪು ಸೇರಿದೆ. 22 ಪ್ರಾದೇಶಿಕ ಭಾಷೆಗಳಲ್ಲೂ ತೀರ್ಪನ್ನು ಒದಗಿಸುವ ಗುರಿ ಸುಪ್ರೀಂಕೋರ್ಟ್‌ಗಿದೆ. ಪ್ರಾದೇಶಿಕ ಭಾಷೆಗಳಲ್ಲಿನ ತೀರ್ಪುಗಳು ಸುಪ್ರೀಂಕೋರ್ಟ್‌ನ ವೆಬ್ಸೈಟ್, ಮೊಬೈಲ್ ಆ್ಯಪ್ ಮತ್ತು ನ್ಯಾಷನಲ್ ಜ್ಯುಡಿಷಿಯಲ್ ಡೇಟಾ ಗ್ರಿಡ್‌ನ (ಎನ್ಜೆಡಿಜಿ) ಜಡ್ಜ್ಮೆಂಟ್ ಪೋರ್ಟಲ್ನಲ್ಲಿ ಲಭ್ಯವಿರಲಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನು ಓದಿ: ಜಟಿಲ ಸ್ಥಿತಿ ಸೃಷ್ಟಿ ಆದಾಗ ಸಂವಿಧಾನದ ರಚನೆಯೇ ನಮಗೆ ದಿಕ್ಸೂಚಿ: ಸಿಜೆ ಚಂದ್ರಚೂಡ್ ಚಾಟಿ..!
ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ದೇಶದ ವಿವಿಧ ಭಾಗದಲ್ಲಿರುವ ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಸರ್ಚ್ ಇಂಜಿನ್ ಅನ್ನು ಸುಧಾರಿಸುವ ಕಾರ್ಯವನ್ನು ನಾವು ಕೈಗೊಂಡಿದ್ದೇವೆ. ಈ ವರ್ಷದ ಜನವರಿ 1ರವರೆಗೆ ನೀಡಲಾದ ತೀರ್ಪುಗಳ ಪ್ರತಿಗಳು ಪ್ರತಿಯೊಬ್ಬರಿಗೂ ದೊರೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಯಾವ್ಯಾವ ಭಾಷೆಗಳು ಲಭ್ಯ..?
ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳನ್ನು ಇನ್ಮುಂದೆ ನಾಲ್ಕು ಭಾಷೆಗಳಿಗೆ ಅನುವಾದಿಸಲಾಗುತ್ತದೆ ಎಂದು ತಿಳಿದುಬಂದಿದೆ. ಹಿಂದಿ, ತಮಿಳು, ಗುಜರಾತಿ ಮತ್ತು ಒಡಿಯಾ ಭಾಷೆಗಳಲ್ಲಿ ಲಭ್ಯವಿರಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ ಚಂದ್ರಚೂಡ್ ಅವರು ಮಂಗಳವಾರ ಹೇಳಿದ್ದಾರೆ. ಅಲ್ಲದೆ, ಇಂಗ್ಲಿಷ್ ದೇಶದ 99.99% ಪ್ರಜೆಗಳಿಗೆ ಗ್ರಹಿಸಬಹುದಾದ ಭಾಷೆಯಲ್ಲ ಎಂದೂ ಅವರು ಹೇಳಿದ್ದರು.
ಇದನ್ನೂ ಓದಿ: ಮತ್ತೆ ಕೇಂದ್ರ v/s ಸುಪ್ರೀಂ: ಸುಪ್ರೀಂನಿಂದ ಸಂವಿಧಾನ ಹೈಜಾಕ್; ನಿವೃತ್ತ ಜಡ್ಜ್ ಹೇಳಿಕೆಗೆ ಸಚಿವ ಬೆಂಬಲ
ಆನ್‌ಲೈನ್ ಇ-ಇನ್‌ಸ್ಪೆಕ್ಷನ್ ಸಾಫ್ಟ್‌ವೇರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇದು ದೆಹಲಿ ಹೈಕೋರ್ಟ್‌ನ ಡಿಜಿಟಲೈಸ್ಡ್ ಜ್ಯುಡಿಷಿಯಲ್ ಫೈಲ್‌ಗಳನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪುಗಳ ಅನುವಾದವು ನಾಗರಿಕರಿಗೆ ನ್ಯಾಯವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದೂ ಸಿಜೆಐ ಹೇಳಿದರು. ನಾವು ಇತ್ತೀಚೆಗೆ ಅಳವಡಿಸಿಕೊಂಡಿರುವ ಒಂದು ಪ್ರಮುಖ ಉಪಕ್ರಮವೆಂದರೆ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಿಸುವುದು. ಏಕೆಂದರೆ ನಾವು ಬಳಸುವ ಇಂಗ್ಲಿಷ್ ಭಾಷೆಯು 99.9% ನಷ್ಟು ನಾಗರಿಕರಿಗೆ ಗ್ರಹಿಸಲಾಗದ ಭಾಷೆಯಾಗಿದೆ ಎಡು ಸಿಜೆಐ ಚಂದ್ರಚೂಡ್ ಹೇಳಿದರು.
ದೇಶಾದ್ಯಂತ ಪ್ರತಿ ಹೈಕೋರ್ಟ್‌ನಲ್ಲಿ ಇಬ್ಬರು ನ್ಯಾಯಮೂರ್ತಿಗಳ ಸಮಿತಿ ಇರಬೇಕು, ಅವರಲ್ಲಿ ಒಬ್ಬರು ನ್ಯಾಯಮೂರ್ತಿಗಳಾಗಿರಬೇಕು ಎಂಬ ಉದ್ದೇಶದಿಂದ ತೀರ್ಪುಗಳನ್ನು 4 ಭಾಷೆಗಳಿಗೆ ಭಾಷಾಂತರಿಸಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಭಯ್ ಓಕಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಜಡ್ಜ್‌ಗಳ ಹಿನ್ನೆಲೆ ಕುರಿತ ‘ರಾ’ ವರದಿ ಬಹಿರಂಗ: ಕೊಲಿಜಿಯಂ ನಡೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಕಿಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ