ಸಂಸತ್‌ ಅಧಿವೇಶನ ಹಠಾತ್‌ ಅಂತ್ಯ, 16 ದಿನದಲ್ಲಿ 28 ಗಂಟೆ ಕಲಾಪ!

By Kannadaprabha NewsFirst Published Aug 9, 2022, 8:24 AM IST
Highlights

6 ದಿನಗಳ ಕಾಲ ನಡೆದ ಅಧಿವೇಶನದ ಅವಧಿಯಲ್ಲಿ ಲೋಕಸಭೆಯಲ್ಲಿ ಒಟ್ಟು 44 ಗಂಟೆ 29 ನಿಮಿಷ ಕಲಾಪ ನಡೆದು 7 ಮಸೂದೆ ಅಂಗೀಕರಿಸಿದ್ದರೆ, ರಾಜ್ಯಸಭೆಯಲ್ಲಿ 38 ಗಂಟೆ ಕಲಾಪ ನಡೆದು 5 ಮಸೂದೆಗಳಿಗೆ ಅಂಗೀಕಾರ ಪಡೆಯಲಾಗಿದೆ.

ನವದೆಹಲಿ(ಆ.09): ಮೊದಲ ದಿನದಿಂದಲೂ ಗದ್ದಲದಲ್ಲೇ ನಡೆದ ಸಂಸತ್ತಿನ ಮುಂಗಾರು ಅಧಿವೇಶನವನ್ನು ನಿಗದಿತ ಅವಧಿಗಿಂತ ಮೊದಲೇ ಸೋಮವಾರ ಹಠಾತ್‌ ಅಂತ್ಯಗೊಳಿಸಲಾಗಿದೆ. ಜು.18ರಂದು ಆರಂಭಗೊಂಡ ಅಧಿವೇಶನ ನಿಗದಿಯಂತೆ ಆ.12ರಂದು ಅಂತ್ಯವಾಗಬೇಕಾಗಿತ್ತು. ಆದರೆ ಉಳಿದ 4 ದಿನಗಳ ಪೈಕಿ 2 ದಿನ ಅಂದರೆ ಮಂಗಳವಾರ ಮೊಹರಂ ಮತ್ತು ಗುರುವಾರ ರಕ್ಷಾ ಬಂಧನ ರಜೆ ಇದೆ. ಹೀಗಾಗಿ ಕಲಾಪ ಸಾಧ್ಯವಾಗುವುದು ಕೇವಲ 2 ದಿನ. ಹೀಗಾಗಿ ತವರು ಕ್ಷೇತ್ರಕ್ಕೆ ತೆರಳಬೇಕಿರುವ ಕಾರಣ ವಿವಿಧ ಪಕ್ಷಗಳ ನಾಯಕರು, ಅಧಿವೇಶನ ಮುಕ್ತಾಯಕ್ಕೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿತು ಎಂದು ಮೂಲಗಳು ತಿಳಿಸಿವೆ.

16 ದಿನಗಳ ಕಾಲ ನಡೆದ ಅಧಿವೇಶನದ ಅವಧಿಯಲ್ಲಿ ಲೋಕಸಭೆಯಲ್ಲಿ ಒಟ್ಟು 44 ಗಂಟೆ 29 ನಿಮಿಷ ಕಲಾಪ ನಡೆದು 7 ಮಸೂದೆ ಅಂಗೀಕರಿಸಿದ್ದರೆ, ರಾಜ್ಯಸಭೆಯಲ್ಲಿ 38 ಗಂಟೆ ಕಲಾಪ ನಡೆದು 5 ಮಸೂದೆಗಳಿಗೆ ಅಂಗೀಕಾರ ಪಡೆಯಲಾಗಿದೆ.

ಕಾಂಗ್ರೆಸ್ ಕಲಾಪಕ್ಕೆ ಅಡ್ಡಿಪಡಿಸುತ್ತಾ ಸಂಸದರ ಹಕ್ಕು ಕಸಿಯುತ್ತಿದೆ : ಪ್ರಹ್ಲಾದ್‌ ಜೋಶಿ ಆಕ್ರೋಶ

ಭಾರೀ ಗದ್ದಲ:
ಅಗ್ನಿಪಥ ಯೋಜನೆ ಜಾರಿ, ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿಪಕ್ಷ ನಾಯಕರ ಮೇಲೆ ಇ.ಡಿ ದುರ್ಬಳಕೆ ಆರೋಪ ಮಾಡಿ ಮೊದಲ ದಿನದಿಂದಲೂ ವಿಪಕ್ಷಗಳು ಕಲಾಪಕ್ಕೆ ಅಡ್ಡಿ ಮಾಡುತ್ತಲೇ ಬಂದಿದ್ದರು. ಹೀಗಾಗಿ ಆಡಳಿತದ ಪಕ್ಷ ಬಹುಮತ ಇರುವ ಲೋಕಸಭೆಯಲ್ಲಿ ಒಂದಿಷ್ಟುಕಲಾಪ ಸಾಧ್ಯವಾಗಿತ್ತಾದರೂ, ರಾಜ್ಯಸಭೆಯಲ್ಲಿ ಕಲಾಪಕ್ಕೆ ಭಾರೀ ಅಡ್ಡಿಯಾಗಿತ್ತು.

ಭಾರೀ ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆಯ 4 ಮತ್ತು ರಾಜ್ಯಸಭೆಯಲ್ಲಿ 23 ಸದಸ್ಯರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಿದ ಘಟನೆಯೂ ನಡೆದಿತ್ತು. ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ ಅಧೀರ್‌ ರಂಜನ್‌ ಚೌಧರಿ ಹೇಳಿಕೆ ಕಾರಣ ಸೋನಿಯಾ ಗಾಂಧಿ ಮತ್ತು ಸಚಿವೆ ಸ್ಮೃತಿ ಇರಾನಿ ಅವರ ವಾಕ್ಸಮರದ ಅಪರೂಪದ ಘಟನೆಗೂ ಲೋಕಸಭೆ ಸಾಕ್ಷಿಯಾಯಿತು.

27 ದಿನಗಳ ಅಧಿವೇಶನ ಯಶಸ್ವಿ, 13 ಮಸೂದೆ ಮಂಡನೆ: ಪ್ರಲ್ಹಾದ್ ಜೋಶಿ

ಲೋಕಸಭೆ
44 ಗಂಟೆ 29 ನಿಮಿಷ ಕಲಾಪ
7 ಮಸೂದೆಗೆ ಅನುಮೋದನೆ
16 ದಿನದಲ್ಲಿ 28 ಗಂಟೆ ಕಲಾಪ
ಕೇವಲ 5 ಮಸೂದೆಗೆ ಅಂಗೀಕಾರ

ಅಕ್ರಮ ಸಂತಾನ ಪದ ಬಳಕೆ ನಿಷೇಧಿಸುವಂತೆ ಸಂಸದೀಯ ಸಮಿತಿ ಸಲಹೆ
ವಿವಾಹಯೇತರ ಸಂಬಂಧದಲ್ಲಿ ಜನಿಸಿದ ಮಕ್ಕಳನ್ನು ‘ಅಕ್ರಮ ಸಂತಾನ’ ಎಂದು ಕರೆಯುವ ಪದ್ಧತಿಯನ್ನು ದತ್ತು ಕಾನೂನಿನಿಂದ ಕೈಬಿಡುವಂತೆ ಸಂಸದೀಯ ಸಮಿತಿಯೊಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕಾನೂನಿನ ಮುಂದೆ ಎಲ್ಲ ಮಕ್ಕಳು ಸಮಾನರು. ಅವರು ಯಾವುದೇ ರೀತಿಯಲ್ಲಿ ಜನಿಸಿದ್ದರೂ ಅಂಥ ಮಕ್ಕಳು ಅಕ್ರಮ ಸಂತಾನ ಆಗುವುದಿಲ್ಲ. ಹೀಗಾಗಿ ಅಂಥ ಪದ ಬಳಕೆಯನ್ನು ಬಿಡಬೇಕು ಎಂದು ಸುಶೀಲ್‌ ಮೋದಿ ನೇತೃತ್ವದ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ವರದಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲೇ ಮಂಡನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

click me!