
ಬೆಂಗಳೂರು (ಜು.24): ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ನಭಕ್ಕೆ ಸೇರಿಸಿದ ಸಂಭ್ರಮದಲ್ಲಿರುವ ಇಸ್ರೋ, ಮತ್ತೊಂದು ಕಾರ್ಯಕ್ರಮಕ್ಕೆ ಅಣಿಯಾಗಿದೆ. ಜುಲೈ 30 ರಂದು ಶ್ರೀಹರಿಕೋಟಾದಿಂದ ಸಿಂಗಾಪುರದ 7 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ. ಸಿಂಗಾಪುರ ಮೂಲದ ಈ ಉಪಗ್ರಹಗಳನ್ನು ಪಿಎಸ್‌ಎಲ್‌ವಿ-ಸಿ 56 ರಾಕೆಟ್ ಮೂಲಕ ಉಡಾವಣೆ ಮಾಡಲಾಗುತ್ತದೆ. ಇದರಲ್ಲಿ ಡಿಎಸ್-ಎಸ್‌ಎಆರ್ ಉಪಗ್ರಹ ಮತ್ತು ಇತರ ಆರು ಉಪಗ್ರಹಗಳನ್ನು ಹೊತ್ತೊಯ್ಯಲಾಗುತ್ತದೆ. ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಇಸ್ರೋ, ಉಪಗ್ರಹಗಳನ್ನು ಬೆಳಗ್ಗೆ 06:30ಕ್ಕೆ ಉಡಾವಣೆ ಮಾಡಲಾಗುವುದು ಎಂದು ತಿಳಿಸಿದೆ. ಡಿಎಸ್-ಎಸ್‌ಎಆರ್ ಉಪಗ್ರಹವನ್ನು ಸಿಂಗಾಪುರದ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಮತ್ತು ಎಸ್‌ಟಿ ಇಂಜಿನಿಯರಿಂಗ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಸಿಂಗಾಪುರದ ತನಿಖಾ ಸಂಸ್ಥೆಗಳ ಉಪಗ್ರಹ ಚಿತ್ರಣ ಅಗತ್ಯತೆಗಳನ್ನು ಪೂರೈಸಲು ಉಪಗ್ರಹವನ್ನು ಬಳಸಲಾಗುತ್ತದೆ. ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಡಿಎಸ್‌ಟಿಎ ಮತ್ತು ಎಸ್‌ಟಿ ಇಂಜಿನಿಯರಿಂಗ್‌ನಿಂದ PSLV-C56 ಗಾಗಿ 360 ಕೆಜಿ ಡಿಎಸ್-ಎಸ್‌ಎಆರ್ ಉಪಗ್ರಹವನ್ನು ಸಂಗ್ರಹಿಸಿದೆ.
ಉಪಗ್ರಹದ ಪ್ರಮುಖ ವೈಶಿಷ್ಟ್ಯಗಳು:
1. ಡಿಎಸ್-ಎಸ್‌ಎಆರ್: ಇದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಅಪರ್ಚರ್ ರೇಡಾರ್ ಪೇಲೋಡ್ ಅನ್ನು ಬಳಸುತ್ತದೆ, ಇದು ಹಗಲು-ರಾತ್ರಿ ಎಲ್ಲಾ ಸಮಯದಲ್ಲಿ ಹವಾಮಾನದ ಕುರಿತಾದ ಮಾಹಿತಿಯನ್ನು ಒದಗಿಸಲಿದೆ.
2. ವೆಲೋಕ್ಸ್-ಎಎಂ: ಇದು ತಂತ್ರಜ್ಞಾನ ಪ್ರದರ್ಶನದ ಮೈಕ್ರೋಸ್ಯಾಟಲೈಟ್ ಆಗಿದೆ.
3. ಸ್ಕೂಬ್: ಇದು ಪ್ರಯೋಗ ಉದ್ದೇಶದ ಸ್ಯಾಟಲೈಟ್ ಆಗಿದೆ.
4. 3ಯು ನ್ಯಾನೋ: ಇದು ಭೂಮಿಯ ಮೇಲಿನ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಮಾಹಿತಿಗಳನ್ನು ನೀಡುತ್ತದೆ.
5. ಲೋಟ್ಸ್: ಭೂಮಿಯಲ್ಲಿ ಸಂಪರ್ಕವನ್ನು ಸುಧಾರಿಸುವ ಸಲುವಾಗಿ ಕಳಿಸುತ್ತಿರುವ ಉಪಗ್ರಹವಾಗಿದೆ.
6. ಗಲಾಸಿಯಾ-2: ಇದು ಭೂಮಿಯ ಕಕ್ಷೆಯಲ್ಲಿ ಸುತ್ತುವ ಸಲುವಾಗಿ ಕಳಿಸುತ್ತಿರುವ ಉಪಗ್ರಹ.
7. ಓಆರ್‌ಬಿ-12 ಸ್ಟ್ರಿಂಡರ್: ಅಂತಾರಾಷ್ಟ್ರೀಯ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿದ ಉಪಗ್ರಹ ಇದಾಗಿದೆ.
ಪಿಎಸ್‌ಎಲ್‌ವಿ-ಸಿ56 ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಎಸ್‌ಡಿಎಸ್‌ಸಿ-ಶಾರ್‌ನ ಮೊದಲ ಉಡಾವಣಾ ಕೇಂದ್ರವಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಡಿಎಸ್‌ಸಿ) ಬೆಳಿಗ್ಗೆ 6:30ಕ್ಕೆ ಉಡ್ಡಯನವಾಗಲಿದೆ.
Mysterious Metal Dome: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತು, ಇಸ್ರೋದಿಂದ ಸ್ಪಷ್ಟೀಕರಣ
ಇಸ್ರೋ ಹೇಳಿರುವ ಪ್ರಕಾರ, ಪ್ರಾಥಮಿಕ ಪೇಲೋಡ್, ಡಿಎಸ್-ಎಸ್‌ಎಆರ್ ಉಪಗ್ರಹವು 360 ಕೆಜಿ ತೂಗುತ್ತದೆ ಮತ್ತು ಸಿಂಗಾಪುರ್ ಸರ್ಕಾರವನ್ನು ಪ್ರತಿನಿಧಿಸುವ ಡಿಎಸ್‌ಟಿಎ ಮತ್ತು ಎಸ್‌ಟಿ ಇಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ, 5 ಡಿಗ್ರಿ ಇಳಿಜಾರು ಮತ್ತು 535 ಕಿಮೀ ಎತ್ತರದಲ್ಲಿ ಸಮಭಾಜಕ ಕಕ್ಷೆಗೆ (NEO) ಇದನ್ನು ಉಡಾವಣೆ ಮಾಡಲಾಗುತ್ತದೆ.
ನಾಲ್ಕೇ ದಿನದಲ್ಲಿ ಚಂದ್ರನತ್ತ ಹೋಗುತ್ತೆ ಅಮೆರಿಕಾ, ಭಾರತಕ್ಕೆ ಏಕೆ 42 ದಿನ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ