ನವದೆಹಲಿ(ಅ.18): ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರೀಕರ ಗುರಿಯಾಗಿಸಿ ಭಯೋತ್ಪಾದನೆ ದಾಳಿ ನಡೆಯುತ್ತಿದೆ. ಕಳೆದ ಎರಡು ದಿನದಲ್ಲಿ ಮೂರಕ್ಕೂ ಹೆಚ್ಚು ದಾಳಿ ನಡೆದಿದೆ. ಬೀದಿ ಬದಿ ವ್ಯಾಪಾರಿ, ಕಾರ್ಮಿಕರು ಸೇರಿದಂತೆ 11ಕ್ಕೂ ಹೆಚ್ಚು ನಾಗರೀಕರು ಉಗ್ರರ ದಾಳಿಗೆ ಮೃತರಾಗಿದ್ದಾರೆ. ಪಾಕ್ ಮೂಲದ ಭಯೋತ್ಪಾದಕರ ಕೃತ್ಯಕ್ಕೆ ಆಕ್ರೋಶ ಹೆಚ್ಚಾಗುತ್ತಿದೆ. ಹೀಗಾಗಿ ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಟೂರ್ನಿ ಆಡದಂತೆ ಒತ್ತಡ ಹೆಚ್ಚಾಗುತ್ತಿದೆ.
ಉಗ್ರರ ದಾಳಿಯಲ್ಲಿ ಹತ್ಯೆಯಾದ ಬಿಹಾರ ಕಾರ್ಮಿಕರ ಕುಟುಂಬಕ್ಕೆ ತಲಾ 2 ಲಕ್ಷ ರೂ ಘೋಷಣೆ!
ಅಕ್ಟೋಬರ್ 24 ರಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ವಿಶ್ವಕಪ್ ಟೂರ್ನಿಯಲ್ಲಿನ ಲೀಗ್ ಪಂದ್ಯವಾದರೂ ಇದು ಫೈನಲ್ ಪಂದ್ಯವಿದ್ದಂತೆ. ಆದರೆ ಇದೀಗ ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ಧ ಪಂಡ್ಯ ಆಡಬಾರದು ಅನ್ನೋ ಒತ್ತಾಯ ಹೆಚ್ಚಾಗುತ್ತಿದೆ. ಇದೀಗ ಬಿಹಾರ ಉಪ ಮುಖ್ಯಮಂತ್ರಿ ತಾರಕಿಶೋರ್ ಪ್ರಸಾದ್ ಪಂದ್ಯ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.
Poonch encounter;ಉಗ್ರರ ದಾಳಿಗೆ ಸೇನಾಧಿಕಾರಿ ಸೇರಿ ಐವರು ಯೋಧರು ಹುತಾತ್ಮ!
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ದಾಳಿಯಿಂದ ಪಾಕಿಸ್ತಾನ ವಿರುದ್ದ ಪಂದ್ಯ ಆಡುವುದು ಸೂಕ್ತವಲ್ಲ. ಪಂದ್ಯ ಬಹಿಷ್ಕರಿಸಿ ಎಂದು ತಾರಕಿಶೋರ್ ಪ್ರಸಾದ್ ಹೇಳಿದ್ದಾರೆ. ಇನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಇದಕ್ಕೂ ಮೊದಲೇ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಪಂದ್ಯ ಆಡುವುದನ್ನು ಮರು ಆಲೋಚಿಸಬೇಕು ಎಂದಿದ್ದರು.
ಪಾಕ್ ಜತೆ ಟಿ-ಟ್ವೆಂಟಿ ಪಂದ್ಯಕ್ಕೆ ಮುತಾಲಿಕ್ ವಿರೋಧ, ಸರ್ಕಾರಕ್ಕೆ ಧಿಕ್ಕಾರ!
ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಹಾಗೂ ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ಪಾಕಿಸ್ತಾನ ವಿರುದ್ಧ ಪಂದ್ಯ ಆಡುವ ಅಗತ್ಯ ಭಾರತಕ್ಕಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ದ್ವಿಪಕ್ಷೀಯ ಸರಣಿ ರದ್ದು ಮಾಡಿ ವರ್ಷಗಳೇ ಉರುಳಿದೆ. ಭಯೋತ್ಪಾದನೆ ರಾಷ್ಟ್ರದಲ್ಲಿ ಕ್ರಿಕೆಟ್ ಆಡಲು ಈಗಲೂ ಹಲವು ರಾಷ್ಟ್ರಗಳು ಹಿಂದೇಟು ಹಾಕುತ್ತಿದೆ. ಇತ್ತೇಚೆಗಷ್ಟೆ ನ್ಯೂಜಿಲೆಂಡ್ ತಂಡ ಪಂದ್ಯ ಆರಂಭಕ್ಕೂ ಕೆಲ ಕ್ಷಣಗಳ ಮುನ್ನ ಭದ್ರತಾ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಿತ್ತು.
ನ್ಯೂಜಿಲೆಂಡ್ ತಂಡ ಟೂರ್ನಿಯಿಂದ ಹಿಂದೆ ಸರಿದ ನಿರ್ಧಾರವನ್ನು ಪಾಕಿಸ್ತಾನ ವಿರೋಧಿಸಿತ್ತು. ಪಾಕ್ ಅತ್ಯಂತ ಸುರಕ್ಷಿತ ದೇಶ ಎಂದು ಬಿಂಬಿಸಲು ಪ್ರಯತ್ನ ಮಾಡಿತ್ತು. ಆದರೆ ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಪಾಕಿಸ್ತಾನ ಪ್ರವಾಸ ರದ್ದು ಮಾಡಿತು.
ಕಳೆದ ಒಂದು ವಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸತತ ದಾಳಿ ನಡೆಯುತ್ತಿದೆ. ಭಾನುವಾರ ನಡೆದ ದಾಳಿಯಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರ ಮೇಲೆ ಉಗ್ರರು ಗುಂಡು ಹಾರಿಸಿದ್ದರು. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊರ್ವ ತೀವ್ರವಾಗಿ ಗಾಯಗೊಂಡಿದ್ದಾನೆ.
ಇದಕ್ಕೂ ಮೊದಲು ಅಂದರೆ ಶನಿವಾರ ಬಿಹಾರ ಮೂಲದ ಗೋಲ್‌ಗಪ್ಪಾ ಬೀದಿ ಬದಿ ವ್ಯಾಪಾರಿಯನ್ನು ಉಗ್ರರು ಹತ್ಯೆ ಮಾಡಿದ್ದರು. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಉಗ್ರರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದೆ.