ನಾನಿನ್ನು ಬದುಕಿದ್ದೇನೆ, ಎಸ್‌ಸಿ ಎಸ್‌ಟಿ ಮೀಸಲಾತಿ ಮುಸ್ಲಿಮರಿಗೆ ನೀಡುವ ಕಾಂಗ್ರೆಸ್ ಅಜೆಂಡಾ ವಿರುದ್ಧ ಮೋದಿ ಕಿಡಿ!

By Suvarna News  |  First Published Apr 30, 2024, 9:07 PM IST

ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವ ಕಾಂಗ್ರೆಸ್ ಕನಸನ್ನು ನನಸು ಮಾಡಲು ಬಿಡುವುದಿಲ್ಲ. ನಾನಿನ್ನು ಬದುಕಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
 


ಮೇದಕ್(ಏ.30) ಧರ್ಮ ಆಧಾರಿತ ಮೀಸಲಾತಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಮುಸ್ಲಿಮ್ ಮೀಸಲಾತಿ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತೆಲಂಗಾಣದ ಮೇದಕ್‌ನಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡುವ ಕಾಂಗ್ರೆಸ್ ಯೋಜನೆಗೆ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಈ ನೀತಿ ಜಾರಿಗೊಳಿಸಲು ನಾನಿನ್ನು ಬದುಕಿದ್ದೇನೆ ಎಂದು ಮೋದಿ ಗುಡುಗಿದ್ದಾರೆ.

ಕಾಂಗ್ರೆಸ್ ತನ್ನ ಮತ ಬ್ಯಾಂಕ್‌ಗಾಗಿ ಸಂವಿಧಾನಕ್ಕೆ ಅಪಮಾನ ಮಾಡುತ್ತಿದೆ. ಎಲ್ಲೀವರೆಗೆ ಮೋದಿ ಜೀವಂತವಾಗಿದ್ದಾರೋ, ಅಲ್ಲೀವರೆಗೆ ಎಸ್‍‌ಸಿ, ಎಸ್‌ಟಿ, ಹಿಂದುಗಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ಮುಸ್ಲಿಮ್ ಸಮುದಾಯಕ್ಕೆ ನೀಡಲು ಬಿಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ತೆಲಂಗಾಣದಲ್ಲಿ ಲಿಂಗಾಯತ್ ಹಾಗೂ ಮರಾಠ ಸಮುದಾಯ ಹಲವು ವರ್ಷಗಳಿಂದ ಹಿಂದುಳಿದ ವರ್ಗಗಳ ಸ್ಥಾನಮಾನಕ್ಕೆ ಹೋರಾಟ ನಡೆಸುತ್ತಿದೆ. ಇದು ಕಾಂಗ್ರೆಸ್‌ಗೆ ಕಾಣಿಸುತ್ತಲೇ ಇಲ್ಲ. ಆದರೆ ಒಂದು ರಾತ್ರಿಯಲ್ಲೇ ಕಾಂಗ್ರೆಸ್ ಮುಸ್ಲಿಮರಿಗೆ ಒಬಿಸಿ ಸ್ಥಾನಮಾನ ನೀಡಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

Tap to resize

Latest Videos

Narendra Modi: ರಾಜ್ಯದಲ್ಲಿ ಮುಂದುವರೆದ ಮೋದಿ ರೌಂಡ್ಸ್: ಪ್ರಧಾನಿಗಾಗಿ ಅಭಿಮಾನಿಗಳಿಂದ ವಿಶೇಷ ಉಡುಗೊರೆ!

ತೆಲುಗು ಸಿನಿಮಾ ದೇಶಕ್ಕೆ ಆರ್‌ಆರ್‌ಆರ್ ಅನ್ನೋ ಅತ್ಯುತ್ತಮ ಚಿತ್ರ ಕೊಟ್ಟಿದೆ. ಆದರೆ ತೆಲಂಗಾಣ ಕಾಂಗ್ರೆಸ್ ಸರ್ಕಾರ  ಆರ್‌ಆರ್ ತೆರಿಗೆ ಹಾಕುತ್ತಿದೆ. ಇದು ಭಾರತಕ್ಕೆ ಅಮಮಾನಕರ ಹಾಗೂ ಅಪಾಯಕಾರಿ ತೆರಿಗೆ. ಉದ್ಯಮಿಗಳು ಆರ್‌ಆರ್ ತೆರಿಗೆ ಕಟ್ಟಲೇಬೇಕು ಅನ್ನೋ ನಿಯಮ ರೂಪಿಸಿದ್ದಾರೆ ಎಂದು ಮೋದಿ ತೆಲಂಗಾಣ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಆರ್‌ಆರ್ ತೆರಿಗೆ ಎಂದರೆ ರೇವಂತ್ ರೆಡ್ಡಿ ಹಾಗೂ ರಾಹುಲ್ ಗಾಂಧಿ ಟ್ಯಾಕ್ಸ್ ಎಂದು ಮೋದಿ ಹೇಳಿದ್ದಾರೆ. ಈ ಹಣವನ್ನು ದೆಹಲಿಗೆ ಸಾಗಿಸಲಾಗುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ. 

ಇದೇ ವೇಳೆ ಅಮಿತ್ ಶಾ ಕುರಿತು ಹರಿದಾಡುತ್ತಿರುವ ಡೀಪ್ ಫೇಕ್ ವಿಡಿಯೋ ಕುರಿತು ಮೋದಿ ಮಾತನಾಡಿದ್ದಾರೆ. ಕಾಂಗ್ರೆಸ್ ಈಗಾಗಲೇ ಅಮಿತ್ ಶಾ ಡೀಪ್ ಫೇಕ್ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ಮೂಲಕ ಸಾರ್ವಜನಿಕರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇದರ ಹಿಂದೆಯೂ ಇದೇ ಆರ್‌ಆರ್ ಕೈವಾಡವಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಈಗಾಲೇ ಪ್ರಿತ್ರಾರ್ಜಿತ ಆಸ್ತಿ ತೆರಿಗೆ ಹಾಕಲು ಮುಂದಾಗಿದೆ. ಶೇಕಡಾ 55 ರಷ್ಟು ಪಿತ್ರಾರ್ಜಿತ ಆಸ್ತಿ ತೆರಿಗೆ ಹಾಕುವ ಮೂಲಕ ನೀವು ನಿಮ್ಮ ಮಕ್ಕಳಿಗೆ ಮಾಡಿದ ಆಸ್ತಿಯನ್ನು ಕಾಂಗ್ರೆಸ್ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ವಸೂಲಿ ಗ್ಯಾಂಗ್‌ ನಡೆಸ್ತಿರುವ ಕಾಂಗ್ರೆಸ್‌: ಪ್ರಧಾನಿ ಮೋದಿ
 

click me!