ಕಾಂಗ್ರೆಸ್ ತೊರೆಯುತ್ತಿದ್ದಾರೆ ನಾಯಕರು, ಪಕ್ಷಕ್ಕೆ ಎದುರಾಯ್ತಾ ತುರ್ತು ಪರಿಸ್ಥಿತಿ?

By Suvarna NewsFirst Published Jun 27, 2020, 6:18 PM IST
Highlights

ಕಾಂಗ್ರೆಸ್ ಸರ್ಕಾರ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂಪೂರ್ಣ ಭಾರತವನ್ನು ಕತ್ತಲಲ್ಲಿ ಮುಳುಗಿಸಿದ್ದರು. ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿ, ತಾವು ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಅನುಭವಿಸಿದರು. 135 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ತುರ್ತು ಪರಿಸ್ಥಿತಿ ಎದುರಾಗಿದೆಯಾ ಅನ್ನೋ ಅನುಮಾನ ಕಾಡತೊಡಗಿದೆ. ಪಕ್ಷದೊಳಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆಯಾ? ಇದಕ್ಕೆ ಕಾರಣ ಕಳೆದೊಂದು ವರ್ಷದಲ್ಲಿ ಪಕ್ಷ ತೊರೆಯುತ್ತಿರುವ ಸಂಖ್ಯೆ ಜಾಸ್ತಿಯಾಗುತ್ತಿದೆ
 

ನವದೆಹಲಿ(ಜೂ.27):  ನರೇಂದ್ರ ಮೋದಿ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಿದ ಬಿಜೆಪಿ ಭರ್ಜರಿ ಗೆಲುವಿನೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬಂತು. 2014ರಲ್ಲಿ ಆರಂಭವಾದ ಮೋದಿ ಪಯಣ ಇದೀಗ 2ನೇ ಬಾರಿ ಪ್ರಧಾನಿಯಾಗಿ ಮುಂದುವರಿದಿದ್ದಾರೆ. ದೇಶದ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷಕ್ಕಿದ್ದ ಅನುಭವ ಇನ್ಯಾವ ಪಕ್ಷಕ್ಕೂ ಇಲ್ಲ. ಕಾರಣ ಸ್ವತಂತ್ರ ಭಾರತಲ್ಲಿ ಆಡಳಿತ ಶುರುಮಾಡಿದ ಕಾಂಗ್ರೆಸ್ ಸರಿಸುಮಾರು 70 ವರ್ಷ ಆಳ್ವಿಕೆ ಮಾಡಿದೆ. 135 ವರ್ಷಗಳ ಇತಿಹಾಸ ವಿರುವ ಕಾಂಗ್ರೆಸ್ ಪಕ್ಷದೊಳಗೆ ಇದೀಗ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆಯಾ ಅನ್ನೋ ಅನುಮಾನಗಳು ಬಲವಾಗತೊಡಗಿದೆ.

ತುರ್ತುಸ್ಥಿತಿ ಘೋಷಣೆಗೆ 45 ವರ್ಷ: ಇಂದಿರಾಗೆ ಎಮರ್ಜೆನ್ಸಿ ಹೇರುವ ಸಲಹೆ ನೀಡಿದ್ದು ಯಾರು?.

ಯುವ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ರಾಜಕೀಯ ಅಲೆ ಸೃಷ್ಟಿಸಲು ಹೊರಟ ರಾಹುಲ್ ಗಾಂಧಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಲೋಕಸಭೆ ಸೋಲು, ಹಲವು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಹಿನ್ನಡೆ ಸೇರಿದಂತೆ ರಾಹುಲ್  ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಬಸವಳಿಯಿತು. 2019ರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಹುಲ್ ರಾಜೀನಾಮೆ ಬಳಿಕ ಕಾಂಗ್ರೆಸ್ ಹೊಸ ದಿಕ್ಕಿನಲ್ಲಿ ಸಾಗಲಿದೆ ಅನ್ನೋದು ಮೂಲ ಹಾಗೂ ಹಿರಿಯ ಕಾಂಗ್ರೆಸ್ಸಿಗರ ಮತಾಗಿತ್ತು. ಆದರೆ ಪ್ರಮುಖ ನಾಯಕರ ರಾಜೀನಾಮೆ ಪಕ್ಷಕ್ಕೆ ಮತ್ತೆ ತಲೆನೋವಾಗಿ ಪರಿಣಮಿಸಿತು. 

ಲಾಕ್‌ಡೌನ್ ನಿರ್ಬಂಧವೇ ಕಹಿಯಾಗಿದ್ದ ನಮಗೆ, 1975ರ ತುರ್ತು ಪರಿಸ್ಥಿತಿ ಊಹಿಸಲು ಸಾಧ್ಯವೇ

ರಾಜ್ಯ ಘಟಕದ ಮುಖ್ಯಸ್ಥರಾದ ಹರಿಯಾಣದ ಅಶೋಕ್ ತನ್ವಾರ್, ತ್ರಿಪುರದ ಪ್ರದ್ಯೋತ್ ದೇಬ್ ಬರ್ಮನ್ ಮತ್ತು ಜಾರ್ಖಂಡ್‌ನ ಅಜೋಯ್ ಕುಮಾರ್ ಕಾಂಗ್ರೆಸ್ ತೊರೆದಿದ್ದಾರೆ. 2015 ರಲ್ಲಿ ದೆಹಲಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಹಿರಿಯ ನಾಯಕ ಅಜಯ್ ಮಾಕೆನ್  2019ರ ಲೋಕಸಭಾ ಚುನಾವಣೆಗೆ ಮುನ್ನ ಸ್ಥಾನ ತ್ಯಜಿಸಿದರು. ಕಳೆದ ಮಾರ್ಚ್‌ನಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡರು.

ವಿಧಿಯ ಕೈವಾಡ ಆ ವರ್ಷ 2 ದುರಂತ ನಡೆಯಿತು; ಶಾಸ್ತ್ರಿ ನಿಧನರಾದರು, ಇಂದಿರಾ ಪ್ರಧಾನಿಯಾದರು!...

ಮುಂಬೈ ಕಾಂಗ್ರೆಸ್ ಮುಖ್ಯಸ್ಥರಾಗಿ ರಾಹುಲ್ ಗಾಂಧಿ ನೇಮಿಸಿದ ಸಂಜಯ್ ನಿರುಪಮ್ ಹಾಗೂ ಮಿಲಿಂದ್ ದಿಯೋರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಪಕ್ಷ ತೊರೆಯುತ್ತಿದ್ದಾರೆ ಅನ್ನೋ ವದಂತಿಗಳು ಇವೆ. ಇನ್ನು ಹಲವು ನಾಯಕರ ಒಂದು ಕಾಲು ಮಾತ್ರ ಕಾಂಗ್ರೆಸ್ ಪಕ್ಷದಲ್ಲಿದೆ. ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ 13 ತಿಂಗಳಲ್ಲಿ ಅನೇಕ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿಕೊಂಡಿದ್ದಾರೆ.

ಬಿಟ್ಟ ನಾಯಕರು ರಾಹುಲ್ ಗಾಂಧಿಯನ್ನು ಬೊಟ್ಟು ಮಾಡಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ನೀತಿ, ಸಿದ್ದಾಂತಗಳ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ತ್ರಿಪುರ ಮುಖ್ಯಸ್ಥರಾಗಿದ್ದ ಪ್ರದ್ಯೋಬ್ ದೇಬ್ ಬರ್ಮನ್ ರಾಜೀನಾಮೆ ಬೆನ್ನಲ್ಲೇ ಕಾರಣಗಳನ್ನು ನೀಡಿದ್ದರು. ಕಾಂಗ್ರೆಸ್‌ನಲ್ಲಿ ಸರಿಯಾದ ಗುರಿ, ಉದ್ದೇಶ ವಿಲ್ಲ. ಕಾಂಗ್ರೆಸ್ ನೀತಿಗಳಲ್ಲಿ ಸ್ಥಿರತೆ ಇಲ್ಲ. ತಮಗೆ ಬೇಕಾದ ರೀತಿಯಲ್ಲಿ, ರಾಜ್ಯದಿಂದ ರಾಜ್ಯಕ್ಕೆ ಕಾಂಗ್ರೆಸ್ ನೀತಿಗಳು ಬದಲಾಗುತ್ತದೆ ಎಂದಿದ್ದರು. ಪೌರತ್ವ ಕಾಯ್ದೆಯನ್ನು ಅಸ್ಸಾಂನಲ್ಲಿ ಬೆಂಬಲಿಸಿದ ಕಾಂಗ್ರೆಸ್, ತ್ರಿಪರದ ಸೇರಿದಂತೆ ಭಾರತದ ಇತರ ರಾಜ್ಯಗಳಲ್ಲಿ ವಿರೋಧಿಸಿತು. ಇದು ಹೇಗೆ ಸಾಧ್ಯ ಎಂದು ಪ್ರದ್ಯೋಬ್ ಪ್ರಶ್ನಿಸಿದ್ದರು.

2019 ರಲ್ಲಿ ಹರಿಯಾಣ ಕಾಂಗ್ರೆಸ್ ಮುಖ್ಯಸ್ಥರಾಗಿ ಆಯ್ಕೆಯಾದ ತನ್ವಾರ್, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹರಿಯಾಣ ಚುನಾವಣೆಗೆ ಮುನ್ನ ಪಕ್ಷವನ್ನು ತೊರೆದರು. " ಹೊಸ ನಾಯಕತ್ವವನ್ನು ನಿರ್ಮಿಸಲು, ಹೊಸ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ತರಲು ರಾಹುಲ್ ಗಾಂಧಿ ಪ್ರಯತ್ನಿಸಿದ್ದರು. ಆದರೆ  ರಾಹುಲ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಬಳಿಕ ನಮ್ಮ ಮಾತನ್ನು ಕೇಳುವವರು ಯಾರೂ ಇರಲಿಲ್ಲ ಎಂದು ತನ್ವಾರ್ ಹೇಳಿದ್ದರು. 
 
ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದೊಳಗೆ ಬದಲಾವಣೆ ತರಲು ಪ್ರಯತ್ನಿಸಿದ್ದರು. ಇತ್ತ ರಾಹುಲ್ ಎಲ್ಲಾ ನಿರ್ಧಾರಗಳನ್ನು ಕಣ್ಮುಚ್ಚಿ ಹಲವು ನಾಯಕರು ಬೆಂಬಲಿಸಿದರೆ, ಇತರರು ಒಳಗೊಳಗೆ ವಿರೋಧಿಸಿದರು. ಹಲವರು ಸೋನಿಯಾ ಗಾಂಧಿ ಪಕ್ಷ ಮುನ್ನಡೆಸಿದರೆ ಒಳಿತು ಎಂದುಕೊಂಡಿದ್ದರು. ಹಲವು ಸಂಘರ್ಷಗಳ ನಡುವೆ ಪ್ರಮುಖರು ಪಕ್ಷ ತೊರೆಯುತ್ತಿದ್ದಾರೆ. ಭಾರತದ ಅತ್ಯಂತ ಪುರಾತನ, ಅತೀ ದೊಡ್ಡ ಪಕ್ಷದೊಳಗೆ ಇದೀಗ ಆಂತರಿಕ ತುರ್ತು ಪರಿಸ್ಥಿತಿ ಇದೆಯಾ ಅನ್ನೋ ಅನುಮಾನಗಳನ್ನು ಹುಟ್ಟುಹಾಕಿದೆ. 

click me!