ತಾಳಿ ಕಟ್ಟೋ ಟೈಮ್‌ನಲ್ಲಿ ಮೂರು ಮಕ್ಕಳ ಜೊತೆ ಮದುವೆ ಮನೆಗೆ ಬಂದ ಮದುಮಗನ ಗರ್ಲ್‌ಫ್ರೆಂಡ್‌!

ಇನ್ನೇನು ವರ, ವಧುವಿಗೆ ತಾಳಿ ಕಟ್ಟಬೇಕು ಅನ್ನೋ ಟೈಮ್‌ನಲ್ಲಿ ಜನರ ಮಧ್ಯೆ ಭಾರಿ ಗದ್ದಲ. ನೋಡಿದ್ರೆ ಅಲ್ಲಿ ಮೂರು ಮಕ್ಕಳ ತಾಯಿ ಮದುವೆಯನ್ನ ನಿಲ್ಲಿಸೋವಂತೆ ಕೇಳ್ತಿದ್ದಾಳೆ. ಆಕೆ ಬೇರೆ ಯಾರೂ ಅಲ್ಲ, ಮದುವೆಯಾಗ್ತಿದ್ದ ಹುಡುಗನ ಗರ್ಲ್‌ಫ್ರೆಂಡ್‌.


ನವದೆಹಲಿ (ಏ.25): ಉತ್ತರ ಪ್ರದೇಶದ ಮಹೋಬಾದ ಹಳ್ಳಿಯೊಂದರಲ್ಲಿ ಗಾಯತ್ರಿ ಹರಪ್ರಸಾದ್ ಎಂಬ ವಧು, ವರನ ಗರ್ಲ್‌ಫ್ರೆಂಡ್‌ ಸಂತೋಷಿ ಮದುವೆ ಮನೆಗೆ ನುಗ್ಗಿ ರಂಪಾಟ ಮಾಡಿದ್ದರಿಂದ ವರ ಬ್ರಜಕಿಶೋರ್ ಪ್ರಜಾಪತಿಯನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಬ್ರಜ್‌ಕಿಶೋರ್‌ ಪ್ರಜಾಪತಿಯ ಗರ್ಲ್‌ಫ್ರೆಂಡ್‌ ಆಗಿರುವ ಸಂತೋಷಿ ಒಬ್ಬಳೇ ಬಂದಿರಲಿಲ್ಲ. ಆಕೆಯ ಮೂರು ಮಕ್ಕಳು ಕೂಡ ಅವರ ಜೊತೆ ಇದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವ ಹಂತದಲ್ಲಿ ಈ ಘಟನೆ ನಡೆದಿದೆ. ವರಮಾಲೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗಾಯತ್ರಿ ಹರಪ್ರಸಾದ್‌, ವಧುವಿನ ಕೊರಳಿಗೆ ಹಾರ ಹಾಕುವಾಗ ಸಂತೋಷಿ ಮದುವೆ ಮನೆಗೆ ಆಗಮಿಸಿದ್ದಾರೆ. ಮದುವೆ ಮನೆಗೆ ಬಂದಾಕೆಯೇ ನಾನು ಬ್ರಜ್‌ಕಿಶೋರ್‌ನ ಗರ್ಲ್‌ಫ್ರೆಂಡ್‌ ಎಂದು ದೊಡ್ಡದಾಗಿ ಕಿರುಚಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಮದುವೆಯನ್ನು ನಿಲ್ಲಿಸಿ ಹಾಲ್‌ನಿಂದ ಹೊರನಡೆದ ಗಾಯತ್ರಿ, ಅಜ್ನಾರ್‌ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದಾರೆ. 

ಬಳಿಕ ಮದುವೆ ಮನೆಗೆ ಬಂದ ಪೊಲೀಸರು ಎಲ್ಲರನ್ನೂ ಆಂತಗೊಳಿಸಿದ್ದಲ್ಲದೆ, ಸ್ಥಳೀಯ ಪೊಲೀಸ್ ಠಾಣೆಗೆ ವರದಿ ಮಾಡುವಂತೆ ಹೇಳಿದರು. ಸಂಬಂಧಿತ ಪಕ್ಷಗಳು ಪರಸ್ಪರ ಒಪ್ಪಂದದ ಮೂಲಕ ಸಮಸ್ಯೆಯನ್ನು ಬಗೆಹರಿಸಲು ವಿನಂತಿ ಮಾಡಲಾಯಿತು.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ವಧು ಗಾಯತ್ರಿ, ವರನ ಮನೆಯವರು ಹುಡುಗನಿಗೆ ಬೇರೆ ಹುಡುಗಿಯೊಂದಿಗಿನ ಸಂಬಂಧದ ಬಗ್ಗೆ ಮೊದಲೇ ತಿಳಿಸದೆ ವಂಚಿಸಿದ್ದಾರೆ. ಮದುವೆ ವೆಚ್ಚದ 10 ಲಕ್ಷ ರೂಪಾಯಿ ವಾಪಸ್ ನೀಡುವಂತೆ ಗಾಯತ್ರಿ ಕುಟುಂಬದವರು ಒತ್ತಾಯಿಸಿದ್ದಾರೆ. ಸಂತೋಷಿ ಅವರು ಬ್ರಜಕಿಶೋರ್ ಅವರ ಕುಟುಂಬದ ವಿರುದ್ಧ ವಂಚನೆ ಆರೋಪವನ್ನು ಹೊರಿಸಿದ್ದಾರೆ ಮತ್ತು ನಾಲ್ಕು ವರ್ಷಗಳ ಹಿಂದೆಯೇ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.

ತನ್ನ ಸಂಬಂಧಿಗಳ ಮೂಲಕ ಬ್ರಜ್‌ಕಿಶೋರ್‌ ಪರಿಚಯವಾಗಿತ್ತು ಎಂದು ಸಂತೋಷಿ ಹೇಳಿದ್ದಾರೆ. ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದ ಬಳಿಕ ಮದುವೆಯಾಗುವ ನಿರ್ಧಾರ ಮಾಡಿದ್ದೆವು. ಮದುವೆಯ ಬಳಿಕ ನಮಗೆ ಮೂರು ಮಕ್ಕಳು ಆದವು. ಆದರೆ, ಇದ್ದಕ್ಕಿಂದತೆ ಒಂದು ದಿನ ಬ್ರಜ್‌ಕಿಶೋರ್‌ ಬಿಟ್ಟುಹೋಗಿದ್ದ. ಅದಾದ ಬಳಿಕ 80 ಕಿಲೋಮೀಟರ್‌ ದೂರದ ಸ್ಥಳದಲ್ಲಿ ಈತ ಮತ್ತೊಂದು ಮದುವೆಯಾಗುತ್ತಿರುವ ಸುದ್ದಿ ಸಿಕ್ಕಿತ್ತು.  ಇದರ ಬೆನ್ನಲ್ಲೇ ನಾನು ಇಲ್ಲಿಗೆ ಆಗಮಿಸಿ ಮದುವೆಯನ್ನು ನಿಲ್ಲಿಸಿದೆ ಎಂದಿದ್ದಾರೆ.

Hubballi: 120 ದಿನಗಳ ಒಳಗಾಗಿ ನೇಹಾ ಹೀರೇಮಠ್‌ ಆರೋಪಿಗೆ ಗರಿಷ್ಠ ಶಿಕ್ಷೆ: ಸಿಎಂ ಭರವಸೆ

Latest Videos

ಈ ನಡುವೆ ಬ್ರಜ್‌ಕಿಶೋರ್‌ ತನ್ನ ಮೇಲಿನ ಆರೋಪ ಆಧಾರರಹಿತ ಎಂದಿದ್ದಾರೆ, ಸಂತೋಷಿ ಜೊತೆ ಫೋನ್‌ನಲ್ಲಿ ಮಾತ್ರ ಮಾತನಾಡುತ್ತಿದ್ದೆ ಎಂದಿದ್ದಾರೆ. ಆಕೆಯೊಂದಿಗೆ ಯಾವುದೇ ರಿಲೇಷನ್‌ಷಿಪ್‌ ನನಗಿಲ್ಲ.  ಯಾವುದೇ ಕಾರಣಕ್ಕೂ ಆಕೆಯನ್ನು ಮದುವೆಯಾಗೋದಿಲ್ಲ ಎಂದು ಹೇಳಿದ್ದಾರೆ.

'ಇವತ್ತು ರಾತ್ರಿ ಹೋಟೆಲ್‌ ರೂಮ್‌ಗೆ ಬರ್ಬೇಕು..' ಫ್ಯಾಶನ್‌ ಕಂಪನಿ ಸಿಇಒ ANKITI BOSE ಮೇಲೆ ಲೈಂಗಿಕ ಕಿರುಕುಳ!

click me!