ರಾಹುಲ್ ಗಾಂಧಿ ಮೇ.2ಕ್ಕೆ ಅಮೇಠಿಯಿಂದ ನಾಮಪತ್ರ ಸಲ್ಲಿಕೆ ಎಂದ ಜಿಲ್ಲಾ ಕಾಂಗ್ರೆಸ್, ಪ್ಲಾನ್ ಬಿ ವಯನಾಡು!

By Suvarna NewsFirst Published Apr 25, 2024, 6:44 PM IST
Highlights

ವಯನಾಡು ಕ್ಷೇತ್ರದ ಹಾಲಿ ಸಂಸದ ರಾಹುಲ್ ಗಾಂಧಿ ಈ ಬಾರಿ ಅಮೇಠಿಯಿಂದ ಮೇ.2 ರಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ಅಮೇಠಿ ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ಪ್ರಚಾರಕ್ಕೆ ಸೂಚಿಸಿದ್ದಾರೆ. ಆದರೆ ವಯನಾಡಿನಿಂದಲೂ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದಾರೆ. ಇದರ ನಡುವೆ ಪ್ಲಾನ್ ಬಿಯೊಂದ ರೆಡಿಯಾಗಿದೆ.
 

ನವದೆಹಲಿ(ಏ.25) ಲೋಕಸಭಾ ಚುನಾವಣೆ ಕೇವಲ ಪ್ರಚಾರ, ಗೆಲುವಿನ ಸಂಭಾವ್ಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಮಾತ್ರವಲ್ಲ. ಇದರ ಜೊತೆಗೆ ರಾಜಕೀಯ ಪಕ್ಷಗಳು ಗಂಟೆ ಗಂಟೆಗೊಂದು ಸಮೀಕ್ಷೆ ನಡೆಸಿ ರಿಪೋರ್ಟ್ ಪಡೆಯುತ್ತಾರೆ. ಈ ವರದಿ ಆಧರಿಸಿ ತಮ್ಮ ರಣತಂತ್ರಗಳನ್ನು ಬದಲಿಸುತ್ತಾರೆ. ಕೊನೆಯ ಕ್ಷಣದಲ್ಲಿ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಇದೀಗ ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯಲ್ಲೂ ಪ್ಲಾನ್ ಎ, ಬಿಯೊಂದಿಗೆ ಅಖಾಡಕ್ಕಿಳಿದಿದ್ದಾರೆ. ರಾಹುಲ್ ಮೇ. 2ರಂದು ಅಮೇಠಿಯಿಂದ ನಾಮಪತ್ರ ಸಲ್ಲಿಸುವುದು ಬಹುತೇಕ ಪಕ್ಕಾ ಆಗಿದೆ. 

ಅಮೇಠಿ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಈಗಾಗಲೇ ಕಾಂಗ್ರೆಸ್ ಸೂಚನೆ ನೀಡಿದೆ. ಅಮೇಠಿಯಲ್ಲಿ ರಾಹುಲ್ ಗಾಂಧಿ ಪರ ಪ್ರಚಾರ ಮಾಡುವಂತೆ ಸೂಚಿಸಿದೆ. ಜಿಲ್ಲಾ ನಾಯಕರು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ಕುರಿತು ಅಮೇಠಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶುಭಮ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಮೇ.2ರಂದು ರಾಹುಲ್ ಗಾಂಧಿ ಅಮೇಠಿಯಿಂದ ನಾಮಪತ್ರ ಸಲ್ಲಿಸುತ್ತಿದ್ದಾರೆ. ಜಿಲ್ಲಾ ನಾಯಕರಿಗೆ ಪ್ರಚಾರಕ್ಕೆ ಸೂಚಿಸಲಾಗಿದೆ. ನಾವು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಪ್ರಧಾನಿ ಮೋದಿ, ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ಶಾಕ್, ಏ.29ಕ್ಕೆ ಡೆಡ್‌ಲೈನ್!

ಅಮೇಠಿ ರಾಹುಲ್ ಗಾಂಧಿಯ ಮೊದಲ ಆಯ್ಕೆಯಾದರೆ ವಯನಾಡು ಎರಡನೇ ಆಯ್ಕೆಯಾಗಿದೆ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋಲು ಕಂಡಿದ್ದರೆ, ವಯನಾಡಿನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದರು. ವಯಾಡಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಇದೀಗ ರಾಹುಲ್ ಗಾಂಧಿ ವಯನಾಡು ಕ್ಷೇತ್ರವನ್ನು, ವಯನಾಡು ಮತದಾರರನ್ನು ನಿರ್ಲಕ್ಷಿಸುತ್ತಿದ್ದಾರೆ. ರಾಹುಲ್ ಗಾಂಧಿ ಅಮೇಠಿಯಿಂದ ಗೆದ್ದರೆ ವಯನಾಡು ಕ್ಷೇತ್ರ ತೊರೆಯಲಿದ್ದಾರೆ ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ಮ್ಯಾನೇಜರ್, ನಾಯಕ ಅಮಿತ್ ಮಾಳವಿಯಾ ಆರೋಪಿಸಿದ್ದಾರೆ. 

 

Shubham Singh, Amethi District Youth Congress President, claims that Rahul Gandhi will file his nomination on 2nd May and the unit has been asked to start preparations.
This is an insult to the people of Wayanad, who elected Rahul and will now be dumped, if at all he wins Amethi.… pic.twitter.com/I3Ksjqf9ZT

— Amit Malviya (मोदी का परिवार) (@amitmalviya)

 

ಕಳೆದ ಬಾರಿ ವಯಾನಡು ಕ್ಷೇತ್ರದಲ್ಲಿ ರಾಹುಲ್ ಗಾಂಧಿಗೆ ಯಾವುದೇ ಪ್ರತಿಸ್ಪರ್ಧಿಗಳಿರಲಿಲ್ಲ. ಆದರೆ ಈ ಬಾರಿ ಪ್ರಬಲ ಪ್ರತಿಸ್ಪರ್ಧಿಗಳನ್ನು ರಾಹುಲ್ ಗಾಂಧಿ ಎದುರಿಸಬೇಕಿದೆ. ಸಿಪಿಐ ಅಭ್ಯರ್ಥಿ ಅನ್ನಿ ರಾಜ ಕೇರಳದ ರಾಜಕೀಯದಲ್ಲಿ ಜನಪ್ರಿಯ ನಾಯಕರಾಗಿದ್ದಾರೆ.  ಹೀಗಾಗಿ ರಾಹುಲ್ ಗಾಂಧಿಗೆ ಈ ಬಾರಿ ಸಿಪಿಐ ನಾಯಕ ಪ್ರಬಲ ಪ್ರತಿಸ್ಪರ್ಧೆ ಒಡ್ಡಲಿದ್ದಾರೆ. ಇದರ ಜೊತೆಗೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಕೂಡ ಕಣದಲ್ಲಿದ್ದಾರೆ. ಹೀಗಾಗಿ ತ್ರಿಕೋನ ಸ್ಪರ್ಧೆಯಲ್ಲಿ ರಾಹುಲ್ ಗಾಂಧಿಗೆ ಗೆಲುವು ಕಷ್ಟ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

ಗಾಂಧಿ ಹೆಸರು ಬಳಸಿಕೊಳ್ಳಲು ರಾಹುಲ್‌ಗೆ ಯಾವುದೇ ಹಕ್ಕಿಲ್ಲ, ಭಾರಿ ವಿವಾದ ಸೃಷ್ಟಿಸಿದ ನಾಯಕನ ಹೇಳಿಕೆ!

click me!