ಅಮಿತ್ ಶಾ ಜನರಲ್ ಡಯರ್ ಇದ್ದಂತೆ: ನವಾಬ್ ಮಲ್ಲಿಕ್!

By Suvarna NewsFirst Published Dec 18, 2019, 7:21 PM IST
Highlights

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆ| ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಗುಡುಗಿದ ಎನ್‌ಸಿಪಿ ನಾಯಕ| ಅಮಿತ್ ಶಾ ಅವರನ್ನು ಜನರಲ್ ಡಯರ್'ಗೆ ಹೋಲಿಸಿದ ನವಾಬ್ ಮಲ್ಲಿಕ್| ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಪ್ರಹಾರ ಖಂಡಿಸಿದ ನವಾಬ್ ಮಲ್ಲಿಕ್|

ಮುಂಬೈ(ಡಿ.18): ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರೂರ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಅವರಿಗಿಂತ ಕ್ರೂರಿಯಾಗಿ ವರ್ತಿಸುತ್ತಿದ್ದಾರೆ ಎಂದು ಎನ್‌ಸಿಪಿ ನಾಯಕ ನವಾಬ್ ಮಲ್ಲಿಕ್ ಗುಡುಗಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ಅಮಿತ್ ಶಾ ದೇಶದ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ.

ಪೌರತ್ವ ಕಾಯ್ದೆಯಲ್ಲಿ ಬದಲಾವಣೆ?: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸುಳಿವು!

ಅಮಿತ್ ಶಾ ಬ್ರಿಟಿಷ್ ಆಡಳಿತಾವಧಿಯಲ್ಲಿ ಅಮೃತ್'ಸರ್‌ನ ಜಲಿಯನ್'ವಾಲಾ ಬಾಗ್‌ನಲ್ಲಿ ಸಿಖ್ಖರ ನರಮೇಧ ನಡೆಸಿದ ಜನರಲ್ ಡಯರ್ ಅವರಂತೆಯೇ ಕ್ರೂರ ನಾಯಕ ಎಂದು ನವಾಬ್ ಮಲ್ಲಿಕ್ ಹರಿಹಾಯ್ದಿದ್ದಾರೆ.

Nawab Malik, NCP: The way General Dyer fired at the people in Jallianwala Bagh, Amit Shah is firing at citizens of the country in the same way. Amit Shah is no less than Dyer. What Uddhav ji said ("What happened at Jamia Millia Islamia, is like Jallianwala Bagh") is correct. pic.twitter.com/2F8o6wMoFE

— ANI (@ANI)

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಪೊಲೀಸರು ಹಿಂಸೆಯ ಮೂಲಕ ಬಗ್ಗುಬಡಿಯುತ್ತಿದ್ದಾರೆ. ಇದಕ್ಕೆ ಜನರಲ್ ಡಯರ್ ಅವರಂತೆಯೇ ವರ್ತಿಸುತ್ತಿರುವ ಅಮಿತ್ ಶಾ ಕಾರಣ ಎಂದು ನವಾಬ್ ಮಲ್ಲಿಕ್ ಹೇಳಿದ್ದಾರೆ.

ಪೌರತ್ವ ಕಾಯ್ದೆ ಕಿಡಿ: ಶಿಲ್ಲಾಂಗ್ ಭೇಟಿ ರದ್ದುಗೊಳಿಸಿದ ಅಮಿತ್ ಶಾ!

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೂಡ ಅಮಿತ್ ಶಾ ಅವರನ್ನು ಜನರಲ್ ಡಯರ್ ಅವರಿಗೆ ಹೋಲಿಸಿದ್ದು, ನವಾಬ್ ಮಲ್ಲಿಕ್ ಉದ್ಧವ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

click me!