ರೈಲ್ವೆಯ ಎಸಿ ಕೋಚ್‌ನಲ್ಲಿ ನೀಡಲಾಗುವ ಉಣ್ಣೆಯ ಹೊದಿಕೆಯನ್ನು ತಿಂಗಳಿಗೆ ಎರಡು ಬಾರಿ ತೊಳೆಯುತ್ತಾರೆ ಅನ್ನೋದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ರೈಲ್ವೆಯ ಹೌಸ್‌ಕೀಪಿಂಗ್ ಸಿಬ್ಬಂದಿ ಹೇಳಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ, ನಾವು ದುರ್ವಾಸನೆ, ತೇವ, ವಾಂತಿ ಇತ್ಯಾದಿಗಳನ್ನು ಗಮನಿಸಿದರೆ ಮಾತ್ರ ನಾವು ಹೊದಿಕೆಗಳನ್ನು ತೊಳೆಯಲು ನೀಡುತ್ತೇವೆ ಎಂದಿದ್ದಾರೆ.
ಬೆಂಗಳೂರು (ಅ.22): ರೈಲ್ವೆಯ ಎಸಿ ಕೋಚ್‌ನಲ್ಲಿ ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಎರಡು ರೀತಿಯ ಹೊದಿಕೆಗಳನ್ನು ನೀಡಲಾಗುತ್ತದೆ. ಒಂದು ಸಾಧಾರಣ ಹೊದಿಕೆ ಇನ್ನೊಂದು ಉಣ್ಣೆಯ ಹೊದಿಕೆ. ಇಂಥ ಕೋಚ್‌ಗಳಲ್ಲಿ ಪ್ರಯಾಣ ಮಾಡುವ ವೇಳೆ ನೀಡುವ ಬೆಡ್‌ಶೀಟ್‌ಗಳನ್ನು ಭಾರತೀಯ ರೈಲ್ವೆ ಎಷ್ಟು ಬಾರಿ ತೊಳೆಯುತ್ತದೆ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಇರುವುದು ಸಹಜ. ಇತ್ತೀಚೆಗೆ ರೈಲ್ವೇಸ್ ಆರ್‌ಟಿಐ ಮೂಲಕ ಕೇಳಲಾದ ಈ ಪ್ರಶ್ನೆಗೆ ಉತ್ತರ ನೀಡಿದೆ. ರೈಲ್ವೇ ಸಚಿವಾಲಯವು ಪ್ರಯಾಣಿಕರಿಗೆ ಒದಗಿಸಲಾದ ಲಿನಿನ್ ಅನ್ನು (ಸಾಧಾರಣ ಹೊದಿಕೆ) ಪ್ರತಿ ಬಳಕೆಯ ನಂತರ ತೊಳೆಯುತ್ತದೆ. ಆದರೆ ಉಣ್ಣೆಯ ಹೊದಿಕೆಗಳನ್ನು "ಕನಿಷ್ಠ ತಿಂಗಳಿಗೊಮ್ಮೆ, ಹೆಚ್ಚೆಂದರೆ ತಿಂಗಳಿಗೆ ಎರಡು ಬಾರಿ, ಲಭ್ಯವಿರುವ ಸಾಮರ್ಥ್ಯ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಗಳಿಗೆ ಒಳಪಟ್ಟು ತೊಳೆಯುತ್ತದೆ' ಎಂದು ಮಾಹಿತಿ ನೀಡಿದೆ. ವಿವಿಧ ದೂರದ ರೈಲುಗಳ ಸುಮಾರು 20 ಹೌಸ್‌ಕೀಪಿಂಗ್ ಸಿಬ್ಬಂದಿಯೊಂದಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರು ಕಂಬಳಿಗಳನ್ನು ತಿಂಗಳಿಗೊಮ್ಮೆ ಮಾತ್ರ ತೊಳೆಯುವುದಾಗಿ ತಿಳಿಸಿದ್ದಾರೆ. ಕಲೆ ಅಥವಾ ವಾಸನೆ ಇದ್ದರೆ ಮಾತ್ರ ಅವುಗಳನ್ನು ಹೆಚ್ಚಾಗಿ ತೊಳೆಯಲಾಗುತ್ತದೆ ಎಂದು ಹಲವರು ಹೇಳಿದ್ದಾರೆ.
ಭಾರತೀಯ ರೈಲ್ವೇಯು ಕಂಬಳಿಗಳು, ಬೆಡ್‌ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳಿಗೆ ಪ್ರಯಾಣಿಕರಿಗೆ ಶುಲ್ಕ ವಿಧಿಸುತ್ತದೆಯೇ ಎಂದು ಕೇಳಿದಾಗ, ರೈಲ್ವೇಸ್ ಆರ್‌ಟಿಐ ಪ್ರತಿಕ್ರಿಯೆಯಲ್ಲಿ, “ಇದೆಲ್ಲವೂ ರೈಲು ದರದ ಪ್ಯಾಕೇಜ್‌ನ ಭಾಗವಾಗಿದೆ. ಇದಲ್ಲದೆ, ಗರೀಬ್ ರಥ್ ಮತ್ತು ಡುರೊಂಟೊದಂತಹ ರೈಲುಗಳಲ್ಲಿ, ಟಿಕೆಟ್‌ಗಳನ್ನು ಬುಕ್ ಮಾಡುವಾಗ ಬೆಡ್‌ರೋಲ್ ಆಯ್ಕೆಯನ್ನು ಆರಿಸಿದ ನಂತರ ಪ್ರತಿ ಕಿಟ್‌ಗೆ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ ಬೆಡ್‌ರೋಲ್ (ದಿಂಬು, ಬೆಡ್ ಶೀಟ್, ಇತ್ಯಾದಿ) ಪಡೆಯಬಹುದು. ರೈಲ್ವೇ ಸಚಿವಾಲಯದ ಎನ್ವಿರಾನ್‌ಮೆಂಟ್ ಮತ್ತು ಹೌಸ್‌ಕೀಪಿಂಗ್ ಮ್ಯಾನೇಜ್‌ಮೆಂಟ್ (ಎನ್‌ಎಚ್‌ಎಂ) ವಿಭಾಗದ ಅಧಿಕಾರಿ ರಿಶು ಗುಪ್ತಾ ಅವರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
undefined
ಡುರೊಂಟೊ ಸೇರಿದಂತೆ ವಿವಿಧ ರೈಲುಗಳ ಹೌಸ್‌ಕೀಪಿಂಗ್ ಸಿಬ್ಬಂದಿ ರೈಲ್ವೇ ಲಾಂಡ್ರಿಯ ಕೊಳಕು ಸತ್ಯವನ್ನು ಹಂಚಿಕೊಂಡಿದ್ದಾರೆ. “ಪ್ರತಿ ಪ್ರವಾಸದ ನಂತರ, ನಾವು ಬೆಡ್‌ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳನ್ನು (ಲಿನಿನ್) ಲಾಂಡ್ರಿ ಸೇವೆಗೆ ನೀಡಲು ಬಂಡಲ್‌ಗಳಲ್ಲಿ ಹಾಕುತ್ತೇವೆ. ಹೊದಿಕೆಗಳ ವಿಚಾರದಲ್ಲಿ ನಾವು ಅವುಗಳನ್ನು ಅಂದವಾಗಿ ಮಡಚಿ ಕೋಚ್‌ನಲ್ಲಿಯೇ ಇಡುತ್ತೇವೆ. ನಾವು ಕೆಟ್ಟ ವಾಸನೆ ಇದ್ದರೆ ಅಥವಾ ಅದರ ಮೇಲೆ ಸ್ವಲ್ಪ ಆಹಾರವನ್ನು ಗಮನಿಸಿದರೆ ಮಾತ್ರ ನಾವು ಅವರನ್ನು ಲಾಂಡ್ರಿ ಸೇವೆಗೆ ಕಳುಹಿಸುತ್ತೇವೆ ”ಎಂದು ಹೇಳಿದ್ದಾರೆ.
10 ವರ್ಷಗಳಿಂದ ವಿವಿಧ ರೈಲುಗಳಲ್ಲಿ ಕೆಲಸ ಮಾಡಿದ ಮತ್ತೊಬ್ಬ ಹೌಸ್‌ಕೀಪಿಂಗ್ ಸಿಬ್ಬಂದಿ, ಕಂಬಳಿಗಳ ಸ್ವಚ್ಛತೆಯ ಬಗ್ಗೆ ಯಾವುದೇ ಮೇಲ್ವಿಚಾರಣೆ ಇಲ್ಲ ಎಂದು ಹೇಳಿದರು. “ಕಂಬಳಿಗಳನ್ನು ತಿಂಗಳಿಗೆ ಎರಡು ಬಾರಿ ತೊಳೆಯಲಾಗುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ನಾವು ದುರ್ವಾಸನೆ, ತೇವ, ವಾಂತಿ ಇತ್ಯಾದಿಗಳನ್ನು ಗಮನಿಸಿದರೆ ಮಾತ್ರ ನಾವು ಹೊದಿಕೆಗಳನ್ನು ತೊಳೆಯಲು ನೀಡುತ್ತೇವೆ. ಕೆಲವು ಸಂದರ್ಭಗಳಲ್ಲಿ, ಪ್ರಯಾಣಿಕರು ದೂರುಗಳನ್ನು ಎತ್ತಿದರೆ ನಾವು ತಕ್ಷಣವೇ ಸ್ವಚ್ಛವಾದ ಹೊದಿಕೆಯನ್ನು ಒದಗಿಸುತ್ತೇವೆ' ಎಂದಿದ್ದಾರೆ.
Auto Kannadiga: ಪ್ರಯಾಣ ಮಾಡೋವಾಗ್ಲೆ ಕನ್ನಡ ಕಲಿಸುವ ಆಟೋ ಡ್ರೈವರ್ ಐಡಿಯಾಗೆ ನೆಟ್ಟಿಗರ ಮೆಚ್ಚುಗೆ
ರೈಲ್ವೇ ಉಣ್ಣೆ ಹೊದಿಕೆಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಎನ್‌ಎಚ್‌ಎಂನ ನಿವೃತ್ತ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. "ಕಂಬಳಿಗಳು ಭಾರವಾಗಿರುತ್ತವೆ. ಅವುಗಳನ್ನು ಸರಿಯಾಗಿ ತೊಳೆದಿರುತ್ತಾರೆ ಅಂತಾ ಖಚಿತಪಡಿಸಿಕೊಳ್ಳುವುದು ಕಷ್ಟ. ರೈಲ್ವೇಯು ಈ ಕಂಬಳಿಗಳನ್ನು ಬಳಸುವುದನ್ನು ನಿಲ್ಲಿಸುವ ಸಮಯ ಬಂದಿದೆ, ”ಎಂದು ಅವರು ಹೇಳಿದರು. RTI ಉತ್ತರದ ಪ್ರಕಾರ, ಭಾರತೀಯ ರೈಲ್ವೇಯು ದೇಶದಲ್ಲಿ 46 ಇಲಾಖಾ ಲಾಂಡ್ರಿಗಳನ್ನು ಮತ್ತು 25 BOOT ಲಾಂಡ್ರಿಗಳನ್ನು ಹೊಂದಿದೆ.
ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿಗಳು ಹೇಳುವ ಪ್ರಕಾರ, “ಇಲಾಖೆಯ ಲಾಂಡ್ರಿ ಎಂದರೆ ಭೂಮಿ ಮತ್ತು ತೊಳೆಯುವ ಯಂತ್ರಗಳು ರೈಲ್ವೆಯ ಒಡೆತನದಲ್ಲಿದೆ. ಆದರೆ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. BOOT ಎಂದರೆ ಬಿಲ್ಡ್-ಓನ್-ಆಪರೇಟ್-ಟ್ರಾನ್ಸ್‌ಫರ್ ಲಾಂಡ್ರಿ. ಇಲ್ಲಿ, ಭೂಮಿ ಭಾರತೀಯ ರೈಲ್ವೇಸ್ ಒಡೆತನದಲ್ಲಿದೆ. ಆದಾಗ್ಯೂ, ತೊಳೆಯುವ ಉಪಕರಣಗಳು ಮತ್ತು ಸಂಬಂಧಪಟ್ಟ ಸಿಬ್ಬಂದಿ ಖಾಸಗಿ ಪಕ್ಷ ಅಥವಾ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೇರಿರುತ್ತದೆ' ಎಂದಿದ್ದಾರೆ.
🚨 Indian Railways washes the woollen blankets provided in AC coaches once a month, or at the most twice. (RTI) pic.twitter.com/9lC63K4ID5
— Indian Tech & Infra (@IndianTechGuide)