ಮಹಾತ್ಮಾ ಗಾಂಧಿ ಹೇಡಿ, ಆದರೆ ರಾಹುಲ್ ಗಾಂಧಿ ಸಂಪೂರ್ಣ ಪ್ರಮಾಣಿಕ, ಸತ್ಯದ ಮಾರ್ಗದಲ್ಲಿ ನಡೆಯುವ ನಾಯಕ ಎಂದು ಕಾಂಗ್ರೆಸ್ ಮಾಜಿ ಶಾಸಕ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ನವದೆಹಲಿ(ಮೇ.03) ದೇಶದ ರಾಷ್ಟ್ರಪಿತ ಎಂದೇ ಗುರುತಿಸಿಕೊಂಡಿರುವ ಮಹಾತ್ಮಾ ಗಾಂಧಿಗೆ ಕಾಂಗ್ರೆಸ್ ಮಾಜಿ ಶಾಸಕ ಅವಮಾನಿಸದ ಘಟನೆ ನಡೆದಿದೆ. ರಾಹುಲ್ ಗಾಂಧಿಯನ್ನು ಹೊಗಳುವ ಭರದಲ್ಲಿ ರಾಷ್ಟ್ರಪಿತನಿಗೆ ಅವಮಾನಿಸಿದ್ದಾರೆ. ಮಹಾತ್ಮಾ ಗಾಂಧಿಯಲ್ಲಿ ಒಂದಷ್ಟು ಕುತಂತ್ರವಿತ್ತು. ಆದರೆ ರಾಹುಲ್ ಗಾಂಧಿ ಸಂಪೂರ್ಣ ಪ್ರಮಾಣಿಕ ಹಾಗೂ ಸತ್ಯದ ಮಾರ್ಗದಲ್ಲಿ ನಡೆಯುವ ನಾಯಕ ಎಂದು ಗುಜರಾತ್ ಕಾಂಗ್ರೆಸ್ ಮಾಜಿ ಶಾಸಕ ಇಂದ್ರಾನಿಲ್ ರಾಜಗುರು ಹೇಳಿದ್ದಾರೆ. ಮಹಾತ್ಮಾ ಗಾಂಧಿ ಹೇಡಿ, ಕುತಂತ್ರಿ ಎಂದು ವಿವಾದಕ್ಕೀಡಾಗಿದ್ದಾರೆ.
ಲೋಕಸಭಾ ಚುನಾವಣಾ ಪ್ರಯುಕ್ತ ಗುಜರಾತ್ ಪರೇಶ್ ದನಾನಿಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಇಂದ್ರಾನಿಲ್ ರಾಜಗುರ್ ಮಾಡಿದ ಭಾಷಣ ಇದೀಗ ಕಾಂಗ್ರೆಸ್‌ಗೆ ತೆಲೆನೋವಾಗಿದೆ. ರಾಹುಲ್ ಗಾಂಧಿ ಕುರಿತು ಮಾತನಾಡಿದ ರಾಜಗುರು, ನನ್ನ ಮಾತುಗಳನ್ನು ದಾಖಲಿಸಿಕೊಳ್ಳಿ, ಈ ರಾಷ್ಟ್ರದಲ್ಲಿ ಗಾಂಧಿಯಂತಿರುವ ಮತ್ತೊಬ್ಬ ವ್ಯಕ್ತಿ ಹುಟ್ಟಿದ್ದರೆ ಅದು ರಾಹುಲ್ ಗಾಂಧಿ ಮಾತ್ರ. ರಾಹುಲ್ ಗಾಂಧಿ ನೀತಿ., ನಿಯತ್ತಿನ ಹಾದಿಯಲ್ಲಿ ನಡೆಯುತ್ತಿದ್ದಾರೆ. ಆದರೆ ಮತ್ತೊಬ್ಬರು ಗಾಂಧಿ ಇದ್ದರು ಅವರು ಹೇಡಿಯಾಗಿದ್ದರು, ಆ ಗಾಂಧಿಯಲ್ಲಿ ಒಂದಷ್ಟು ಕುತಂತ್ರವಿತ್ತು. ಆದರೆ ರಾಹುಲ್ ಗಾಂಧಿ ಸತ್ಯ ಹಾಗೂ ಪ್ರಾಮಾಣಿಕ ವ್ಯಕ್ತಿ ಎಂದು ರಾಜಗುರು ಹೇಳಿದ್ದಾರೆ.
'ನಮ್ಮ ಅಭಿಪ್ರಾಯಕ್ಕೂ ಮೋದಿ ಪ್ರಾಮುಖ್ಯತೆ ನೀಡ್ತಿದ್ರು..' ಗುಜರಾತ್ ವಿರೋಧ ಪಕ್ಷದ ಮಾಜಿ ನಾಯಕನ ಮಾತು ವೈರಲ್!
ಕಾಂಗ್ರೆಸ್ ನಾಯಕನ ಹೇಳಿಕೆ ಇದೀಗ ಭಾರಿ ವೈರಲ್ ಆಗಿದೆ. ರಾಹುಲ್ ಗಾಂಧಿಯನ್ನು ಹೊಗಳು ಭರದಲ್ಲಿ ಮಹಾತ್ಮಾ ಗಾಂಧಿಗೆ ಅವಮಾನಿಸಿದ್ದಾರೆ ಅನ್ನೋ ಆಕ್ರೋಶಗಳು ವ್ಯಕ್ತವಾಗುತ್ತಿದೆ. ರಾಹುಲ್ ಗಾಂಧಿಯನ್ನು ಪಪ್ಪು ಎಂದು ಬಿಂಬಿಸಲು ಕೆಲ ಪಕ್ಷಗಳು ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದೆ.ಈ ರೀತಿ ಹಣ ಖರ್ಚು ಮಾಡಿ ರಾಹುಲ್ ಗಾಂಧಿಯನ್ನು ಪಪ್ಪು ಎಂದಿ ಬಿಂಬಿಸಿರುವ ಪರಿಣಾಮ ಈ ದೇಶ ರಾಹುಲ್ ಗಾಂಧಿಯನ್ನು ಒಪ್ಪಿಕೊಂಡಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ. ಆದರೆ ರಾಹುಲ್ ಗಾಂಧಿ ಸತ್ಯದ ಮಾರ್ಗದಲ್ಲಿದ್ದಾರೆ ಎಂದಿದ್ದಾರೆ.
2022ರ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ರಾಜಗುರು ಆಪ್ ಪಾರ್ಟಿ ತೊರೆದು ಮತ್ತೆ ಕಾಂಗ್ರೆಸ್ ಸೇರಿಕೊಂಡಿದ್ದರು. ಎರಡು ಬಾರಿ ಕಾಂಗ್ರೆಸ್ ತೊರೆದು ಮತ್ತೆ ಸೇರಿಕೊಂಡಿರುವ ರಾಜಗುರು ಇದೀಗ ಕಾಂಗ್ರೆಸ್ ಪಕ್ಷಕ್ಕೆ ತೆಲೆನೋವು ತಂದಿಟ್ಟಿದ್ದಾರೆ. ರಾಜಗುರು ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಇತ್ತ ವಿವಾದಾತ್ಮಾಕ ಹೇಳಿಕೆ ನೀಡಿದ ರಾಜಗುರು ಇದೀಗ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ.
ಗಾಂಧಿ ನಾಡು ಪೋರ್‌ಬಂದರ್‌ನಲ್ಲಿ ಕೇಂದ್ರ ಸಚಿವರಿಗೆ ಮಾಜಿ ಶಾಸಕನ ಚಾಲೆಂಜ್